ವೈವಿದ್ಯತೆಯನ್ನು ಸ್ವೀಕರಿಸಿ. . .
Recive Diversity . .
ವೈವಿದ್ಯತೆಯೆಂಬುದು ವಿವಿಧತೆ, ವಿಭಿನ್ನತೆ, ಇತರರಿಗಿಂತ ಭಿನ್ನವಾಗಿರುವುದು ಎಂಬ ಅರ್ಥವನ್ನು ಹೊಂದುತ್ತದೆ. ನಾವು ಇಲ್ಲಿ ವೈವಿದ್ಯತೆಯನ್ನು ಸ್ವೀಕರಿಸಿ ಎಂಬ ಶೀರ್ಷಿಕೆಯಲ್ಲಿ ಹೇಳ ಹೊರಟಿರುವುದು ಒಂದು ತರಗತಿಯಲ್ಲಿನ ಮಕ್ಕಳಲ್ಲಿನ ವಿಭಿನ್ನತೆಯ ಬಗೆಗೆ ಅದನ್ನು ಒಂದು ಚೀನಿ ಕಥೆಯ ಹಿನ್ನೆಲೆಯಲ್ಲಿ ಅರ್ಥೈಯಿಸಿಕೊಳ್ಳೋಣ ಚೀನಾದ, ಯಾಂಗ್ಸಚೀ ಎಂಬ ಸಣ್ಣ ಗ್ರಾಮದ ಶಾಲೆಯಲ್ಲಿ ಶಿಕ್ಷಕರು ತರಗತಿಯ ಎಲ್ಲ ಮಕ್ಕಳಿಗೂ ಬದನೆಕಾಯಿ ಚಿತ್ರ ಬಿಡಿಸಲು ತಿಳಿಸಿದರು.
ಎಲ್ಲ ಮಕ್ಕಳು ಬದನೆಕಾಯಿ ಚಿತ್ರ ಬಿಡಿಸಿ ಶಿಕ್ಷಕರಿಗೆ ತೋರಿಸಿದರು. ಆದರೆ ತರಗತಿಯಲ್ಲಿನ ಒಬ್ಬ ಮಗುವಿನ ಚಿತ್ರ ಇತರ ಮಕ್ಕಳು ಬಿಡಿಸಿದ ಬದನೆಕಾಯಿ ಚಿತ್ರಕ್ಕಿಂತ ವಿಬಿನ್ನವಾಗಿತ್ತು. ಅದನ್ನು ನೋಡಿ ಶಿಕ್ಷಕರಿಗೆ ಒಂದು ಕ್ಷಣ ಸಿಟ್ಟು ಬಂತು, ಆ ಮಗುವನ್ನು ಕರೆದು ಥಳಿಸಬೇಕು ಏನಿಸಿತು, ಆದರೆ ಸ್ವಲ್ಪ ಯೋಚಿಸಿ ಮಗುವಿಗೆ ನಾನು ಹೇಳಿದ್ದು ಸರಿಯಾಗಿ ಅರ್ಥವಾಗಲಿಲ್ಲವೋ ಏನೋ ಕೇಳೋಣ ಎಂದು ಮಗುವನ್ನು ತನ್ನ ಬಳಿ ಕರೆದು ಬದನೆಕಾಯಿ ಚಿತ್ರ ವಿಭಿನ್ನವಾಗಿ ಬಿಡಿಸಲು ಕಾರಣವೇನು ಎಂದು ಕೇಳಿದಾಗ. ಮಗು ಹಿಂದಿನ ದಿನ ತನ್ನ ತಂದೆಯ ಜೊತೆ ಗದ್ದೆಗೆ ತೆರಳಿದಾಗ ತಮ್ಮ ಗದ್ದೆಯ ಒಂದು ಗಿಡದಲ್ಲಿ ಈ ಆಕಾರದ ಬದನೆಕಾಯಿಯನ್ನು ನೋಡಿದೆ ಅದನ್ನೆ ಇಲ್ಲಿ ಬಿಡಿಸಿದ್ದೆನೇ ಎಂದು ಹೇಳಿದ
ಈಗ ಹೇಳಿ ಇಲ್ಲಿ ಮಗು ಬಿಡಿಸಿದ ಚಿತ್ರ ತಪ್ಪೆ ..? ಅಲ್ಲವೆಂದಾದರೆ ಶಿಕ್ಷಕರು ಯಾವ ರೀತಿಯ ನಿರ್ಣಯ ಕೈಗೊಳ್ಳಬೇಕು ಇತರ ಮಕ್ಕಳ ಚಿತ್ರಗಿಂತ ಬಿನ್ನವಾಗಿರುವ ಚಿತ್ರವನ್ನು ತಪ್ಪು ಎಂದು ಪರಿಗಣಿಸಿದರೆ ಮಗುವಿನ ಅನುಭವದ ಕಲಿಕೆಗೆ ಬೆಲೆಯೇ ಇಲ್ಲದಂತಾಗುತ್ತದೆ. ತರಗತಿಯ ಎಲ್ಲ ಮಕ್ಕಳು ಪುಸ್ತಕೀಯ ಜ್ಞಾನದ ಹಿನ್ನೆಲೆಯಲ್ಲಿ ಚಿತ್ರ ಬಿಡಿಸಿದರೆ ಈ ಮಗು ತನ್ನ ಅನುಭವದ ಚಿತ್ರವನ್ನು ಬಿಡಿಸಿದೆ. ಹಾಗಾಗಿ ಈ ಮಗುವಿನ ಚಿತ್ರವೂ ಕೂಡಾ ಸರಿ ಎಂದು ಪರಿಗಣಿಸಬೇಕಾಗುತ್ತದೆ. ಇಂತಹ ತರಗತಿಯ ಸನ್ನಿವೇಶಗಳನ್ನು ನಮ್ಮ ಶಿಕ್ಷಕರು ಕೂಡಾ ಏದುರಿಸಿರುತ್ತಾರೆ. ಅಂತಹ ಸಮಯದಲ್ಲಿ ಕೇವಲ ಪುಸ್ತಕೀಯ ಜ್ಞಾನಕ್ಕೆ ಮಾತ್ರ ಸೀಮಿತವಾಗಿರದೇ ಈ ರೀತಿಯ ಮಗುವಿನ ಜೊತೆ ಸಂಬಾಷಣೆ ಮಾಡಿದಾಗ ಮಾತ್ರ ನಿಜಾಂಶವನ್ನು ಅರಿಯಲು ಸಾಧ್ಯ. ಹಾಗಾಗಿ ಶಿಕ್ಷಕರು ತರಗತಿಯಲ್ಲಿ ಪ್ರತಿಯೊಂದು ಮಗುವಿನಲ್ಲಿರುವ ವಿಬಿನ್ನ ಸಾಮರ್ಥ್ಯವನ್ನು ಅರಿತಾಗ ಮಾತ್ರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಾಧ್ಯ ಇಲ್ಲವಾದಲ್ಲಿ ಎಲ್ಲರನ್ನೂ ಒಂದೆ ರೀತಿಯ ಮೌಲ್ಯಮಾಪನ ಮಾಡುವುದರಿಂದ ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಿಲ್ಲ ಇದರಿಂದಾಗಿ ದೇಶವೂ ಒಬ್ಬ ವಿಜ್ಞಾನಿ, ಉತ್ತಮ ನಾಯಕ, ತಂತ್ರಜ್ಞ, ಸಾಹಿತಿ, ಸಮಾಜ ಸುಧಾರಕರನ್ನೂ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ಒಂದು ಸುಸ್ಥಿರ ಸಮಾಜವನ್ನೂ ನಿರೂಪಿಸುವುದು ಶಿಕ್ಷಕರ ಕೈಯಲ್ಲಿಯೇ ಇದೆ ಹಾಗಾಗಿಯೇ ನಾವು ಶಿಕ್ಷಕರನ್ನು ರಾಷ್ಟ್ರ ನಿರ್ಮಾಪಕರು ಎಂದು ಹೇಳುತ್ತೇವೆ, ಒಂದು ದೇಶವನ್ನು ಅಭಿವೃದ್ಧಿ ಫಥದ ಕಡೆಗೆ ಕರೆದೊಯ್ಯುವ ಜವಾಬ್ದಾರಿ ಶಿಕ್ಷಕರಿಂದ ಮಾತ್ರ ಸಾಧ್ಯ. ಭಾರತ ದೇಶದ ಪ್ರಸ್ತುತ ಸ್ಥಿತಿಯನ್ನು ಗಮನಿಸಿದಾಗ ಶಿಕ್ಷಕರ ಜವಾಬ್ದಾರಿ ಅತಿ ಹೆಚ್ಚು ಇರುವುದನ್ನು ನಾವು ಕಾಣುತ್ತೇವೆ, ಭ್ರಷ್ಟಾಚಾರ, ರೆಸಾರ್ಟ ರಾಜಕಾರಣ, ಅನಾಗರಿಕತೆಯ ಬಿಂಬವಾಗಿ ಮಹಿಳೆಯರ ಮೇಲೆ ಆಗುತ್ತಿರುವ ಕೌಟುಂಬಿಕ ದೌರ್ಜನ್ಯಗಳು ಹಾಗೂ ಇತ್ತಿಚೀನ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಮಸಿ ಬಳದಂತಾಗಿದೆ. ಉತ್ತಮ ನಾಗರಿಕತೆ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಭಾರತ ವಿಶ್ವದಲ್ಲಿ ಉಚ್ಛ ಸ್ಥಾನವನ್ನು ಹೊಂದಿತ್ತು ಇಂತಹ ಪ್ರಕರಣಗಳಿಂದಾಗಿನ ವಿದೇಶಿಯರು ನಮ್ಮ ನಾಗರಿಕತೆ ಹಾಗೂ ಸಂಸ್ಕೃತಿಯನ್ನು ಪ್ರಶ್ನಿಸುವಂತಾಗಿದೆ. ಇಂತಹ ಒಂದು ಕರಾಳ ಸ್ಥಿತಿಯಿಂದ ಬೆಳಕಿನಡೆಗೆ ಕರೆದೊಯ್ಯಲು ಶಿಕ್ಷಕರಿಂದ ಮಾತ್ರ ಸಾಧ್ಯ.
ಪ್ರತಿಯೊಂದು ವಿಷಯವನ್ನು, ಸನ್ನಿವೇಶವನ್ನು ವಿಬಿನ್ನವಾಗಿ ಚಿಂತಿಸುವ ಅಗತ್ಯತೆಯಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹೇಳುವಂತೆ ಮಕ್ಕಳಲ್ಲಿನ ವೈವಿಧ್ಯತೆಯನ್ನು ಗಮನಿಸಿ ಬೆಂಬಲಿಸಿದಾಗ ಮಾತ್ರ ಪುಸ್ತಕೀಯ ಜ್ಞಾನಕ್ಕೂ ಬದುಕಿಗೂ ಸಂಬಂದ ಕಲ್ಪಸಲು ಸಾಧ್ಯವಾಗುತದೆ, ಇಲ್ಲವಾದಲ್ಲಿ ಅದು ಕೇವಲ ಮಾಹಿತಿಯಾಗುತ್ತದೆ ಹೊರತು ಜ್ಞಾನವಾಗಲಾರದು. ಪ್ರತಿಯೊಂದು ಮಗುವಿನಲ್ಲಿಯೂ ತರ್ಕಮಾಡುವ, ವಿಭಿನ್ನವಾಗಿ ಆಲೋಚಿಸುವ, ಹೊಸದೊಂದನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಬೆಳಸುವುದು ನಮ್ಮ ನಿಮೆಲ್ಲರ ಹೊಣೆಯಾಗಿದೆ. ಹಾಗಾಗಿ ನಾವು ಮಕ್ಕಳಲ್ಲಿನ ವೈವಿಧ್ಯತೆಯನ್ನು ಗುರುತಿಸಿ ಆ ವೈವಿದ್ಯತೆಯನ್ನು ಸ್ವೀಕರಿಸಿದಾಗ ಮಾತ್ರ ಒಂದು ಸುಸ್ಥಿರ ಸಮಾಜವನ್ನು ನಿರ್ಮಿಸುವ ಜೊತೆಗೆ ದೇಶವನ್ನು ಅಭಿವೃದ್ಧಿ ಪಥದ ಕಡೆಗೆ ಕರೆದೊಯ್ಯಲು ಸಾಧ್ಯ. ಈ ಕ್ಷಣದಿಂದಲೇ ನಮ್ಮ ವೈವಿದ್ಯತೆಯನ್ನು ಸ್ವೀಕರಿಸುವ ಪ್ರವೃತ್ತಿ ನಮ್ಮ ಕುಟುಂಬದಿಂದಲೇ ಆರಂಬಿಸೋಣ. . . .