ಭೂಜಿಸದಿರಿ ಭುವನೇಶ್ವರಿಯನ್ನು !

ಭೂಜಿಸದಿರಿ ಭುವನೇಶ್ವರಿಯನ್ನು !

ಭೂಜಿಸದಿರಿ ಭುವನೇಶ್ವರಿಯನ್ನು !

ಡಾ : ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ!

ಸಕಲ ಜೀವಿಗಳಿಗೆ ಅಶ್ರಯದಾತೆ, ಆದಿಶಕ್ತಿ, ಪರಾಶಕ್ತಿ, ಪ್ರಕೃತಿ, ಜಗನ್ಮಾತೆ, ಭುವನೇಶ್ವರಿ ಮುಂತಾದ ಸಹಸ್ರನಾಮಾವಳಿಯಿಂದ ಕರೆಯಲ್ಪಡುವ ಭೂದೇವಿಯನ್ನು ಎಲ್ಲರೂ ಹಂಚಿಕೊಳ್ಳೋಣ. ಮುಂದಿನಪೀಳಿಗೆಗೂ ಉಳಿಸೋಣ. ಈಗಷ್ಟೇ ಅಂತರರಾಷ್ಟ್ರೀಯ "ಅರ್ತ್ ಡೇ" ಅರ್ಥಾತ್ "ಭೂಮಿಯ ದಿನ" ಆಚರಣೆ ನೆನ್ನೇ ತಾನೇ ಅಂದರೆ ಈ ಮಾಸದ ಏಪ್ರಲ್ - ೨೨ ರಂದು ಜರುಗಿದೆ. ಭೂಮಿಯ ಆರೋಗ್ಯವನ್ನು ಕಾಪಾಡುವ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸಲು ಸಹಾಯವಾಗಿರುವ ಕಡೇಪಕ್ಷ ವರುಷಕ್ಕೆ ಒಂದು ದಿನವಾದರೂ ಆಗಿದೆ. ಒಂದೆರಡು ತಾಸಾದರೂ ಅದರ ಬಗ್ಗೆ ಚಿಂತಿಸಿ, ಮನುಕುಲದ ಬಾಂದವರು ಹೇಗೆ ಹಲವಾರು ವಿಧಗಳಿಂದ ಭೂಮಿಯ ರಕ್ಷಣೆ ಮಾಡಬಹುದಾಗಿದೆ. ವಿಚಾರಮಾಡೋಣ....

"ಪುರಾಣ ಹೇಳಕ್ಕೆ, ಬದನೆಕಾಯಿ ತಿನ್ನಕ್ಕೆ" ಅಂತ ನೀವೆಲ್ಲ ಅಂದು ಕೊಳ್ಳದೇ ಇರಲಿ ಅಂತ ನಾನು (ನಾವು) ಏನೇನು ಮಾಡ್ತೀನಿ ಭುವನೇಶ್ವರಿ ರಕ್ಷಣೆಗೆ ಅಂತ ಕೆಳಗೆ ಪಟ್ಟಿಮಾಡಿದೀನಿ. ನಿಜವಾಗಿ ಹೇಳ್ಬೇಕಾದ್ರೆ ಪುರಾಣ ಹೇಳೋವ್ರೆಲ್ಲ ಬದನೆಕಾಯಿ ಎಣಗಾಯಿ ತಿನ್ನದೇ ಇರ್ತಾರಾ? ಅದೊಂದು ಗಾದೆ ಅಷ್ಟೇ, ಈ ಗಾದೆ ನನಗನುವಾಗುವುದಿಲ್ಲ ಅನ್ನೋದೇ ಒಂದು ಸಮಧಾನ. ಮನೆಯಲ್ಲಿ ಮತ್ತು ನಮ್ಮ ಕೆಲಸದ ಸ್ಥಳಗಳಲ್ಲಿ ನಾವು ಏನೇನು ಮಾಡಬಹುದು ಅಂತ ಯೋಚಿಸಿದರೆ ನಮಗೇ ಅಚ್ಚರಿಯಾಗುತ್ತೆ......

ಕೆಲಸದ ಸ್ಥಳಗಳಲ್ಲಿ....

* ನಾವು ಉಪಯೋಗಿಸದ ಕೋಣೆಯೊಳಗೆ ದೀಪವನ್ನು ಆರಿಸಬಹುದು. (ನಮ್ಮ ಕಛೇರಿಯಲ್ಲಿ, ಎಲ್ಲ ಕೋಣೆಗಳಲ್ಲೂ ದೀಪ ಹಚ್ಚಿರುತ್ತೆ ಸಾಮಾನ್ಯವಾಗಿ. ನಾವು ಉಪಯೋಗಿಸುವಾಗ ದೀಪ ಹಚ್ಚಿಕೊಂಡು, ಬೇರೇ ಸಮಯದಲ್ಲಿ ಆರಿಸುವ ಅಭ್ಯಾಸ ಮಾಡಿಕೊಳ್ಳಬಹುದು)
* ಹೊರಗಡೆ ವಾತಾವರಣ ತಣ್ಣಗಿದ್ದಾಗ ಕಿಟಗಿಳನ್ನು ತೆಗೆದಿಡುವುದು, ಏ. ಸಿ. ಹಾಕುವುದರ ಬದಲು.
* ಸಾಮನುಗಳನ್ನು ಕೊಂಡಾಗ ಬರುವ ಕಾರ್ಡ್ಬೋಡ್ ಕಾರ್ಟನ್ ಗಳನ್ನು ರೀಸೈಕಲ್ ಮಾಡುವುದು ( ಸಾಮಾನ್ಯದ ಕಸದ ಬಿನ್ ಗೆ ಹಾಕದೇ)
* ಏನಾದರೂ ಟಿಪ್ಪಣಿ ಬರೆದುಕೊಡುವಾಗ ನೋಟ್ ಪ್ಯಾಡ್ ಬದಲು ಟೇಬಲ್ ಪೇಪರ್ ನ ಮೇಲೆ ಬರೆದು ಕೊಡಬಹುದು. (ಟೇಬಲ್ ಪೇಪರ್ ಖಡ್ಡಾಯವಾಗಿ ಹೇಗಿದ್ದರೂ ಉಪಯೋಗಿಸುತ್ತೇವೆ.)
* ಪೇಪರ್ ಟವಲ್ ಗಳನ್ನು ಕಂದು ಬಣ್ಣದ (ಅನ್ ಬ್ಲೀಚ್ಡ್) ಮತ್ತು ತೆಳುವಾಗಿರುವ , ಕಡಿಮೆ ಕಾಗದದಲ್ಲಿ ಮಾಡಿರುವ, ಮತ್ತು ಉದ್ಧೇಶವನ್ನು ಪೂರೈಸುವಂತಹದನ್ನು ಖರೀದಿ ಮಾಡುವುದು.
* ಎಲೆಕ್ತ್ರಾನಿಕ್ ವಸ್ಥುಗಳನ್ನು ಉಪಯೋಗಕ್ಕೆ ಬರದಾಗ, ಸರಿಯಾದ ರೀತಿಯಲ್ಲಿ ರೀಸೈಕಲ್ ಮಾಡುವುದು.
* ನಾವೀಗ ಪೇಪರ್ ಲೆಸ್ ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ಸ್ ಸಿಸ್ಟಮ್ ಉಪಯೋಗಿಸುವುದರಿಂದ, ಕಾಪಿ ಮಾಡುವುದು, ಪೇಪರ್ ಚಾರ್ಟ್ ಗಳಲ್ಲಿ ಪೇಪರ್ ಗಳನ್ನು ಬಳೆಸುವುದು, ಪ್ರಿಸ್ಕ್ರಿಪ್ಶನ್ ಕೂಡಾ ಎಲೆಕ್ಟ್ರಾನಿಕ್ ಮಾಡುವುದರಿಂದ ಪೇಪರ್, ಪೆನ್ನು, ಬೈಂಡರ್, ರೊಟ್ಟುಗಳ ಬಳಕೆ ಪೂರಾ ಕಡಿಮೆಯಾಗಿದೆ.

ಹೀಗೆ ಮುಂತಾದುವುಗಳಿಂದ ನಾವು ಕಡಿಮೆ ಮರಕಡಿದು, ಭೂಮಿಯ ಮೇಲಿರುವ ಈಕೋ ಸಿಸ್ಟಮ್ ಅನ್ನು ಕಾಪಾಡುವುದರಿಂದ, ಬಿಸಿಲು ತಾಪ ಕಡಿಮೆಯಾಗಿ ಹವಾಮಾನ ಆರೋಗ್ಯ ಸ್ಥಿತಿಗೆ ತರುವುದು ಸಾಧ್ಯವಾಗುತ್ತದೆ. ಇದು ಒಬ್ಬರಿಂದ ಆಗುವ ಕೆಲಸವಲ್ಲ. ಪ್ರತಿಯೊಬ್ಬರೂ, ಪ್ರತೀ ದೇಶದಲ್ಲೂ ತಮ್ಮ ಭೂಮಿ ಎಂಬ ಅಭಿಮಾನವಿಟ್ಟು ಮಾಡುವಂತಹದು. ಕೆಲವೊಮ್ಮೆ ಸರಕಾರದಿಂದ ಅಡಚಣೆ ಎಲ್ಲ ದೇಶಗಳಲ್ಲೂ ಕಾಣ ಬರುತ್ತದೆ. ಆದರೂ ಜನಸಾಮಾನ್ಯರ ಮಟ್ಟಿಗಾಗುವಷ್ಟಿಗಾದರೂ ಸಹಕರಿಸಿದರೂ ಹೆಚ್ಚುವರಿ ಫಲಿತಾಂಶ ವನ್ನು ನೋಡಬಹುದು!

ಮನೆಯಲ್ಲಿ ನಾವು ಮಾಡಬಹುದಾದ ಕೆಲವು ಸಣ್ಣ ಪುಟ್ಟ ಬದಲಾವಣೆಗಳು.....

* ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆಯ ಚೀಲ ಅಥವಾ ಕಾಗದದ ಚೀಲಗಳನ್ನು ಸಾಮಾನುಗಲನ್ನು ತರಲು ಉಪಯೋಗಿಸಬಹುದು.

ಮುಂದುವರೆಯುವುದು......
 

Comments

Submitted by lpitnal@gmail.com Wed, 04/24/2013 - 18:03

ಡಾ. ಮೀನಾರವರೇ, ಲಕ್ಷ್ಮೀಕಾಂತ ಇಟ್ನಾಳ ರ ನಮಸ್ಕಾರ. ತಮ್ಮ ಲೇಖನದಲ್ಲಿ ನಮೂದಿಸುತ್ತಿರುವ ಸಲಹೆಗಳು ತುಂಬ ಉಪಯುಕ್ತ ಹಾಗೂ ಆಚರಿಸಲು ಸರಳ. ಆದರೆ ಆಚರಿಸುವ ಮನಸ್ಸು ಬೇಕು. ಉಪಯುಕತ ಲೇಖನ ಮುಂದುವರೆಯಲಿ.ಧನ್ಯವಾದ.
Submitted by rasikathe Thu, 04/25/2013 - 02:01

In reply to by lpitnal@gmail.com

ಇಟ್ನಾಳರೆ, ನಮಸ್ಕಾರ‌. ಧನ್ಯವಾದಗಳು ನಿಮ್ಮ‌ ಪ್ರತಿಕ್ರಿಯೆಗೆ ನನ್ನಿಮ್ದ‌ ಸ್ವಲ್ಪನಾದರೂ ಬದಲಾವಣೆಯಾದರೂ ಅದು ಸಹಾಯವಾಗುತ್ತೆ ನಮ್ಮ‌ ಭೂಮಿಗೆ, ಅನ್ನೋ ಉದ್ಧೇಷದಿಮ್ದಶ್ಹ್ಟೆ ಮೀನಾ
Submitted by nageshamysore Wed, 04/24/2013 - 20:09

ನಮಸ್ಕಾರ ಡಾಕ್ಟರು ಮೀನಾ ಅವರೆ, ಚೆನ್ನಾಗಿದೆ. ನಾ ಕಂಡಂತೆ ಎಷ್ಟೊ ಕಂಪನಿಗಳಲ್ಲಿ ಈ ತರದ ಆಚರಣೆನ, ಬರಿ ಕಷ್ಟ ಕಾಲದಲ್ಲಿ ಮಾತ್ರ ಬಳಸೋಕೆ ಪ್ರಯತ್ನ ಪಡ್ತಾರೆ (ವೆಚ್ಚ ಉಳಿತಾಯಕ್ಕೆ). ಸದಾ ಕಾಲವೂ ಅನುಷ್ಟಾನಕ್ಕೆ ತಂದರೆ ಎಷ್ಟೊ ಉಪಯೋಗವಾಗುತ್ತೆ. ನಾಗೇಶ ಮೈಸೂರು, ಸಿಂಗಾಪುರದಿಂದ
Submitted by rasikathe Thu, 04/25/2013 - 02:02

In reply to by nageshamysore

ನಮಸ್ಕಾರ‌ ನಾಗೇಷ್ ಅವರೆ, ನಿಮ್ಮ‌ ಪ್ರತಿಕ್ರಿಯೆಗೆ ಧನ್ಯವಾದಗಳು! (ಏನೋ ಎಲ್ಲರ‌ ಕರ್ತವ್ಯದಮ್ತೆ ನನ್ನದೂ ಸ್ವಲ್ಪ‌ ಪ್ರಯತ್ನ‌ ಅಶ್ಹ್ಟೇ) ಮೀನಾ