ಅಬ್ಬಾ! ಹೋಳಿ ಶಾಂತವಾಗಿತ್ತು! - ಲಕ್ಷ್ಮೀಕಾಂತ ಇಟ್ನಾಳ
ಅಬ್ಬಾ! ಹೋಳಿ ಶಾಂತವಾಗಿತ್ತು!
ಇಂದು ಹೋಳಿ ಇತ್ತು, ಎಲ್ಲೆಲ್ಲೂ ಬಣ್ಣ ಎರಚಾಟ
ಮುಖಗಳೆಲ್ಲ ಬಣ್ಣ,
ಯುವಕ –ಯುವತಿಯರು ರಸ್ತೆಯಂಗಳದಲ್ಲಿ ಹಾಕಿದ ಸೆಟ್ಟುಗಳಲ್ಲಿ
ಬಣ್ಣ ಬಣ್ಣದ ಮುಖಗಳಲ್ಲಿ,
ಸಾವಿರ ಸಾವಿರ ಸಂಖ್ಯೆಗಳಲ್ಲಿ,
ಕೈ ಮೇಲೆತ್ತಿ ಬೀಟ್ಸ್ ಗೆ ತಕ್ಕಂತೆ
ಹಸಿ ಬಣ್ಣಗಳ ಮೈಯಲ್ಲಿ,
ರೇನ್ ಡ್ಯಾನ್ಸ್ಸ್ ಗೆ ಕುಣಿದದ್ದೇ ಕುಣಿದದ್ದು,
ಒಂದು ವೃತ್ತದಲ್ಲಿ ಅದೆಷ್ಟೋ 'ಬೀಟ್ಸ'ಗಳ ಸದ್ದು,
ಇನ್ನೊಂದೆಡೆ ಇನ್ನೆಷ್ಟೋ ಗಿಜಿಗಿಡುವ ಸದ್ದು
ಅಗೋ ಅಲ್ಲಿ, ಮಾತೇ ಕೇಳಿಸದಂತಹ ಸದ್ದು,
ಎಲ್ಲೆಲ್ಲೂ ಕಿವಿ ಗಡಚಿಕ್ಕುವ ಸದ್ದು,
ಸಂಜೆಗೆಲ್ಲ ಹೇಳಿದರು,
ಅಬ್ಬಾ! ಹೋಳಿ ಶಾಂತವಾಗಿತ್ತು!
Rating
Comments
ಲಕ್ಷ್ಮಿಕಾಂತ ಇಟ್ನಾಳರಿಗೆ
ಲಕ್ಷ್ಮಿಕಾಂತ ಇಟ್ನಾಳರಿಗೆ ವಂದನೆಗಳು, ಹುಬ್ಬಳ್ಳಿ ಧಾರವಾಡದ ಹೋಳಿ ಹಬ್ಬದ ಆಚರಣೆಯ ವರದಿ ಬಗ್ಗೆ ಕುತೂಹಲಿಯಾಗಿದ್ದೆ ಮತ್ತು ಮನೆಗೆ ಹೋಗಿ ಟಿವಿ ನೋಡುವವನಿದ್ದೆ, ' ಅಬ್ಬಾ ! ಹೋಳಿ ಶಾಂತವಾಗಿತ್ತು ' ಒದಿ ಸಂತಸವಾಯಿತು, ಬರುವ ವರುಷಗಳಲ್ಲೂ ಈ ಶಾಂತತೆ ಮುಂದು ವರಿಯಲಿ ಧನ್ಯವಾದಗಳು.
In reply to ಲಕ್ಷ್ಮಿಕಾಂತ ಇಟ್ನಾಳರಿಗೆ by H A Patil
ಹಿರಿಯರಾದ ಹೆಚ್ ಎ ಪಾಟೀಲರವರಿಗೆ
ಹಿರಿಯರಾದ ಹೆಚ್ ಎ ಪಾಟೀಲರವರಿಗೆ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಾವಂದಂತೆ ಇಂದು ಧಾರವಾಡದಲ್ಲಿ ಬಣ್ಣವಿತ್ತು. ಹುಬ್ಬಳ್ಳಿಯಲ್ಲಿ ರವಿವಾರ ವಿದೆ. ಅದೂ ಕೂಡ ಶಾಂತವಾಗಿ ಮುಗಿಯಲಿ ಎಂದು ತಮ್ಮೊಡನೇ ನಾನೂ ಹಾರೈಸುವೆ. ಅಂದಹಾಗೆ ಮತ್ತೇನು ಲಿಟರರಿ ವರ್ಕ್ಸ ನಡೆದಿದೆ ಸರ್. ತಮ್ಮ ಕಥಾ ಸಾಹಿತ್ಯ, ಕವನಗಳೂ ಪುಸ್ತಕ ರೂಪದಲ್ಲಿ ಈಗಾಗಲೇ ಬಂದಿರಬಹುದೆಂದು ಆಶಿಸುತ್ತೇನೆ. ಬಹುಕಾಲದಿಂದ ಕನ್ನಡಸ ಸೇವೆ ಮಾಡುತ್ತ ಬರುತ್ತಿರುವ ತಾವು ಸಾಹಿತ್ಯ ಗರಡಿಯಲ್ಲಿ ಸಾಕಷ್ಟು ಪಳಗಿದ್ದೀರಿ. ಸಾಹಿತ್ಯದ ಯಾವುದೇ ಪ್ರಕಾರವಿರಲಿ ಅದರಲ್ಲಿ ತಾವು ತುಂಬ ಚನ್ನಾಗಿ ಬರೆಯುತ್ತಿರುತ್ತೀರಿ, ಕವನಕ್ಕೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
In reply to ಹಿರಿಯರಾದ ಹೆಚ್ ಎ ಪಾಟೀಲರವರಿಗೆ by lpitnal@gmail.com
ಲಕ್ಷ್ಮೀಕಾಂತ ಇಟ್ನಾಳರಿಗೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ನಿಮ್ಮ ಕವನಕ್ಕೆ ನಾನು ಬರೆದ ಪ್ರತಿಕ್ರಿಯೆಗೆ ತಾವು ಬರೆದ ಮರು ಪ್ರತಿಕ್ರಿಯೆ ಓದಿದೆ ಸಂತಸವಾಯಿತು. ತಮ್ಮ ಅಜ್ಞಾತವಾಸದ ಕಾಲದಲ್ಲಿ ಸಂಪದದಲ್ಲಿ 'ಸಿನೆಮಾ' ಎಂಬ ಕಥಾನಕವನ್ನು ಹದಿನೈದು ಕಂತುಗಳಲ್ಲಿ ಬರೆದೆ, ಅದರ ಕೊನೆಯ ಕಂತು ಜನೇವರಿ 24ರಂದು ಪ್ರಕಟಕ ಗೊಂಡಿತು. ನಂತರದಲ್ಲಿ ಎರಡು ಬ್ಲಾಗ್ ಬರಹ ಮತ್ತು ಎರಡು ಕಾರ್ಯಕ್ರಮಗಳ ವರದಿ ಬರೆದೆ. ಕಳೆದ ವರ್ಷದ ಡಿಸೆಂಬರ್ ಕೊನೆಯಲ್ಲಿ ನನ್ನ ಎರಡನೆಯ ಕವನ ಸಂಕಲನ ' ಕವನ ಬರುವುದಾದರೆ ಬರಲಿ ' ಸಾಗರದಲ್ಲಿ ಬಿಡುಗಡೆಯಾಯಿತು. ಅದರ ಕರೆಯೋಲೆ ಮತ್ತು ಆ ಕಾರ್ಯಕ್ರಮದ ವರದಿಯನ್ನು ನನ್ನ ಬ್ಲಾಗ್ ಬರಹದಲ್ಲಿ ಹಾಕಿದ್ದೇನೆ. ಇನ್ನೂ ಒಂದು ಲೇಖನಗಳ ಸಂಗ್ರಹ ಮತ್ತು ಚುಟುಕುಗಳ ಸಂಕಲನಗಳು ಪ್ರಕಾಶಕರ ಬಳಿ ಎರಡು ವರ್ಷಗಳಿಂದ ಇವೆ, ಅವು ಯಾವಾಗ ಪುಸ್ತರಕರೂಪದಲ್ಲಿ ಬರುವವೋ ನನಗೇ ಗೊತ್ತಿಲ್ಲ ನಾನೂ ಕಾಯುತ್ತಿರುವೆ. ಅವು ಬೆಳಕಿಗೆ ಬಂದ ನಂತರ ' ಅಪರಿಚಿತ ' ಹತ್ತು ಕಥಗಳ ಸಂಕಲನವೊಂದು ಕರಡು ಪ್ರತಿಯಲ್ಲಿದೆ, ಅಲ್ಲದೆ ಸಿನೆಮಾ ಕಥಾನಕದ ನಂತರ ಒಂದು ಕಾದಂಬರಿಯನ್ನು ಗಣಕಯಂತ್ರದಲ್ಲಿ ಬರತೆಯುತ್ತಿದ್ದೆ, ಒಂದು ದಿನ ರಾತ್ರಿ ಸ್ಣೇಹಿತರ ಲ್ಯಾಪ್ ಟಾಪ್ನಲ್ಲಿ ಅದರ ಗಣಿಕೀಕರಣ ಮಾಡು ತ್ತಿರುವಾಗ ಇದ್ದಕ್ಕಿಂದ್ದಂತೆ ಕರಂಟ್ ಹೋಗಿ ಆ ಲ್ಯಾಪ್ ಟಾಪ್ ಓಪನ್ ಆಗುತ್ತಿಲ್ಲ. 73 ಪುಟಗಳ ಆ ಕಾದಂಬರಿ ಲ್ಯಾಪ್ ಟಾಪ್ನ ಕತ್ತಲ ಕೋಣೆಯಲ್ಲಿ ಕುಳಿತಿದೆ, ಆ ಲ್ಯಾಪ್ ಟಾಪ್ ಸಹಜ ಸ್ಥಿತಿಗೆ ಬರಲಿ ನನ್ನ ಬರವಬಣಿಗೆಗೆ ಏನೂ ಆಗದಿರಲಿ ಎಂದು ನನಗೆ ನಾನೆ ಶುಭ ಕೋರುತ್ತ ಆ ಲ್ಯಾಪ್ ಟಾಪಿನ ಮುನಿಸು ಬೇಗ ಮುಗಿಯಲಿ ಎಂದು ಅದರ ಮರಳಿ ಬರುವಿಕೆಗೆ ಕಾದು ಕುಳಿತಿದ್ದೇನೆ. ಸ್ನೇಹಿತರಾದ ಕಾಮತರು ಅಂದಂದಿನ ಬರವಣಿಗೆಯನ್ನು ಪೆನ್ ಡ್ರೈವ್ನಲ್ಲಿ ಉಳಿಸಿ ಕೊಳ್ಳುವಂತೆ ಸಲಹೆ ನೀಡಿದ್ದರು, ಅದನ್ನು ಸಹ ಎಲ್ಲಿಯೋ ಕಳೆದು ಕೊಂಡಿದ್ದು ಇಂದು ನಾಳೆ ತಂತಾನೆ ದೊರೆಯಬಹುದು ಎಂದು ( ಹುಡುಕುವ ಗಂಭೀರ ಪ್ರಯತ್ನ ಮಾಡದೆ ) ಈಗ ಪರಿತಪಿಸುವಂತಾಗಿದೆ. ಮತ್ತೊಮ್ಮೆ ಓಂ ನಮಃಶಿವಾಯ ಎಂದು ಮೊದಲಿನಿಂದ ಬರೆಯಲು ಬೇಸರ, ಈಗ ಒಂದು ರೀತಿಯ ವಿಷಾದ ಪರ್ವದಲ್ಲಿದ್ದೇನೆ. ಿದೊಂದು ಮುಗಿಯದ ಕಥ, ತಾವು ಕವಿ ಗುಲ್ಜಾರರ ಗಜಲ್ ಗಳ ಕನ್ನಡ ಅವತರಣಿಕೆಗಳನ್ನು ಪುಸ್ತಕ ರೂಪದಲ್ಲಿ ತರುವ ವಿಚಾರ ಏನಾಯಿತು? ರೈಟ್ಸ್ ಕುರಿತು ಅವರ ಜೊತಗೆ ಮಾತನಾಡಿದಿರಾ ? ಯಾವಾಗ ಪುಸ್ತಕ ರೂಪದಲ್ಲಿ ಅದು ಬರುತ್ತದೆ? ಧನ್ಯವಾದಗಳು.
In reply to ಹಿರಿಯರಾದ ಹೆಚ್ ಎ ಪಾಟೀಲರವರಿಗೆ by lpitnal@gmail.com
ಲಕ್ಷ್ಮೀಕಾಂತ ಇಟ್ನಾಳರಿಗೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ನಿಮ್ಮ ಕವನಕ್ಕೆ ನಾನು ಬರೆದ ಪ್ರತಿಕ್ರಿಯೆಗೆ ತಾವು ಬರೆದ ಮರು ಪ್ರತಿಕ್ರಿಯೆ ಓದಿದೆ ಸಂತಸವಾಯಿತು. ತಮ್ಮ ಅಜ್ಞಾತವಾಸದ ಕಾಲದಲ್ಲಿ ಸಂಪದದಲ್ಲಿ 'ಸಿನೆಮಾ' ಎಂಬ ಕಥಾನಕವನ್ನು ಹದಿನೈದು ಕಂತುಗಳಲ್ಲಿ ಬರೆದೆ, ಅದರ ಕೊನೆಯ ಕಂತು ಜನೇವರಿ 24ರಂದು ಪ್ರಕಟಕ ಗೊಂಡಿತು. ನಂತರದಲ್ಲಿ ಎರಡು ಬ್ಲಾಗ್ ಬರಹ ಮತ್ತು ಎರಡು ಕಾರ್ಯಕ್ರಮಗಳ ವರದಿ ಬರೆದೆ. ಕಳೆದ ವರ್ಷದ ಡಿಸೆಂಬರ್ ಕೊನೆಯಲ್ಲಿ ನನ್ನ ಎರಡನೆಯ ಕವನ ಸಂಕಲನ ' ಕವನ ಬರುವುದಾದರೆ ಬರಲಿ ' ಸಾಗರದಲ್ಲಿ ಬಿಡುಗಡೆಯಾಯಿತು. ಅದರ ಕರೆಯೋಲೆ ಮತ್ತು ಆ ಕಾರ್ಯಕ್ರಮದ ವರದಿಯನ್ನು ನನ್ನ ಬ್ಲಾಗ್ ಬರಹದಲ್ಲಿ ಹಾಕಿದ್ದೇನೆ. ಇನ್ನೂ ಒಂದು ಲೇಖನಗಳ ಸಂಗ್ರಹ ಮತ್ತು ಚುಟುಕುಗಳ ಸಂಕಲನಗಳು ಪ್ರಕಾಶಕರ ಬಳಿ ಎರಡು ವರ್ಷಗಳಿಂದ ಇವೆ, ಅವು ಯಾವಾಗ ಪುಸ್ತರಕರೂಪದಲ್ಲಿ ಬರುವವೋ ನನಗೇ ಗೊತ್ತಿಲ್ಲ ನಾನೂ ಕಾಯುತ್ತಿರುವೆ. ಅವು ಬೆಳಕಿಗೆ ಬಂದ ನಂತರ ' ಅಪರಿಚಿತ ' ಹತ್ತು ಕಥಗಳ ಸಂಕಲನವೊಂದು ಕರಡು ಪ್ರತಿಯಲ್ಲಿದೆ, ಅಲ್ಲದೆ ಸಿನೆಮಾ ಕಥಾನಕದ ನಂತರ ಒಂದು ಕಾದಂಬರಿಯನ್ನು ಗಣಕಯಂತ್ರದಲ್ಲಿ ಬರತೆಯುತ್ತಿದ್ದೆ, ಒಂದು ದಿನ ರಾತ್ರಿ ಸ್ಣೇಹಿತರ ಲ್ಯಾಪ್ ಟಾಪ್ನಲ್ಲಿ ಅದರ ಗಣಿಕೀಕರಣ ಮಾಡು ತ್ತಿರುವಾಗ ಇದ್ದಕ್ಕಿಂದ್ದಂತೆ ಕರಂಟ್ ಹೋಗಿ ಆ ಲ್ಯಾಪ್ ಟಾಪ್ ಓಪನ್ ಆಗುತ್ತಿಲ್ಲ. 73 ಪುಟಗಳ ಆ ಕಾದಂಬರಿ ಲ್ಯಾಪ್ ಟಾಪ್ನ ಕತ್ತಲ ಕೋಣೆಯಲ್ಲಿ ಕುಳಿತಿದೆ, ಆ ಲ್ಯಾಪ್ ಟಾಪ್ ಸಹಜ ಸ್ಥಿತಿಗೆ ಬರಲಿ ನನ್ನ ಬರವಬಣಿಗೆಗೆ ಏನೂ ಆಗದಿರಲಿ ಎಂದು ನನಗೆ ನಾನೆ ಶುಭ ಕೋರುತ್ತ ಆ ಲ್ಯಾಪ್ ಟಾಪಿನ ಮುನಿಸು ಬೇಗ ಮುಗಿಯಲಿ ಎಂದು ಅದರ ಮರಳಿ ಬರುವಿಕೆಗೆ ಕಾದು ಕುಳಿತಿದ್ದೇನೆ. ಸ್ನೇಹಿತರಾದ ಕಾಮತರು ಅಂದಂದಿನ ಬರವಣಿಗೆಯನ್ನು ಪೆನ್ ಡ್ರೈವ್ನಲ್ಲಿ ಉಳಿಸಿ ಕೊಳ್ಳುವಂತೆ ಸಲಹೆ ನೀಡಿದ್ದರು, ಅದನ್ನು ಸಹ ಎಲ್ಲಿಯೋ ಕಳೆದು ಕೊಂಡಿದ್ದು ಇಂದು ನಾಳೆ ತಂತಾನೆ ದೊರೆಯಬಹುದು ಎಂದು ( ಹುಡುಕುವ ಗಂಭೀರ ಪ್ರಯತ್ನ ಮಾಡದೆ ) ಈಗ ಪರಿತಪಿಸುವಂತಾಗಿದೆ. ಮತ್ತೊಮ್ಮೆ ಓಂ ನಮಃಶಿವಾಯ ಎಂದು ಮೊದಲಿನಿಂದ ಬರೆಯಲು ಬೇಸರ, ಈಗ ಒಂದು ರೀತಿಯ ವಿಷಾದ ಪರ್ವದಲ್ಲಿದ್ದೇನೆ. ಿದೊಂದು ಮುಗಿಯದ ಕಥ, ತಾವು ಕವಿ ಗುಲ್ಜಾರರ ಗಜಲ್ ಗಳ ಕನ್ನಡ ಅವತರಣಿಕೆಗಳನ್ನು ಪುಸ್ತಕ ರೂಪದಲ್ಲಿ ತರುವ ವಿಚಾರ ಏನಾಯಿತು? ರೈಟ್ಸ್ ಕುರಿತು ಅವರ ಜೊತಗೆ ಮಾತನಾಡಿದಿರಾ ? ಯಾವಾಗ ಪುಸ್ತಕ ರೂಪದಲ್ಲಿ ಅದು ಬರುತ್ತದೆ? ಧನ್ಯವಾದಗಳು.
In reply to ಲಕ್ಷ್ಮೀಕಾಂತ ಇಟ್ನಾಳರಿಗೆ by H A Patil
ಲ್ಯಾಪ್ ಟಾಪ್ ಓಪನ್ ಆಗುತ್ತಿಲ್ಲ..
ಲ್ಯಾಪ್ ಟಾಪ್ ಓಪನ್ ಆಗುತ್ತಿಲ್ಲ....! ಸಂಪದದಲ್ಲಿದ್ದೂ ಇಷ್ಟು ದಿನ ಈ ವಿಷಯ ಪ್ರಸ್ತಾಪ ಮಾಡದಿದ್ದದ್ದು ಯಾಕೆ? ವಿವರವಾಗಿ ಬರೆದಿದ್ದರೆ ಉಪಾಯವನ್ನು ಸಂಪದದ ಕಂಪ್ಯೂಟರ್ ತಜ್ಞ ಮಿತ್ರರು ತಿಳಿಸುತ್ತಿದ್ದರು. ಕಾಫಿ ಬಿದ್ದು ಹಾಳಾದ ಲ್ಯಾಪ್ ಟಾಪ್ ರಿಪೇರಿಯಾದ ಬಗ್ಗೆ ನಮ್ಮ ಚಿಕ್ಕು ಬರೆದ ಕತೆ ನೆನಪಾಯಿತು.:) ನಿಮಗೆ ಸಹಾಯ ಸಿಗಬಹುದು ಎಂದು ಆಶಿಸುವ- ಗಣೇಶ.
In reply to ಲ್ಯಾಪ್ ಟಾಪ್ ಓಪನ್ ಆಗುತ್ತಿಲ್ಲ.. by ಗಣೇಶ
ಹೌದು ಗಣೇಶರೆ, ನಾನು ಒಂದು ಹಳೆಯ
ಹೌದು ಗಣೇಶರೆ, ನಾನು ಒಂದು ಹಳೆಯ hp ಲ್ಯಾಪ್ ಟಾಪ್ ಅನ್ನು ಪಾಟೀಲರ ಉಪಯೋಗಕ್ಕೆಂದು ಹೊಸದಾಗಿ ಫಾರ್ಮಾಟ್ ಮಾಡಿಸಿ ಕೊಟ್ಟಿದ್ದೆ. ಕೊಡುವಾಗ ಅವರು ಟೈಪಿಸಿದ ಕಥೆ,ಕವನಗಳನ್ನು D ಡ್ರವ್ನಲ್ಲಿ ಸೇವ್ ಮಾಡಿ ಹಾಗೂ ಅದನ್ನು ಪೆನ್ ಡ್ರವ್ ನಲ್ಲಿ ಕಾಪಿ ಮಾಡಿ ಎಂದು ತಿಳಿಸಿದ್ದೆ.ಅಲ್ಲದೆ ಲ್ಯಾಪ್ ಟಾಪಿನ ಬೇಟರಿ ಸಂಪೂರ್ಣ ಹೋಗಿರುವ ಕಾರಣ ವಿದ್ಯುತ್ ಅಡಾಪ್ಟರ್ ಮೂಲಕವೆ ಉಪಯೋಗಿಸ ಬೇಕಾಗಿತ್ತು. ನಾನು ಬೆಂಗಳೂರಿಗೆ ಬಂದಾಗ ಅದರ ಸೂಕ್ತ ಬೇಟರಿ ಹುಡುಕಿ ಅದಕ್ಕೆ ಹಾಕಬೇಕೆಂದು ಎಣಿಸಿದ್ದೆ. ಅಷ್ಟರಲ್ಲಿ ಈ ಘಟನೆ ಆಗಿದೆ. ಈಗ ವಿಂಡೋಸ್ ಕರಪ್ಟ ಆಗಿದೆ .ನಾರ್ಮಲ್ ಮೋಡ್ ಅಥವಾ ಸೆಫ್ ಮೋಡ್ ನಲ್ಲೂ ವಿಂಡೋಸ್ ಒಪನ್ ಆಗುತ್ತಿಲ್ಲಾ.ಬ್ಲು ಸ್ಕ್ರಿನ್ ಬಂದು ಹೋಗುತ್ತದೆ.ಸ್ನೇಹಿತರಲ್ಲಿ ಕೇಳಿದಾಗ ಮದರ್ ಬೋರ್ಡ ಪ್ರಾಬ್ಲಮ್ ಎಂದು ಹೇಳುತ್ತಾರೆ.ಹಾಗಾಗಿ ಪಾಟೀಲರು My documents ನಲ್ಲಿ ಸೇವ್ ಮಾಡಿರುವ 79 ಪುಟಗಳ ಪುಟ್ಟ ಕಾದಂಬರಿ ಕಥೆ ಸಿಗುವುದು ಕಷ್ಟಸಾದ್ಯವೇನೊ ಅನಿಸುತ್ತಿದೆ. ತಮ್ಮ ಸಲಹೆಗೆ ಧನ್ಯವಾದಗಳು...ರಮೇಶ್ ಕಾಮತ್
In reply to ಹೌದು ಗಣೇಶರೆ, ನಾನು ಒಂದು ಹಳೆಯ by swara kamath
ನಮಸ್ಕಾರ ಪಾಟೀಲ ಮತ್ತು ರಮೇಶ
ನಮಸ್ಕಾರ ಪಾಟೀಲ ಮತ್ತು ರಮೇಶ ಅವರಿಗೆ. ಮದರ್ ಬೋರ್ಡ ಪ್ರಾಬ್ಲಮ್ ಇದ್ದರೆ, ಹಾರ್ಡ್ ಡಿಸ್ಕ್ ಹೊರ ತೆಗೆದು ಬೇರೆ ಗಣಕಕ್ಕೆ ಜೋಡಿಸಿ ಬೇಕಾಗಿರುವ ಕತೆ, ಕವನಗಳನ್ನು ಪಡೆಯಬಹುದು. OS (Operating System) ತೊಂದರೆ ಇದ್ದರೆ ಉಬುಂಟು ಲೈವ್ ಸಿಡಿಯಿಂದ ಹಾರ್ಡ್ ಡಿಸ್ಕ್ ಉಪಯೋಗಿಸಬಹುದು. ಉಬುಂಟು ಲೈವ್ ಸಿಡಿ ಬಗ್ಗೆ ಈ ಕೆಳಗಿನ ಕೊಂಡಿ ಚಿಟುಕಿ.
http://www.linuxaayana.net/2010/09/%E0%B2%B2%E0%B2%BF%E0%B2%A8%E0%B2%95%E0%B3%8D%E0%B2%B8%E0%B2%BE%E0%B2%AF%E0%B2%A3-%E0%B3%AB-%E0%B2%89%E0%B2%AC%E0%B3%81%E0%B2%82%E0%B2%9F%E0%B3%81-%E0%B2%87%E0%B2%A8%E0%B3%8D%E0%B2%B8/
In reply to ನಮಸ್ಕಾರ ಪಾಟೀಲ ಮತ್ತು ರಮೇಶ by ಶ್ರೀನಿವಾಸ ವೀ. ಬ೦ಗೋಡಿ
ಪಾಟೀಲರ ಬರಹಗಳಿಗೆ ಕಂಪ್ಯೂಟರ್
ಪಾಟೀಲರ ಬರಹಗಳಿಗೆ ಕಂಪ್ಯೂಟರ್ ನೆರವು ನೀಡುತ್ತಿರುವ ರಮೇಶ್ ಅವರಿಗೂ, ತೊಂದರೆಯನ್ನು ಪರಿಹರಿಸುವಲ್ಲಿ ಸೂಚನೆ ನೀಡಿದ ಶ್ರೀನಿವಾಸರಿಗೂ ಧನ್ಯವಾದಗಳು.
In reply to ನಮಸ್ಕಾರ ಪಾಟೀಲ ಮತ್ತು ರಮೇಶ by ಶ್ರೀನಿವಾಸ ವೀ. ಬ೦ಗೋಡಿ
ಶ್ರೀನಿವಾಸ ಅವರಿಗೆ ನಮಸ್ಕಾರಗಳು.
ಶ್ರೀನಿವಾಸ ಅವರಿಗೆ ನಮಸ್ಕಾರಗಳು. ತಾವು ನೀಡಿದ ಸಲಹೆಗಳನ್ನು ನಾನು ಲ್ಯಾಪ್ ಟಾಪ್ ಸರಿಪಡಿಸಲು ಕೊಟ್ಟ ಶಿವಮೊಗ್ಗದ ಸ್ನೇಹಿತರಿಗೆ ತಿಳಿಸಿದೆ.ಅವರ ಪ್ರಕಾರ C ಡ್ರೈವ್ ಜಿರೊ ಮೆಮೊರಿ ತೊರಿಸುತ್ತಿದೆ,ವಿಂಡೋಸ್ ಕರಪ್ಟ ಆಗಿರುವುದರಿಂದ ಹೊಸದಾಗಿ ಇನ್ನೊಮ್ಮೆ ಫಾರ್ಮಟ್ ಮಾಡಿ ಲ್ಯಾಪ್ ಟಾಪ್ ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂತೂ ನಮ್ಮ ಪಾಟೀಲರಿಗೆ ಸಹಾಯ ಹಸ್ತ ನೀಡಲು ಆಗದಿದ್ದಕ್ಕೆ ವ್ಯಥೆ ಆಗುತ್ತಿದೆ.....ವಂದನೆಗಳು.........ರಮೇಶ್ ಕಾಮತ್
In reply to ಶ್ರೀನಿವಾಸ ಅವರಿಗೆ ನಮಸ್ಕಾರಗಳು. by swara kamath
ಹಿರಿಯರೇ -ಮತ್ತೊಬ್ಬ ಹಿರಿಯರಾದ
ಹಿರಿಯರೇ -ಮತ್ತೊಬ್ಬ ಹಿರಿಯರಾದ ಶ್ರೀಯುತ ಪಾಟೀಲರ ಲ್ಯಾಪ್ಟಾಪ್ನಲ್ನ ಸಮಸ್ಯೆ ಬಗ್ಗೆ ಓದಿದೆ ಅದ್ಕೆ ಬಂದ ಪ್ರತಿಕ್ರಿಯೆಗಳನ್ನು ಓದಿದೆ. ಆದ್ಯಾಗೂ ನಿಮ್ಮ ಆ ಸಮಸ್ಯೆ ಪರಿಹಾರವಾಗಿಲ್ಲ ಎಂದು ತಿಳಿದು ಖೇದವಾಯ್ತು..
ನೀವು ಬೆಂಗಳೂರಲ್ಲಿ ಇರುವುದು ತಿಳಿಯಿತು-ಆ ಲ್ಯಾಪ್ಟಾಪ್ ನಿಮ್ಮ ಹತ್ತಿರವಿದ್ದರೆ ಅದನ್ನು ನಾ ನಮ್ಮನೆಗೆ ಹೊಯ್ದು ಚೆಕ್ ಮಾಡಿ ಸಾಧ್ಯವಾದರೆ (ಆ ಸಾಧ್ಯತೆ ಇದೆ)ಆ ಡಾಟಾ ವಾಪಾಸ್ ಬರಿಸುವ ಪ್ರಯತ್ನ ಮಾಡುವ..
ಇಲ್ಲವಾದರೆ ನೀವ್ ಮತೊಮ್ಮೆ ಊರಿಂದ ಬರುವಾಗ ಅದನ್ನು ತಂದರೆ ಇಲ್ಲಿ -ನಾ ಪರೀಕ್ಷಿಸುವೆ.
ಆಕಸ್ಮಿಕವಾಗಿ ಅಳಿಸಿದ -ವೈರಸ್ಗೆ ತುತ್ತಾದ ಫೈಲುಗಳನ್ನು ಮರಳಿ ಪಡೆವ ಅವಕಾಶ ಇದೆ...
ಅದು ಸ್ವಲ್ಪ ಹೆಚ್ಚಿನ ಸಮಯ ಹಿಡಿವ ಕೆಲಸ -ಹಿರಿಯರ ಬರಹಗಳನ್ನು ಓದುವುದಕ್ಕಾಗಿ ಸ.ವಾ ಆ ಸಮಯ ವ್ಯಯಿಸಲು ಸಿದ್ಧ..
ನನ್ನ ವಯುಕ್ತಿಕ ಸಂಚಾರಿ ದೂರವಾಣಿ ಸಂಖ್ಯೆ ಇಲ್ಲಿ ಕೊಡಬಹುದು ಆದರೆ ಸ್ಪಾಮ್ ಸಮಸ್ಯೆ ಆಗಬಹ್ದು ಅಂತ..ಕೊಡಲು ಹಿಂಜರಿಕೆ...!!
ನಿಮಂ ಮಾರುತ್ತರ ಬಂದ ನಂತರ ಮುಂದಿನ ನಡೆ ಬಗ್ಗೆ ತಿಳಿಸುವೆ..
ಶುಭವಾಗಲಿ..
\।/
>>>ಕೆಳಗೆ ಕೆಲ ಲಿಂಕ್ ಇವೆ-ಅಲ್ಲಿ ಡಾಟಾ ಮರಳಿ ಪಡೆವ ವಿಧಾನಗಳು ಇತ್ಯಾದಿ ಬಗ್ಗೆ ಮಾಹಿತಿ ಇದೆ.. ನೋಡಿ..
http://www.youtube.com/watch?v=Wbk5Req4Anc
http://mareew.com/articles/disk_recovery.php
http://www.zimbra.com/forums/administrators/7877-restoring-backup-damaged-harddisk.html
http://www.wikihow.com/Recover-a-Dead-Hard-Disk
http://www.debianadmin.com/recover-data-from-a-damaged-hard-disk-using-dd_rhelp.html
In reply to ಹಿರಿಯರೇ -ಮತ್ತೊಬ್ಬ ಹಿರಿಯರಾದ by venkatb83
ಸಪ್ತಗಿರಿಯವರು, ಗಣೇಶ, ರಮೇಶ ಕಾಮತ
ಸಪ್ತಗಿರಿಯವರು, ಗಣೇಶ, ರಮೇಶ ಕಾಮತ, ಶ್ರೀನಿವಾಸ ಬಂಗೋಡಿ ಯವರಿಗೆ ವಂದನೆಗಳು.
ನನ್ನ ಕೃತಿ ಕಂಪ್ಯೂಟರ್ ನಲ್ಲಿ ಕಳೆದು ಹೋದುದುರ ಬಗ್ಗೆ ತಾವೆಲ್ಲ ಆತ್ಮೀ ಯ ಕಳಕಳಿ ತೋರಿ ತಮ್ಮ ಸಲಹೆಗಳನ್ನು ನೀಡಿದ್ದಿರಿ, ತಮ್ಮೆಲ್ಲ ಸಂಪದಿಗರಿಗೆ ನಿಮ್ಮ ಹೃದೆಯ ವೈಶ್ಯಾಲ್ಯಕ್ಕೆ , ಮತ್ತೊಬ್ಬರ ತೊಂದರೆಗೆ ನೀವು ಮಿಡಿಯುವ ರೀತಿ ನನಗೆ ಸಂತಸ ತಂದಿದೆ ಜೊತೆಗೆ ಇನ್ನೂ ಬರೆಯುವ ಉತ್ಸಾಹವನ್ನು ಹೆಚ್ಚಿದೆ ಎಂದು ಹೇಳಲು ಸಂತಸ ವೆನಿಸುತ್ತದೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಹೃತ್ಪೂರ್ವಕ ಧನ್ಯವಾದಗಳು..
In reply to ಸಪ್ತಗಿರಿಯವರು, ಗಣೇಶ, ರಮೇಶ ಕಾಮತ by H A Patil
""ಸಪ್ತಗಿರಿಯವರು, ಗಣೇಶ, ರಮೇಶ
""ಸಪ್ತಗಿರಿಯವರು, ಗಣೇಶ, ರಮೇಶ ಕಾಮತ, ಶ್ರೀನಿವಾಸ ಬಂಗೋಡಿ ಯವರಿಗೆ ವಂದನೆಗಳು. ನನ್ನ ಕೃತಿ ಕಂಪ್ಯೂಟರ್ ನಲ್ಲಿ ಕಳೆದು ಹೋದುದುರ ಬಗ್ಗೆ ತಾವೆಲ್ಲ ಆತ್ಮೀ ಯ ಕಳಕಳಿ ತೋರಿ ತಮ್ಮ ಸಲಹೆಗಳನ್ನು ನೀಡಿದ್ದಿರಿ, ತಮ್ಮೆಲ್ಲ ಸಂಪದಿಗರಿಗೆ ನಿಮ್ಮ ಹೃದೆಯ ವೈಶ್ಯಾಲ್ಯಕ್ಕೆ "" ಹೃದಯತುಂಬಿ ಪಾಟೀಲರವರು ಕೃತಜ್ಞತೆ ಅರ್ಪಿಸಿದ್ದು, ಇವೆಲ್ಲ ನಮ್ಮ ಸಂಸ್ಕೃತಿಯು ಇನ್ನೂ ಜೀವಂತವಾಗಿವೆ ಅನ್ನುವುದರ ತತ್ ಕ್ಷಣದ ಉದಾಹರಣೆಗಳು. ತಮಗೆಲ್ಲರಿಗೂ ನನ್ನದೂ ಕೂಡ ಆತ್ಮೀಯ ವಂದನೆಗಳು. ಎಲ್ಲರಿಗೂ ಶುಭವಾಗಲಿ ಗೆಳೆಯರೆ,ಹಿರಿಯರೇ...
In reply to ಹಿರಿಯರೇ -ಮತ್ತೊಬ್ಬ ಹಿರಿಯರಾದ by venkatb83
ಸಪ್ತಗಿರಿಯವರೆ ತಮ್ಮ ಆತ್ಮಿಯ
ಸಪ್ತಗಿರಿಯವರೆ ತಮ್ಮ ಆತ್ಮಿಯ ಪ್ರತಿಕ್ರಿಯೆಗೆ ಹೃದಯ ಪೂರ್ವಕ ವಂದನೆಗಳು .ನಾನು ಇನ್ನೂ ಕೆಲವು ದಿನಗಳು ಬೆಂಗಳೂರಿನಲ್ಲಿ ಇರುವ ಅನಿವಾರ್ಯತೆ ಇರುವುದದರಿಂದ ಸಾದ್ಯವಾದರೆ ಲ್ಯಾಪ್ ಟಾಪ್ ನ್ನು ಇಲ್ಲಿಗೆ ತರಿಸಿ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇನೆ.....ರಮೇಶ ಕಾಮತ್.
In reply to ಶ್ರೀನಿವಾಸ ಅವರಿಗೆ ನಮಸ್ಕಾರಗಳು. by swara kamath
ಫಾರ್ಮಾಟ್ ಆಗಿದ್ದು ತಿಳಿದು
ಫಾರ್ಮಾಟ್ ಆಗಿದ್ದು ತಿಳಿದು ಬೇಸರವಾಯಿತು :-(
ವಿಂಡೋಸ್ ಕರಪ್ಟ ಆಗಿದ್ದರೆ, ಮೇಲೆ ತಿಳಿಸಿದಂತೆ ಉಬುಂಟು ಲೈವ್ ಸಿಡಿ ಬಳಸಿ ಪ್ರಯತ್ನಿಸಬಹುದಿತ್ತು. ವೆಂಕಟೇಶ ಅವರು ವಿವರಿಸಿದ ಹಾಗೆ ಬರಹಗಳನ್ನು ಮರಳಿ ಪಡೆಯುಂತಾದರೆ ತುಂಬ ಸಂತೋಷ.
In reply to ಲಕ್ಷ್ಮಿಕಾಂತ ಇಟ್ನಾಳರಿಗೆ by H A Patil
ಕಿವಿಗಡಚಿಕ್ಕುವ ಶಬ್ದವಿದ್ದರೂ
ಕಿವಿಗಡಚಿಕ್ಕುವ ಶಬ್ದವಿದ್ದರೂ "ಶಾಂತ"ಹೋಳಿ ಎಂದು ಇತ್ನಾಳರು, "ಹುಬ್ಬಳ್ಳಿ ಶಾಂತವಾಗಿತ್ತು" ಎಂದು ಪಾಟೀಲರು ಬೇರೆಯೇ ಅರ್ಥಕೊಟ್ಟರು. :)
In reply to ಕಿವಿಗಡಚಿಕ್ಕುವ ಶಬ್ದವಿದ್ದರೂ by ಗಣೇಶ
ಗಣೇಶ ರವರಿಗೆ ವಂದನೆಗಳು
ಗಣೇಶ ರವರಿಗೆ ವಂದನೆಗಳು
ಇಟ್ನಾಳರ ಹೋಳಿ ಕವನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ. " ಕವಿ ಗಡಚಿಕ್ಕುವ ಶಬ್ದವಿದ್ದರೂ ಶಾಂತ ಹೋಳಿ ಎಂದ ತಮ್ಮ ಅಭಿಪ್ರಾಯ ವೇ್ಯ ವಾಯಿತು. ಕಿವಿ ಗಡಚಿಕ್ಕುವ ಶಬ್ದ ಮಾಲಿನ್ಯ ಮುಂತಾದವು ಹುಬ್ಬಳ್ಳಿ ಧಾರವಾಡದ ಕಡೆಯ ನಮಗೆ ಶಾಂತವೆ, ಆದರೆ ಈ ಕಡೆಗಿನ ಅನೇಕ ಸಂಧರ್ಭಗಳಲ್ಲಿ ಅದು ಕೋಮು ಗಲಭೇಗೆ ತಿರುಗಿ ಸಾರ್ವಜನಿಕ ನೆಮ್ಮದಿ ಕಲಕಿದ ಪ್ರಸಂಗಗಳು ಹಲವು ಇವೆ, ಅದನ್ನು ನೆನೆದು ಇಟ್ನಾಳರು ಶಾಂತ ಹೋಳಿ ಎಂದದ್ದು, ನನ್ನ ಆಶಯವೂ ಈ ಹೋಳಿ ಶಾಂತ ರೀತಿಯಲ್ಲಿ ಮುಗಿಯಲಿ ಎನ್ನುವ ಹಾರೈಕೆಯಿಂದ ಬರೆದದ್ದು . ಧನ್ಯವಾದಗಳು.
In reply to ಗಣೇಶ ರವರಿಗೆ ವಂದನೆಗಳು by H A Patil
ಪಾಟೀಲರೆ, ಸುಮ್ಮನೆ ಹಾಸ್ಯಕ್ಕೆ
ಪಾಟೀಲರೆ, ಸುಮ್ಮನೆ ಹಾಸ್ಯಕ್ಕೆ ಹಾಗೆ ಬರೆದೆ. ಹುಬ್ಬಳ್ಳಿಯಲ್ಲಿ ಹೋಳಿ ಇತ್ಯಾದಿ ಉತ್ಸವಗಳು ಶಾಂತರೀತಿಯಲ್ಲಿ ಮುಗಿಯಲಿ ಎಂದು ಅನೇಕ ವರ್ಷಗಳಿಂದ ನನ್ನದೂ ಹಾರೈಕೆಯಿದೆ. ಏಕೆಂದರೆ................... ಹುಬ್ಬಳ್ಳಿ ನನ್ನ ಹುಟ್ಟೂರು.
In reply to ಪಾಟೀಲರೆ, ಸುಮ್ಮನೆ ಹಾಸ್ಯಕ್ಕೆ by ಗಣೇಶ
ಪ್ರಿಯ ಗಣೇಶ ರವರೇ ಲಕ್ಷ್ಮೀಕಾಂತ
ಪ್ರಿಯ ಗಣೇಶ ರವರೇ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಹಾಸ್ಯ ಮಿಶ್ರಿತ ಪ್ರತಿಕ್ರಿಯೆ ಓದಿದೆ. ತಾವಂದಂತೆ ಎಷ್ಟೇ ಸದ್ದು , ರಂಪಾಟ, ಗಾಡಿಗಳ ಭೋರಾಟ ನಡೆದರೂ ಅವೆಲ್ಲ ಶಾಂತರೀತಿಯ ಸ್ಥರಗಳು. 'ಪಾಟೀಲರು ಹೇಳಿದ 'ಶಾಂತಿ' ಇದೆಯಲ್ಲಾ ಅದೆಲ್ಲಾ ನಾವೆಲ್ಲ ಬಯಸುವ ಶಾಂತಿ., ಇದೇ ಶಾಂತಿಗಾಗಿ ಹುಡುಕಿ, ಕೊನೆಗೆ ಉಧ್ಗಾರದೊಂದಿಗೆ ಸಾಂಕೇತಿಕವಾಗಿ ಮುಕ್ತಾಯಮಾಡಿದೆ ಅಷ್ಟೇ, ತಾವೂ ಸರಿಯಾಗಿ ಗುರುತಿಸಿರುವಿರಿ, ತಮ್ಮ ಪ್ರತಿಕ್ರಿಯೆಗೆ ಧನ್ವವಾದಗಳು.
In reply to ಪಾಟೀಲರೆ, ಸುಮ್ಮನೆ ಹಾಸ್ಯಕ್ಕೆ by ಗಣೇಶ
ಹೋ !
ಹೋ !
ಗಣೇಶಣ್ಣಾ ಹುಬ್ಬಳ್ಳಿಯಾಂವಾ !
:-))))
In reply to ಹೋ ! by Shreekar
ಶ್ರೀಕರ ರವರೇ , ಗಣೇಶ ಅವರು
ಶ್ರೀಕರ ರವರೇ , ಗಣೇಶ ಅವರು ಬೇಂದ್ರೆ ಯವರ 'ಹುಬ್ಬಳ್ಳಿಯಾಂವಾ' ಅಲ್ಲ ಬಿಡ್ರಿ( ಇನ್ನೂ ಯಾಕ ಬರಲಿಲ್ಲಂವ ಹುಬ್ಬಳ್ಳಿಯಾಂವಾ, ಬೇರೆಯೇ ಅರ್ಥದಲ್ಲಿ ಬೇಂದ್ರೆಯವರು ಬರೆದದ್ದು,) , ಗಣೇಶರು ಹುಟ್ಟಿನಿಂದ ಹುಬ್ಬಳ್ಳಿಯವರು. ಆದರೂ ನೀವು ಗುರುತಿಸಿದಂತೆ ನಮ್ಮ ಹುಬ್ಬಳ್ಳಿ ಧಾರವಾಡದವರು, ನಮ್ಮವರೆಂದರೆ ನಮಗೆ ಹೆಮ್ಮೆಯೇ ತಾನೇ...
In reply to ಶ್ರೀಕರ ರವರೇ , ಗಣೇಶ ಅವರು by lpitnal@gmail.com
ಇಟ್ನಾಳ್ ಸಾಹೇಬ್ರ,
ಇಟ್ನಾಳ್ ಸಾಹೇಬ್ರ,
ಖರೇ ಅಂದ್ರೂ ನಮ್ ಗಣೇಶಣ್ಣಾರು ಹುಬ್ಬಳ್ಳಿಯಾಂವಾ ಹೌಂದ್ ಆದ್ರೂನೂ ಬೇಂದ್ರೆಯವರ ಹುಬ್ಬಳ್ಳಿಯಾಂವಾ ಅಲ್ಲೇ ಅಲ್ಲ ಬಿಡ್ರೀ !
ಯಾಕಂದ್ರ ಬೇಂದ್ರೆಯವರ ಮನಶಾ ತನ್ ಪ್ರೇಮಾಸಾನೀ ಮನೀಗ ವಾರದಾಗ ಬರೀ ಮೂರ್ ಸರತೆ ಬರಾಂವಾ !
ಆದ್ರ, ನಮ್ ಗಣೇಶಣ್ಣಾರು ಸಂಪದಕ್ಕ ದಿನಾ ನಡುರಾತ್ರಿ ವ್ಯಾಳ್ಳ್ಯಾಕ್ಕ ಬರ್ತಿರ್ತಾರ !
ಗಣೇಶಣ್ಣಾರ, ಹುಬ್ಬಳ್ಳಿಯಾಗ ಯಾವ ಸಾಲೀಕ್ಕ ಹೋಗ್ತಿದ್ರಿಯಪ್ಪಾ?
ಲ್ಯಾಮಿಂಗ್ಟನ್ನೋ, ಇಲ್ಲಾ ಕೇಶ್ವಾಪುರದ್ ಕಾಲ್ ಮೆಂಟೊ ?
In reply to ಇಟ್ನಾಳ್ ಸಾಹೇಬ್ರ, by Shreekar
ಶ್ರೀಕರ ರವರೇ, ಏನ್ರೀ ಬೇರೀಗೇ ಕೈ
ಶ್ರೀಕರ ರವರೇ, ಏನ್ರೀ ಬೇರೀಗೇ ಕೈ ಹಚ್ಚೀರೇಲಾ, ಹೆಂಥಾ ಸಜ್ಜನ ಮನಶ್ಯಾಗ ನಾವು ಎಲ್ಲೆಲ್ಲೋ ಹೋಲಿಸಾಕ ಹತ್ತೀವಲ್ರೀ. ನೀವಂತೂ ಪ್ರೇಮಾಸಾನೀ ನ್ನ ರಂಗಕ್ಕ ತಂದು ಬಿಟ್ರಿ. ಪಾಪ, ಗಣೇಶ ಅವರು ಏನ್ ತಿಳಕೊಂಡ್ರೋ ಏನೋ. ಹಾಂ.. ಅಂದಾಂಗ ಗಣೇಶ ರು ಏನ್ ಹೇಳ್ತಾರೋ...ಇದಕ್ಕ...
In reply to ಶ್ರೀಕರ ರವರೇ, ಏನ್ರೀ ಬೇರೀಗೇ ಕೈ by lpitnal@gmail.com
:) :) ಇತ್ನಾಳರೆ, ಆಕಿ ಆತನ
:) :) ಇತ್ನಾಳರೆ, ಆಕಿ ಆತನ ನಡುವಿನ ಪ್ರೀತಿ, ಪ್ರೇಮ,ರಸಿಕತೆ, ವಿರಹ...ಆಹಾ.. ಇನ್ನೂ ಯಾಕ..ನನ್ನ ಇಷ್ಟದ ಹಾಡು. ನಿಮ್ಮ ಹೋಲಿಕೆ ನನಗೆ ಖುಷಿಯೇ.:)
In reply to ಇಟ್ನಾಳ್ ಸಾಹೇಬ್ರ, by Shreekar
ಶ್ರೀಕರ್‌ಜಿ, >>>ಇನ್ನೂ ಯಾಕ
ಶ್ರೀಕರ್‌ಜಿ, >>>ಇನ್ನೂ ಯಾಕ ಬರಲಿಲ್ಲಾ ಹುಬ್ಬಳ್ಳಿಯಾಂವಾ...? ಮಂಗಳೂರಿಗೆ ಹೋಗಿದ್ದೆ. ಈ ಸಂಜೆ ಬಂದೆ. >>>ಲ್ಯಾಮಿಂಗ್ಟನ್ನೋ, ಇಲ್ಲಾ ಕೇಶ್ವಾಪುರದ್ ಕಾಲ್ ಮೆಂಟೊ? :)ಸಪ್ತಗಿರಿ ನಾಳೆನೇ ಹುಬ್ಳಿಗೆ ಹೋಗಿ ನನ್ನ ಬಯೋಡೇಟಾ ಪೂರ್ತಿ ಸಂಪದದಲ್ಲಿ ಹಾಕುವರು. :)
In reply to ಹೋ ! by Shreekar
ಈ ಗಣೆಷ್ಹ್ ಅಣ್ನ ಅವ್ರನ್ ಅರಿಯೋದೆ
ಈ ಗಣೆಷ್ಹ್ ಅಣ್ನ ಅವ್ರನ್ ಅರಿಯೋದೆ ಕಸ್ಟ...!! ಮೊದ್ಲೈಗೆ ನಾ ಅವರು ಮ0ಗಳೂಊರ ಅವರು ಅನ್ಕನ್ಡೆ ಈಗ ನೋಡಿದ್ರೆ ಹುಬ್ಬಳ್ಳೀಯವರು...!! ಆದರೆ ಅವ್ರಿಗೆ ತುಳು ಗೊತ್ತ್ ಕನ್ನಡ ಎನ್ದ್ರೆ ಪ್ರಾಣ, ತೆಲುಗು ತಮಿಳು ಗೊತ್ತು..... ಸಕಲ ಕಲಾ ವಲ್ಲಭ ತರಹ ಇದ್ಕೆ ಎನೋ ಹೇಳ್ತಾರೆ ಹೊಳ್ಯೆತಿಲ್ಲ..!!
ಈಗ ಗಣೆಷ್ ಅಣ್ನ ನಮ್ಮವರೂ ಸಹಾ... ಉ.ಕ ಗಣೆಷ್ಹ್ ಅಣ್ನ...!!
\\\\|||
In reply to ಈ ಗಣೆಷ್ಹ್ ಅಣ್ನ ಅವ್ರನ್ ಅರಿಯೋದೆ by venkatb83
>>>ಸಕಲ ಕಲಾ ವಲ್ಲಭ ತರಹ ಇದ್ಕೆ
>>>ಸಕಲ ಕಲಾ ವಲ್ಲಭ ತರಹ ಇದ್ಕೆ ಎನೋ ಹೇಳ್ತಾರೆ ಹೊಳ್ಯೆತಿಲ್ಲ..!! -ಸಕಲ ಕಲಾ ವಲ್ಲಭ ಕಮಲಹಾಸನ್(ನಟಿಸಿದ ಸಿನೆಮಾ). ಸಕಲ ಕಲಾ ವಲಿಯದವನ್-ನಿಮ್ಮ ಗಣೇಸನ್.:(. ನೀವೆಲ್ಲಾ ನಮ್ಮವನು ಅಂತ ತಿಳ್ಕೊಂಡಿದ್ದೀರಲ್ಲಾ ಅದೇ ನನಗೆ ಹೆಮ್ಮೆ, ಖುಷಿ.
In reply to ಗಣೇಶ ರವರಿಗೆ ವಂದನೆಗಳು by H A Patil
ಹಿರಿಯರಾದ ಹೆಚ್ ಎ ಪಾಟೀಲ ರವರಿಗೆ,
ಹಿರಿಯರಾದ ಹೆಚ್ ಎ ಪಾಟೀಲ ರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಪ್ರತಿಕ್ರಿಯೆ ಓದಿದೆ. ತಮ್ಮ ಆತ್ಮೀಯ ಸ್ಪಂದನ ಸ್ಫೂರ್ತಿದಾಯಕವಾಗಿತ್ತು. ತಮ್ಮ ಬರವಣಿಗೆಯ ಆಳ ಅಗಲ ಹಾಗೂ ವೇಗ ನೋಡಿ ನಾನು ಗೆಸ್ ಮಾಡಿದ್ದು ನಿಜವೇ ಆಗಿದ್ದು ಸಂತೋಷವೇ ಆಯಿತು. ತಮ್ಮ ಎರಡನೆಯ ಕವನ ಸಂಕಲನ ಡಿಸೆಂಬರ್ ನಲ್ಲಿ ಹೊರಬಂದಿದ್ದು ಸಂತೋಷವನ್ನುಂಟು ಮಾಡಿತು, ಇನ್ನೆರಡು ಪುಸ್ತಕಗಳು ಎರಡು ವರ್ಷಗಳಿಂದ ಅಚ್ಚಿನಲ್ಲಿವೆ ಎಂದು ತಿಳಿದು, ಅವು ಬೇಗ ಬರಲಿ ಎಂದು ಹಾರೈಸುವೆ. ಇನ್ನೊಂದು ಖೇದಕರ, ವಿಷಯವೆಂದರೆ ತಮ್ಮ ಕಾದಂಬರಿ ಲ್ಯಾಪ್ ಟಾಪ್ ನಲ್ಲಿ ಕಳೆದುಕೊಂಡಿದ್ದು, 73 ಪುಟಗಳನ್ನು ಮರುನಿರ್ಮಿಸುವುದು ಎಂದರೆ ಯಾರಿಗಾದರೂ ಬೇಸರವೇ, ಆದರೂ ಹುಡುಕಿ ಸರ್ ಸಿಗುತ್ತದೆ. ತಮ್ಮ ಬರವಣಿಗೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸುವೆ.
ಇನ್ನು ತಾವು 'ಗುಲ್ಜಾರರ ಗೀತೆಗಳು' ಕುರಿತು ಕೇಳಿದ್ದು ನನಗೆ ನಿಜವಾಗಿಯೂ ಖುಷಿಯಾಯಿತು. ಎಂದೊ ಒಂದು ಸಂದರ್ಭದಲ್ಲಿ ತಮ್ಮೊಂದಿಗೆ ಚರ್ಚಿಸಿ ಮಾತಾಗಿದ್ದವು. ಹೌದು ನನ್ನ ಅಜ್ಞಾತವಾಸಕ್ಕೆ ಅದೂ ಒಂದು ಕಾರಣವಿರಬಹುದು. ಬಹಳ ಸೀರಿಯಸ್ಸಾಗಿ ಕುಳಿತು ಅನುವಾದಿಸಿದ 75 ಹಾಡು, ಕವನ, ಗಜಲ್ ಗಳ ಸಂಗ್ರಹವನ್ನು ನನ್ನ ಗುರೂಜಿ ಗುಲ್ಜಾರರಿಗೆ ಅನುಮತಿಗಾಗಿ ಕಳುಹಿಸಿದ್ದೇನೆ. ಅದು ದೊರೆತಲ್ಲಿ ಅದರ ಪುಸ್ತಕ ಬಿಡುಗಡೆಯ ಸಮಾರಂಭದ ಕುರಿತು ಸಂಪದಿಗರಿಗೆ ಖಂಡಿತ ಆಹ್ಹಾನಿಸುತ್ತೇನೆ. ದೊಡ್ಡವರಾದ ಗುಲ್ಜಾರಜಿ ಅವರಿಂದ ಸಿಗದೇ ಹೋದರೆ ನಾನೇನೂ ಮಾಡಲಾಗುವುದಿಲ್ಲ, ನನ್ನ ಪ್ರಯತ್ನ ಮಾಡಿದ್ದೇನೆ. ಒಪ್ಪಿಗೆ ಸಿಕ್ಕಲ್ಲಿ ಆ ಹಾಡುಗಳ ಕನ್ನಡ ಅನುವಾದಗಳ ಸಿಡಿ ಕೂಡ ತಯಾರಿಸುವ ಇರಾದೆಯಿದೆ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು, ನಮ್ಮ ಕೈಯಲ್ಲಿ ಇರುವುದನ್ನು ಮಾಡಿದ್ದೇನೆ. ನೋಡೋಣ ಸರ್ , ತಮ್ಮ ಶುಭ ಹಾರೈಕೆಯಿರಲಿ.ಧನ್ಯವಾದಗಳು.
ಹ ಹ್ಹ ಹ್ಹ..
ಹ ಹ್ಹ ಹ್ಹ..
ಶ್ರೀನಿವಾಸ ಅವರೇ, ಇದು
ಶ್ರೀನಿವಾಸ ಅವರೇ, ಇದು ನಮ್ಮೆಲ್ಲರಿಗೂ ಬಹು ಉಪಯುಕ್ತ ಮಾಹಿತಿ, ಒದಗಿಸಿದ್ದಕ್ಕೆ, ಹಾಗೂ ತಮ್ಮ ಸಾಂದರ್ಭಿಕ ಕಾಳಜಿಗೆ ಧನ್ವವಾದಗಳು.
In reply to ಶ್ರೀನಿವಾಸ ಅವರೇ, ಇದು by lpitnal@gmail.com
ಇತರಾಗ ನಂದೇನು ಇಲ್ರಿ ಇಟ್ನಾಳ ಸರ್
ಇತರಾಗ ನಂದೇನು ಇಲ್ರಿ ಇಟ್ನಾಳ ಸರ್. ಉಬುಂಟು ಬಗ್ಗೆ ಸಂಪದದಿಂದಾನೆ ಕಲಿತಿದ್ದು. ನಿಮ್ಮ ಧನ್ಯವಾದಗಳೇನಿದ್ರೂ ಸಂಪದಕ್ಕೆ ಹೋಗ್ಬೇಕು.
ಆತ್ಮೀಯ ಗಣೇಶ ಅವರೇ, ತಮ್ಮ
ಆತ್ಮೀಯ ಗಣೇಶ ಅವರೇ, ತಮ್ಮ ಪ್ರತಿಕ್ರಿಯೆಯ ಎಲ್ಲ ಆಯಾಮಗಳಲ್ಲೂ ತಮ್ಮ ವಿನೀತತೆ, ವಿಧೇಯತೆ ಎದ್ದು ಕಾಣುವ ಅಂಶಗಳಲ್ಲೊಂದು, ಅಷ್ಟೊಂದು ಉತ್ತಮ ಬರಹಗಾರರಾದರೂ, ಜೀವನದಲ್ಲಿ ಹಲವಾರು ಸಕ್ಸೆಸ್ ಸ್ಟೋರಿ ಒಳಗೊಂಡು ಬದುಕಿದ್ದರೂ, ಸಕಲ ಕಲಾ ಒಲಿಯದವನು, ಎಂದು ಹೇಳಿಕೊಳ್ಳುವ ಮನದವರು, 'ಅಣ್ಣನ 'ಎನಗಿಂತ ಕಿರಿಯರಿಲ್ಲ' ಅಕ್ಷರಶ: ಪಾಲಿಸುತ್ತಿರುವಿರಿ, ಬಹು ಎತ್ತರ ಏರುತ್ತೀರಿ,, ನೋಡುತ್ತೀರಿ,..ಏಕೆಂದರೆ ಇದಕ್ಕೆ ಪುಷ್ಟಿ ಕೊಡುವ ವಿಷಯವೊಂದಿದೆ, ಜಗತ್ತಿನ ಇತಿಹಾಸ ಇಣುಕಿದರೆ, ಬಹತೇಕ ಯುದ್ಧಗಳಾದದ್ದು 'ನಾಲಗೆ ಆಡಿದ ಮಾತಿನಿಂದ' ಎನ್ನುತ್ತಾರೆ. ತಮ್ಮ ಸೃಜನಾತ್ಮಕತೆ ಇದನ್ನು ನೆನಪಿಸಿತು. ಎಲ್ಲ ಗೆಳೆಯರಿಗೂ ಧನ್ವವಾದಗಳು.
In reply to ಆತ್ಮೀಯ ಗಣೇಶ ಅವರೇ, ತಮ್ಮ by lpitnal@gmail.com
ಇಟ್ನಾಳರೆ, ಕ್ಷಮಿಸಿ. ತಮ್ಮ
ಇಟ್ನಾಳರೆ, ಕ್ಷಮಿಸಿ. ತಮ್ಮ ಹೆಸರನ್ನೇ ತಪ್ಪಾಗಿ ಬರೆದಿದ್ದೆ. ಬೇಸರಿಸದೇ ಪ್ರೋತ್ಸಾಹದ ನುಡಿ ಬರೆದಿರುವಿರಿ. ತಮ್ಮ ಪ್ರೀತಿಗೆ ತುಂಬಾ ಧನ್ಯವಾದಗಳು.
ಗಣೇಷ್ ಅಣ್ಣ ಹೋದ ವರ್ಷ ನಾ
ಗಣೇಷ್ ಅಣ್ಣ ಹೋದ ವರ್ಷ ನಾ ಹುಬ್ಬಳೀಗೆ ಹೋಗಿದ್ದೆ..ಅಲ್ಲಿ ನಮ್ಮ ದೊಡ್ಡಪ್ಪ ಕೆಸ್ವಾಪುರದಲ್ಲಿ ಇರುವರು... ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಅಲ್ಲಿಗೆ ಹೋಗುವ ಸಮ್ಭವ ಇದೆ.....!
ಬಹು ಅತ್ಮೀಯ ಸಮ್ಪದಿಗರು ಅನೇಕರು ಬೆ0ಗಳೂರಲ್ಲಿ ಇದ್ರೂ ಯಾರನ್ನೂ ಇದ್ವರ್ಗೂ ನೋಡಲು ಮಾತಾಡಲು ಆಗಿಲ್ಲ..;((
ಅದ್ಯಾವಾಗ ಆಗುತ್ತೊ....?
ಶ್ಹುಭವಾಗಲಿ...
\|
ಹಿರಿಯರೇ ನಾ ಇರೋದು ಜಾಲಹಳ್ಳೀ
ಹಿರಿಯರೇ ನಾ ಇರೋದು ಜಾಲಹಳ್ಳೀ ವೆಸ್ಟ್ನಲ್ಲಿ .. ನೀವ್ ಇರೋ ಏರಿಯಾ ?? ಲ್ಯಾಪ್ ಟಾಪ್ ಇಲ್ಲಿಗೆ ತನ್ದರೆ ಬನ್ದರೆ ತಿಳಿಸಿ ಸರಿ ಪಡಿಸಲು ಯತ್ನಿಸುವೆ...
ಶ್ಹುಭವಾಗಲಿ..
\|
In reply to ಹಿರಿಯರೇ ನಾ ಇರೋದು ಜಾಲಹಳ್ಳೀ by venkatb83
>>>ನೀವ್ ಇರೋ ಏರಿಯಾ ??-ರಿಪ್ಪನ್
>>>ನೀವ್ ಇರೋ ಏರಿಯಾ ??-ರಿಪ್ಪನ್ ಪೇಟೆ. ರಿಪ್ಪನ್ ಪೇಟೆಯ ಲ್ಯಾಪ್ ಟಾಪ್ ರಿಪೇರಿಗೆ...:)(ಪ್ರಾಸಕ್ಕೆ ಬರೆದದ್ದು..)
In reply to >>>ನೀವ್ ಇರೋ ಏರಿಯಾ ??-ರಿಪ್ಪನ್ by ಗಣೇಶ
ಸಪ್ತಗಿರಿವಾಸಿ ಶ್ರೀ ವೆಂಕಟೇಶ ರೇ,
ಸಪ್ತಗಿರಿವಾಸಿ ಶ್ರೀ ವೆಂಕಟೇಶ ರೇ,
ಕಾಟನ್ ಪೇಟೆ, ಬಿನ್ನಿಪೇಟೆ, ಕಬ್ಬನ್ ಪೇಟೆ ಗಳಿರುವ ಬೆಂಗಳೂರಿಗರಾದ ತಮಗೆ ರಿಪ್ಪನ್ ಪೇಟೆಯೂ ಇವುಗಳ ನಡುವೆಯೇ ಇರುವ ಇನ್ನೊಂದು ಏರಿ ಯಾ ಎಂದು ಅನಿಸಿದ್ದರಲ್ಲಿ ಆಶ್ಚರ್ಯವಿಲ್ಲ.
ರಿಪ್ಪನ್ ಪೇಟೆ ಇರುವುದು ಶಿವಮೊಗ್ಗೆಯಿಂದಾಚೆಗೆ.
:-)))
In reply to ಸಪ್ತಗಿರಿವಾಸಿ ಶ್ರೀ ವೆಂಕಟೇಶ ರೇ, by Shreekar
ಓ ಹೌದೇ ಶ್ರೀಕರ ರವರೇ, ನಾನೂ ಅದು
ಓ ಹೌದೇ ಶ್ರೀಕರ ರವರೇ, ನಾನೂ ಅದು ಬೆಂಗಳೂರು ಬಳಸಿದ ಊರೇ ಅಂದಕೊಂಡಿದ್ದೆ. ಛಲೋ ಆತು ಬಿಡ್ರಿ. ಉಗಾದಿ ಹಬ್ಬದ ದಿನವಾದರೂ ನಮ್ಮ ಪಾಟೀಲ ಸರ್ ಅಡ್ರೆಸ್ ಸರಿಯಾಗಿ ಸಿಕ್ಕಿತು. ಎಲ್ಲರಿಗೂ ಧನ್ಯವಾದಗಳು. ಎಲ್ಲ ಸಂಪದಿಗ ಗೆಳೆಯರಿಗೂ, ಹಿರಿಯರಿಗೂ ,ಇಂದಿನ ಈ ಶುಭ ಗಳಿಗೆಯಲ್ಲಿ ಉಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು ತಮ್ಮೆಲ್ಲ ಹಿರಿಕಿರಿಯ ಮನೆಮಂದಿಗೆಲ್ಲಾ...ಮತ್ತೊಮ್ಮೆ ಶುಭಾಶಯಗಳು.
In reply to ಸಪ್ತಗಿರಿವಾಸಿ ಶ್ರೀ ವೆಂಕಟೇಶ ರೇ, by Shreekar
"ಸಪ್ತಗಿರಿವಾಸಿ ಶ್ರೀ ವೆಂಕಟೇಶ ರೇ
"ಸಪ್ತಗಿರಿವಾಸಿ ಶ್ರೀ ವೆಂಕಟೇಶ ರೇ, ಕಾಟನ್ ಪೇಟೆ, ಬಿನ್ನಿಪೇಟೆ, ಕಬ್ಬನ್ ಪೇಟೆ ಗಳಿರುವ ಬೆಂಗಳೂರಿಗರಾದ ತಮಗೆ ರಿಪ್ಪನ್ ಪೇಟೆಯೂ ಇವುಗಳ ನಡುವೆಯೇ ಇರುವ ಇನ್ನೊಂದು ಏರಿ ಯಾ ಎಂದು ಅನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ರಿಪ್ಪನ್ ಪೇಟೆ ಇರುವುದು ಶಿವಮೊಗ್ಗೆಯಿಂದಾಚೆಗೆ. :-)))"
ಶ್ರೀಕರ್ ಅವರೇ ಅದು ನಾನಲ್ಲ -ಗಣೇಶ್ ಅಣ್ಣ ಅವರು ಹೇಳಿದ್ದು.. !! ಆದರೆ ಹಿಂದೆ ಒಮ್ಮೆ ನಾನು ಹಿರಿಯರಿಗೆ (ಪಾಟೀಲರಿಗೆ) ಕೇಳಿದ್ದೆ ಅದು ಕೋಲಾರದಲ್ಲಿದೆಯೇ ಅಂತ .. ಆಗ ಅವರು ಹೇಳಿದ್ದರು ಅದು ಶಿವಮೊಗ್ಗದಲ್ಲಿದೆ ಎಂದು//
ಸರ್ವರಿಗೂ
ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು
ಶುಭವಾಗಲಿ..
\।/
In reply to "ಸಪ್ತಗಿರಿವಾಸಿ ಶ್ರೀ ವೆಂಕಟೇಶ ರೇ by venkatb83
ಸಪ್ತಗಿರಿ ಅವರೆ ನಾನೆ ಹಿಂದೊಮ್ಮೆ
ಸಪ್ತಗಿರಿ ಅವರೆ ನಾನೆ ಹಿಂದೊಮ್ಮೆ ನಿಮಗೆ ನಮ್ಮ ಊರಿನ ಕುರಿತು ತಿಳಿಸಿದ್ದೆ. ನೀವು ಶಿವಮೊಗ್ಗ ಜಿಲ್ಲೆಯ ಪ್ರವಾಸಕ್ಕೆ ಸ್ನೇಹಿತರೊಂದಿಗೆ ಬರುವುದಾದರೆ ತಿಳಿಸಿ, ನಾನು ಹಾಗು ಪಾಟೀಲ ಸರ್ ತಮ್ಮನ್ನು ಸ್ವಾಗತಿಸಿ ಉಪಚರಿಸಲು ಸಿದ್ದವೆಂದು ತಿಳಿಸಿದ್ದೆ. ಅಂತೂ ಈ ಭಾರಿ ಪಾಟೀಲರ ಲ್ಯಾಪ್ ಟಾಪ್ ನ ತೊಂದರೆ ಯಿಂದ ನಮ್ಮ ರಿಪ್ಪನ್ ಪೇಟೆ ಸಂಪದಿಗರಿಗೆ ಇನ್ನಷ್ಟು ಪರಿಚಯ ವಾಗಲು ಸಾದ್ಯ ವಾಯಿತು................ಧನ್ಯವಾದಗಳು.
In reply to ಸಪ್ತಗಿರಿ ಅವರೆ ನಾನೆ ಹಿಂದೊಮ್ಮೆ by swara kamath
ಹಾ ರಿಪ್ಪನ್ ಪೇಟೆ ಈಗ ವರ್ಲ್ಡ್
ಹಾ ರಿಪ್ಪನ್ ಪೇಟೆ ಈಗ ವರ್ಲ್ಡ್ ಫೇಮಸ್ ಆಗಲಿದೆ ---ಕಾರಣ ಜಗದಗಲದ ಸಮಸ್ತ ಕನ್ನಡಿಗರು ಇದನ್ನು ಓದುವರಲ್ಲ ....
ಹಾ ಅದು ನೆನಪಿದೆ ಹಿರಿಯರೇ . ನಿಮ್ಮ ಕಡೆ ಪ್ರವಾಸಕ್ಕೆ ಬಂದಾಗ ಜೋಗವನ್ನು ನೋಡಬಹ್ದು , ಅದ್ಕೆ ಮಳೆಗಾಲ ಸೂಕ್ತ ಅನ್ನಿಸುತ್ದೆ ಅಲ್ವೇ ?
ಹಾಗೆ ಬರುವುದಾದರೆ ನಿಮಗೆ ಖಂಡಿತ ತಿಳಿಸುವೆ .
ನಿಮ್ಮ ಈ (ಆ) ವಿಶೇಷ ಆಹ್ವಾನ ಅತಿಥ್ಯ ಸ್ವೀಕರಿಸಲು ನಾವ್ ಹೇಗೆ ನಿರಾಕರಿಸೇವು ?
ಖಂಡಿತ ಬರುವೆವು ಬಹು ಮುಂಚಿತವಾಗೆ ತಿಳಿಸುವೆವು ..
ಶುಭವಾಗಲಿ..
\\\।।।
ಗೆಳೆಯ ಗಣೇಶರವರೇ, ಅದೇಕೆ ಕ್ಷಮೆ
ಗೆಳೆಯ ಗಣೇಶರವರೇ, ಅದೇಕೆ ಕ್ಷಮೆ ಸರ್. ಗೆಳೆಯರಲ್ಲಿ ಕ್ಷಮೆ ಗಿಮೆ ಇಟ್ಟುಕೊಳ್ಳುವುದು ತರವಲ್ಲ. ಅದು ಸಹಜವಾಗಿ ನಡೆದದ್ದು, ಅದಕ್ಕೇನಂತೆ, ನನ್ನ ಹೆಸರು ಇಂಗ್ಲೀಷಿನಿಂದ ತರ್ಜುಮೆ ಯಾಗುವುದರಲ್ಲಿ ಕೊಂಚ ಕನಫೂ್ಐಜಿಂಗ್ ಇದೆ. ಅದರಲ್ಲಿ ತಮ್ಮದೇನೂ ತಪ್ಪಿಲ್ಲ ಸರ್, ಇನ್ಮುಂದೆ ಕ್ಷಮೆ ಗಿಮೆ ಬೇಡ ಸರ್ ಗೆಳೆಯರ ಮಧ್ಯೆ. ವಂದನೆಗಳೊಂದಿಗೆ ಉಗಾದಿಯ ಹಾರ್ಧಿಕ ಶುಭಾಶಯಗಳು.
In reply to ಗೆಳೆಯ ಗಣೇಶರವರೇ, ಅದೇಕೆ ಕ್ಷಮೆ by lpitnal@gmail.com
"ಸರ್" ಊ ಬೇಡ ಇಟ್ನಾಳರೆ. :)
"ಸರ್" ಊ ಬೇಡ ಇಟ್ನಾಳರೆ. :)
In reply to "ಸರ್" ಊ ಬೇಡ ಇಟ್ನಾಳರೆ. :) by ಗಣೇಶ
ಗಣೇಶರೇ, ಹೌದು ಹೌದು, ಅಭ್ಯಾಸ ಬಲ.
ಗಣೇಶರೇ, ಹೌದು ಹೌದು, ಅಭ್ಯಾಸ ಬಲ. ನೀವಂದಂತೆ ಇರಲಿ
ವೆಂಕಟರವರೇ, ಹಾಗೇ ಮಾಡಿ, 'ನಿಮ್ಮ
ವೆಂಕಟರವರೇ, ಹಾಗೇ ಮಾಡಿ, 'ನಿಮ್ಮ ಈ (ಆ) ವಿಶೇಷ ಆಹ್ವಾನ ಅತಿಥ್ಯ ಸ್ವೀಕರಿಸಲು ನಾವ್ ಹೇಗೆ ನಿರಾಕರಿಸೇವು ?' ತಮ್ಗೆ ಹೇಗೂ ಆಹ್ಹಾನ ವಿದ್ಧೇ ಇದೆ ಅಲ್ವಾ. ಒಳ್ಳೆ ಕಥೆಯಾಯ್ತು ಅಂದ್ಕೋತಾರೆ ಸ್ವರ ಕಾಮತ ಹಾಗೂ ಹಿರಿಯರಾದ ಪಾಟೀಲ ಸರ್ ಅವರು.
In reply to ವೆಂಕಟರವರೇ, ಹಾಗೇ ಮಾಡಿ, 'ನಿಮ್ಮ by lpitnal@gmail.com
ಇಟ್ನಾಳ್ ಅವರೇ
ಇಟ್ನಾಳ್ ಅವರೇ
ಹಿರಿಯರಿಬ್ಬರೂ (ಹಾಗೆಯೇ ಇನ್ನೊಬ್ಬ ಹಿರಿಯರಾದ ಹರಿಹರಪುರ ಶ್ರೀಧರ್ ಜೀ ಅವರೂ ತಮ್ಮ ಊರು ಹಾಸನಕ್ಕೆ- ಸಂಪದಿಗರನ್ನು ಕರೆದಿದ್ದಾರೆ )ಹಲವು ಬಾರಿ ಅವರ ಊರಿಗೆ ಬಂದು ಆತಿಥ್ಯ ಸ್ವೀಕರಿಸಲು ಹೇಳಿದ್ದರು ,ಆದರೆ ಸಹ ಸಂಪದಿಗರ ಜೊತೆಯೇ ಅಲ್ಲಿಗೆ ಹೋಗಿ ಸಮ್ಮಿಲನ ಮಾಡಬೇಕು ಎನ್ನುವುದು ನನ್ ಯೋಜನೆ ಯೋಚನೆ ಅದ್ಕೆ ನೀವೆಲ್ಲ ಒಪ್ಪಿದರೆ ಸರಿ .. ಯಾವತ್ತಾದರೂ ..
ಆ ಶುಭ ಘಳಿಗೆ ಬೇಗ ಬರಲಿ
ಶುಭವಾಗಲಿ ...
\।
In reply to ಇಟ್ನಾಳ್ ಅವರೇ by venkatb83
ಹೌದು, ವೆಂಕಟೇಶರವರೇ, ಒಂದುಸಾರಿ
ಹೌದು, ವೆಂಕಟೇಶರವರೇ, ಒಂದುಸಾರಿ ಸಂಪದಿಗರೆಲ್ಲರ ಗೆಟ್ ಟುಗೆದರ ಆದರೆ ಹೇಗೆ. ಯೋಚಿಸಿ, ಒಂದು ಕಾಮನ್ ಡೇ ಫಿಕ್ಷ್ ಮಾಡಿದರಾಯಿತು. ಸಾಕಾರವಾದೀತು. ಉಳಿದ ಗೆಳೆಯರ ಅಭಿಪ್ರಾಯ ಸಂಗ್ರಹಿಸಿ, ಪ್ಲಾನ್ ಮಾಡುವುದು ಒಳಿತು, ಒಳ್ಳೆಯ ಐಡಿಯಾ ಕೊಟ್ಟಿರುವಿರಿ, ವೆಂಕಟೇಶರೇ..