ಸುಖಕಿರುವ ಅವಸರ....!
ಕವನ
ಸುಖಕಿರುವ ಅವಸರ
ಏಕಿಲ್ಲ ಕಷ್ಟಕೆ?
ಬಂದ ಹಾಗೆ ಓಡುವ ಸುಖ
ಬಿಟ್ಟೋಗದ ಸಖ, ಕಷ್ಟದ ಲೆಕ್ಕ!
ಬೇಕೈಷಾರಾಮ ಸುಖ
ಅನುಭವಿಸುತಲೆ ಮಯಕ
ವರ್ಷಾ ಯೋಜನಗಳೆ ಕ್ಷಣಿಕ
ಕಳೆದದ್ದೂ ಅರಿವಾಗದ ಸುಖ!
ಬೆನ್ನು ಹತ್ತೆ ಕಷ್ಟ ಕೋಟಲೆ
ರಾವಣನ ಹತ್ತತ್ತು ತಲೆ
ಕ್ಷಣಗಳೆ ಓಡದ ಶೂಲೆ
ಧೀರ್ಘ ಕಷ್ಟಗಳ ಬಾಳೆ!
ಕಷ್ಟ ಸುಖದ ಕೋಷ್ಟಕ
ಅವರವರ ಭಾಷ್ಯದ ಬೆಳಕ
ಕಷ್ಟಗಳಾಗೇ ಜಳ ಜಳಕ
ಸುಖಗಳೆ ಪರಿಚಾರಕ!
ಸುಖಕಿರದಿರಲಿ ಅವಸರ
ದುಃಖಕ್ಕಿರಲಿ ತಾತ್ಸಾರ
ಆಡಿಸುವವನಿಗೂ ಸಹನೆ
ಕಲಿಸಿಬಿಡುವ ಸಂವಹನ!
ನಾಗೇಶ ಮೈಸೂರು, ಸಿಂಗಪುರ, 02.ಏಪ್ರಿಲ್.2013