ಗಾಜು

Submitted by raghu_cdp on Fri, 03/29/2013 - 12:00
ಬರಹ

 

“ಫಳ್”

 

ಹಾಯಾಗಿ ನಿದ್ದೆಮಾಡುತಿದ್ದ

ಗಾಜಿನ ಮೇಲೆ

ಯಾವೋನೋ ಪುಡಾರಿ ದಾಳಿಯಿಟ್ಟ

 

ಶ್ವೇತವರ್ಣ ಸೌಂದರ್ಯವತಿಯಾಗಿದ್ದ ಆ ಗಾಜು

ಈಗ ನೈರೂಪ್ಯದ ರಾಶಿ

 

ಆಚೆಕಡೆ, ಈಚೆಕಡೇ

ಓಡಾಡುತಿದ್ದ ನಶ್ವರ ದೇಹಿಗಳ

ಪ್ರತಿಬಿಂಬಗಳನ್ನು ಬೇಸರದೇ ಹೊತ್ತುತ್ತಿದ್ದ ಆ ಗಾಜು

ಈಗ

ಹೃದಯಕ್ಕೆ ಬದಲಾಗಿ

ದೇಹ ಒಡೆದು

ಸತ್ತುಹೋಯಿತು!