ಮರೆಯಲಾರದ ಎವರ್ ಗ್ರೀನ್ ಹಾಡುಗಳು..
ಮರೆಯಲಾರದ ಎವರ್ ಗ್ರೀನ್ ಹಾಡುಗಳು..
ಮಳೆಯೊಂದಿಗೆ ಮರುಕಳಿಸುವ ನೆನಪುಗಳು..
ಕರಾವಳಿಯಲ್ಲಿ ಇಂದು ಬಿದ್ದ ಅನಿರೀಕ್ಷಿತ ಮಳೆಯೊಂದಿಗೆ
ನಿಮ್ಮ ನೆನಪುಗಳನ್ನು ನೆನೆಯಿಸುವ ನನ್ನೀ ಪುಟ್ಟ ಪ್ರಯತ್ನ..
ಬಿಸಿಲಿಗೆ ಬಾಡಿದ್ದ ಹಸಿರು ಇಂದು ಮಳೆಯ ನೀರುಂಡು ಉಲ್ಲಾಸಿಸುತಿದೆ
ಚೈತನ್ಯವನ್ನ ಚೆಲ್ಲುತಿದೆ.
ಬನ್ನಿ ನಾವೂ ಧುಮುಕೋಣ ಈ ಭಾವ ಸಾಗರದಲ್ಲಿ..
ಹಾಡೋಣ ಭಾವದುತ್ತುಂಗದಲಿ..
ಬಾಗಿಯಾಗೋಣ ಪ್ರಕೃತಿ ಹಬ್ಬದಲಿ..
ಮಳೆಹನಿಗಳ ಚಟಪಟ ಸದ್ಧಿನಲಿ..
ತುಂತುರು ಅಲ್ಲಿ ನೀರ ಹಾಡು ಫ್ರಂಮ್ ಅಮೃತವರ್ಷಿಣಿ (1996)
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು
ಮುಂಗಾರು ಮಳೆಯೆ ಏನು ನಿನ್ನ ಹನಿಗಳು ಲೀಲೆ ಫ್ರಂಮ್ ಮುಂಗಾರು ಮಳೆ
ಮುಂಗಾರು ಮಳೆಯೆ ಏನು ನಿನ್ನ ಹನಿಗಳು ಲೀಲೆ
ನಿನ್ನ ಮುಗಿಲ ಸಾಲೆ, ಧರೆಯ ಕೊರಳ ಪ್ರೇಮದ ಮಾಲೆ,
ಸುರಿವ ಒಲುಮೆಯ ಜಡಿ ಮಳೆಯೆ,ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ, ತಿಳಿಯದಾಗಿದೆ | ಮುಂಗಾರು ಮಳೆಯೇ
ನೂರು ಜನ್ಮಕು ನೂರಾರು ಜನ್ಮಕು ಫ್ರಂಮ್ ಅಮೇರಿಕಾ ! ಅಮೇರಿಕಾ !
ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೇ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು |೨|
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ, ಭಾವಗೀತೆ
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||
ನೂರೊಂದು ನೆನಪು ಎದೆಯಾಳದಿಂದ ಫ್ರಂಮ್ ಬಂಧನ
ನೂರೊಂದು ನೆನಪು.,ಎದೆಯಾಳದಿಂದ.
ಹಾಡಾಗಿ ಬಂತು...ಆನಂದದಿಂದ.
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ
ಓಲ್ಡ್ ಇಸ್ ಗೋಲ್ಡ್..
ಹಾಡಿನ ಸಂಪೂರ್ಣ ಲಿರಿಕ್ಸ್ ಮತ್ತು ವಿಡಿಯೊ ಕೊಂಡಿಗಳು ಮರೆಯಲಾರದ ಹಾಡುಗಳು in ಕಂಡಷ್ಟೂ ಖಗೋಳ.
Comments
ಮಳೆಯಲ್ಲಿ ನೆಂದು ಮಿಂದು
ಮಳೆಯಲ್ಲಿ ನೆಂದು ಮಿಂದು -ಒಳ್ಳೊಳ್ಳೆ ಮಳೆ ಕುರಿತ ಮಳೆಯಲ್ಲಿನ ಚಿತ್ರಗಳ ಹಾಡುಗಳ ಬಗ್ಗೆ ಲಿಸ್ಟ್ ಮತ್ತು ವೀಡಿಯೊ ಸಮೇತ ಹಾಕಿರುವಿರಿ...ಇನ್ನಸ್ಟು ಚಿತ್ರಗಳೂ ಹಾಡುಗಳೂ ಇವೆ.. ಅದ್ರಲ್ಲಿ ಗಣೇಶ್ ಅವರ ಮಳೆಯಲಿ ಜೊತೆಯಲಿ ಸಿನಿಮಾ ಸಹ ಒಂದು..
ಮಳೆಯಲ್ಲಿ ನೆನೆಯೋದು-ಯಾರಿಗೆ ಇಷ್ಟ ಇಲ್ಲ ಹೇಳಿ..ಅದರಲ್ಲೂ ಜೊತೆಗಾತಿ ಜೊತೆ...!!
ವೀಡಿಯೊ ಲಿಂಕ್ ಸಹಾಯಕ್ಕಾಗಿ ನನ್ನಿ ..
ಶುಭವಾಗಲಿ..
\।
In reply to ಮಳೆಯಲ್ಲಿ ನೆಂದು ಮಿಂದು by venkatb83
ಶುಭವಾಗಲಿ.. \।/ ವೆಂಕಟೇಶ್ ಅವ್ರೆ
ಶುಭವಾಗಲಿ.. \।/ ವೆಂಕಟೇಶ್ ಅವ್ರೆ.. ಲೈಫ್ನಲ್ಲಿ ಬೇಗ ಮಳೆಬರ್ಲಿ.. :-)