ಕೋಟ್ಟಿ(ತಿ)-ಅಧಿ-ಪತಿ

ಕೋಟ್ಟಿ(ತಿ)-ಅಧಿ-ಪತಿ

ಕವನ

                                                  ಕೋಟ್ಟಿ(ತಿ)-ಅಧಿ-ಪತಿ
 
ಪುನಿತ್ : ಪ್ರಿಯ ಆಡಿಯನ್ಸ್ ಇವತು ನಮ್ಮ ಜೊತೆ ಕೋಟ್ಟಿಯಾದಿಪತಿ ಆಡೋಕೆ ಬಂದ್ಯಾ ಜಿಲ್ಲೆಯ ಬಸರಾಳು ಗ್ರಾಮದ ಪಟೇಲರೂ ಬಂದಿದ್ದಾರೆ , ಅವರನ್ನ ಸ್ವಾಗತಿಸೋಣ.
ಪಟೇಲರೇ ಬನ್ನಿ ಲೆಟ್ಸ್ ಪ್ಲೇ ಕನ್ನಡದ ಕೋಟ್ಟಿಯಾದಿಪತಿ.
ಪಟೇಲರೇ ಹಾಟ್ ಸೀಟ್ಗೆ ಸೆಲೆಕ್ಟ್ ಆಗಿ ಬಂದಿದ್ದೀರಾ ,
ಪಟೇಲ : "ಎಂಥ ಮಾತು ಅಂತ ಆಡುತ್ತಿರಾ , ಸೀಟ್ ಎಷ್ಟು ಮೆತ್ತಗೆ ತಣ್ಣಗೆ ಚೆನ್ನಾಗ್ ಅದೇ , ಅದನ ಹೋಗಿ ಹಾಟ್ ಸೀಟ್ ಅಂತಿರಲ್ಲ, ಆಟ್ಟ ಶುರುವಾದಮೇಲೆ ಏನಾದರು ಅಡಿಗೆ ಕೆಂಡಗಿಂಡ ಮಾಡ್ಗುತೀರಾ ಹೆಂಗೆ ಹೇಳ್ಳಿರಪ್ಪ , ಇರೋದು ಒಂದೇ ಬ್ಯಾಕ್ಉ ಇನ್ಸೂರೆನ್ಸ್ ಬೇರೆ ಮಾಡಿಸಿಲ್ಲ ಅದಕ್ಕೆ "
 
ಪುನಿತ್: ಅಯ್ಯೋ ಪಟೇಲರೆ ac ಹಾಕ್ಕಿರೋದಕೆ ಸೀಟ್ ತಣ್ಣಗೆ ಇದೆ ಅಸ್ಟೇ, ಇವಾಗ ಆಟ್ಟ ಶುರು ಮಾಡೋಣ , ಪಟೇಲರೇ ನಿಮ್ಮಗೆ ಒಂದು ಕೋಟ್ಟಿ ಬಂದರೆ ಏನು ಮಾಡುತ್ತಿರ?
ಪಟೇಲ:" ಮಹಿಳ ಮತ್ತು ಮಕ್ಕಳ ಕಲ್ಯಾಣ ಸಂಘ ಕಟ್ಟುತೀನೀ ಬುದ್ದಿ"
ಪುನಿತ್ : ನಿಮ್ಮ ಮೊದಲ ಪ್ರಶ್ನೆ ನಿಮ್ಮ ಮುಂದೆ ಇಲ್ಲಿ ಇದೆ, ಪಟೇಲ
Q೧: ನಿಮ್ಮಗೆ ಎಷ್ಟು ಜನ ಮಕ್ಕಳು ? , ನಿಮ್ಮ ಆಪ್ಷನ್  a. ಒಂದು b. ಮೂರು c. ಹತ್ತು d. ನನ್ನಗೆ ಗೋತ್ತಿಲ್ಲ
ಪಟೇಲ: "ಫೋನೋ ಫ್ರೆಂಡ್ ಆಪ್ಷನ್ ಬೇಕು ಬುದ್ದಿ "
ಪುನಿತ್: are ಯು sure (ಶುರು)?
ಪಟೇಲ : "ಏನ್ ಶುರು ಮಾಡಬೇಕೋ ತಿಳಿಲ್ಲಿಲರ "
ಪುನಿತ್ : ಸಾರೀ ಗ್ಯಾರಂಟಿನ ಫೋನೋ ಫ್ರೆಂಡ್ ಆಪ್ಷನ್ ಬೇಕು ಅಂತ
ಪಟೇಲ : "ಹೌದು ಬುದ್ದಿ"
ಪುನಿತ್: ಯಾರಿಗೆ ಕರೆ ಮಾಡೋದು ಹೇಳಿ ಪಟೇಲರೇ
ಪಟೇಲ: "ಚೆನ್ನಿಗೆ "
.........
ಪುನಿತ್ : ಪಟೇಲರೇ ನಿಮ್ಮ ಟೈಮ್ ಸ್ಟಾರ್ಟ್ಸ್ ನೌ
ಪಟೇಲ: "ಹೇಯ್ ಚೆನ್ನಿ ನನ್ನಗೆ ಎಷ್ಟು ಜನ ಮಕ್ಕಳೇ "
ಚೆನ್ನಿ :"ಹೇಯ್ ಪಟೇಲ ಹೋತ್ತಾರೆ ಯಡಗಡೆ ಎದ್ದ ಹೆಂಗೇ, ನಮ್ಮರು ಎಲ್ಲಾ ರಸ್ತೆ ಮಕ್ಕಳು ನಿನ್ನ ಅಪ್ಪ ಅಂತಾವೆ , ಅದು ಎಷ್ಟು ಜನ ಮಾಡಿಕೊಂಡು ಇದಿಯೋ ಯಾವಳಿಗೆ ಗೊತ್ತು , ಮೂದೇವಿ ಮಡಗು ಫೋನ ".
ಪಟೇಲ:" ಹತ್ತು ಲಾಕ್ ಮಾಡಿ ಬುದ್ದಿ "
........... :) :) :)

(ಪುನಿತ್ ಒಳ್ಳಗೊಳಗೆ ಅದಕೆ ಪಟೇಲರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಘ ಶುರು ಮಾಡ್ತೀನಿ ಅಂತ ಹೇಳಿದು , ಬಲೇ ಕಿಲಾಡಿ )


ಪುನಿತ್ : ಪಟೇಲರೇ ಸರಿಯಾದ ಉತ್ತರ ಕೊಟ್ಟು ಒಂದು ಸಾವಿರ ಗೆದ್ದಿದಿರ , ವಂದನೆಗಳು, ನಿಮ್ಮ ಏರಡನೆ ಪ್ರಶ್ನೆ ನಿಮ್ಮ ಮುಂದೆ
Q೨ : ನಿಮ್ಮ ಊರಿನ ಬಸಮ್ಮ ನಿಮ್ಮಗೆ i ಲವ್ ಯು ಹೇಳ್ಳಿದು ಯಾವಾಗ ? (ಆಪ್ಷನ್ ಹೇಳಿದ ಮೇಲೆ)
ಪಟೇಲ : "ಶ್ರೀನಿವಾಸನ ಹೆಣ್ಣ ಹೊತ್ತಿಕೊಂಡು ಹೋಗೋವಾಗ"

ಪುನಿತ್: ಪಟೇಲರೇ ಕರೆಕ್ಟ್ ಉತ್ತರ ನೀಡಿ ಎರಡು ಸಾವಿರ ಗೆದಿದ್ದಿರ ವಂದನೆಗಳು , ಅಲ್ಲಾರೀ ನಿಮ್ಮದು ಒಂದು ಥರ ಲವ್ ಸ್ಟೋರಿ ಬಿಡ್ರೀ , ಯಾರದೋ ಹೆಣ್ಣ ಎತ್ತಿಕೊಂಡು ಹೋಗೋವಾಗ ಪ್ರೊಪೋಸ್ ಮಾಡಿದ್ದಾರೆ ರೀಯಲ್ಲಿ ಗ್ರೇಟ್ ಬಿಡ್ರಿರೀರಿ .


ಪಟೇಲ: " ನೀವು ಒಳ್ಳೆ ಚೆಂದಾಕೆ ಹೇಳಿದಿರಿ ಬಿಡಿ ಬುದ್ದಿ , ಶ್ರೀನವಾಸಪ್ಪ ಬೇರೆ ಯಾರೋ ಅಲ್ಲ ಆ ಬಸಮ್ಮನ ಗಂಡನೆಯಾ ".

:) :) :) :)


ಪುನಿತ್ : ಪಟೇಲರೇ ಈ ಭಾರಿ ನೀವು ಎರಡು ಕ್ಷೇತ್ರದಲ್ಲಿ ಎಲೆಕ್ಷನ್ ಗೆ ನಿಂತಿದಿರ ಅಂಥ ಗೊತ್ತು ಆಯಿತು , ಯಾವ ಕ್ಷೇತ್ರಗಳು ಅವು .


ಪಟೇಲ: "ತೆಗಿರಿ ಬುದ್ದಿ , ಒಂದಕ್ಕೆ ಆದರೆ ನಿಂತ್ಕೋ ಬೇಕು , ಎರಡಕ್ಕೆ ಆದರೆ ಕುತ್ತ್ಕೋ ಬೇಕು , ಎರಡಕ್ಕೆ ನಿಂತಿಕೊಂಡಅವರನ ನಾನು ನೋಡೇ ಇಲ್ಲ , ನಾನು ಮಾತ್ರ ಒಂದೇ ಕ್ಷೇತ್ರದಲ್ಲಿ ನಿಲ್ಲೋದು"


ಪುನಿತ್ : ಪಟೇಲರೇ ಆಟ ಮುಂದುವರಿಸೋಣ , ನಿಮ್ಮ ಮುಂದಿನ ಪ್ರಶ್ನೆ ಇಲ್ಲಿದೆ ,
Q ೩: ನಿಮ್ಮ ಊರಿನ ಸೇತುವೆ ಕಟ್ಟೋಕೆ ಸರ್ಕಾರ ಕೊಟ್ಟ ಹಣ ಎಷ್ಟು ? ,
ನಿಮ್ಮ ಆಪ್ಷನ್ a. ಮೂರು ಕೋಟ್ಟಿ ,  b . ಆರು ಕೋಟ್ಟಿ  , c . ನಾಲ್ಕು ಕೋಟ್ಟಿ  , d . ಹತ್ತು ಕೋಟ್ಟಿ .


ಪಟೇಲ : " ನಾಲ್ಕು ಕೋಟ್ಟಿ  ಬುದ್ದಿ , ಲಾಕ್ ಮಾಡಿ ಮತ್ತೆ "
ಪುನಿತ್ : " ಗ್ಯಾರಂಟಿನ ಪಟೇಲರೇ "
ಪಟೇಲ : " ಗ್ಯಾರಂಟಿ ಬುದ್ದಿ :
ಪುನಿತ್:  i ಅಂ ಸಾರೀ  , ಪಟೇಲರೇ ನಿಮ್ಮ ಉತ್ತರ ತಪ್ಪಾಗಿದೆ , ಸರಿಯಾದ ಉತ್ತರ ಆರು ಕೋಟ್ಟಿ.
ಪಟೇಲ : "ಎಲ್ಲಾ ಬಡ್ಡಿ ಮಗನೇ ಶೆಟ್ಟಿ ನನ್ನಗೆ ಯಾಮಾರಿಸಿ ಬಿಟ್ಟವನಾ"
ಪುನಿತ್ : ಏನ್ ಪಟೇಲರೇ ಅದು ಯಾರನೋ ಬೈತಾ ಇದ್ದೀರಾ
ಪಟೇಲ : " ನಮ್ಮ ಊರಿನ ಶೆಟ್ಟಿ ನನ್ನಗೆ ಬರೀ ನಾಲ್ಕು ಕೋಟ್ಟಿ sanctionಉ ಆಗದೇ ಅಂತ ಬುಲ್ಡೆ ಬಿಟ್ಟವನೇ , ಬಿಟ್ಟೇನ ಅವನ , ಸರಿ ಬುದ್ದಿ ನಿಮ್ಮ ಜೊತೆ ಆಟ ಆಡಿ ಬಲ್ಲೋ ಸಂತೋಸ ಆಗ್ ಬಿಟ್ಟೋಗದೆ , ಬತ್ತೀನಿ "
 
                                                                                   ಬರೆದ ಮಾನವಾದಮ ,
                                                                                                     ಹರೀಶ್ ಎಸ್ ಕೆ.