ಎಲ್ಲವೂ ನೀ ... ನೀ ?

ಎಲ್ಲವೂ ನೀ ... ನೀ ?

ಕವನ

ಸೋಕದೆ ಪ್ರೀತಿಸು ನೀ
ಅರಿಯದೆ ಕಾಡಿಸು ನೀ
ಮೌನದಿ ಛೇಡಿಸು ನೀ
ನಗುತಲೇ  ಚುಂಬಿಸು ನೀ...

ಅಂತ್ಯವ ಕಾಯದೆ ನೀ
ಆದಿಯ ಒಪ್ಪಿಕೊ ನೀ
ಜೀವದ ಚೈತ್ರದಿ ನೀ
ಶೃಂಗಾರ ಕಾವ್ಯವೆ ನೀ...

ಊಹೆಗೂ ನಿಲುಕದ ನೀ
ಹಂಬಲ ಬೆಂಬಲ ನೀ
ಕಂಕಣ ಬಾಳಲಿ ನೀ
ನಗುವಿಗೆ ಕಾರಣ ನೀ ...

ವೇದವೂ ನೀ ವಾದವೂ ನೀ
ಎಲ್ಲವೂ ನೀ ... ನೀ ... ನೀ !