ಕವನ
ತುಂಬಿ ಹರಿವ ನದಿಯ ಮಟ್ಟಕ್ಕಿಂತ
ಎತ್ತರದ ಗುಡ್ಡ
ಮೇಲೆ ಮುಗಿಲಿನಲ್ಲಿ
ಮನೆ ಕಟ್ಟುವ ಬಾನ ಹಕ್ಕಿಗಳ
ನೀಲಿ ದಾರಿಯ ಮನೆಗಳು
ಕಡಲ ಮೇಲೆ ತೇಲುವ ತೆಪ್ಪ ದೋಣಿ
ಕಪ್ಪು ಹಡಗು , ದಟ್ಟ ಬಿಳುಪಿನ ತೊರೆ
ತೊರೆ ನೀರೊಳಗೇ ತೇಲುವ ಮನೆಗಳು
ತದಡಿಗೆ ಬಂದ ಹಡಗು
ಊರೇ ಕಾಣದ ಬಂದರಿನ ಮನೆಗಳು
ಒಡಲೇ ತೂಗುವ
ದಟ್ಟ ಕಾಡಿನ ಗಿರಿಶಿಖರದ ಹೆಬ್ಬಂಡೆ
ಮರದ ತುದಿಯಲ್ಲಿ ತೂಗುವ
ಕೊಂಬೆ ಗಿಳಿವಿಂಡು
ಹಸಿರು ದಾರಿಯ ಹೊಲಗದ್ದೆ
ಮೋಡ ಕವಿದ
ಬಿಸಿಲೇ ಕಾಣದ ವನಗಳು
ತೆಳು ಮೋಡದ ಕೆಳಗೆ
ಧೂಳು ಚೆಲ್ಲುವ ಹೊಗೆಯ ಬಣ್ಣದ ನೆರಳು
ಬಲೆ ಬೀಸಿ ಮೀನು ಹಿಡಿಯುವ
ಶ್ರಮದ ಕೈಗಳೇ
ಬೆರಗುಗೊಳಿಸುವ ಫಲಗಳು
ದುಡಿದು ದುಡಿದ ತೋಳು ತೆಕ್ಕೆಗೆ
ಸೋಲು ಬಂದರೂ
ದುಡಿದುಡಿದೂ ಸಾಯುವ ಜೀವಗಳೇ
ದೇವರಿದ್ದಾನು ಇಲ್ಲೇ .....
ಜಲ್ಲಿ ಕಲ್ಲೊಳಗೆ
ಕೊನೆಯಾಗುವುದು ಬದುಕು ಮಣ್ಣೊಳಗೇ...!