ಚದುರಿದ ಚಿಂತನೆಗಳು (2)
ಬೆಳಗಿನ ಸೂರ್ಯನ ಕಿರಣ , ದಿನ ಪೂರ ಬೆಳಕಿನ ಅಶ್ವಾಸನೆ ಯಾದರೆ
ಬೆಳಗಿನ ಮೋಡಗಳು ಎಂದು ಮಳೆಯನ್ನು ತಾರವು ಅನ್ನುವುದು ಸತ್ಯ
ಹಾಗೆ
ಸಂಜೆಯ ಸೂರ್ಯನ ಕಿರಣ ಮನೋಹರವಾದರು, ಇರುಳಿನ ಕತ್ತಲೆಯ ಮುನ್ನುಡಿ ಅದು ಆದರೆ
ಸಂಜೆಯ ಮೋಡಗಳು ರಾತ್ರಿಯ ಮಳೆಯನ್ನು ತರುವುದು ಅನ್ನುವುದು ಸತ್ಯ
ಹೀಗೆ ಬೆಳಗಿನ ಸೂರ್ಯ ಬೆಳಕಿಗೆ, ಸಂಜೆಯ ಮೋಡ ಬದುಕಿಗೆ ಆದಾರ,
ಪ್ರಕೃತಿಯನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ , ಮನುಜ
ಬೆಳಗಿನ ಮೋಡದ ಹಿಂದೆ, ಸಂಜೆಯ ಸೂರ್ಯನ ಹಿಂದೆ ಅನುಸರಿಸಿ ಹೋಗುವ
========================================
ದೊಡ್ಡವರು ಆಡುವ ಸುಳ್ಳುಗಳನ್ನು ಎಲ್ಲರು ಒಪ್ಪುವರು ಅನ್ನುವುದು ಸುಳ್ಳು
ದೊಡ್ಡವರು ಆಡುವ ಸುಳ್ಳುಗಳನ್ನು ನಾವು ಒಪ್ಪಿದಂತೆ ನಟಿಸುವೆವು, ಅದು ಹಸಿ ಸುಳ್ಳು ಎಂದು ತಿಳಿದಾಗಲು,
ಏಕೆಂದರೆ ಬಹುತೇಕ ಸಮಯ, ನಮಗೆ
ಸುಳ್ಲನ್ನು ಸುಳ್ಳು ಎಂದು ಹೇಳುವ ದೈರ್ಯವಿರುವದಿಲ್ಲ
[ಪ್ರೇರಣೆ : ಬಡವನು ಸತ್ಯವನ್ನು ನುಡಿದರೂ ಜಗತ್ತಿನ ಜನರು ಅದು ಸುಳ್ಳೆಂದು ತಿಳಿಯುವರು. ಆದರೆ ಒಬ್ಬ ಶ್ರೀಮಂತನು ಅಸತ್ಯ,ಕಪಟ ಮಾತುಗಳನ್ನು ಹೇಳಿದರೂ ಅದು ಯೋಗ್ಯ ಮತ್ತು ನಿಜವೆಂದು ಜನರು ತಿಳಿಯುವರು-- , ಕನ್ನಡ ಬ್ಲಾಗ್ ನಲ್ಲಿ ಮಮತಾ ಕಿಲಾರ್ ಎಂಬುವರ ಬ್ಲಾಗ್ ]
======================================
ಅದೇಕೊ ಇಂದಿನ ಪ್ರಪಂಚ ಕಾಣುವಾಗ
ನಮ್ಮನ್ನು ಬೆಳೆಸಿದ್ದು
ಅಪ್ಪನ ದುಡಿಮೆಯೊ
ಅಮ್ಮನ ಪ್ರೀತಿಯ ಸೇವೆಯೊ
ಅನ್ನುವ ಕ್ಲೇಶಕ್ಕೆ ಉತ್ತರಿಸುವುದು ಕಷ್ಟಕರ ಅನ್ನಿಸುತ್ತದೆ
=====================================
Rating
Comments
ಗೆಳೆಯ ಪಾರ್ಥರೇ, ತುಂಬ ಉತ್ಕೃಷ್ಟ
ಗೆಳೆಯ ಪಾರ್ಥರೇ, ತುಂಬ ಉತ್ಕೃಷ್ಟ ವಿಚಾರಗಳ ಚಿಂತನೆಗಳು. ಬೆಳಗಿನ ಮೋಡ, ಸೂರ್ಯ, ಸಂಜೆಯ ಸೂರ್ಯ, ಮೋಡ, ಸುಂದರ ಇಮೇಜರಿ. ಧನ್ಯವಾದಗಳು.