ವ್ಯಕ್ತಿತ್ವ ವಿಕಸನ ವಿಶ್ಲೇಷಣೆ

ವ್ಯಕ್ತಿತ್ವ ವಿಕಸನ ವಿಶ್ಲೇಷಣೆ

 

ಮನುಶ್ಯ ವ್ಯಕ್ತಿತ್ವ ಅನ್ನುವುದು ಅತ್ಯಂತ ಸಂಕೀರ್ಣ ಅದನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೆ ಕಷ್ಟಕರ ಸಾದ್ಯ. 
ವ್ಯಕ್ತಿಗಳ ನಡುವೆ ನಡೆಯುವ ಸಂವಹನ ಕ್ರಿಯೆಯ ವಿಶ್ಲೇಷ್ಜಣೆಯ ಆದಾರದ ಮೇಲೆ, ಮನೋ ವಿಜ್ಝಾನಿಗಳು ಈ ವ್ಯಕ್ತಿತ್ವಗಳ ಗ್ರಹಿಸಲು ಪ್ರಯತ್ನ ಪಡುತ್ತಾರೆ. ಈ ಮನುಷ್ಯರ ನಡುವಿನ ಸಂವಹನ ಕ್ರಿಯೆ ಯಾವುದೆ ರೂಪದಲ್ಲಿರಬಹುದು, ಅದು ಮಾತು ಕತೆಯ ರೂಪ, ಬರವಣಿಗೆಯ ರೂಪ, ಭಾವನೆಗಳನ್ನು ವ್ಯಕ್ತಪಡಿಸುವ ಯಾವುದೆ ರೂಪದ ಸಂವಹನ ವ್ಯಕ್ತಿತ್ವ ವಿಶ್ಲೇಷಣೆಗೆ ನೆರವಾಗುತ್ತದೆ
 
ವ್ಯಕ್ತಿತ್ವಗಳ ಮನಗಳ ಅರಿವಿಕೆಯ ಈ ಜ್ಞಾನ ಎಲ್ಲ ರೂಪದಲ್ಲು ಸಹ ಒಳ್ಳೆಯದೆ ಇದು ನಮ್ಮ ಮನಸಿನ ಸ್ಥಿಥಿಯನ್ನು ನಾವೆ ತಿಳಿಯಲು, ಬೇರೆಯವರ ಮನಸಿಕ ಸ್ಥಿಥಿಗತಿಗಳನ್ನು ನಿರ್ದರಿಸಲು ಸಹಾಯಕವಾಗಿದ್ದು, ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗಿದೆ. ಹಾಗೆ ಮನುಷ್ಯನ ಮನಸಿನ ನಡುವೆ ಇರುವ ದೂರವನ್ನು ಕಡಿಮೆಗೊಳಿಸಿ ಮನಸನ್ನು ತಿಳಿಗೊಳಿಸಲು ಸಹ ಸಹಾಯಕವೆನಿಸುವುದು.
 
ಈ ವಿಶ್ಲೇಷಣೆಯಂತೆ ಪ್ರತಿ ಮನುಷ್ಯನ ಮನಸಿಕ ಸ್ಥಿಥಿಯನ್ನು ಮೂರು ಆಯಾಮಗಳಲ್ಲಿ ಗುರುತಿಸಬಹುದು
ತಂದೆಯ ಭಾವ (ಪೇರೆಂಟ್ ಈಗೋ)
ಸಮಸ್ಥಿಥಿ ಭಾವ (ಅಡಲ್ಟ್ ಈಗೋ)
ಶಿಶು ಭಾವ (ಚೈಲ್ಡ್ ಈಗೋ)
 
ಈ ಭಾವಗಳ ಅರ್ಥ ಮನುಷ್ಯನೊಬ್ಬ ಸದಾ ಒಂದೆ ಭಾವದಲ್ಲಿರುವನೆಂಬ ಅರ್ಥವಲ್ಲ, ನಮ್ಮೆಲ್ಲರ ಮನಸು , ಮಾತುಕತೆ, ನಡೆನುಡಿಗಳು  ಸದಾ ಈ ಮೂರು ಭಾವಗಳ ಸುತ್ತಲೆ ಸುತ್ತುತ್ತಿರುತ್ತದೆ. ಎಲ್ಲರ ಮನಗಳು ಈ ಮೂರು ಆಯಾಮಗಳಲ್ಲಿದ್ದು ವ್ಯಕ್ತಿತ್ವಗಳ ನಡುವಿನ ಮನಸಿನ, ಹೊರಗಿನ ಸಂವಹನ ಕ್ರಿಯೆ ನಡೆದಿರುತ್ತದೆ. ಕೆಲವೊಮ್ಮೆ ಇಬ್ಬರು ವ್ಯಕ್ತಿಗಳ ನಡುವಿನ ಮಾತುಕತೆ ಒಂದೆ ಭಾವದಲ್ಲಿರದೆ, ಎಲ್ಲ ಮೂರು ಭಾವಗಳನ್ನು ಒಳಗೊಂಡಿದ್ದು, ಇಬ್ಬರ ನಡುವಿನ ಸಂವಹನ, ಸಂಪರ್ಕ ನಡೆಯುತ್ತದೆ 
 
ತಂದೆಯಭಾವ (ಪೇರೆಂಟ್ ಈಗೋ)
 
ಇದನ್ನು ಬೇಕಾದಲ್ಲಿ ತಾಯಿಯ ಭಾವ ಎಂದು ಕರೆಯಬಹುದು. ಈ ಭಾವ ನಮ್ಮನ್ನು ಹೊರಗಿನಿಂದ ಪ್ರೇರೆಪಿಸಿದ ಬಾಗ, ಇದು ನಮ್ಮ ಸ್ವಂತ ಚಿಂತನೆಯಾಗದೆ, ಚಿಕ್ಕ ವಯಸಿನಿಂದ ನಮ್ಮ ಮೇಲೆ ತಂದೆ ತಾಯಿ ದೊಡ್ಡವರು ಇವರನ್ನೆಲ್ಲ ನೋಡಿ, ನಮಗಿರಿವಿಲ್ಲದೆ  ಕಲಿತ ಭಾವವಾಗಿರುತ್ತದೆ. ಈ ತಂದೆಯ ಭಾವವು  ತೀಕ್ಷ್ಣವಾಗಿದ್ದು, ನಮ್ಮ ಮನಸನ್ನು ಹೊರಗಿನಿಂದ ಹೊಕ್ಕ ಅಭಿಪ್ರಾಯಗಳಿಂದ ರೂಪಿಸಿಕೊಂಡ, ನಮ್ಮ ನಡೆ ನುಡಿಗಳನ್ನು ನಿಯಂತ್ರಿಸುವ ಭಾವ . 
ಕೆಲವು ಮಾತುಗಳು : ನಿನಗೆ ಎಂದಿಗು ಸಾದ್ಯವಿಲ್ಲ, ನೀನು ಇದನ್ನು ಮಾಡಲಾರೆ, ಅದನ್ನು ಮಾಡಬೇಡ, ಹಾಗಲ್ಲ ಈ ರೀತಿ ನಾನು ಹೇಳಿದಂತೆ ಮಾಡು ---- ಇಂತಹ ವಾಕ್ಯಗಳೆಲ್ಲ ತಂದೆ ಭಾವದ ರೂಪಕ
 
ದಭಾವಣೆಯ ತಂದೆಭಾವ : "ಈ ಕೆಲಸ ಮುಗಿಸುವ ವರೆಗೂ ಯಾರು ಹೊರಹೋಗಬಾರದು" , ಇಲ್ಲಿ ಆಜ್ಞೆಯನ್ನು ಅಧಿಕಾರವನ್ನು ಗುರುತಿಸಬಹುದು. ನನ್ನ ಮಾತೆ ಕೇಳಬೇಕೆಂಬ ಭಾವ 
ಅನುನಯದ ತಂದೆಭಾವ: "ಈ ಕೆಲಸ ನಿನ್ನಿಂದ ಆಗದು ಬಿಡು, ನಾನು ಮಾಡಿಕೊಳ್ಳುವೆ" , ಈ ಭಾವ ಮಗುವನ್ನು ಹಾಳು ಮಾಡಬಲ್ಲದು, ಇದು ಋಣಾತ್ಮಕ ಕ್ರಿಯೆಯಾಗಿದ್ದು,  ವ್ಯಕ್ತಿಯನ್ನು ಹೇಡಿಯನ್ನಾಗಿಸಬಲ್ಲದು
 
ಸಮಸ್ಥಿಥಿ ಭಾವ : ಈ ಭಾವ ಸಹ ಹೊರಗಿನಿಂದ ಕಲಿತ್ತಿದ್ದಾಗಿದ್ದು, ಮನಸು ಸದಾ ತರ್ಕ, ಸಾದ್ಯತೆಗಳನ್ನು ಕುರಿತಿದ್ದಾಗಿದ್ದು, ಎದುರಿಗಿರುವರ ಮನಸನ್ನು ಅರಿತು ಮಾತನಾಡುವ ಸ್ವಭಾವವಾಗಿದೆ,  ಪ್ರತಿ ವಿಷಯ ಅರಿತುಕೊಂಡು ನಡೆಯನ್ನು ರೂಪಿಸಿಕೊಳ್ಳುವ ಸ್ವಭಾವ ಇರುತ್ತದೆ. ಸದಾ ಏಕೆ ಏನು ಹೇಗೆ ಯಾರು ಎಲ್ಲಿ , ಯಾವಾಗ , ಯಾವ ರೀತಿ ಈ ರೀತಿಯ ಪ್ರಶ್ನೆಗಳು ಹಾಗು ತರ್ಕಬದ್ದ ಉತ್ತರಗಳಿಂದ ರೂಪಿಸಿಕೊಳ್ಳುವ ವ್ಯಕ್ತಿತ್ವವಾಗಿರುತ್ತದೆ
 
ಶಿಶಿಭಾವ : ಅತ್ಯಂತ ತೀವ್ರವಾದ ಚಿಂತನೆಗಳು, ಭಾವ ಇದರ ವಿಶೇಷ , ಅಳು ನಗು ಕೋಪ ಸಂತಸ  ಕಾಡುವ ಕೀಳುಭಾವ ಇವೆಲ್ಲ ಶಿಶುಭಾವದ ಪ್ರತೀಕ. ಶಿಶುಭಾವ ಪೂರ್ಣ ಒಳಗಿನಿಂದ ಮೂಡುವ ಭಾವವಾಗಿದ್ದು, ಈ ಭಾವಗಳು ತೀವ್ರವಾದಗ ಮನುಷ್ಯನ ನಡುವಳಿಕೆ ಸಾಮಾನ್ಯವೆನಿಸುವದಿಲ್ಲ. 
            ಸಹಜ ಶಿಶು: ಇದು ಅತ್ಯಂತ ಶಕ್ತಿಶಾಲಿ ಭಾವ, ಸದಾ ಕುತೂಹಲ, ಶಕ್ತಿಬರಿತ, ಒಳಹೊಕ್ಕು ನೋಡುವ ಸ್ವಭಾವ ಇಂತವೆಲ್ಲ ಎದ್ದು ಕಾಣುತ್ತವೆ, ಶಿಶು ಸ್ವಭಾವ ಜಾಗೃತವಾಗಿದ್ದಲ್ಲಿ ಬದುಕಿನ ಬಗ್ಗೆ ಸದಾ ಉತ್ಸಾಹ ಕುತೂಹಲ ವಿರುತ್ತದೆ
            ಪ್ರೇರಿತ ಶಿಶುಬಾವ: ಮನಸ್ಸು ಸದಾ ಸಹಜ ಶಿಶುವಿನ ಭಾವದಲ್ಲಿರುವುದು ಕಷ್ಟಕರ, ಹಾಗಾಗಿ ಬಲವಂತವಾಗಿ ಕೆಲವೊಮ್ಮೆ ಶಿಶು ಸ್ವಭಾವ ವನ್ನು ಆರೋಪಿಸಿಕೊಳ್ಳುವುದು ಇದೆ. ನಮಗಿಂತ ಹೆಚ್ಚು ಶಕ್ತಿವಂತರನ್ನು ಅಧಿಕಾರಸ್ತರನ್ನು ಕಂಡಾಗ ಕೆಲವೊಮ್ಮೆ ಅನುನಯದಿಂದ ನಡೆಯುತ್ತ, ಆಗಲಿ, ಥಾಂಕ್ಸ್, ಸಾರಿ, ಇಂತವೆಲ್ಲ ಹೇಳುತ್ತ ನಡೆಯುವ ಸ್ವಭಾವ
           ಬುದ್ದಿವಂತ ಶಿಶು : ಇಲ್ಲಿ ಸ್ವಭಾವದ ಆರನೆ ಇಂದ್ರೀಯದಂತೆ ಕೆಲಸ ಮಾಡುತ್ತದೆ, ಉದಾಹರಣೆ: ವ್ಯಕ್ತಿಯನ್ನು ನೋಡುವಾಗಲೆ ಇವನು ಒಳ್ಳೆಯವನು ಅಥವ ಕೆಟ್ಟವನ್ನು ಎಂದು ನಿರ್ದರಿಸುವುದು, ನನಗೆ ಕಪ್ಪು ಇಷ್ಟವಿಲ್ಲ ಎನ್ನುವುದು ಇಂತವೆಲ್ಲ ಬುದ್ದಿವಂತ ಶಿಶುವಿನ ಕೆಲಸ
ವ್ಯಕ್ತಿತ್ವದಲ್ಲಿನ ಪ್ರದಾನ ಭಾವವನ್ನು ಗುರುತಿಸಲು ಈ ಅಂಶಗಳು ನೆರವಾಗಬಹುದು
ತಂದೆ ಭಾವದ ಪ್ರದಾನ ಅಂಶಗಳು : ತೀರ್ಮಾನ ನೀಡುವುದು, ಸಲಹೆ ನೀಡುವುದು, ಬಾಸಿಸಂ (ಅದಿಕಾರ ಚಲಾವಣೇ), ಸರ್ವಾಧಿಕಾರದ ದೋರಣೆ, ಒಲಿಸುವುದು (ಮುದ್ದಿಸುವುದು-ಹಾಳುಮಾಡುವುದು)
ಸಮಸ್ಥಿಥಿ ಭಾವದ ಅಂಶಗಳು : ನಿರ್ಭಾವ ನಡಾವಳಿಕೆ, ಸತ್ಯಾಸತ್ಯಯೆಗ ಪರಿಶೀಲನೆ, ವಿಷಯ ಸಂಗ್ರಹಣೆ, ಪ್ರಶ್ನೆ ಇಂತಹವು
ಶಿಶುಭಾವದ ಅಂಶಗಳು : ಅತಿಯಾದ ನಡವಳಿಕೆ, ಅಳು, ನಗು, ಕುತೂಹಲ, ಸೃಜಾನತ್ಮತೆ, ಕೋಪ, ಅಸಹಾಯಕತೆ ಇಂತ ಭಾವಗಳು
 
ಸಂವಹನ ವಿಶ್ಲೇಷಣೆ
=============
ವ್ಯಕ್ತಿಗಳ ನಡುವೆ ನಡೆಯುವ ವ್ಯವಹಾರ, ಸಂವಹನ  ಎಲ್ಲವು ಇಬ್ಬರ ನಡುವಿನ ಹೊಂದಾವಣಿಕೆಯ ಮೇಲೆ ನಡೆಯುತ್ತಿರುತ್ತದೆ. ಇಬ್ಬರ ಪರಸ್ಪರ ಪ್ರತಿಕ್ರಿಯೆಗಳು ಒಂದಕ್ಕೊಂದು ಪೂರಕವಾಗಿದ್ದಲ್ಲಿ ಮಾತುಕತೆಗಳು ವ್ಯವಹಾರಗಳು ಸುಗಮಾವಾಗಿ ಸಾಗುತ್ತದೆ, ಇಲ್ಲದಿದ್ದಲ್ಲಿ ಇಬ್ಬರ ನಡುವಿನ ಸಂವಹನದ, ವ್ಯವಹರದ ಮಾತುಕತೆಯಲ್ಲಿ ಅಡೆತಡೆ ಉಂಟಾಗುತ್ತದೆ. ಇಬ್ಬರ ನಡುವಿನ ಮಾತುಕತೆಯ ಪೂರಕವನ್ನು ಈ ರೀತಿ ವಿಶ್ಲೇಷಿಸಬಹುದು
೧) ಪೂರಕ ಸಂವಹನ (complimentary transaction)
೨) ವಿಲೋಮ ಪೂರಕ ಸಂವಹನ ( crossed transaction) 
3) ಕುತ್ಸಿತ ಸಂವಹನ (ulterior transaction)
 
ಪೂರಕ ಸಂವಹನ : ಈ ಸಂವಹನದಲ್ಲಿ  ಇಬ್ಬರ ನಡುವಿನ ಮಾತುಕತೆ ಒಬ್ಬರಿಗೊಬ್ಬರಿಗೆ ಪೂರಕ ಭಾವದಲ್ಲಿರುತ್ತದೆ. ಅಂದರೆ ಒಬ್ಬರ ಮಾತು ಮತ್ತೊಬ್ಬರ ನಿರೀಕ್ಷಿತ ಭಾವದಲ್ಲಿರುತ್ತದೆ ಹಾಗಾಗಿ ಮಾನಸಿಕ ಘರ್ಷಣೆಗಳಾಗಲಿ, ಅಸಾಮದಾನವಾಗಲಿ ಇರುವದಿಲ್ಲ. ಮಾನಸಿಕ ಭಾವಗಳು (ಈಗೋ ಸ್ಟೇಟಸ್) ಒಬ್ಬರಿಗೊಬ್ಬರಿಗೆ ತೃಪ್ತಿ ನೀಡುವಂತಿರುತ್ತದೆ
ಉದಾಹರಣೆ: ತಂದೆಯ ಭಾವದ ಮಾತಿಗೆ - ಶಿಶು ಭಾವದ ಪ್ರತಿಕ್ರಿಯೆ, ಸಮಸ್ಥಿಥಿ ಭಾವಕ್ಕೆ ಸಮಸ್ಥಿಥಿ ಭಾವದ ಪ್ರತಿಕ್ರಿಯೆ 
(parent -> child , adult -> adult transaction)
 
ವಿಲೋಮ ಸಂವಹನ ಪೂರಕ (crossed transaction)
ಈ ರೀತಿಯ ಸಂವಹನದಲ್ಲಿ, ಯಾವಾಗಲು ಒಬ್ಬರು ಮತ್ತೊಬ್ಬರ ಮಾತಿಗೆ ಪೂರಕವಲ್ಲದ ಪ್ರತಿಕ್ರಿಯೆ ನೀಡುವರು ಹಾಗಾಗಿ ಇಲ್ಲಿ ಸಂವಹನ ಅರ್ಥಪೂರ್ಣವಾಗದೆ, ನಿಂತು ಹೋಗುವುದು. 
ಉದಾ : ಕೋಪಗೊಂಡ ವ್ಯಕ್ತಿಯ ಜೊತೆ ನೀವು ಸಹ ಕೋಪಮಾಡಿಕೊಂಡು ಕೂಗಾಡುತ್ತಿದ್ದರೆ, ಅಲ್ಲಿ ಸಂವಹನ ಪೂರ್ಣ ನಿಂತಿದೆ ಎಂದೆ ಅರ್ಥ. ಒಬ್ಬರ ಮಾತು ಇನ್ನೊಬ್ಬರು ಕೇಳಿಸಿಕೊಳ್ಲಲು ಸಿದ್ದರಿಲ್ಲದ ಸ್ಥಿಥಿ ಅದು 
 
ಕುತ್ಸಿತ ಸಂವಹನ (ulterior transaction)
ಇಲ್ಲಿ ಸಂವಹನದ ರೀತಿ ಸಾಮಾನ್ಯವಾಗಿರದೆ , ಹುದುಗಿದ ಅರ್ಥಗಳಿರುತ್ತವೆ, ವ್ಯಕ್ತಿ ಹೊರಗೆ ಆಡುತ್ತಿರುವ ಮಾತೆ ಬೇರೆಯಾಗಿದ್ದು ಮಾತಿನ ಅರ್ಥವೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ವ್ಯಂಗದ ರೀತಿಯ ಮಾತುಗಳು ಇವು. ಹೊರನೋಟಕ್ಕೆ ವಾಕ್ಯ ಸಮಸ್ಥಿಥಿ ಭಾವದ (Adult) ರೀತಿಯಲ್ಲಿದ್ದು, ಒಳ ಅರ್ಥ ಬೇರೆಯಾಗಿರುತ್ತದೆ, ಸಂಕೀರ್ಣ ರೀತಿಯ ಸಂವಹನ ಇದಾಗಿರುತ್ತದೆ.
 
ಪ್ರಾಮುಖ್ಯತೆ / ಗುರುತಿಸುವಿಕೆ (strokes)
ಇಬ್ಬರ ನಡುವಿನ ಸಂವಾದದಲ್ಲಿ, ಒಬ್ಬರು ಮತ್ತೊಬ್ಬರ ಭಾವನೆಗೆ ಪ್ರಾಮುಖ್ಯತೆ ಕೊಡುವುದು, ಆ ರೀತಿ ತೋರಿಸುವುದು ಮುಖ್ಯ ಇದನ್ನು ಸ್ಟ್ರೋಕ್ಸ್  ಎಂದು ಕರೆಯುತ್ತಾರೆ. ಆ ರೀತಿ ಸಂವಾದದಲ್ಲಿ ಒಬ್ಬರನ್ನೊಬ್ಬರು ಪ್ರಾಮುಖ್ಯತೆ ಕೊಟ್ಟು ಮಾತನಾಡುಸುವುದನ್ನು ’ಗೇಮ್ ’ ಎಂದು ಕರೆಯಬಹುದು
 
ವ್ಯಕ್ತಿತ್ವದ ವಿವಿದ ಹಂತಗಳು
==================
 
ವ್ಯಕ್ತಿತ್ವ ವಿಕಸನದ ಹಾದಿಯಲ್ಲಿ , ಮನುಷ್ಯನ ಜೀವನದಲ್ಲಿ ನಾಲಕ್ಕು ಘಟ್ಟಗಳನ್ನು ಗುರುತಿಸಬಹುದು
 
೧) ನಾನು ಸರಿಯಿಲ್ಲ ನೀನು ಸರಿಯಿಲ್ಲ ಎನ್ನುವ ಹಂತ (I am not ok you are not ok) , ಇಲ್ಲಿ ಯಾವುದೆ ಬೆಳವಣಿಗೆ ಸಾದ್ಯವಿಲ್ಲದ ಸ್ಥಿಥಿ, ಅಥವ ಎಲ್ಲವು ಗೊಂದಲ ಮಯ (ಪಲಾಯನ) 
ಉದಾ : ಬಾಸ್ ತನ್ನ ಕೆಲಸಗಾರನಿಗೆ " ಈಗ ಏನು ಮಾಡುವುದು ತಿಳಿಯುತ್ತಿಲ್ಲ, ನಿನ್ನಿಂದಲು ಈ ಕೆಲಸವಾಗದು, ನನಗೆ ತಿಳಿಯದು" 
 
೨) ನಾನು ಸರಿಯಿಲ್ಲ , ನೀನು ಸರಿ ಎನ್ನುವ ಹಂತ (I am not ok you are ok ) ,ಇಲ್ಲಿ ಪೂರ್ಣ ಶಿಶುಭಾವ (child ego) 
ಉದಾ: ನನಗಂತು ತಿಳಿಯದು, ನೀನು ಹೇಳಿದಂತೆ ಮಾಡುವೆ, (ಸ್ಪರ್ದೆ)
 
೩)ನಾನು ಸರಿ ನೀನು ಸರಿಯಿಲ್ಲ (I am ok you are not ok)  ಇಲ್ಲಿ ತಂದೆ (ತಾಯಿ) ಭಾವ ಪ್ರಧಾನವಾಗಿ ಕೆಲಸ ಮಾಡುತ್ತದೆ, ಮತ್ತೊಬ್ಬರ ಬಗ್ಗೆ ನಂಭಿಕೆ ಇಲ್ಲ, ತಾನು ಮಾಡಿದ್ದೆ ಸರಿ ಎನ್ನುವ ಭಾವ (ದರ್ಪ)
ಉದಾ : ನಿನ್ನ ಕೆಲಸ ಸರಿ ಎಂದು ನನಗೆ ಅಭಿಪ್ರಾಯ, ನನ್ನ ಅಭಿಪ್ರಾಯದಂತೆ ನಿನ್ನ ಕೆಲಸ ನಿರೀಕ್ಷಿತ ಮಟ್ಟದಲ್ಲಿಲ್ಲ 
 
೪) ನಾನು ಸರಿ ನೀನು ಸರಿ (I AM OK YOU ARE OK) : ಇಲ್ಲಿ ಮನಸಿನ ಸಮಸ್ಥಿಥಿ ಭಾವ , (Adult ego) ಕೆಲಸ ಮಾಡುತ್ತಿರುತ್ತದೆ. ನಾನು ಹಾಗು ನೀನು ಇಬ್ಬರು ಕೂಡಿ ಕೆಲಸ ಮಾಡುವ ಅನ್ನುವ ಭಾವ  , 
(ಸಹಕಾರ, ಹಂಚಿಕೊಳ್ಳುವಿಕೆ )
ಉದಾ: ಬಾಸ್ : ಹಾಯ್ ನಮ್ಮ ಪ್ರಯತ್ನ ಸರಿಯಾಗಿದೆ ಅನ್ನಿಸುತ್ತಿದೆ ಅಲ್ಲವೆ 
ಕೆಲಸಗಾರ : ಹೌದು ಸಾರ್, ನಮ್ಮ ನಿರೀಕ್ಷೆಯಂತೆ ಕೆಲಸ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ 
 
 
ಸಂವಹನದ, ವ್ಯಕ್ತಿತ್ವದ ಈ ವಿಶ್ಲೇಷಣೆಗಳು ಮನುಷ್ಯ ತನ್ನೊಳಗೆ ತಾನು ಬೆಳೆಯಲು ಸಹಾಯಕವಾಗಿದ್ದು, ಅದೇ ರೀತಿ ನಮ್ಮ ಸುತ್ತಲಿನ ಜನರ ಮನೋಭಾವನೆಯನ್ನು ಕುತೂಹಲದಿಂದ ವಿಕ್ಷಿಸಲು ಸಹ ಅನುಕೂಲವೆನಿಸುತ್ತದೆ. ವಿವಿದ ಹಂತಗಳ್ಳಲ್ಲಿರುವ ಮನಸಿಕ ಸ್ಥಿಥಿಯನ್ನು ಅಭ್ಯಾಸ ಮಾಡುತ್ತ  ಬದುಕಿನಲ್ಲಿ ಏನಾನದ್ದರು ಸಾದಿಸಲು ಸಹಾಯಕವಾಗಬಹುದು ಅನಿಸುತ್ತದೆ 
--------------------------------
 
ಆಡಳಿತಾತ್ಮಕ ಓದಿನಲ್ಲಿ ವ್ಯಕ್ತಿತ್ವ ವಿಶ್ಲೇಷಣೆಯ ಬಾಗ (TRANSACTIONAL ANALYSIS)
-------------------------------------------------------------------------------------------------------
 
 
figure : https://encrypted-tbn1.gstatic.com/images?q=tbn:ANd9GcS_Ke6E3fKTbbjj7c6OMV-IvHP4znf1u8V9lhlhY0V7rpu2yDHL