ಕಾವ್ಯ....ಕತ್ತಿಯಲ್ಲ..!
ನಾನು....
ಮೋಸ, ವಂಚನೆ ಸುಲಿಗೆಯ
ಕುರಿತು..ಕಾವ್ಯ ...ಬರೆಯಲಾರೆ
ಏಕೆಂದರೆ...
ಅವು .ಪ್ರತಿನಿತ್ಯ ..ನೋಡಲು
ಸಿಗುತ್ತವೆ....!
ದರೋಡೆ,ಕೊಲೆ ಅತ್ಯಾಚಾರದ
ಕುರಿತು ಕವನ.... ಚಿತ್ರಿಸಲಾರೆ
ಏಕೆಂದರೆ..
ಅವು ಪ್ರತಿನಿತ್ಯ . ಓದಲು
ಸಿಗುತ್ತವೆ.. !
ಅವನೆಂದ..
ನೀನು ಬರೆದರೇನು...ಬಿಟ್ಟರೇನು...
ಅವು ನಿರಂತರ.......
ಜನರಿಗದು ಮೈಗೂಡಿದೆ.....
ಸುಮ್ಮನೆ ಓದಿ ನಕ್ಕು ಬಿಡುತ್ತಾರೆ..
ಕಾವ್ಯ....... ಕತ್ತಿಯಲ್ಲ... ಕತ್ತೆ...ಎಂದ.!
Rating
Comments
"ಅವು ನಿರಂತರ......."
"ಅವು ನಿರಂತರ......."
;((((
ಬಹು ದಿನಗಳ ಗ್ಯಾಪ್ ನಂತರ ಸಂಪದಕ್ಕೆ ಮರಳಿ ಒಳ್ಳೊಳ್ಳೆ ಬರಹ ಬರೆದಿರುವಿರಿ..!!
ಕಾವ್ಯ -ಸರಳವಾಗಿದ್ದು ಅರ್ಥವಾಗುವ ಹಾಗಿರಬೇಕು... ಗುಲಾಬ್ ಜಾಮೂನ್ ಹಾಗೆ ..!! ಕಬ್ಬಿಣದ ಕಡಲೆ ಆದ್ರೆ ಕಷ್ಟ..!!
ನಿಮ್ಮೀ ಬರಹ ಸರಳ ಸುಂದರ ಅರ್ಥ ಪೂರ್ಣ ......
ಶುಭವಾಗಲಿ.
\।
In reply to "ಅವು ನಿರಂತರ......." by venkatb83
ವೆಂಕಟೇಶರವರೆ
ವೆಂಕಟೇಶರವರೆ
ನಿಮ್ಮ ಅರ್ಥಪೂರ್ಣ ಪ್ರತಿಕ್ರಿಯೆಗೆ, ಮೆಚ್ಚುಗೆಗೆ ಧನ್ಯವಾದಗಳು