ಅಡ್ಡೂರು ಶಿವಶಂಕರ ರಾಯರ ನೆನಪು – ನಮನ

Submitted by ನಿರ್ವಹಣೆ on Thu, 02/28/2013 - 17:53

ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಮ್ಯೂನಿಸ್ಟ್ ಆಂದೋಲನದ ಆದ್ಯ ಸಂಘಟಕ ಹಾಗೂ ಕೃಷಿ ಪರಿಣತ ಅಡ್ಡೂರು ಶಿವಶಂಕರ ರಾಯರ “ನೆನಪು – ನಮನ” ಕಾರ್ಯಕ್ರಮವನ್ನು ೧ ಮಾರ್ಚ್ ೨೦೧೩ನೇ ಶುಕ್ರವಾರ ಸಂಜೆ ೪.೩೦ಕ್ಕೆ ಏರ್ಪಡಿಸಲಾಗಿದೆ. ಕರ್ನಾಟಕ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ ಹಾಲ್ (ಬಾಳಿಗ ಸ್ಟೋರ್ಸ್ ಎದುರು) ಕಾಫಿಕಾಡ್ ರಸ್ತೆ, ಬಿಜೈ, ಮಂಗಳೂರು ಇಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧನಗೌಡ ಪಾಟೀಲ, ಸಂಪಾದಕರು, “ಹೊಸತು” ಮಾಸಿಕ ಪತ್ರಿಕೆ, ಬೆಂಗಳೂರು ಇವರು ಭಾಗವಹಿಸಲಿದ್ದಾರೆ.

ಶಿವಶಂಕರ ರಾಯರ ಅಭಿಮಾನಿಗಳೂ ಆತ್ಮೀಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಎಲೆಯ ಮರೆಯ ಕಾಯಿಯಂತೆ ಬದುಕಿದ್ದ ಹಿರಿಯರಿಗೆ ತಮ್ಮ ಗೌರವ ಸಲ್ಲಿಸಬೇಕೆಂದು ಈ ಕಾರ್ಯಕ್ರಮದ ಸಂಘಟಕರಾದ ಭಾರತ ಕಮ್ಯೂನಿಸ್ಟ್ ಪಕ್ಷದ ಮಂಗಳೂರು ಘಟಕದ ಪದಾಧಿಕಾರಿಗಳೂ ಹಿತೈಷಿಗಳೂ ವಿನಂತಿಸಿದ್ದಾರೆ.

ಸಂಪರ್ಕ:
- ಅಡ್ಡೂರು ಕೃಷ್ಣ ರಾವ್
ಸಂಚಾಲಕ, ಬಳಕೆದಾರರ ವೇದಿಕೆ (ರಿ.)
ವಿಳಾಸ: “ಸುಮ”, ೫ನೇ ಅಡ್ಡ ರಸ್ತೆ
ಬಿಜೈ ಹೊಸ ರಸ್ತೆ, ಮಂಗಳೂರು – ೪

ಮೊಬೈಲ್: ೯೪೪೮೧ ೫೨೬೨೦