ಕವಿ ನಾಗರಾಜರು ಹಾಗು ನಾನು

Submitted by partha1059 on Sun, 03/31/2013 - 09:37

 

ಕಳೆದ ವಾರದ ಕಡೆಯಲ್ಲೊಂದು ಅನಿರೀಕ್ಷಿತ ಕರೆ, ಅಷ್ಟೆ ಅಪ್ಯಾಯಮಾನವಾಗಿತ್ತು. ಕವಿ ನಾಗರಾಜರು ನನಗೆ ಕಾಲ್ ಮಾಡಿದ್ದರು. ಹಾಸನದಲ್ಲಿ ಏಪ್ರಿಲ್ ಮೊದಲವಾರದಲ್ಲಿರುವ ಕಾರ್ಯಕ್ರಮಕ್ಕೆ ಬನ್ನಿ ಅಂತ ಕರೆದರು. ಅವರು ಮಾತನಾಡುತ್ತ ಇದ್ದದ್ದು ಬೆಂಗಳೂರಿನಿಂದ. ಅವರನ್ನೊಮ್ಮೆ ಬೇಟಿಮಾಡಬೇಕೆಂಬ ಆಸೆ ಜಾಗೃತವಾಯಿತು. ಆದರೆ ಅವರ ಸಮಯದ ಅರಿವು ನನಗಿಲ್ಲ. ಜೆಪಿನಗರದ ಮಗಳ ಮನೆಯಲ್ಲಿ ಇದ್ದ ಅವರು ಶನಿವಾರ ಸಂಜೆ ಶ್ರೀ ಸುದರ್ಶನ ಚತುರ್ವೇದಿಗಳ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವದಾಗಿ ತಿಳಿಸಿದರು. ಸರಿ ಅಲ್ಲಿಯೆ ಹೋಗಿ ಅವರನ್ನು ಬೇಟಿಮಾಡುವುದು ಎಂದು ಕೊಂಡೆ.
 
ಆದರೆ ಕೆಲವೊಮ್ಮೆ ನನ್ನ ಮೇಲೆ ನನಗೆ ಕೋಪ. ಅಪರೂಪದ ಸಂದರ್ಭಗಳಲ್ಲಿ ನನ್ನನ್ನು ನಾನೆ ಬಿಡಿಸಿಕೊಳ್ಳಲಾರದ ಕೆಲಸಗಳಿಂದ ಎಂತದೊ ಬೇಸರ. ಹಾಗಾಗಿ ಶನಿವಾರ ಬೆಳಗ್ಗೆ ಅವರಲ್ಲಿ ಪೋನ್ ಮಾಡಿ ಕೇಳಿಕೊಂಡೆ, ಸಂಜೆಯ ಬದಲು ಮದ್ಯಾನದ ಸಮಯಕ್ಕೆ ಸಿಗಲು ಸಾದ್ಯವೆ ಎಂದು. ಹಾಗೆ ಅವರ ಜೊತೆ ಕುಳಿತು ಮಾತನಾಡುತ್ತ ಊಟ ಮಾಡುವ ಅವಕಾಶ ಸಿಗುವ ಆಸೆ. ಸರಿ ಬರುವೆ ಎಂದು ಒಪ್ಪಿದರು. 
 
ಮದ್ಯಾನ ಒಂದು ಗಂಟೆಗೆ ಸರಿಯಾಗಿ ಅವರಿಗೆ ಕಾಲ್ ಮಾಡಿದೆ, ಜೆಪಿನಗರದ ಅರ್ ವಿ ಡೆಂಟಲ್ ಕಾಲೇಜಿನ ಸಮೀಪ ಬರುವದಾಗಿ ತಿಳಿಸಿದರು. ನಾನು ಅಲ್ಲಿ ಹೋಗು ಕಾಯುತ್ತಿದ್ದೆ. ಆಗ ಹೊಳೆದಿತ್ತು ನಾನು ಅವರನ್ನು ಎಂದು ಎದುರಿಗೆ ನೋಡಿಯೆ ಇಲ್ಲ ಬರಿ ಚಿತ್ರಗಳಲ್ಲಿ. ಗುರುತು ಸಿಗುವುದೆ ಎನ್ನುವ ಅನುಮಾನ. ಗಾಡಿಯಲ್ಲಿ ಕುಳಿತು ಮತ್ತೆ ಕಾಲ್ ಮಾಡಿದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಇದ್ದ ನಾಗರಾಜರು ಪೋನ್ ತೆಗೆದು ಮಾತನಾಡಿದ್ದು ಕಾಣಿಸಿತು. ಗುರುತು ಹಿಡಿಯುವದರಲ್ಲಿ ಯಾವ ಗೊಂದಲವು ಇಲ್ಲ ಆದರೆ ನಾನು ರಸ್ತೆಯ ಆ ಬದಿಗೆ ಹೋಗಲು ಮೂರು ನಾಲಕ್ಕು ನಿಮಿಶ ಕಾಯಬೇಕಾಯಿತು. ಅಷ್ತೊಂದು ವಾಹನಗಳು. 
 
ಅವರನ್ನು ನೋಡಿದ ಖುಷಿ ಆದರೆ ಅಲ್ಲಿ ಹೆಚ್ಚು ಕಾಲ ನಿಂತು ಮಾತನಾಡುವಂತಿಲ್ಲ, ವಾಹನ ಪೂರ್ಣ ರಸ್ತೆ. ಅವರ ಜೊತೆ ಅಲ್ಲಿಂದ ಹೊರಟು, ಜನವಿರಳ ಪ್ರದೇಶದ ಹೋಟೆಲ್ ಒಂದಕ್ಕೆ ತಲುಪಿದೆ, ಅವರು ಕುಳಿತಿರುವ ಖುಷಿಯೊ ಅಥವ ಗಾಭರಿಯೊ, ಗೊತ್ತಿರುವ ರಸ್ತೆಯನ್ನು ತಪ್ಪು ಮಾಡಿ, ಸ್ವಲ್ಪ ಸುತ್ತಿಸಿದೆ ಅನ್ನಿ.
 
ಸೀದ ಸಾದ ವ್ಯಕ್ತಿತ್ವ ನಾಗರಾಜರದು,  ಮೊದಲ ಬಾರಿ ಬೇಟಿ ಮಾಡಿದ್ದರು ಸಹ ಎಷ್ಟೊ ವರ್ಷಗಳ ಪರಿಚಿರರಂತೆ ಇಬ್ಬರ ನಡುವಿನ ಮಾತು ಮನಸಿಗೆ ಶಾಂತತೆ ಕೊಟ್ಟಿತು. ಬಿಸಿಲಿನ ಬೇಗೆ ಬೇರೆ.  ಹೋಟೆಲ್ ನಲ್ಲಿ ಜನರು ಕಡಿಮೆ ಇದ್ದರು ಹಾಗಾಗಿ ಗಲಬೆಇಲ್ಲದ ಹಿತಕರ ವಾತವಾರಣ. ಅವರ ಮಾತು ಕೇಳಲು ಎಂತದೊ ಖುಷಿ. 
 
ಕೆಳಗೆ ಇಳಿದು ನಂತರ ಮತ್ತೆ ಅವರನ್ನು ಬಿಡಲು ಹೊರಟೆ. ಅಲ್ಲಿಯೆ ಹತ್ತಿರವಿದ್ದ ಅವರ ಮಗಳ ಮನೆಯ ಹತ್ತಿರ ಇಳಿಸಿದಾಗ, ಒಳಗೆ ಬನ್ನಿ ಎಂದರು. ಮನೆಯಲ್ಲಿ ಅವರ ಮನೆಯವರು, ಮೊಮ್ಮಗಳು ಇದ್ದರು. ಆಗಿನ್ನು ಊಟ ಆಯಿತು ಅಂದರೆ ಕೇಳದೆ ಕಾಫಿ ಮಾಡಿಕೊಟ್ಟರು. ಮತ್ತೆ ಅವರ ಜೊತೆ ಸ್ವಲ್ಪ ಕಾಲ ಮಾತು. ನಡುವೆ ಅವರ ಮೊಮ್ಮಗಳು ಬಂದಳು.
 
ನಾಗರಾಜರು ನನ್ನ ಬಗ್ಗೆ ಹೇಳುವಾಗ ಇವರು ಕತೆಗಾರರು ಎಂದು ಅವಳಿಗೆ ಹೇಳಿಬಿಟ್ಟಿದ್ದರು (ಒಳಗೆ ಸಂಕೋಚ). ಆ ಪುಟ್ಟ ಮಗು ನನ್ನ ಬಗ್ಗೆ ಎನೆಂದು ತಿಳಿದುಕೊಂಡಿತೊ. ಹಾಗದರೆ ಇವರು ನನಗೆ ಎರಡು ಕತೆ ಬರೆದುಕೊಡಬೇಕು ಎನ್ನುತ್ತ ಕೇಳಿತು. ಆಕೆ ಎರಡು ಎಂದೆ ಬೆರಳು ತೋರಿಸುತ್ತ ಕೇಳುವಾಗ ನನಗೆ ಖುಷಿ . ಆದರೆ ದೊಡ್ಡವರನ್ನು ಮೆಚ್ಚಿಸಿದಂತಲ್ಲ ಚಿಕ್ಕ ಮಕ್ಕಳನ್ನು ಮೆಚ್ಚಿಸುವುದು. ಅವಕ್ಕೆ ದೊಡ್ಡ ದೊಡ್ಡ ತತ್ವಗಳೆಲ್ಲ ಬೇಕಿಲ್ಲ, ಮನಸಿಗೆ ತಟ್ಟುವ ಸತ್ಯಗಳು, ನಿಜಗಳು ಬೇಕು. ಕಲ್ಪನೆಯಲ್ಲು ಖುಷಿ ಇರಬೇಕು. 
 
ಹಾಗಿರುವಾಗ ಈ ಮಗು ಕೇಳುವ ಯಾವ ಕತೆ ನಾನು ಹೇಳಲು ಸಾದ್ಯ ?
 
ಚಿಕ್ಕ ವಯಸಿನಲ್ಲಿ ಕೇಳಿದ್ದ / ಓದಿದ್ದ ಕತೆಯೊಂದನ್ನು ಸಂಗ್ರಹಿಸಿ ನೆನಪಿನಿಂದ ಹಾಕಿದ್ದೇನೆ.  
"ಗಂಟೆಯ ದೆವ್ವ" . ಮತ್ತೊಂದು ಕತೆ ಹುಡುಕುತ್ತಿರುವೆ 
 
ನಾಗರಾಜ ದಂಪತಿಗಳಿಗೆ ಮೊಮ್ಮಗಳಿಗೆ ಹೇಳಿ ಹೊರಡುವಾಗ ಎಂತದೊ ಸಂತಸ. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು.
 
Rating
No votes yet

Comments

lpitnal@gmail.com

Sun, 03/31/2013 - 11:09

ಪ್ರಿಯ ಗೆಳೆಯ ಕತೆಗಾರ ಪಾರ್ಥರೇ, ತಾವು ಕವಿಗಳನ್ನು ಕಂಡ ಪ್ರವರ ಚನ್ನಾಗಿದೆ, ಮಾತಾನಾಯಿತು, ಹಂಚಿಕೊಳ್ಳದಿದ್ದುದಕ್ಕೆ ಕೊಂಚ ಸೆಡುವಿದೆ, ನಿಮ್ಮಿಬ್ಬರ ಭೇಟಿಯ ವಿಷಯ ಖುಷಿ ನೀಡಿತು, ಲೇಖನ ಆಪ್ತತೆಯಿಂದ ಕೂಡಿದೆ.

ಆತ್ಮೀಯ ಲಕ್ಷ್ಮಿಕಾಂತರೆ , ತಮ್ಮ ಮೆಚ್ಚುಗೆಗೆ ವಂದನೆಗಳು
ಹಾಗೆ ತಮ್ಮ ಸೆಡವಿಗೆ ನನ್ನ ಕ್ಷಮೆ ಹಾಗು ಕಾರಣ ಸ್ವೀಕರಿಸಿ
ಅವರ ಮಾತುಗಳನ್ನು ಬರೆಯಲು ಹೊರಟಾಗ ಅದೆ ಮತ್ತೊಂದು ಸರಣಿಯಾಗುತ್ತದೆ ಅನ್ನಿಸಿತು, ಹಾಗಾಗಿ ಅದನ್ನು ಮುಟ್ಟಲಿಲ್ಲ
ಸಾದ್ಯವಾದಾಗ ಮತ್ತೊಮ್ಮೆ ವಿವರ ಬರೆಯುವೆ

partha1059

Mon, 04/01/2013 - 08:59

ಕವಿ ನಾಗರಾಜರೆ ನಮಸ್ಕಾರ‌
ಎರಡನೆ ಕತೆ ದಾಸಯ್ಯ ಹಾಗು ಹೆಬ್ಬುಲಿ. ನಿಮ್ಮ ಮೊಮ್ಮಗಳಿಗೆ ತಲುಪಿಸಿ
ಅವಳು ಏನೆ0ದಳು ಎ0ದು ತಿಳಿಸಿ
ಪಾರ್ಥಸಾರಥಿ

ಗುರುಗಳೇ ಈ ಬಗ್ಗೆ ನೀವ್ ನಮಗೆ ಮೊದ್ಲೇ ತಿಳಿಸಬಹುದಿತ್ತು...!! ನಾವ್ ಸಹಾ ಬರುವವರಿದ್ದೆವು....!!
ಸಿಕ್ಕ ಆ ಸೀಮಿತ‌ ಸಮಯದಲ್ಲಿ ನಿಮ್ಮ ಭೇಟಿಯನ್ನು ಸದಾ ನೆನಪಿಡುವ‌ ಹಾಗೇ ಮಾಡಿದಿರಿ...
ಮು0ದೊಮ್ಮೆ ಸ0ಪದ‌ ಸಮ್ಮಿಲನ‌ ಹಾಸನದ‌ಲ್ಲಿ ನಡೇದಾಗ‌ ನಾವೆಲ್ಲ ಅಲ್ಲಿ ಸೇರುವ‌...

ಬೆ0ಗಳೋರಲ್ಲಿ ಮೊದ್ಲೇ ಟ್ರಾಫಿಕ್ ಜಾಮ್‍ಅದ್ರಲ್ಲಿ ನೀವ್ ಅವರು ಸಿಕ್ಕ ಆ ಸ0ತೋಷ‌,ಖ್ಸುಷಿ ಗಾಭರಿಯಲ್ಲಿ ಗಾಡಿಯನ್ನು ಎಲ್ಲೆಲ್ಲೋ ಓಡ್ಸಿ.....!! ಹಗೆ ಆಗುತ್ತೆ ಬಿಡಿ...!!

ಶ್ಹುಭಮ್..

\|

partha1059

Mon, 04/01/2013 - 13:52

ಸಪ್ತಗಿರಿಯವರೆ
ಮೊದಲೆ ಕಾರ್ಯಕ್ರಮ‌ ನಿರೀಕ್ಷೆ ಇದ್ದಲ್ಲಿ ತಿಳಿಸಬಹುದಿತ್ತು. ಅವರ‌ ಕರೆ ನನಗೆ ಅನಿರೀಕ್ಷಿತ‌, ಹಾಗೆ ಸ0ಜೆ ಸೇರಬೇಕಿದ್ದ ಸಮಯವನ್ನು ನಾನು ಅವಸರಪಡಿಸಿ ಮದ್ಯಾನಕ್ಕೆ ಹಿ0ದೂಡಿದ್ದೆ. ಈ ಎಲ್ಲ ಕಾರಣಗಳು ಎಲ್ಲರು ಸೇರಲು ಆಗಲಿಲ್ಲ. ಅಲ್ಲದೆ ಅವರಿಗೆ ಅವರದೆ ಆದ‌ ಕಾರ್ಯಕ್ರಮಗಳಿದ್ದವು.
ನಾಗರಾಜರಿಗೆ ಹಾಸನದಲ್ಲಿ ಸ0ಪದದ‌ ಎಲ್ಲರನ್ನು ಸೇರಿಸುವ‌ ಯೋಚನೆ ಇದೆ. ಹಾಗಾದಾಗ‌ ಎಲ್ಲರು ಸೇರಬಹುದು. ಒ0ದು ವೇಳೆ ಆ ಸಮ್ಮಿಲನದ‌ ದಿನ‌ ನಿಮ್ಮ ಮದುವೆಯ‌ ದಿನವೆ ಬಿದ್ದಲ್ಲಿ :‍( :((((((!)))))))
\|/

venkatb83

Tue, 04/02/2013 - 15:40

ಗುರುಗಳೇ ನಮ್ಮದುವೆ ಇನ್ನೂ ಒನ್ದು ವರ್ಶ್ಹದ‌ ನನ್ತರ‌...!! ಅದ್ಕೂ ಮೊದಲೇ ಸಮ್ಪ್ದದ‌ ಸಮ್ಮಿಲನಗಳು ಬೇಜಾನ್ ನಡೇಯಬಹ್ದು..
ಅದೊಮ್ಮೆ ಶ್ಹ್ರೀ ಧರ್ ಜೀ ಮತ್ತು ಸ‌.ವಾ ಭೇಟಿಯಾಗಿದ್ದು ಹೀಗೆ ಧುತ್ತನೆ... ಇರ್ಲಿ ಬಿಡಿ ಅತಿ ಶ್ಹೀಘ್ರದಲ್ಲಿ ಗಣೆಷ್ ಅಣ್ನ ಅವರ್ ಜೊತೆ ನಾವ್ ಸಮ್ಪದ‌ ಸಮ್ಮಿಲನಕ್ಕೆ ಬರುವೆವು....ನೀವೆಲ್ಲ !!!!!! ಅಗೋದು ಖಾತ್ರಿ...

ಶ್ಹುಭವಾಗಲಿ..

\\\|||

ಸಪ್ತಗಿರಿ, ಪ್ರತಿಕ್ರಿಯೆ save ಮಾಡುವ ಮೊದಲು ಒಮ್ಮೆ ಪುನಃ ಓದಬೇಕು................ ಒನ್ದು ನಂತರ ’ತಿಂಗಳು’, ಬರೆಯುವುದನ್ನು ಮರೆತು ಸೇವ್ ಮಾಡಿದಿರಿ. :)

swara kamath

Tue, 04/02/2013 - 18:13

ಪಾರ್ಥರೆ, ನಿಮ್ಮ ಹಾಗೂ ಕವಿನಾಗರಾಜರ ಭೇಟಿ ಕುರಿತ ಲೇಖನ ಓದಿದ ಮೇಲೆ ಸಪ್ತಗಿರಿ ಅವರ ಹಾಗೆ ನನಗೂ ಸಹ ನಿರಾಶೆಆಯಿತು .ಕಾರಣ
ನಾನು ಆ ದಿವಸ ಮೈಕೊ ಲೇಔಟ್ ನಲ್ಲಿರುವ ನನ್ನ ಮಗಳ ಮನೆಯಲ್ಲಿದ್ದೆ. ಅರ್ಧತಾಸಿನಲ್ಲಿ ಹೋಗಬಹುದಿತ್ತು.ಹೌದು ನೀವಂದಂತೆ ಅವರು ತಮ್ಮ ಖಾಸಗಿ ಕಾರ್ಯಕ್ಕಾಗಿ ಬೆಂಗಳೂರಿಗೆ ಬಂದಾಗ ನಾವು ಅವರಿಗೆ ತೊಂದರೆ ಮಾಡುವುದು ತರವಲ್ಲ.ಮುಂದೆ ಎಂದಾದರೂ ಆ ಅವಕಾಶ ದೊರತೀತು. ನೀವು ಅವರ ಮೊಮ್ಮಗಳ ಬಯಕೆಯಂತೆ ಎರಡು ಕಥೆಗಳನ್ನು ಸಹ ಬರೆದು ಪ್ರಕಟಿಸಿದ್ದೀರಿ.ನಾನು ಸಹ ನನ್ನ ಮೊಮ್ಮಗಳಿಗೆ ಈ ಕಥೆಗಳನ್ನು ಹೇಳುತ್ತೇನೆ ಇದು ನನಗೆ ತುಂಬಾ ಸಂತೋಷ ನೀಡಿದ ವಿಶಯ. ಇದೇ ಅಲ್ಲವೆ ನಮಗೆ "ಸಂಪದ" ನೀಡಿದ ದೊಡ್ಡ ಭಾಗ್ಯ!. ....ವಂದನೆಗಳು...........ರಮೇಶ ಕಾಮತ್.

ಸ್ವರಕಾಮರ್ ರವರೆ ನಿಮ್ಮ ಆಪ್ತ ಪ್ರತಿಕ್ರಿಯೆ ಸ0ತಸ‌ ತ0ದಿತು
ಕತೆಯನ್ನು ಕವಿಯವರ‌ ಮೊಮ್ಮಗಳ‌ ಆಸೆಯ0ತೆ ಬರೆದನಾದರು.. ಇದು ಎಲ್ಲ ಮಕ್ಕಳು ಸಹ‌ ಕೇಳಬಹುದು
ಹಾಗೆ ಎಲ್ಲ ಮಕ್ಕಳು (ನಾವು ಹಾಗು ನೀವು ಸಹ‌) ಓದಬಹುದು. ನಾವು ಮಕ್ಕಳ‌ ಕತೆ ಓದುವಾಗ‌ ನಮ್ಮ ಬಾಲ್ಯದಲ್ಲಿಯೆ ಇರುವೆವು
ನಾನು ಅದನ್ನೆ ಶ್ರೀನಾಥರಿಗೆ ಹೇಳಿದ್ದು
ನಾವು ಕೆಲವೊಮ್ಮೆ ಮಕ್ಕಳಾಗೆ ಇದ್ದರೆ ಮನಸು ಶಾ0ತವಾಗಿ ಇರುತ್ತದೆ
ಪಾರ್ಥಸಾರಥಿ

ಗಣೇಶ

Tue, 04/02/2013 - 22:46

>>>ಅವರು ಕುಳಿತಿರುವ ಖುಷಿಯೊ ಅಥವ ಗಾಭರಿಯೊ, ಗೊತ್ತಿರುವ ರಸ್ತೆಯನ್ನು ತಪ್ಪು ಮಾಡಿ, ಸ್ವಲ್ಪ ಸುತ್ತಿಸಿದೆ ಅನ್ನಿ.-ಖುಷಿ ಸರಿ. ಗಾಭರಿ ಯಾಕೆ? ಕತ್ತಿ ಏನಾದರೂ ಹಿಡಕೊಂಡು ಕುಳಿತಿದ್ದರೋ? :) ನಿಮ್ಮ-ಕವಿನಾಗರಾಜರ ಭೇಟಿ ವರದಿ ಓದಿ ಖುಷಿಯಾಯಿತು.

ಗಣೇಶರೆ ಸ್ವಲ್ಪ ತಪ್ಪಾಯಿತು ...ಖುಷಿ ಸರಿ. ಗಾಭರಿ ಯಾಕೆ? ...... ಗಾಭರಿ ಅಲ್ಲ ಗಡಿಬಿಡಿ ಅನ್ನಬಹುದೇನೊ.. :‍)
ಅ0ತವರ‌ ಜೊತೆ ಸ್ವಲ್ಪ ಹೆದರಿಕೆಯು ಇರುತ್ತೆ ಬಿಡಿ ಅವರ‌ ಜೀವನದ‌ ಅನುಭವಗಳ‌ ಮು0ದೆ ನಮ್ಮ0ತವರು ಚಿಕ್ಕವರೆ ಏನಾದರು ತಪ್ಪು ನಡೆ ನಮ್ಮಿ0ದ‌ ನಡೆದರೆ ಎ0ದು