ಮೊಸರು ಸಬ್ಬಕ್ಕಿ
ಬೇಕಿರುವ ಸಾಮಗ್ರಿ
ಸಬ್ಬಕ್ಕಿ ಒಂದು ಬಟ್ಟಲು, ಮೊಸರು ಒಂದು ಬಟ್ಟಲು, ಹಸಿ ಮೆಣಸಿನ ಕಾಯಿ 3-4, ಕಡಲೇಕಾಯಿ ಬೀಜದ ಪುಡಿ 1/2 ಬಟ್ಟಲು, ಮಜ್ಜಿಗೆ 2 ಬಟ್ಟಲು, ಕೊತ್ತಂಬರಿ ಸೊಪ್ಪು, ಜೀರಿಗೆ ಒಂದು ಟೀ ಸ್ಪೂನ್ , ಉಪ್ಪು ರುಚಿಗೆ ತಕ್ಕ ಷ್ಟು.
ತಯಾರಿಸುವ ವಿಧಾನ
ದಪ್ಪ ತಳವಿರುವ ಬಾಣಲೆಯನ್ನು ಒಲೆಯ ಮೇಲಿರಿಸಿ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದಾಗ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಜೀರಿಗೆ ಹಾಗೂ ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಸಬ್ಬಕ್ಕಿ ಹಾಕಿ ಹುರಿಯಿರಿ. ಒಲೆಯಿಂದ ಕೆಳಗಿಳಿಸಿ ಸಬ್ಬಕ್ಕಿ ಮಿಶ್ರಣ ಆರಿದ ನಂತರ, ಮಜ್ಜಿಗೆ ಹಾಕಿ, ಉಪ್ಪು, ಕಡಲೆಕಾಯಿ ಬೀಜ ಸೇರಿಸಿ ಒಂದು ಗಂಟೆ ನೆನೆಯಲು ಬಿಡಿ. ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಚೆನ್ನಾಗಿ ಕಲಕಿ. ರುಚಿ ರುಚಿಯಾದ ಮೊಸರು ಸಬ್ಬಕ್ಕಿ ರೆಡಿ.