ಆಸರೆ (ಕಥೆ)
ಕಾಲಾಯ ತಸ್ಮ್ಯೆ ನಮ: -ಕಾಲ ಯಾರನ್ನೂ ಕಾಯುವುದಿಲ್ಲ. ಅದಕ್ಕೆ ಎಲ್ಲರೂ ತಲೆಬಾಗಬೇಕು.ಒಂದೊಂದು ನಿಮಿಷಕ್ಕೂ ಅಷ್ಟು ಮಹತ್ವವಿದೆ. “ಮುತ್ತು ಜಾರಿದರೆ, ಹೊತ್ತು ಮೀರಿದರೆ ಮತ್ತೆದೊರಕದು”. ಕಾಲದ ನಿರಂತರತೆಯಲ್ಲಿ ಋತುಗಳು ಬದಲಾದಂತೆ, ಗಿಡ ಮರ,ಮನುಷ್ಯ, ಸಕಲ ಜೀವರಾಶಿಗಳೂ ಒಂದು ಘಟ್ಟದಿಂದ ಮತ್ತೊಂದು ಘಟ್ಟದತ್ತ ಪಯಣಿಸಬೇಕು. ಬಾಲ್ಯದ ಸವಿತೊದಲ್ನುಡಿಯಲ್ಲಿರುವಾಗಲೇ, ಹಾಲುಕುಡಿದ ಬಾಯಿನ್ನು ಆರದಿರುವಾಗಲೇ ಯೌವ್ವನಕ್ಕೆ ಕಾಲಿಡುತ್ತೇವೆ. ಬಣ್ಣಬಣ್ಣದ ಕನಸಹೊತ್ತು ಅದರ ಸವಿಯುಣ್ಣುತ್ತಿರುವಾಗಲೇ ನಮಗರಿವಾಗದಂತೆ ಮುಪ್ಪು ನಮ್ಮನ್ನಾವರಿಸಿಕೊಳ್ಳಲು ಬರುತ್ತದೆ. ಆದರೆ ವೃದ್ದಾಪ್ಯ ಮನುಷ್ಯನಿಗೆ ಮತ್ತೆ ಬಂದ ಬಾಲ್ಯ ಎನ್ನಬಹುದು.
ಬದುಕಿನ ಮುಸ್ಸಂಜೆಯಲ್ಲಿ ಒಂಟಿ ಪಯಣಿಗನಾಗಿ, ಗಂಭೀರ ಮುಖಮುದ್ರೆ ಹೊತ್ತು ಈ ಅಜ್ಜ ಸಾಗುತ್ತಿರುವಾಗ, ಮೌನ ಮುರಿಯುವಂತೆ “ಸುತ್ತಮುತ್ತೆಲ್ಲ ನೋಡಬೇಡ ತಾತ, ನಾನು ನಿನ್ನ ಗೆಳೆಯ ನೆನಪಾಗಲಿಲ್ಲವೆ ? ಯಾಕೆ ಬೇಸರ ಮಾಡಿಕೊಂಡಿದ್ದೀಯಾ ? ಗಂಭೀರವಾಗಿ ಏನೋ ಯೋಚಿಸುತ್ತಿರುವಂತಿದೆ ಅದನ್ನೆಲ್ಲಾ ನನ್ನೊಟ್ಟಿಗೆ ಹೇಳಿಕೊಂಡು ಮನಸ್ಸನ್ನು ಹಗುರಗೊಳಿಸಿಕೊಳ್ಳಿ ತಾತ ” ಎಂಬ ಮಾತು, ಆತ್ಮೀಯವಾಗಿ ತೇಲಿಬಂದ ಮಾತುಗಳಿಗೆ ಅಜ್ಜ ಮೊಗವರಳಿಸಿ ಅಯ್ಯಯ್ಯೋ, ನಿನ್ನ ಮರೆಯೋದುಂಟೆ ! ನನ್ನ ಜೀವನದ ನಿಜ ಸಂಗಾತಿಯೆಂದರೆ ನೀನೆ ತಾನೆ ! ಬದುಕಿನ ಕೊನೆಯಂಚಲ್ಲಿ ಎಲ್ಲರೂ ಕೈ ಬಿಟ್ಟರೂ ಮರಕ್ಕೆ ಬಳ್ಳಿಯಂತೆ, ಮಗುವಿಗೆ ತಾಯಂತೆ ಆಸರೆಯಾಗಿದ್ದೀಯ. ಪ್ರೀತಿಸುವ ಮಗ ಮೊಮ್ಮಗ ಇದ್ದರೂ ಸೊಸೆಯ ದಬ್ಬಾಳಿಕೆಯಡಿ ಮುಚ್ಚಿಹೋಗಿದೆ.ಇದರಿಂದ ನನಗೇನೂ ಬೇಸರವಿಲ್ಲ ಬಿಡು. ಈ ಭೂಮಿ ಮೇಲೆ ಯಾರಿಗೆ ಯಾರು ಇಲ್ಲ ದಾರಿಗೆ ಸಂಗಡ ಇಲ್ಲ ಅನ್ನೋ ಹಾಗೆ ಕೊನೆವರೆಗೆ ಯಾರೂ ಬರುವುದಿಲ್ಲ. ಬಾಳ ಮುಂಜಾವು ಕಲಿಸಿದ ಪಾಠ ಬಾಳ ಮುಸ್ಸಂಜೆಯಲ್ಲಿ ಸಾರ್ಥಕವಾಗುತ್ತದೆ. ನಾಲ್ಕು ಜನರಿಗೆ ಸಹಾಯ ಮಾಡಲಾಗದಿದ್ದರೂ ತೊಂದರೆ ಮಾಡದೆ ಬದುಕ ಬಯಸುವೆ “ಊರುಗೋಲು”
ನಿನಗಂತ ನನಗೆ ಓಳ್ಳೆ ಜೊತೆಗಾರ ಇನ್ಯಾರು ಇದ್ದಾರೆ ಹೇಳು ? ನೀನೆ ತಾನೆ ನನಗೆ ಆಸರೆ !
Comments
ಉಷಾರಾಣಿಯವರೇ, ಚೆನ್ನಾಗಿದೆ. ನನ್ನ
ಉಷಾರಾಣಿಯವರೇ, ಚೆನ್ನಾಗಿದೆ. ನನ್ನ ತಂದೆಯವರ ಊರುಗೋಲು ನೆನಪಾಯಿತು. ಇದನ್ನೂ ಓದಿ: http://sampada.net/blog/kavinagaraj/16/07/2010/26872