ದುಮ್ಮಾನ...

ದುಮ್ಮಾನ...

ಕವನ

 

ದುಮ್ಮಾನ... 

ಚಂದ್ರನಿಲ್ಲದ ಇರುಳು 

ಮೋಡ ಮುಸುಕಿದೆ ಮುಗಿಲು 
ಮಿಣುಕು ತಾರೆಯ ಕೊಂಚ 
ಬೆಳಕು ಇಲ್ಲ... 
ಮನದಿ ಹುದುಗಿದೆ ದಿಗಿಲು 
ಕೊರಳ ಬಿಗಿದಿದೆ ಅಳಲು 
ಗೆಳೆಯನಿಲ್ಲದ ಬಾಳು 
ಬಾಳೆ  ಅಲ್ಲ... 
-ಮಾಲು