ನಾಟಕ - ಅನುಭವ
ನಾಟಕ - ಅನುಭವ
ಅಮೃತುರು ಹೋಬಳಿ ಸಣಬ ಗ್ರಾಮದ ಪಡ್ಡೆ ಹುಡುಗುರು
ಎಲ್ಲ ಸೇರಿ ಒಂದುಥಾಪ್ಪ ಕುರುಕ್ಷೇತ್ರ ನಾಟಕ ಆಡೋಕ್ಕೆ ಡಿಸೈಡ್ ಮಾಡಿಬಿಟ್ಟರು ,
ಡಿಸೈಡ್ ಮಾಡಿ ನಾಟಕದ ಮೇಸ್ಟ್ರುನು ಸೆಟ್ ಮಾಡೇ ಬಿಟ್ಟರು ,
ಊರಿನ ತರಲೆ ನಂಜಪ್ಪ ಶಕುನಿ ಪಾಲ್ಟು ,
ಆಂಜನಪ್ಪ ಭೀಮನ ಪಾಲ್ಟು ,
ಹುಚ್ಚಪ್ಪ ಕಿಷ್ಣ ನ ಪಾಲ್ಟು ,
ದೇವಗಿರಿ ರಾಜಮ್ಮ ಪಾಂಚಾಲಿ ಪಾಲ್ಟು ಅಂತ ತಿರ್ಮಾನಿಸಿಬಿಟ್ಟರು ,
ನಾಟಕದ ದಿನವು ಡಿಸೈಡ್ ಮಾಡಿದಾಯಿತು,
ನಾಟಕದ ಪ್ರಾಕ್ಟಿಸ್ಉ ಶುರುವಾಯಿತು ,
ಶಕುನಿ ನಂಜಪ್ಪನಿಗೂ ನನಗೂ ಪ್ರಾಕ್ಟಿಸ್ಉ ಟೇಮ್ನಾಗೆ ಒಂದುತಪ್ಪ ಜಗಳವಾಯಿತು ,
ನಾನು ಕೋಪದಾಗೆ ನಂಜಪ್ಪನಿಗೆ " ಹೊಗೊಲೇ ಹಳ್ಳಿ ಗುಗು , ನಾಕು ಅಕ್ಷರ ಬರಾಕಿಲ್ಲ ನನ್ನಗೆ ಬುದ್ದಿ ಹೇಳೋಕೆ ಬಂದುಬಿಟ್ಟ ದೊಡ್ಡ ಮನುಷ್ಯ " ಅಂತ ರೇಗಿಬಿಟ್ಟೆ
ಅದಕ್ಕೆ ನಂಜಪ್ಪ "ಕಂಡಿದೀನಿ ಎತ್ಹಾಲ್ಲ ನಿನ್ನ ಕಂತೆಯಾ" ಅಂತ ಬೋದುಬಿಟ್ಟ",
ನಂಜಪ್ಪನ ಮೇಲಿನ ಕೋಪ ನನ್ನಗೆ ಕಮ್ಮಿ ಹಾಗಿರಲ್ಲಿಲ ,
ಅವನಿಗೆ ಪಾಠ ಕಲಿಸಬೇಕು ಅಂತ ಡಿಸೈಡ್ ಮಾಡೇ ಬಿಟ್ಟೆ
ಅಂತು ಇಂತೂ ನಾಟಕದ ದಿನ ಬಂದೇಬಿಡ್ತು ,
ಊರಿನ ಶೆಟ್ಟರ ಅಂಗಡಿನಾಗೆ ಜಾಪಳ ಮಾತ್ರೆ ತರಿಸಿ ,
ಜ್ಯೂಸುನಾಗೆ ಮಿಕ್ಸ್ಉ ಮಾಡಿ ನಂಜಪ್ಪನಿಗೆ ಕುಡಿಸೇ ಬಿಟ್ಟೆ ,
ನಾಟಕದ ಶಕುನಿ ಪಾಲ್ಟು ಟೇಮ್ ಸರಿಯಾಗಿ ನಂಜಪ್ಪನಿಗೆ ಹೊಟ್ಟೆ ಕೆಟ್ಟು ಬರಲೆಇಲ್ಲ ,
ನಾಟಕ ನಿಂತೇ ಹೋಯಿತು ,
ನಾಟಕ ನಿಂತ್ಹಿದು ನೋಡಿ ಗೌಡರು ಊರು ಮರವಾದೆ ಹೋಯಿತು ಅಂತ ಪಂಚಾಯಿತಿ ಕರದೇ ಬಿಟ್ಟರು,
ನನ್ನ ತಪು ಗೌಡರಿಗೆ ತಿಳಿಯಿತು ,
ನನ್ನ ಮೇಲೆ ಅಕ್ಟ್ಸುನ್ ತಗೊಳೋಕೆ ಮುಂದಾದರು ,
ಅಷ್ಟ್ರಲ್ಲಿ ನಂಜಪ್ಪ " ಗೌಡ್ರೆ ನನ್ನಗೆ ತಮಾಷೆ ಮಾಡದೆ ಇನ್ನು ಯಾರಿಗೆ ಮಾಡುತಾನೆ ನನ್ನ ಪ್ರೆಂಡು ಬುಟ್ಟು ಬಿಡಿ " ಅಂತ ಹೇಳಿ ,
ಅವನ ಔದಾರ್ಯ ತೋರಿ ಊರ ಮುಂದೆ ದೊಡ್ಡ ಮನುಷ್ಯ ಆದ,
ಹಳ್ಳಿ ಗುಗು ಅಂತ ಕರೆದ ನಾನು ಅವನ ಮುಂದೆ , ಊರವರ ಮುಂದೆ ಸಣ್ಣ ಮನುಷ್ಯ ಆದೆ ,
ನಾನು ಬ್ರುಅಹಸ್ಪತಿ ಅನ್ನೋ ನನ್ನ ಅಹಂಕಾರ ನೆಗೆದು ಬಿತ್ತು.
ಗೌಡರು ನನ್ನ ಕ್ಷಮಿಸಿ ಬಿಟ್ಟರು .
ನಾನು ನಾಚಿಕೆ ಇಂದ ತಲೆ ತಗಿಸಿ ಹೋರಟ್ಟು ಬಂದೇ .
ಬರೆದ ಮೂಡ,
ಹರೀಶ್ ಎಸ್ ಕೆ