ತೆರೆ ಮೇಲೆ ನೈಜ ಕತೆಗಳು..!

ತೆರೆ ಮೇಲೆ ನೈಜ ಕತೆಗಳು..!

ಕನ್ನಡ ಚಿತ್ರ ನಿರ್ಮಾಪಕರ ಕಣ್ಣುಗಳು ಈಗ ನೈಜ ಕತೆ ಹಾಗೂ ಘಟನೆಗಳ ಮೇಲೆ ಬಿದ್ದಿವೆ. ನಿಜವಾದ ಕತೆಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ಮಾಪಕರು,ನಿರ್ದೇಶಕರ ಕಲ್ಪನೆಗೆ ಸಮಾಜದಲ್ಲಿ ನಡೆದ ಘಟನೆಗಳು ಸ್ಪೂರ್ತಿಯಾಗುತ್ತಿವೆ. ಕ್ರೂರ ಕತೆಗಳೇ ದುಡ್ಡು ಮಾಡಿಕೊಳ್ಳುವ ಸರಕಾಗುತ್ತಿವೆ. ಬಾಲಿವುಡ್ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿವರೆಗೆ ಬಂದ ಚಿತ್ರಗಳಲ್ಲಿ ಅನೇಕರು ಹೆಸರು ಮತ್ತು ದುಡ್ಡು ಮಾಡಿಕೊಂಡವ್ರೆ. ಸುಮ್ಮನೆ ಈ ಥರದ ಚಿತ್ರಗಳತ್ತ ಕಣ್ಣು ಹಾಯಿಸಿದ್ರೆ, ಗೆಲುವು ಕಂಡ ಚಿತ್ರಗಳ ಪಟ್ಟಿನೆ ಬಂದು ಬಿಡುತ್ತದೆ. ಅದರ ಸುತ್ತ ಒಂದು ಅವಲೋಕನ ಇಲ್ಲಿದೆ..

ಕನ್ನಡದಲ್ಲಿ ಸುಮಾರು ಚಿತ್ರ ಬಂದಿವೆ. ಎರಡು ದಶಕದ ಹಿಂದೆ ನಿರ್ದೇಶಕ ಉಪೇಂದ್ರ ಓಂ ಸಿನಿಮಾ ಮಾಡಿದ್ರು. ಇದು ನೈಜ ಘಟನೆಗಳ ಆಧರಿಸಿತ್ತು. ಭೂಗತ ಜಗತ್ತಿನ ರಕ್ತಪಾತಗಳ ಚಿತ್ರಣವೇ ಇದಾಗಿತ್ತು. ಇದಾದ ಮೇಲೆ ಆ ದಿನಗಳು ಅದೇ ದಾಟಿಯಲ್ಲಿ ಬಂದ ಮತ್ತೊಂದು ನೈಜ ಚಿತ್ರಣ. ದಂಡುಪಾಳ್ಯ ಬಂದ್ಮೇಲೆ ನೈಜ ಚಿತ್ರಣದ ರೂಪವೇ ಬದಲಾಗಿ ಹೋಯಿತು. ಕೊಲೆ..ಸುಲಿಗೆ ಮಾಡಿದವ್ರ ಕತೆಗಳೆ ವಿಜೃಂಭಿಸುತ್ತಿವೆ...

ಡೆಡ್ಲಿ ಸೋಮ ಇದು ಭೂಗತ ಜಗತ್ತಿನ ಒಂದು ಕತೆ. ಎದೆಗಾರಿಕೆ ಅಗ್ನಿಶ್ರೀಧರ್ ಕಂಡ ಸುಪಾರಿ ಕಿಲ್ಲರ್ ನ ಸಿನಿಮಾ. ಸುಮನಾ ಕಿತ್ತೂರ ನಿರ್ದೇಶಿಸಿ ಭೂಗತ ಜಗತ್ತಿನಲ್ಲೂ ಪ್ರೀತಿಗಳು ಅರಳುತ್ತವೆಂಬುದನ್ನ ತೋರಿಸಿಕೊಟ್ರು. ಮೈನಾ ಚಿತ್ರವೂ ಮತ್ತೊಂದು ಸತ್ಯಕತೆ. ಇಲ್ಲಿ ಭೂಗತ ಜಗತ್ತಿನ ಸೋಂಕಿಲ್ಲ. ನಿವೃತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್  ಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ಕಣ್ಣಾರೆ ಕಂಡ ಪ್ರೇಮ ಕತೆಯಿದು. ಅಶೋಕ್ ಕುಮಾರ್ ಅವರಿಂದಲೇ ಕೇಳಿದ ಕತೆಯನ್ನ ನಿರ್ದೇಶಕ ನಾಗಶೇಖರ್ ಅದ್ಭುತ ಪ್ರೇಮ ಕಾವ್ಯ ಮಾಡಿದ್ದಾರೆ.

ಚಾರ್ ಮಿನಾರ್ ನೈಜ ಕತೆಯಲ್ಲ. ನೈಜ ಘಟನೆಗಳ ಚಿತ್ರಣ. ಅದಕ್ಕೇನೆ ಚಾರ್ ಮಿನಾರ್ ಎಲ್ಲರ ಅನುಭವದ ಸಿನಿಮಾ ಆಗಿದೆ. ಬಾಲ್ಯದಿಂದ ಹಿಡಿದು, ಯವ್ವನದ ವರೆಗಿನ ಹಲವು ಘಟ್ಟಗಳ  ಒಟ್ಟು ಬದುಕು ಚಾರ್ ಮಿನಾರ್ ನಲ್ಲಿದೆ. ಈ ಒಂದು ಪಯಣದಲ್ಲಿ ಪ್ರೀತಿಸಿದವಳ ಹಿಂದೆ ಬೀಳೋ ಅಮರ ಪ್ರೇಮಿಯ ಕತೆ ಈ ಚಾರ್ ಮಿನಾರ್.

ಭೀಮಾ ತೀರದಲ್ಲಿ ..ಚಿತ್ರವೂ ನಿಜವಾದ ಕತೆನೆ. ಚಂದಪ್ಪ ಹರಿಜನ್ ಜೀವನದಲ್ಲಿ ಆದ..ಮಾಡಿದ ಎಲ್ಲ ಸಂಗತಿಗಳು....ಘಟನೆಗಳನ್ನ ತೆಗೆದುಕೊಂಡೇ ನಿರ್ದೇಶಕ ಓಂ ಪ್ರಕಾಶ್ ರಾವ್ ಸಿನಿಮಾ ಮಾಡಿದ್ದರು. ಇದು ಕೂಡ ಭರ್ಜರಿ ಪ್ರದರ್ಶನ ಕಂಡಿತು. ದುಡ್ಡು ಕೂಡ ಕಂಡಿತು.

ಉಮೇಶ್ ರೆಡಿ ಆ ಸಾಲಿನ ಇನ್ನೊಂದು ದುರಂತ. ಇಂತಹ ಸಿನಿಮಾಗಳಿಂದ ನಿರ್ಮಾಪಕರಿಗೆ ದುಡ್ಡು ಆಗುತ್ತದೆ. ಒಳ್ಳೆ ಕತೆಗಳಾಗಿದ್ದರೆ ಒಳ್ಳೆಯದು. ಉಮೇಶ್ ರೆಡ್ಡಿ, ವೀರಪ್ಪನ್ ಅಟ್ಟಹಾಸ ಕಥನ ಆಧರಿಸಿದ್ದರ ಏನು ಪ್ರಯೋಜನ..? ಬಾಲಿವುಡ್ ನ ಮಂದಿನೂ ಜಾಣರೆ. ಆಗಿನ ಸಂದರ್ಭದಲ್ಲಿ ಪ್ರಚಲಿತ ಕೊಲೆಗಳು..ಪ್ರಚಲಿತ ಘಟನೆಗಳನ್ನ ಇಟ್ಟುಕೊಂಡು ಸಿನಿಮಾ ಮಾಡ್ತಾರೆ. ರಾಮ್ ಗೋಪಾಲ್ ವರ್ಮಾ ಇದರಲ್ಲಿ ಸಿದ್ಧಹಸ್ತರು. 26/11 ಸಿನಿಮಾನೂ ಮಾಡಿದ್ದಾರೆ. ಇನ್ನೇನು ಇದು ತೆರೆ ಕಾಣಬೇಕಿದೆ. ಎ ವೆನ್ಸಡೇ ನಿದೇರ್ಶಕ ನೀರಜ್ ಪಾಂಡೆ, ಸ್ಷೆಷಲ್ ಚಬ್ಬೀಸ್ ಅಂತ ಸಿನಿಮಾ ಮಾಡಿದ್ದಾರೆ. ಈಗಾಗಲೇ ತೆರೆ ಕಂಡ  ಈ ಚಿತ್ರ 80 ರಲ್ಲಿ ನಡೆದ ನಕಲಿ ಸಿಬಿಐ ಅಧಿಕಾರಿಗಳ ಕತೆನೆ. ಎಲ್ಲರನ್ನೂ ಯಾಮಾರಿಸಿ ಸರ್ಕಾದ ಸೌಲಭ್ಯಗಳನ್ನ ಪಡೆದೇ ದೊಡ್ಡ...ದೊಡ್ಡ ಮಂದಿಯನ್ನೇ ದೋಚಿದವ್ರ ಇಡೀ ನೈಜ ಕತೆಯಿಲ್ಲಿದೆ..

ಸಿಲ್ಕ್ ಸ್ಮಿತಾ ಜೀವನ ಚರಿತ್ರೆಯನ್ನ ಇಟ್ಟುಕೊಂಡು ಬಾಲಿವುಡ್ ಮಂದಿ ಬೇಜಾನ್ ದುಡ್ಡು ಮಾಡಿಕೊಂಡ್ರು. ಕನ್ನಡದಲ್ಲೂ ಸಿಲ್ಕ್ ಸಖತ್ ಹಾಟ್ ಮಗ ಅಂತ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನೇನು ಬೇಕು. ನೈಜ ಕತೆಯಿಂದ ನೋಡುಗರ ಮನಸ್ಥಿತಿ ಏನಾಗುತ್ತದೆಂಬುದಕ್ಕಿಂತ ದುಡ್ಡು ಬರುತ್ತದೆಯೇ..? ದಿಢೀರ್ ನೇ ಹೆಸರು ಗಳಿಸಬಹುದು...? ಇವೇ ಲೆಕ್ಕಾಚಾರಗಳೇ ಎಲ್ಲಡೆ ಈಗ..ಸಿನಿಮಾ ಮಂದಿಯ ನೈಜ ಚಿತ್ರಗಳ ನೈಜ ಪ್ರೀತಿ...

-ರೇವನ್ ಪಿ.ಜೇವೂರ್

 

Comments

Submitted by makara Wed, 02/27/2013 - 09:19

ರೇವೂರ್ ಅವರೆ, ನಿಮ್ಮ ಕಾಳಜಿ ಅರ್ಥವಾಗುತ್ತಿದೆ, ಇಂದು ಸಿನಿಮಾ ಮಾಡುವ ಬಹುತೇಕ ಮಂದಿ ಅದರಿಂದ ಸಮಾಜಕ್ಕೆ ಏನು ಒಳಿತಾಗುತ್ತಿದೆ ಎಂದು ನೋಡುತ್ತಿಲ್ಲ ಆದರೆ ಇಂತಹ ಕಥೆಯನ್ನು ಆರಿಸಿಕೊಂಡರೆ ಅದು ಹೇಗೆ ಯಶಸ್ವಿಯಾಗಿ ದುಡ್ಡು ಮಾಡಬಹುದು ಎನ್ನುವುದನ್ನೇ ನೋಡುತ್ತಿದ್ದಾರೆ. ಹೋಗಲಿ ಬಿಡಿ, ಕಡೇ ಪಕ್ಷ ಕನ್ನಡದವರು ರೀಮೇಕ್ ಮಾಡಿ ಕನ್ನಡಿಗರಿಗೆ ಹಳಸಿದ ಚಿತ್ರಾನ್ನವನ್ನ ತಿನ್ನಿಸುವುದರ ಬದಲು ಈ ರೀತಿ ಬಿಸಿ-ಬೇಳೆ ಬಾತ್ ತಿನ್ನಿಸುತ್ತಿದ್ದಾರಲ್ಲ ಅದಕ್ಕಾದರೂ ಸಂತೋಷ ಪಡೋಣ.
Submitted by venkatb83 Sun, 03/10/2013 - 11:13

In reply to by makara

+1 ;())) ನೈಜ ಘಟನೆಯನ್ನು ಚಿತ್ರ ಮಾಡೋದು ಕಷ್ಟದ ಕೆಲಸ...ಪತ್ರಿಕೆ ಟೀ ವಿ ಮೂಲಕ ಎಲ್ಲವನ್ನು ಅರಿತಿರುವ ಜನ ಆ ಬಗೆಗಿನ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವರು...ಸೊ...! ಅ ರೀತಿಯ ಎಲ ಚಿತ್ರಗಳೂ ಹಿಟ್ ಆಗೋಲ್ಲ.. ಶುಭವಾಗಲಿ... \।