ಕನಸಂತೆ ಇಂದು ಬಂದೋಃದೆ ನೀನು

ಕನಸಂತೆ ಇಂದು ಬಂದೋಃದೆ ನೀನು

 

ಕನಸಂತೆ ಇಂದು ಬಂದೋಃದೆ ನೀನು,

ನೆನಪಲ್ಲಿ ಮತ್ತೇಕೆ ಉಳಿದೆ,

ಕಾಡುತ್ತ ಸಾಗೋ ಕಣ್ಣಂಚ ಕಪ್ಪ,

ಬಳಿಬಂದು ತೀಡಲೇ ಒಮ್ಮೆ ನಾ ಒಮ್ಮೆ ?

 

ಎಂದೋ ಸುರಿದೋಃದ ಮಳೆಯ,

ಹನಿಯೊಂದು, ಇಂದೇಕೆ ಎಳೆಯ ಮೇಲೆ ಮೂಡಿದೆ,

ತಂಪೆಡರ ತಂಗಾಳಿ ಬೀಸಿ ಬಂದು,

ಇಂದೇಕೆ ಧರೆಗೆ ಮುತ್ತಿಕ್ಕಿದೆ.

 

ಮೊಗ್ಗೊಂದು ನಿಂತು ಮಂಜಲ್ಲಿ ಬೆರೆತು,

ಇಂದೇಕೆ ಹೂವಾಗಿ ಅರಳುತ್ತಿದೆ,

ಅರಳಿದ ಹೂವನ್ನು ಅರಸಿ,

ಇಂದೇಕೆ ದುಂಬಿಗಳ ಬಳಗ ನಿಂತಿದೆ.

 

ತಿಳಿಗೆಂಪು ಬಾನಂಚಲಿ, ಇಂದೇಕೆ

ನೇಸರನ ತವಕ, ನೇಸರನ ತವಕ

ಮೈನೆರೆದು ನಿಂತ ಭುವಿಗೆ,

ಇಂದೇಕೆ ನಸುಗೆಂಪ ಸೀರೆ.

 

ಮನಸ್ಸಲ್ಲಿ ಮೂಡಿದೆ ನಿನ್ನಯ ಕಲ್ಪನೆ,

ಅದಕ್ಕೇಂದೆ ಚಂದದ ಕನಸು ನನ್ನಲ್ಲಿ,

ಇಂದೇಕೆ, ಇಂದೇಕೆ . 

Rating
No votes yet