ಗೆಳತಿಗೊಂದು ಮಾತು
ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು
ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ
ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ
ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!
ಸಂಸ್ಕೃತ ಮೂಲ ( ಅಮರುಕನ ಅಮರುಶತಕ, ಶ್ಲೋಕ ೮):
ಲಿಖನ್ನಾಸ್ತೇ ಭೂಮಿಂ ಬಹಿರನತಃ ಪ್ರಾಣದಯಿತೋ
ನಿರಾಹಾರಾಃ ಸಖ್ಯಃ ಸತತರುದಿತೋಛ್ಛನ್ನನಯನಾಃ ।
ಪರಿತ್ಯಕ್ತಂ ಸರ್ವಂ ಹಸಿತಪಠಿತಂ ಪಂಜರಶುಕೈ-
ಸ್ತವಾವಸ್ಥಾಚೇಯಂ ವಿಸೃಜ ಕಠಿನೇ ! ಮಾನಮಧುನಾ ॥
-ಹಂಸಾನಂದಿ
ಕೊ: ಇಲ್ಲಿರುವ ಚಿತ್ರವನ್ನು ನಾನು http://www.indianminiaturepaintings.co.uk/Hyderabad_Vilaval_Ragini_23408.html ಇಲ್ಲಿಂದ ತೆಗೆದುಕೊಂಡಿದ್ದೇನೆ. ಇದೊಂದು ರಾಗಮಾಲಾ ಚಿತ್ರ
ಕೊ.ಕೊ: ರಾಗಮಾಲಾ ಚಿತ್ರಗಳು ಸಾಮಾನ್ಯವಾಗಿ ಹಿಂದೂಸ್ತಾನಿ ಸಂಗೀತದ ರಾಗ ರಾಗಿಣಿಗಳಿಗೊಂದು ವ್ಯಕ್ತಿತ್ವವನ್ನು ಕೊಟ್ಟು ಚಿತ್ರಿಸುವಂತಹ ಒಂದು ಸಾಂಪ್ರದಾಯಿಕ ವರ್ಣಚಿತ್ರ ಶೈಲಿ. ಇಲ್ಲಿ ಹಾಕಿರುವ ವಿಲಾವಲ್ ರಾಗಿಣಿಯನ್ನು ತೋರಿಸುವ ಈ ಚಿತ್ರ ನನಗೆ ಈ ಪದ್ಯದಲ್ಲಿರುವ ನಾಯಕಿ ಮತ್ತು ಅವಳಿಗೆ ಸಲಹೆ ನೀಡುವ ಗೆಳತಿಯನ್ನು ಸೂಚಿಸುತ್ತೆ ಅನ್ನಿಸಿದ್ದರಿಂದ ಇಲ್ಲಿ ಬಳಸಿಕೊಂಡಿದ್ದೇನೆ. ಈ ಚಿತ್ರ ಸುಮಾರು ಕ್ರಿ.ಶ.೧೭೫೦ರ ಲ್ಲಿ ಹೈದರಾಬಾದ್ ನಲ್ಲಿ ಚಿತ್ರಿತವಾದದ್ದೆಂದು ಇದನ್ನು ತೆಗೆದುಕೊಂಡ ಜಾಲತಾಣದಲ್ಲಿ ಹಾಕಲಾಗಿದೆ.
ಕೊ.ಕೊ.ಕೊ: ಮೈಸೂರಿನ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು (ಕ್ರಿ.ಶ. ೧೭೯೪- ೧೮೬೮) ಬರೆದ “ಶ್ರೀ ತತ್ತ್ವನಿಧಿ” ಯಲ್ಲಿ ಕರ್ನಾಟಕ ಸಂಗೀತದ ರಾಗಗಳಿಗೂ ಕೆಲವು ರಾಗಮಾಲಾ ಚಿತ್ರಗಳಿವೆಯೆಂದು ನೆನಪು.
Rating
Comments
"ತೊರೆಯೆ ಹಠವನು ಬೇಗನೆ!"
"ತೊರೆಯೆ ಹಠವನು ಬೇಗನೆ!"
ಬಾರಮ್ಮ ಬಾ ಬೇಗ..... !!
ಅಯ್ಯೋ ಪಾಪ..!!
ಈ ವಿಅರಹ.....!! ೧೦೦-೧೦೦ ತರಹ್...!
ದೇವ್ರೇ ದಿಕ್ಕ?
ಶುಭವಾಗಲಿ.
\।