ನೆನಪುಗಳು
ಬರಹ
ಕಳೆದ ಶಿಶಿರದಲ್ಲಿ
ಉದುರಿಹೋದ ಎಲೆಗಳನ್ನು
ಮರ ಎಂದಾದರೂ ನೆನಪಿಸಿಕೊಳ್ಳುತ್ತದಾ ?
ನನ್ನ ನೆನಪುಗಳು
ನನ್ನೊಳಗೆ...ಭದ್ರವಾಗಿ !
ಮಳೆ ಹಳೆಯದೇ
ಮೋಡಕ್ಕೆ ಮಾತ್ರ
ಒಂದೊಂದು ಹನಿಯು ಹೊಸದೇ !
ನನ್ನ ನೆನಪುಗಳು
ನನ್ನೊಳಗೆ...ಒದ್ದೆ ಆಗೀ ಆಗದಂತೆ
Telugu version: జ్ఞాపకాలు