ನೆಮ್ಮದಿಯ ನಿಟ್ಟುಸಿರಿಗೆ ಜಾಗವೆಲ್ಲಿ....?
ಕವನ
ಅದೆಷ್ಟೋ ವಸಂತಗಳು
ಬಂದು ಹೋದವು
ಅದೇ ಅರುಣ ಕಿರಣಗಳ ಉದಯ
ನೆತ್ತಿಯ ಮೇಲೆ ನಿಂತ ಸೂರ್ಯ
ನಸುಗೆಂಪಿನ ಮುಸ್ಸಂಜೆ
ಸೂರ್ಯಾಸ್ತದಲಿ ಬೆಳಕಿನ ರಾತ್ರಿ
ನಿನ್ನೆಯ ಕಹಿನೆನಪುಗಳು
ಇಂದಿನ ಸುಂದರ ಕನಸು
ಇಂದಿನ ಭಗ್ನ ಜೀವನ
ಭವಿಷ್ಯದ ಕತ್ತಲ ದಾರಿ
ಉರುಳಿ ಹೋದ ವಸಂತಗಳು
ಹುದುಗಿ ಹೋದ ವರ್ತಮಾನಗಳು
ಚಿಂತೆಗಳಿಸುವ ನಾಳೆಗಳು
ಮೌನದಲ್ಲೇ ಮುಗಿದು ಹೋದ
ಈ ದಿನಗಳು......
ಎಳೆ ಎಳೆಯಾಗಿ ನುಸುಳಿ
ಬರುವ ದಿನಗಳೆಲ್ಲಿ...?
ಪಕಳೆಗಳಂತೆ ಉದುರುವ ನೆನಪುಗಳೆಲ್ಲಿ...?
ಎಡಬಿಡದೆ ಕಾಡುವ
ಈ ಸಂಸಾರದಲ್ಲಿ
ನೆಮ್ಮದಿಯ ನಿಟ್ಟುಸಿರಿಗೆ ಜಾಗವೆಲ್ಲಿ...?