ಧರ್ಮದ ಮಧ್ಯೆ ಹೃದಯದ ಕಿರಣಾ..!
ಸುಮಾರು 20 ವರ್ಷ ಆಗಿರಬೇಕು. ಆಗ ಬರೆದ ಕತೆ ಅದು. ಹಾಗಂತ ಮಾತು ಶುರು ಮಾಡಿದ್ರು ಕವಿ.ಬಿ.ಆರ್.ಲಕ್ಷ್ಮಣ್ ರಾವ್. ಹೌದು..! ಆಗಲೇ ಬರೆದ ಕತೆಯಲ್ಲಿ ಈಗಿನ ಸಮಸ್ಯೆಗಳನ್ನ 20 ವರ್ಷದ ಹಿಂದೇನೆ ಹೇಳಿದ್ದರು. ಹಿಂದು ಮತ್ತು ಮುಸ್ಲಿಂ ಧರ್ಮದ ಮಧ್ಯೆ ಇರೋ ಒಂದು ಅತಿದೊಡ್ಡ ಅಂತರವನ್ನ ಸುಂದರ ಪ್ರೇಮಕತೆಯ ಮೂಲಕ ಹೇಳಿದ್ದರು. ಅದೇ ಕತೆಯನ್ನ ಇವತ್ತು `ಬೆಳ್ಳಿ ಕಿರಣಾ' ಹೆಸ್ರಿನ ಚಿತ್ರ ರೂಪದಲ್ಲಿ ಕಂಡು ಖುಷಿಯಾಗಿದ್ದರು. ಸಾಹಿತ್ಯ ಕ್ಷೇತ್ರದ ಎಲ್ಲ ಗೆಳೆಯರೂ ಅದೇ ಸಂತೋಷ ಹಂಚಿಕೊಂಡ್ರು...
ಕತೆಗೆ ಬಂದ್ರೆ, ಇದು ಇಬ್ಬರು ಅನ್ಯ ಧರ್ಮದ ಗೆಳೆಯರ ಕತೆ. ಕತೆಯಲ್ಲಿ ಅಡಗಿರೋ ಸಾರ ನೇರವಾಗಿದೆ. ಇಲ್ಲಿ ಯಾವುದೇ ವಿರೋಧ ಮತ್ತು ಟೀಕೆಗಳಿಲ್ಲ. ಸಾಮಾನ್ಯ ಕುಟುಂಬದ ಒಬ್ಬ ಮುನ್ನಾ. ಬ್ರಾಹ್ಮಣ ಕುಟುಂಬದ ಮಂಜುನಾಥ. ಬಾಲ್ಯದಲ್ಲಿಯೇ ಪರಸ್ಪರ ಇವರ ಕುಟುಂಬದ ಸದಸ್ಯರು ಗಟ್ಟಿಯಾದ ಬಾಂಧವ್ಯದಲ್ಲಿ ಬೆಸೆದುಕೊಂಡಿರುತ್ತಾರೆ.
ಆದ್ರೆ, ಯಾವಾಗ ಈ ಯುವಕ್ರು ದೊಡ್ಡವರಾಗುತ್ತಾರೋ. ಎಂದಿನಂತೆ ಎಲ್ಲರೂ ಯೋಚಿಸಬಹದು, ಕಾಲ ಬದಲಾದಂತೆ ಇವರ ಪ್ರೀತಿ ಕಡಿಮೆಯಾಗುತ್ತದೆಂದು. ಆ ಯಾವ ಸಮಸ್ಯೆಗಳು ಇಲ್ಲಿ ಬರೋದೇಯಿಲ್ಲ.ಮಂಜುನಾಥನಿಗಾಗಿ ಹುಡುಗಿ ಹುಡುಕೋ ಒಂದು ಕೆಲಸವೂ ಅದೇ ಮುನ್ನಾನಿಂದ ಆಗುತ್ತದೆ. ಒಂದು ಬದಲಾವಣೆಯೆಂದ್ರೆ, ಬ್ರಾಹ್ಮಣರ ಮನೆಯ ಹೆಣ್ಮಗಳನ್ನ ನೋಡಲು ಮುನ್ನಾ ಗೋಪಿ ಆಗುತ್ತಾನೆ...
ಇಲ್ಲಿಗೆ ಮುಗಿದಿದ್ದರೇ, ಕತೆ ತೀರಾ ಸರಳ ಅನಿಸುತ್ತಿತ್ತು. ಕತೆಯ ಇನ್ನೊಂದು ತಿರುವು ಅಂದ್ರೆ, ಮಂಜುನಾಥನನ್ನ ಮದುವೆಯಾಗಬೇಕಿರೋ ಹುಡುಗಿ ಮಾಲಿನಿ, ಕನ್ನಡ ಮೇಷ್ಟ್ರಾದ ಮುನ್ನಾ ನನ್ನೆ ಪ್ರೇಮಿಸುತ್ತಾಳೆ. ಪರೀಕ್ಷೆ ಬರೆಯಲು ಶಿವಮೊಗ್ಗದ ಅವನ ಮನೆಗೆ ಬಂದು ಬಿಡ್ತಾಳೆ. ಈಕೆಯ ಆಗಮನಕ್ಕೆ ಎರಡೂ ಕುಟುಂಬದಲ್ಲಿ ಸಣ್ಣದೊಂದು ಸಮಸ್ಯೆ ಶುರುವಾಗುತ್ತದೆ.
ಆಗ ಪ್ರೇಕ್ಷಕರಿಗೆ ಅನಿಸೋದು ಇಲ್ಲಿಗೆ ಮುಗೀತು. ಕತೆಯ ಇನ್ನೇಲಿಗೋ ಹೋಗುತ್ತದೆಂದು. ಹಾಗೇ ಆಗೋದೇಯಿಲ್ಲ. ಮೊದಲೆ ಕವಿ. ಬಿ.ಆರ್.ಲಕ್ಷ್ಮಣ್ ರಾಯರು ಕತೆಗೆ ಸುಖಾಂತ್ಯ ಕೊಟ್ಟಿದ್ದಾರೆ ನೋಡಿ. ಅದಕ್ಕೇನೆ ಇಲ್ಲಿ ಹಿಂದು ಕುಟುಂಬದ ವೆಂಕಟಮ್ಮ, ಮುಸ್ಲಿಂ ಕುಟುಂಬದ ಮತ್ತೊಬ್ಬ ಮಗ ಮುನ್ನಾನಿಗಾಗಿ ಮನಸ್ಸು ಬದಲಿಸುತ್ತಾಳೆ. ಗೆಳೆಯನಿಗಾಗಿ ಮಂಜುನಾಥ್ ಇಷ್ಟ ಪಟ್ಟ ಹುಡುಗಿಯನ್ನ ಬಿಟ್ಟುಕೊಡ್ತಾನೆ.
ಇದೇನೋ ಸರಿ, ಈ ಥರದ ಕತೆಗಳು ನಮ್ಮಲಿ ಸಾಕಷ್ಟು ಬಂದಿವೆ. ನಿರ್ದೇಶಕ ಶಿವರುದ್ರಯ್ಯನವ್ರು ಇದನ್ನೆ ಕಲಾತ್ಮಕ ಸಿನಿಮಾಗಳ ಚೌಕಟ್ಟಿನಲ್ಲಿ ಸುಂದರವಾಗಿ ಹೇಳೋ ಪ್ರಯತ್ನ ಮಾಡಿದ್ದಾರೆ. ಪಿಚ್ಚಳ್ಳಿ ಶ್ರೀನಿವಾಸ್ ಸಂಗೀತದಲ್ಲಿ ಅಲ್ಲಲ್ಲಿ ಭಾವ ತುಂಬಿ ಬರುತ್ತದೆ. ನಟ ದಿಲೀಪ್ ರಾಜ್ ಮುನ್ನಾಗಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಯುವ ನಟ ಸತೀಶ್ ಮುಗ್ಧ ಮಂಜುನಾಥನಾಗಿ ಮಿಂಚಿದ್ದಾರೆ. ಇಬ್ಬರ ಮಧ್ಯೆ ಬರೋ ಮಾಲಿನಿ ಉರ್ಫ ಬಿಗ್ ಬಾಸ್ ಮನರೆಯಲ್ಲಿರೋ ನಿರೂಪಕಿ ಅನುಶ್ರೀ, ಅತ್ಯುತ್ತಮ ಅಭಿನಯ ನೀಡಿದ್ದಾರೆ. ಥಿಯೇಟರ್ ಗೂ ಬರಬಹುದಾದ ಈ ಬೆಳ್ಳಿ ಕಿರಣಾ ಚಿತ್ರ ಶೀಘ್ರದಲ್ಲಿಯೇ ಫಿಲ್ಮ್ ಫೆಸ್ಟಿವಲ್ ಗೂ ಹೋಗಲಿದೆ...
-ರೇವನ್ ಪಿ.ಜೇವೂರ್
Comments
ರೇವನ್ ಅವರೇ ಬಿ ಆರ್ ಎಲ್ ಎಂದು