ಕವನಗಳು.. ಬರಿದೇ ಕವನಗಳು !!!

ಕವನಗಳು.. ಬರಿದೇ ಕವನಗಳು !!!

ಕವನ

೧. ಮನಸಲಿ ಮೂಡಿದ ಪ್ರೀತಿ
    ಅರಿವಿಗೆ ಬಾರದ ರೀತಿ
    ಕನಸಲಿ ತೋರುವ ಭೀತಿ
    ಎಂದಿಗೂ ಸಾಯದ ನೀತಿ
    ಬದುಕನು ಕಾಯುವ ಪ್ರೀತಿ !!!

೨. ಮೌನ ಕಾಡಿತು ಕನಸಲ್ಯಾಕಿಲ್ಲಿ
    ಪ್ರೀತಿಲಿ ಸಿಗದ ಬಯಕೆಯಾಕಿಲ್ಲಿ
    ಒಲವನು ಕಾಡುವ ಮಾತಿನ್ನೆಲ್ಲಿ
    ಉಸಿರಲ್ಲಿ ಬೆರೆತ ಭಾವ ಜೊತೆಯಲ್ಲಿ
    ಒಲವಿನ ನೀತಿಲಿ ಪರಿಭಾಷೆ ಮತ್ತೆಲ್ಲಿ ?

೩. ಕಾವ್ಯ ಬಯಸದೆ ಮನಸು
    ಪ್ರೀತಿ ಬಯಸದೆ ಮುನಿಸು
    ವೇದ ಹೇಳದೇ ಕ್ಷಮಿಸು
    ಕಾಲ ಕಲಿಸದೆ ರಮಿಸು
    ಎಂದೂ ಕಾಯದೆ ಕ್ರಮಿಸು ... ಮುಗಿಸು !!!