' ನೀನು ನನ್ನ ಕೈ ಬಿಡೆ ಚಿನ್ನ '

' ನೀನು ನನ್ನ ಕೈ ಬಿಡೆ ಚಿನ್ನ '

ಕವನ

 

 
ನಿನ್ನ ಒಂದು ನೋಟವು ಸಾಕು 
ನನ್ನ ಎದೆಯು ಕಂಪಿಸಲು 
ನೀನು ಒಮ್ಮೆ ನಕ್ಕರೆ ಸಾಕು
ಎದೆಯ ಭಾರ ಇಳಿಯುವುದು
 
ನಿನ್ನ ಮುಂದೆ ನನ್ನ ಭಾವ 
ಹೇಳಬೇಕು ನನಗಿಷ್ಟ
ನಾನು ನೀನು ಇಬ್ಬರೇ ಕೂತು 
ಮಾತನಾಡುವುದು ಬಲು ಕಷ್ಟ
 
ನನ್ನ ಪ್ರೇಮ ದಿಬ್ಬಣ ನಿನ್ನ 
ಮನದ ಹಾದಿ ಹಿಡಿದಿಹುದು
ಇನ್ನು ಕೆಲವು ಕ್ಷಣವೇ ಚಿನ್ನ 
ಕದವ ತಟ್ಟಿ ಕೂಗುವುದು 
 
ನನ್ನ ಪ್ರೇಮದೂರಿಗೆ ನಿನ್ನ 
ಕರೆದು ನಾನು ತರಲಿಹೆನು 
ನೀನು ನನ್ನ ಕೈ ಬಿಡೆ ಚಿನ್ನ 
ಯಮನ ಸಂಗ ಮಾಡುವೆನು
 
                                                  - ವಿ ಸ ಪ