ಅಮೂರ್ತ ಸ್ಪೂರ್ತಿ ಪುಸ್ತಕ ಎಲ್ಲರು ಓದಲೇಬೇಕಾದ ಪುಸ್ತಕ

ಅಮೂರ್ತ ಸ್ಪೂರ್ತಿ ಪುಸ್ತಕ ಎಲ್ಲರು ಓದಲೇಬೇಕಾದ ಪುಸ್ತಕ

 

 
ಈ ಜಗತ್ತು ಹಲವು ಪುಸ್ತಕಗಳು ಮತ್ತು ಅವುಗಳು ಹೇಳಿಕೊಡುವ ನೀತಿಯಿಂದ ನಡೆದಿದೆ. ನಾವು ಯಾರನ್ನು ರೊಲ್ ಮಾಡೆಲ್ ಎಂದು ಆರಿಸುವುದು ಎನ್ನುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಅದನ್ನು ಹುಡುಕುತ್ತ ಹೋದಾಗ ನನಗೆ ದೊರತ ಪುಸ್ತಕ ಅಮೂರ್ತ ಸ್ಪೂರ್ತಿ ಎಸ್.ಉಮೇಶ ಬರೆದ ಈ ಪುಸ್ತಕ ನಮ್ಮ ಜೀವನದಲ್ಲಿ ಯಾರನ್ನು ರೊಲ್ ಮಾಡೆಲ್ ಆಗಿ ನೋಎಬೇಕು ನಮ್ಮ ಸಾಧನೇಯ ಹಾದಿಯಲ್ಲಿ ಯಾರ ದಾರಿ ಯಾವ ದಾರಿ ಅನುಸರಿಸಬೇಕು ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವತ್ತ ಈ ಪುಸ್ತಕ ದಾರಿದೀಪವಾಗುತ್ತದೆ.
ಹದಿನಾರು ಅಧ್ಯಾಯಗಳು ನಮ್ಮನ್ನು ಓದಿಸಿಕೊಂಡು ಮನಮಿಡಿಯುವಂತೆ ಓದಿಸುತ್ತವೆ. ಪ್ರತಿಯೊಂದು ಅಧ್ಯಾಯ ಒಂದೊಂದು ಕ್ಷೇತ್ರ ಹಾಗೂ ವ್ಯಕ್ತಿಯ ಸಾಧನೆಯನ್ನು ಬಿಚ್ಚಿಟ್ಟು ಬದುಕುವ ಭರವಸೆಯನ್ನು ನೀಡುವಲ್ಲಿ ಯಶಸ್ಸು ಸಾಧಿಸುತ್ತವೆ. ನಮಗೆ ಇಷ್ಠವಾದ ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲಿ ಸಾಧನೆ ಮಾಡಬೇಕಾದ ಅಗತ್ಯ ಅನಿವಾರ್ಯವನ್ನು ಮನಮುಟ್ಟುವಂತೆ ಹೇಳುತ್ತವೆ.
ಓದುತ್ತ ಹೋದ ಹಾಗೆ ನಮ್ಮೊಳಗಿನ ವ್ಯಕ್ತಿಯೊಬ್ಬ ಎಂದು ನಿಂತು ಪ್ರಶ್ನಿಸುತ್ತಾನೆ. ನಿನ್ನ ಸಾಧನೆಯ ಹಾದಿ ಯವುದು ಗುರುತಿಸು ಅದರಿಂದ ನಿನ್ನ ಜೀವನ ಮುನ್ನಡೆಸು ಎಂಬ ಕಲ್ಪನೆ ಕೊಡುತ್ತಾನೆ. ಸಾಧಿಸುವ ಆಸೆ ಹುಟ್ಟಿಸುತ್ತಾನೆ.
ಜಗತ್ತಿನ ಅತ್ಯಂತ ದೊಡ್ಡ ದೊಡ್ಡ ಸಾಧನೆಗಳ ಸಾಧಕರ ಯಶೋಗಾತೆ ಈ ಪುಸ್ತಕದ ಮೂಲವಸ್ತು ಅವರ ಜೀವನದ ಏಳುಬೀಳು ಅವರ ಆಸೆ ಆಕಾಂಕ್ಷೆ ಅವರು ಸಾಧಿಸಿದ ರೀತಿ ಅವರ ಜೀವನದಲ್ಲಿ ಅಂದುಕೊಂಡು ಅನುಸರಿಸಿಕೊಂಡು ಬಂದ ನೀತಿ ಎಲ್ಲವನ್ನು ಬಿಡಿಬಿಡಿಯಾಗಿ ಹೇಳುವತ್ತ ಈ ಪುಸ್ತಕ ಚಲಿಸುತ್ತದೆ.
ವಿಶ್ವೇಶ್ವರ ಭಟ್ ರ ಮುನ್ನುಡಿ ಪ್ರಚೋಧನೆ ನೀಡುತ್ತದೆ. ಈ ಕಥೆಗಳ ಪದಗಳು ಯುವಶಕ್ತಿಗೆ ಆಶಾಭಾವನೆ ತರೆಸಿ ಸಾಧಿಸುವ ಹಾದಿಯ ಕಡೆಗೆ ಮನಸ್ಸು ಮಾಡುವಂತೆ ಪ್ರೇರೆಪಿಸುತ್ತದೆ.
ನೂರಾ ಇಪ್ಪತೈದು ರೂಪಾಯಿಯಲ್ಲಿ ಸಾಧಿಸುವ ಸಾವಿರ ದಾರಿಗಳನ್ನು ಹೇಳುವ ಈ ಪುಸ್ತಕ ನಿಜಕ್ಕೂ ಮೆಚ್ಚುವಂತದ್ದು ಬರಿ ತಳುಕು ಬಳುಕು ತೋರಿಸಿ ಮಾರಾಟದ ದಿಕ್ಕಿನಲ್ಲಿ ಹೊರಬರುತ್ತಿರುವ ಅನೇಕ ಪುಸ್ತಕಗಳಿಗೆ ಇದು ಮಾದರಿ ಪುಸ್ತಕ ಎಂದರೆ ತಪ್ಪಾಗದು. ದಾತ್ರಿ ಪ್ರಕಾಶನದಲ್ಲಿ ಮೂಡಿಬಂದ ಮೂರನೆ ಮುತ್ತು ಈ ಪುಸ್ತಕ ಸಾಗರದ ಸಾವಿರಾರು ಮುತ್ತಿನ ಚಿಪ್ಪುಗಳಲ್ಲಿ ಅತ್ಯಂತ ಸುಂದರ ಚಿಪ್ಪು ಇದು ಎನ್ನುವುದು ನನ್ನ ಭಾವನೆ......