ಬಡ್ಡಿಯಪ್ಪನವರೊಂದಿಗೆ..(ವಾಕಿಂಗ್ ನ್ಯೂಸ್-೨)

Submitted by ಗಣೇಶ on Fri, 03/29/2013 - 23:52

ವಾಕಿಂಗ್ ನ್ಯೂಸ್ ( http://sampada.net/blog/%E0%B2%B5%E0%B2%BE%E0%B2%95%E0%B2%BF%E0%B2%82%E0%B2%97%E0%B3%8D-%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D/9-3-2013/40288 )ನ ಮುಂದುವರಿದ ಭಾಗ. ಅದರ ಕೊನೆಯ ವಾಕ್ಯ- "ರಾಯರೇ...ನಮಸ್ತೇ.."ಸ್ವರ ಕೇಳಿ ಕುರ್ಚಿಯಿಂದ ಬೀಳುವುದು ಬಾಕಿ! ಕತ್ತೆತ್ತಿ ಮೇಲೆ ನೋಡಿದೆ...ಮಾತೇ..ಬರಲಿಲ್ಲಾ..
ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಪ್ತಗಿರಿವಾಸಿ-"... ಬಂದವರು ಕರೆದವರು ಅವರಲ್ಲ ತಾನೇ? ಮಾ.ಮು...!.." ಎಂದು ಬರೆದಿದ್ದರು. ನಿಜ ಬಂದವರು ಮಾ.ಮು!
ನಾನು : ಬಡ್ಡಿಯಪ್ಪನವರು! ತಾವು ಇಲ್ಲಿ....!?
ಬಡ್ಡಿಯಪ್ಪ : ಊಊಊಊಊಂ ಊಊಊಊಊಊಊಂ...
ನಾನು : ಅಳಬೇಡಿ ಸರ್. ತಾವು ಅಳುವುದನ್ನು ಟಿ.ವಿಯಲ್ಲಿ ನೋಡಿ ನೋಡಿ ಸಾಕಾಗಿದೆ. ನೀವು ಅತ್ತರೆ ಈಗ ಜನ ನಗುತ್ತಾರೆ. ತಮಗೇನಿದ್ದರೂ ಹುಬ್ಬುಗಂಟಿಕ್ಕಿರುವುದೇ ಶೋಭೆ.
ಕೂಡಲೇ ಹುಬ್ಬುಗಂಟಿಕ್ಕಿದ ಬಡ್ಡಿಯಪ್ಪನವರು "ಸ್ವಲ್ಪ ಗುಟ್ಟಿನ ವಿಷಯ. ಮನೆಯೊಳಗೆ ಹೋಗಿ ಮಾತನಾಡೋಣವೇ?" ಅಂದರು.
ನಾನು : ಸಾರ್.. ಒಳಹೋದರೆ ಗುಟ್ಟು ರಟ್ಟಾಗುವುದು. ಇಲ್ಲೇ ಮಾತನಾಡೋಣ..:)
ಬ : ಊಊಊಊಊಊಊಂ (ಸಾರ್ ಹುಬ್ಬು ಹುಬ್ಬು..ಅಂದೆ ನಾನು) ಹುಬ್ಬುಗಂಟಿಕ್ಕಿ " ನಾನು ಬೆಳೆಸಿದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು.."
ನಾ : ಅವರೇನೇ ಮಾಡಲಿ ಸದಾನಂದ ಗೌಡರು ಗುಡ್, ಶೆಟ್ಟರ್ ಬೆಟರ್..,
ಕೋಪೋದ್ರಿಕ್ತರಾದ ಬಡ್ಡಿಯಪ್ಪ ಕೈ ಎತ್ತಲು ಹೊರಟಾಗ-" ನಾನು ನಿಮ್ಮ ಕಾರಿನ ಡ್ರೈವರ್ ಅಲ್ಲ. ನಿಮ್ಮ ಈ ಕೋಪವೇ ನಿಮಗೆ ಹಾಳು. ನನ್ನ ಪೂರ್ತಿ ಮಾತು ಕೇಳಬಾರದಾ. ಬಿ.ಯಸ್ ಬಡ್ಡಿಯಪ್ಪ ಅಂದರೆ ಬೆಸ್ಟ್ ಬಡ್ಡಿಯಪ್ಪ ಅಂತ ಹೇಳಲು ಹೊರಟಿದ್ದೆ...
ಬ : ಯಸ್. ನನ್ನ ಕೋಪವನ್ನು ಕಂಟ್ರೋಲ್ ಮಾಡಬೇಕು. ನನಗೆ ನಿಮ್ಮಂತಹವರ ಬೆಂಬಲ ಬೇಕು. ಈ ಏರಿಯಾದಿಂದ ನೀವೇ ನಮ್ಮ ಪಾರ್ಟಿಯಿಂದ ನಿಲ್ಲಬೇಕು. ನಾನು ಮುಖ್ಯಮಂತ್ರಿಯಾದಾಗ ನಿಮ್ಮ ಜಾತಿಯ ಮಠಕ್ಕೆ ಮೂರು ಕೋಟಿ ಬಿಡುಗಡೆ ಮಾಡುವೆ!

ಅಂದಹಾಗೇ ನನ್ನ ಜಾತಿ ಯಾವುದಪ್ಪಾ?:) ಹಿಂದೆ ತಿರುಗಿ ಗೋಡೆಯಲ್ಲಿ ಈ ಮನೆಯ ಯಜಮಾನನ ನೇಮ್ ಪ್ಲೇಟ್ ಏನಾದರೂ ಇದೆಯಾ ಎಂದು ಹುಡುಕಿದೆ..
ಬ : ಹಿಂದೆಮುಂದೆ ನೋಡಬೇಡಿ. ಹೂಂ ಎನ್ನಿ. ಬೇಕಿದ್ದರೆ ಐದು ಕೋಟಿ ಬಿಡುಗಡೆ ಮಾಡುವೆ.
ನಾ : ಅದಿರ್ಲಿ ಸರ್. ಈಗ ನನ್ನ ಕೈಲಿ ಬಿಡಿಗಾಸಿಲ್ಲ. ಇಲೆಕ್ಷನ್ ಖರ್ಚಿಗೆ ಎಷ್ಟು ಕೊಡುತ್ತೀರಿ. :)
ಬ :ಊಊಂ..(ಹುಬ್ಬು..) ಹಣ ಎಲ್ಲಾ ಪಂಚಾಯತ್ಗೇ ಖರ್ಚಾಯಿತು. ಈಗ ನೀವೇ ಕೈಯಿಂದ ಒಂದೆರಡು ಕೋಟಿ ಖರ್ಚು ಮಾಡಿ.
ನಾ : ಕೋ...ಟಿ!! ಸರಿ ಬಿಡಿ. ನೀವು ಮುಖ್ಯ ಮಂತ್ರಿ ಅದ್ರಿ ಅಂತಿಟ್ಟುಕೊಳ್ಳಿ.(ಅಪರೂಪದ ನಗು ಬಡ್ಡಿಯಪ್ಪನ ಮೊಗದಲ್ಲಿ) ಕರ್ನಾಟಕಕ್ಕೆ ಏನು ಮಾಡುವಿರಿ?
ಬ : ನಾನು ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಏನೆಲ್ಲಾ ಕೆಲಸ ಬಾಕಿ ಇತ್ತೋ ಅದೆಲ್ಲಾ ಮಾಡುವೆ..
ನಾ : ಅಂದ್ರೇ...ಡಿ ......
ಬ : (ಪುನಃ ಕೋಪಾವಿಷ್ಟರಾಗಿ..) ಆ ಶಬ್ದ ಉಪಯೋಗಿಸಬೇಡಿ. ಅದನ್ನ ಇಂಗ್ಲೀಶ್ ವರ್ಣಮಾಲೆಯಿಂದಲೇ ತೆಗೆಸುವೆ!
ನಾ : ತಮ್ಮ ಹೆಸರಲ್ಲೇ ಎರಡೆರಡು "ಡಿ" ಇದೆಯಲ್ಲಾ...
ಬ : ಅದನ್ನ ಈಗಾಗಲೇ ತೆಗೆದಿರುವೆ.
ನಾ : ಅಂದರೆ ತಾವೀಗ "ಬೈಯಪ್ಪ"! ನೋಡಿ ಬೈಯಪ್ಪನವರೇ, ನಾನಿಲ್ಲಿ ಗೆಲ್ಲುತ್ತೇನೆ ಎಂದು ಅದು ಹೇಗೆ ಅಂದಾಜು ಮಾಡಿದಿರಿ?"
ಬೈ : " ಈ ಮತಕ್ಷೇತ್ರದಲ್ಲಿ ನಿಮ್ಮವರು ೪೦% ಇದ್ದಾರೆ. ನಮ್ಮವರು ೩೦%. ಇನ್ನು ಹಿಂದುಳಿದವರು.....
ಬೈಯಪ್ಪನವರು ಲೆಕ್ಕಾಚಾರದಲ್ಲಿ ಮಗ್ನರಾಗಿದ್ದಾಗ ನನ್ನ ಕಣ್ಣಿಗೆ ದೂರದಿಂದ ಈ ಮನೆಯ ಯಜಮಾನ ನಾಯಿಯೊಂದಿಗೆ ಬರುತ್ತಿರುವುದು ಕಾಣಿಸಿತು. ಇನ್ನೊಂದು ಕ್ಷಣವಿದ್ದರೆ ಟಿ.ವಿ.ಯಲ್ಲಿ "ಬ್ರೇಕಿಂಗ್ ನ್ಯೂಸ್" ನನ್ನದೇ ಬರುವುದು. ಬೈಯಪ್ಪನವರ ಕಣ್ಣುತಪ್ಪಿಸಿ, ಗೇಟು ಹಾರಿ, ಬದುಕಿದೆಯಾ ಬಡಜೀವವೇ..ಎಂದು ಓಡಿದೆ.
ಓಡುತ್ತಾ ಅಲ್ಲಾ ಜಾಗಿಂಗ್ ಮಾಡುತ್ತಾ ಒಂದೇ ಚಿಂತೆ ಮನದಲ್ಲಿ ಕಾಡುತ್ತಿತ್ತು.................................................................................................................................ನಾಳೆ ಯಾವ ಬೀದೀಲಿ ವಾಕಿಂಗ್ ನ್ಯೂಸ್ ಓದಲಿ?

Rating
No votes yet

Comments

ಆದರೆ ಒಬ್ಬರ ಬಂದಿದ್ದರ ಬಡ್ಡಿಯೂರಪ್ಪನವರು ಅಂತ ಅನುಮಾನ ?-ಹಿಂಬಾಲಕರ ಜತೆ ಬಂದದ್ದು- ನನ್ನ ಮಗನ ಮದುವೆ ಮಾಡಿದ್ದರಿಂದ ಕೈಯಲ್ಲಿ ಕಾಸಿಲ್ಲ ಅಂದದ್ದು-ಹಿಂಬಾಲಕರಲ್ಲಿ ಒಬ್ಬ ನಿಮಗೆ ನಾಲ್ಕು ಹೆಣ್ಣುಮಕ್ಕಳೇ ಅಲ್ವಾ ಅನ್ನುವುದು-ಬಡ್ಡಿಯಪ್ಪ ಆತನ ಕೆನ್ನೆಗೆ ಹೊಡೆದು "ರಾಜಕೀಯದವರ ಹೆಂಡತಿ ಮಕ್ಕಳ ಬಗ್ಗೆ ವಿಚಾರಿಸಬಾರದು ಅನ್ನುವುದು-ಹಿಂಬಾಲಕರು ನನ್ನ ಓಡಿಸಿಕೊಂಡು ಹೋಗುವುದು, ಹೀಗೆಲ್ಲಾ ಕತೆ ಉದ್ದವಿತ್ತು. ಪ್ರತಿಕ್ರಿಯೆಗಳು ಕಮ್ಮಿ ಇರುವುದನ್ನು ನೋಡಿ-ಈಗ ಪರೀಕ್ಷೆ ಸಮಯ ಯಾರಿಗೂ ಓದಲು ಸಮಯವಿಲ್ಲ- ಅಂತ ಕತ್ತರಿ ಪ್ರಯೋಗ ಮಾಡಿ ಇಷ್ಟಕ್ಕೇ ನಿಲ್ಲಿಸಿದೆ.

lpitnal@gmail.com

Sun, 03/31/2013 - 09:21

ಗಣೇಶರವರೇ , ಚನ್ನಾಗಿಯೇ ಬರೆಯುತ್ತಿರುವಿರಿ, ಹಾಸ್ಯಲೇಖನ ಎಲ್ಲರಿಗಲ್ಲ, ಅದು ತಮಗೆ ಒಲಿದಿದೆ, ಬರೆಯುತ್ತಿರಿ ಸರ್, ಲೇಖನ ಚನ್ನಾಗಿದೆ, ಓದುಗರು ಓದುತ್ತಿಲ್ಲವೆಂಬ ಶಂಕೆ ಬೇಡ. ಧನ್ಯವಾದಗಳು