ಗಾಳಿಪಟ...
ಲಹರಿಯ ಗಾಳಿ
ಬೀಸಿದೆಡೆಗೆ
ಇದು
ಬದಲಿಸುತ್ತದೆ
ತನ್ನ ದಿಕ್ಕು...
ಒಮ್ಮೊಮ್ಮೆ,
ಯಾರ ಊಹೆಗೂ
ನಿಲುಕದ೦ತೆ
ಗಿರಕಿ ಹೊಡೆಯುತ್ತದೆ
ನಿ೦ತ ನಿ೦ತಲ್ಲೇ...
ಪ್ರವಾಹಕ್ಕೆದುರಾದರೇ,
ಇರುತ್ತದೆ,
ಮೇಲೆ ಮೇಲೆ
ಏರುತ್ತ.....
ಪ್ರವಾಹಕ್ಕೆ ಗುರಿಯಾದರೇ,
ಇಳಿದು,
ದಿಕ್ಕಾಪಾಲಾಗಿ,
ಅಲೆಯುತ್ತ...
ಇದು ಮನಸ್ಸೋ...?
ಗಾಳಿಪಟವೋ...?
ಇಲ್ಲ,
ಮನಸ್ಸೇ ಗಾಳಿಪಟವೋ...?
ಬೀಸುವ ಗಾಳಿ
ಆದರೇನು ತ೦ಗಾಳಿ....
ಆದರೇನು ಬಿರುಗಾಳಿ.....,
ಸಡಿಲವಾಗದಿರಲಿ ಸೂತ್ರ,
ಬಿಗಿಯಾಗಿರಲಿ ಹಿಡಿತ,
ಅಷ್ಟೇ....
Rating