ಬೇಲೂರು ನಲ್ಲಿ ಒಂದು ದಿನ

ಬೇಲೂರು ನಲ್ಲಿ ಒಂದು ದಿನ

ಕವನ

ಕಾಲ

ಮುಂದಕ್ಕೆ ನಡೆದುಹೋಗಿದೆ ಎನ್ನುವುದಕ್ಕೆ

ಚಲಿಸದೇ ನಿಂತಿರುವ ಈ ಶಿಲ್ಪಗಳೇ ಸಾಕ್ಷಿ

ನಿಷ್ಕರುಣಿಯಾದ ಕಾಲಕ್ಕಿಂತಲೂ

ಚತುರನಾದ ಶಿಲ್ಪಿಯ ಉಳಿಯ ಹೊಡತವೇ ಮೇಲು!

 

ಬೇಲೂರು ಚೆನ್ನಕೇಶವ

ಮುಗುಳ್ನಗುವಿನಿಂದ ನಿಂತಿದ್ದಾನೆ

ಶತಾಬ್ದಗಳು ಉರುಳಿಹೋದರೂ

ಸಾಮ್ರಾಜ್ಯಗಳು ಕಳಚಿಬಿದ್ದರೂ

ಸುತ್ತೂ ಇರುವ ಶಿಲ್ಪಗಳು ಮತ್ತೇ ಕಲ್ಲುಗಳಾಗುತಿದ್ದರೂ

ಯಾಕೇ ಆ ಅಮಲಿನವಾದ ನಗು?

ಎಷ್ಟು ಕೇಳಿದರೂ, ಹೇಗೆ ಕೇಳಿದರೂ

ಅವನು ಬಾಯಿ ಬಿಡುತಿಲ್ಲ!

"ಇದೇ ದರ್ಪಣ ಸುಂದರಿ"

ಹೌದಾ?

ಕಣ್ಣಿಗೆ ಜೀವವು ಮರುಕಳಿಸಿದಂತಾಯಿತು

ಇಷ್ಟೂ ದಿನಗಳು ಮನೆಯಲ್ಲಿನ ದರ್ಪಣವನ್ನು

ಎಸ್ಟು ಹಗುರವಾಗಿ ಕಾಣುತ್ತಿದ್ದೆ?

ಒಂದು ಪ್ರಾಣವಿಲ್ಲದ ವಸ್ತು

ಮತ್ತೊಂದು ಪ್ರಾಣವಿಲ್ಲದ ವಸ್ತುವಿನಲ್ಲಿ

ಪ್ರಾಣವನ್ನು ತುಂಬುವುದೇ?

ಏನೋ...ಬೇಲೂರಿ ಶಿಲ್ಪಿಗಳ ಉಳಿಗಳನ್ನೇ ಕೇಳಬೇಕು!

ಕಲ್ಪನೆಗಳು ನಿಜವಾಗುತ್ತವೇ?

ಹೌದು ಎನ್ನುತ್ತಾಯಿದೆ ಬೇಲೂರು.

ಪ್ರತಿ ಅಕ್ಷರದ ಬೆಲೆ ತಿಳಿದಿರುವ

ಕವಿ ಯಂತೇ

ಕಾಣುತ್ತಾನೆ ಬೇಲೂರಿನ ಶಿಲ್ಪಿ!

ಶಿಲೆಯ ಮೇಲೆ

ಉಳಿ ಯಿಂದ ಬರೆದ

ನಿಶ್ಶಬ್ದ ಕಾವ್ಯ

ಬೇಲೂರು.