ಸಿಂಪಲ್ ಲವ್ ಸ್ಪೈಸಿ ಕಿಕ್...!
ಹುಡುಗಿ ಹೇಳ್ತಾಳೆ. ಹುಡುಗ್ರಷ್ಟೆ ದೇವದಾಸ್ ಆಗ್ಬೇಕಾ. ಲವ್ ನಲ್ಲಿ ನಾವೂ ದೇವದಾಸ್ ಆಗ್ತಿವಿ ಬಿಡು. ಆಗ, ಹುಡುಗ ಎಷ್ಟೇ ದೇವದಾಸ್ ಆಗಲು ನೀವು ಟ್ರೈ ಮಾಡಿದ್ರೂ ಅಷ್ಟೆ. ಗಡ್ಡ ಮಾತ್ರ ಬರೋದಿಲ್ಲ. ಎಲ್ಲಾ ಹುಡುಗಿರು ಹಿಂದಿನಿಂದ ಚೆಂದ ಕಾಣ್ತಾರೆ. ಕೆಲವೊಬ್ರು ಮುಂದೆನೂ ಚೆನ್ನಾಗಿ ಇರ್ತಾರೆ. ಇವತ್ತು ಜಗತ್ತಿನ ಎರಡನೇ ಸುಂದರಿಯನ್ನ ನೋಡ್ತಿದ್ದಿನೇ. ಹಾಗಂತ ಹುಡುಗ ಹೇಳ್ತಾನೆ. ಹುಡುಗಿ ಯಾರದು ಅಂತಾಳೆ. ಆಗ ಅದು ನೀನೆ...! ಆದ್ರೆ, ಅದು ನಕ್ಕಾಗ ಮಾತ್ರ ಅಂತಾನೆ ಹುಡುಗ..
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮಾತಿನ ಪಂಚ್ ಗಳಿವು. ಇಡೀ ಸಿನಿಮಾ ಹೀಗೇಯಿದೆ. ಪಂಚ್ ಮೇಲೆ ಪಂಚ್. ಮಾತಿಗೆ ಪ್ರತಿ ಮಾತು. ಎಲ್ಲವೂ ಮಸ್ತ್ ಆಗಿವೆ. ಈಗೀನ ಯುವ ಪೀಳಿಗೆ ಬೇಡೋ ಇನ್ಸಂಟ್ ಕಿಕ್ ಇಲ್ಲಿ ಸಿಗುತ್ತದೆ. ಯುವಕರ ಮನಸ್ಸನ್ನ ತುಂಬಾ ಚೆನ್ನಾಗಿಯೇ, ನಿದೇರ್ಶಕ ಸುನಿಲ್ ಅರ್ಥ ಮಾಡಿಕೊಂಡಿದ್ದಾರೆ. ಅವರ ಮನಸ್ಸಿಗೆ ರುಚಿಸೋ ಮಾತುಗಳನ್ನೆ ಕಟ್ಟಿದ್ದಾರೆ. ಮನತಟ್ಟೋ ಸಿಂಪಲ್ ಲವ್ ಸ್ಟೋರಿನೂ ಹೇಳಿದ್ದಾರೆ.
ಈಗ ಕತೆ ಬರೋಣ. ಕತೆಯಲ್ಲಿ ಬರೋ ನಾಯಕನ ಹೆಸ್ರು ಖುಷಾಲ್. ನಾಯಕಿ ಹೆಸ್ರು ಒಮ್ಮೆ ನಂದಿನಿ. ಇನ್ನೊಮ್ಮೆ ಇನ್ನೇನೋ. ಮತ್ತೊಮ್ಮೆ ಖುಷಿ. ನಾಯಕನಿಗೆ ಒಬ್ಬಳು ತಂಗಿ. ಈಕೆ ರೇಡಿಯೋ ಜಾಕಿ. ಹೆಸ್ರು ರಚನಾ. ನಾಯಕನ ಕೆಲಸ ತಂಗಿಯ ಬಾಯ್ ಫ್ರೆಂಡ್ ನ ಮನೆಯವ ರನ್ನ ಒಪ್ಪಿಸೋದು. ಹಾಗೆ ಕೊಡಗಿಗೆ ಸಾಗೋದು ಈ ನಾಯಕ, ತನ್ನ ಮದುವೆಗೆ ಹುಡುಗಿ ಹುಡುಕಬೇಕು. ಆ ಹುಡುಕಾಟದಲ್ಲಿ ,ತನಗೆ ಸಿಗಬೇಕಾದ ಹುಡುಗಿ ಬದಲು. ಇನ್ನಾರೋ ಸಿಗ್ತಾರೆ. ಆಗ ಗೊತ್ತಿಲ್ಲದೇ ಲವ್ ಸ್ಟೋರಿನೂ ಶುರುವಾಗುತ್ತದೆ. ಅದು ಹೆವಿಯಾಗಿ. ಆದ್ರೂ, ಇದು ಕೊನೆಯಾಗೋದು ಸಿಂಪಲ್ಲಾಗಿ...
ಇದು ಸಿಂಪಲ್ ಲವ್ ಸ್ಟೋರಿ ಕತೆ. ಇದರ ನಿರೂಪಣೆ ಚೆಂದ. ಪರಸ್ಪರ ಪ್ರೀತಿಸೋರೇ ತಮ್ಮ ಪ್ರೀತಿಯ ಕತೆಯನ್ನ ವಿಶೇಷವಾಗಿ ಹೇಳೋದೇ ಚಿತ್ರದ ವಿಶೇಷ . ಇಲ್ಲಿ ಬರೋ ಪಾತ್ರಧಾರಿಗಳು ಕಡಿಮೆ. ಆದರೆ, ಬರೋ ಈ ಎಲ್ಲ ಪಾತ್ರಗಳು ಪಂಚಿಂಗ್ ಮಾತುಗಳನ್ನೇ ಹಾಡುತ್ತವೆ. ವೈದ್ಯಳನ್ನ ಬಿಟ್ಟು.ಸಿಂಪಲ್ಲಾಗ್ ಒಂದ್ ಲವ್ ನಲ್ಲಿ ಬರೋ ಹಾಡುಗಳು ಚೆನ್ನಾಗಿವೆ. ಸಂಗೀತ ನಿರ್ದೇಶಕ ಭರತ್ ಒಳ್ಳೆ ರಾಗವನ್ನೇ ಹಾಕಿದ್ದಾರೆ. ಅದೇ ರಾಗದಲ್ಲಿ ಒಂದು ಹಾಡು ಬರುತ್ತದೆ. ನಿಧಾನಗತಿಯಲ್ಲಿ ಸಾಗೋ ಈ ಹಾಡು ಹೀಗೆ ಸಾಗುತ್ತದೆ..
ಬಾನಲಿ ಬದಲಾಗೋ ಬಣ್ಣವೇ..ಭಾವನೆ..
ಹೃದಯವು ಹಗುರಾಗಿ, ಹಾರುವ ಸೂಚನೆ
ಮನದಾ ಹೂ ಬಣದಿ...ನೆನಪು ಹೂ ಆಯಿತು
ಅದೇ ಮಾತು..ಅದೇ ನೋಟ.
ಮರೆಯದೇ ಕಾಡಿದೆ...
ಈ ಸಾಲಿನ ಚಿತ್ರೀಕರಣ ಖುಷಿಕೊಡುತ್ತದೆ. ನಾಯಕನ ಮನಸ್ಸಿನ ಮಾಧುರ್ಯತೆ ಹೇಳೋ ಈ ಗೀತೆಯಲ್ಲಿ ಬರೋ ಹಿನ್ನೆಲೆ ವಸ್ತುಗಳೆಲ್ಲ, ಹಗುರವಾಗಿ ಗಾಳಿಯಲ್ಲಿ ತೇಲುತ್ತವೆ. ಇದನ್ನ ಕ್ಯಾಮೆರಾಮೆನ್ ಮನೋಹರ್ ಜೋಷಿ ಉತ್ತಮವಾಗಿ ತೆಗೆದಿದ್ದಾರೆ. ನಾಯಕ ರಕ್ಷಿತ್ ಶೆಟ್ಟಿ ಅಭಿನಯದಲ್ಲಿ ಸಾಕಷ್ಟು ಬದಲಾಣೆಯಾಗಿದೆ. ಶ್ವೇತಾ ಶ್ರೀವತ್ಸ್ ನಟನೆ ಬಗ್ಗೆ ಎರಡು ಮಾತಿಲ್ಲಿ. ಕಿರುತೆರೆಯಲ್ಲಿ ಆಗಲೇ ಮಿಂಚಿದೋರು. ಈಗ ಅದೇ ಅನುಭವ ಬೆಳ್ಳಿ ತೆರೆ ಮೇಲೆ ಸಾಕಷ್ಟು ಹೊಳೆದಿದೆ. ನಿರ್ದೇಶಕ ಸುನೀಲ್ ಕನ್ನಡದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಕೇವಲ ಒಂದು ಪ್ರಮೋದಿಂದಲೇ ಗಮನ ಸೆಳೆದ, `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ, ಚಿತ್ರ ಮಂದಿರಕ್ಕೆ ಬರೋರಿಗಂತಲೇ ಮಸ್ತಿಯ ರಸದೌತಣ ನೀಡುತ್ತದೆ. ಒಮ್ಮೆ ಹೋಗಿ, ಚಿತ್ರ ನೋಡಿ. ಕಂಡಿತ ಸ್ಪೈಸಿ ಡೈಲಾಗ ಎಂಜಾಯ್ ಮಾಡಬಹುದು..
Comments
ಆರ್ ಜೆ ಅವ್ರೆ ಚಿತ್ರ ವಿಮರ್ಶೆ