ಆಶಿಖಿ ಹಚ್ಚಿದ ಕಿಚ್ಚು..!
ಆಶಿಖಿ-2...
ಈಗ ಕಿಚ್ಚು ಹಚ್ಚಲಿರೋ ಸಿನಿಮಾ. ಇದೇ 26ಕ್ಕೆ ತೆರೆ ಕಾಣ್ತಿದೆ. 1990 ರಲ್ಲಿ ಬಂದು ಹೋಗಿದ್ದ ಅದೇ ಆಶಿಖಿ ಚಿತ್ರದ ಮುಂದುವರೆದ ಕತೆ ಹೇಳೋಕೆ ಇದು ಬರ್ತಿದೆ. ಅಲ್ಲಿಯೂ ಪ್ರೇಮ ಕತೆಯನ್ನ ಹಾಡುಗಳಲ್ಲಿ ಹೇಳಲಾಗಿತ್ತು. ಈಗ ಮರೆತು ಹೋಗಿರೊ ಗಾಯಕ ಕುಮಾರ್ ಸಾನು ಇದೇ ಚಿತ್ರದಿಂದಲೇ ಬೆಳಕಿಗೆ ಬಂದ್ರು. ಇಲ್ಲೂ ಅಂತಹ ಹೊಸ ಗಾಯಕರ ಪರಿಚಯವಾಗ್ತಿದೆ. ಇರ್ಷಾದ್ ಕಾಮಿಲ್ ಸೇರಿ ಇನ್ನಿಬ್ಬರು ಬರೆದಿರೋ 13 ಹಾಡುಗಳೂ ಆಶಿಕಿ-2 ಚಿತ್ರದ ಜೀವಾಳ. ಇವುಗಳಿಗೆ ಸಂಗೀತ ನೀಡಿರೋ ಮಿಥುನ್ ಗಮನ ಸೆಳೆಯುತ್ತಿದ್ದಾರೆ. ಇವುಗಳನ್ನ ಯುಟ್ಯೂಬ್ ನಲ್ಲಿ ಕೇಳಿ..ಕೇಳಿ ಖುಷಿ ಪಡೋ ಕ್ಷಣ ಪ್ರತಿಯೊಬ್ಬರಿಗೂ ಇದೆ. ಯಾಕೆಂದ್ರೆ, ಹಾಡಿನ ಭಾವವೇ ಹಾಗಿವೆ. ಅವುಗಳಲ್ಲಿ ಒಂದೆರಡನ್ನ ಕನ್ನಡದಲ್ಲಿ ಬರೆದಿದ್ದೇನೆ. ಓದಲು ಇಷ್ಟಪಡೋರಿಗೆ ಇಲ್ಲಿವೆ ಅವುಗಳ ಕನ್ನಡದ ರೂಪ..
ಮರೆತು ಬಿಡು ನನ್ನ..
ನಾನು ಇಲ್ಲದೇ ನೀನು ಈಗ ಇರಲೇಬೇಕು...
ನನ್ನೊಂದಿಗೆ ಸಾಗಿದ ಹಾದಿಯಲ್ಲಿ
ಒಂಟಿಯಾಗಿ ನೀನೆ ಸಾಗಬೇಕು...
ಮರೆತು ಬಿಡು ನನ್ನ
ನಾನು ದಿನದ ಮುಸಂಜೆ,
ನೀನು ದಿನವೂ ಉದಯಿಸೋ ಬೆಳಕು.
ಮರೆತು ಬಿಡು ನನ್ನ
ನಾನು ಕಳೆದ ಹೋದ ಕ್ಷಣ
ನೀನು ಸದಾ ಇರೋ ದಿನ...
******
ಪ್ರೀತಿ..ಪ್ರೇಮ.. ಒಲವು..ಚೆಲುವು
ಈ ಪದಗಳಿಗೆ ಅರ್ಥವೆ ಇಲ್ಲ...
ನೀನು ಬರೋ ಮುನ್ನ...
ನೀನು ಬಂದ ಮೇಲೆ
ಈ ಎಲ್ಲ ಭಾವಕ್ಕೆ ಅರ್ಥ ಬಂತು..
ಹೃದಯದಲ್ಲಿ ಪ್ರೀತಿ ಉಸಿರಾಡಿತು..
*******
ನೀನೇ ಹೇಳು..
ಪ್ರೀತಿಸಲೇ ನಿನ್ನ...
ನೀನೇ ಹೇಳು..
ಹೃದಯದ ವಿಳಾಸ
ಪ್ರೀತಿಸಲೇ ನಿನ್ನ..
*******
ಈಗ ನೀನೇ ಎಲ್ಲ...
ನೀನಿಲ್ಲದೇ ನಾನು ಏನೂ ಅಲ್ಲ..
ನಿನ್ನಿಂದ ದೂರವಾದ್ರೆ,
ನನ್ನಿಂದಲೇ ನಾನು ದೂರ..
ನೀನೇ ಎಲ್ಲ..ನೀನೇ ಜೀವನ
ನನ್ನ ನೋವು..ನನ್ನ ಖುಷಿ..
ಪ್ರೇಮ-ಪ್ರೀತಿ, ನೀನೆ ಎಲ್ಲ..
-ರೇವನ್