ಪ್ರೀತೀಲೂ ಗುಂಗು ! .... ರಂಗು !!!
ಕವನ
ಮನಸಿನ ಕಣ್ಗಳ ಕನಸಿನ ಭಾಷೆಯ
ಅರಿಯುವ ತವಕದ ನಿನ್ನಯ ಆಸೆಯ
ಮೂಡಿಸೊ ಹಂಬಲ ತೋರಿದ ರೀತಿಯ
ನನ್ನಯ ಪೀತಿಗೆ ಕಾಣಿಕೆ ನೀಡೆಯಾ ?
ನಿನ್ನಯ ಮಾತಿಗೆ ನಗುವಿನ ಕಾರಣ
ನಿಲ್ಲದ ಬಯಕೆಗೆ ಮುನಿಸಿನ ಚಂದನ
ನನ್ನಯ ಕೈಗಳ ಕೆನ್ನೆಯ ಚಾರಣ
ತೋರಿದ ಪೀತಿಗೆ ಇಲ್ಲವೇ ಆಲಿಂಗನ ?
ಮರೆಯಲು ಸಾಧ್ಯವೇ ನಿನ್ನಯ ಆ ನಗು
ನೀ ಮನಸನು ಕಾಡುವ ಸುಂದರ ಸೊಬಗು
ಈ ಸಂಜೆಯ ಮಬ್ಬಲು ಕರಗದ ಸೋಗು
ಹಾ...ಮತ್ತಲೂ ಕಾಡಿದ ಪ್ರೀತೀಲೂ ಗುಂಗು ! .... ರಂಗು !!!
ಚಿತ್ರ್
