ಗೂಗಲನಲ್ಲಿ ವಿಶ್ವ ಭೂ ದಿನ
ಮೊನ್ನೆ ದಿನಾಂಕ:22-04-2013 ರಂದು ವಿಶ್ವ ಭೂ ದಿನದ ಕುರಿತು ಪತ್ರಿಕೆ ಓದಿದೆ ಎಲ್ಲಾ ದಿನಾಚರಣೆಯಂತೆ ಇದು ಒಂದು ದಿನಾಚರಣೆ ಎಂದು ತಿಳಿದು ಸುಮ್ಮನಾಗಿದ್ದೆ ಆದರೆ ಅಂದು ಸಾಯಂಕಾಲ ಕಂಪ್ಯೂಟ ಪರದೆಯಲ್ಲಿ ಅಂತರ ಜಾಲದ ಸಂಪರ್ಕದ ಕೊಂಡಿ ಗೂಗಲನವರು ವಿನ್ಯಾಸಗೊಳಿಸಿದ ವಿಶ್ವ ಭೂ ದಿನದ ಗ್ರಾಫಿಕ್ಸ ಚಿತ್ರದಲ್ಲಿ ಒಂದು ಉತ್ತಮ ಪರಿಸರದಿಂದ ಕೂಡಿದ ಸುಂದರ ಚಿತ್ರವನ್ನು ನೋಡಿದ ತಕ್ಷಣ ಈ ವರ್ಷ ಬೆಸಿಗೆ ಬಿಸಿಲ ಬೇಗೆಯಲ್ಲಿ ಸುಮಾರು 35 ವರ್ಷಗಳ ಹಿಂದೆ ನಮ್ಮ ಬಾಲ್ಯದ ಜಿವನದ ಚಿತ್ರಣ ಕಣ್ ಮುಂದೆ ಬಂದು ನಿಂತಿತು,ಏಕೆಂದರೇ ಗೂಗಲನಲ್ಲಿ ಇರುವಂತೆ ನೇಲ, ಜಲ,ಜಲಚರ,ಪಕ್ಷಿ,ಬ್ರಹ್ಮಾಂಡದಲ್ಲಿನ ಸಕಲ ಜಿವರಾಶಿಗಳು ಹಾಗೂ ಭೂ ಪರಿಸರವನ್ನು ನೋಡಿದಾಗ ಅಂದು ನಾವು ಶಾಲೆಗೆ ರಜೆ ನೀಡಿದ ತಕ್ಷಣ ಪಡುತ್ತಿದ್ದ ಪ್ರಕೃತಿಯ ಸೊಬಗು ಹಾಗೂ ಹಳ್ಳಿಯ ಪಕ್ಕದಲ್ಲಿಯೇ ಸದಾ ಜುಳು ಜುಳು ಹರಿಯುವ ಹಳ್ಳ ಅದರಲ್ಲಿ ಈಜಾಡಿದ ನೆನಪು ಸುರಳಿಯಾಗಿ ಬಿಚ್ಚತೊಡಗಿತು,ಅದರಲ್ಲಿ ಅಂದು ನಾವು ಏಪ್ರಿಲ್ ತಿಂಗಳು ಬಂತೆಂದರೇ ಖುಷಿಯೇ ಖುಷಿ ಏಕೆಂದರೇ ಸದಾ ಹರಿಯುವ ಹಳ್ಳದಲ್ಲಿ ದಿನಕ್ಕೆ ಸುಮಾರು 2 ಗಂಟೆಗಳ ಕಾಲ ಈಜಾಡುವುದು ಅದಕ್ಕೂ ಮುಂಚೆ ನಾವುಗಳು ಬೆಳಿಗ್ಗೆ ಅಮ್ಮನ ಆದೇಶದಂತೆ ತೋಟದಲ್ಲಿರುವ ಅಪ್ಪನಿಗೆ ಬುತ್ತಿ ಕೊಟ್ಟುಬರುವದು ನಮ್ಮ ಕೆಲಸವಾಗಿತ್ತು ತೋಟವೆಂದರೇ ಡಿಸೇಲ ಇಂಜಿನಿಂದ ನೀರೆತ್ತುವ ಮೂಲಕ ತರಕಾರಿ.ನಿಂಬೆ.ಸಿಬೆ ಗಿಡಗಳಿಂದ ಕೂಡಿರುವ ಚಿಕ್ಕ ತೋಟವಾಗಿತ್ತು.ತೋಟದಲ್ಲಿ ನೀರಿನ ಸೌಕರ್ಯ ಅಂದು ಸಾಕಾಗುವಷ್ಟು ನೀರಿರುತ್ತಿತ್ತು ಏಕೆಂದರೇ ಈಗಿನಂತೆ ಅಂದು ಇನ್ನು ವಿದ್ಯುತ್ ಸಂಪರ್ಕ ಪಡೆದ ಪಂಪಸೆಟ್ ಗಳು,ಕೊಳವೆ ಬಾವಿ ಇದ್ದಿರಲಿಲ್ಲಾ ಈಗಾಗಿ ಅಂತರ ಜಲದ ಪ್ರಮಾಣ ಗಣನಿಯವಾಗಿತ್ತು ನಾವುಗಳು ಅಪ್ಪನಿಗೆ ಬುತ್ತಿ ಕೊಟ್ಟು ನಮ್ಮ ತೋಟದಲ್ಲಿರು ಅನೇಕ ಜಾತಿಯ ಗುಬ್ಬಚ್ಚಿಗಳು,ಗಿಣಿಗಳು.ಕೋಗಿಲೆಗಳು.ಕೆಂಬೂತಗಳು.ಗೊರವಂಕಗಳ ಕಲರವದಲ್ಲಿ ಸಂತೋಷಪಡುತ್ತಿದ್ದೇವು, ನಮ್ಮ ತೋಟದ ಅನತಿ ದೂರದಲ್ಲಿಯೇ ಸಾಬರ ತೋಟದಲ್ಲಿ ಬಾವಿಯಿಂದ (ಮಟ್ಟಿ ಬಾರಿ ವಿಧಾನ) ಎತ್ತುಗಳನ್ನು ಬಳಸಿ ನೀರೆತ್ತುವದನ್ನು ನೋಡಲಿಕ್ಕೆ ಹೊಗುತ್ತಿದ್ದೇವು ಅದು ತುಂಬಾ ಮನರಂಜನೆ ಸಿಗುವ ಕೆಲಸವಾಗಿತ್ತು, ಹಾಗೆಯೇ ಅನೆಕ ವೈವಿಧ್ಯಮಯದಿಂದ ಕೂಡಿದ ಅಂದಿನ ಪರಿಸರ ಇಂದು ಆದುನಿಕತೆಯ ಹೆಸರಿನಲ್ಲಿ ಎಲ್ಲಾ ಹಾಳಗಿ ಹೋಗಿದೆ,ಸದಾ ತುಂಬಿ ಹರಿಯುವ ಹಳ್ಳದಲ್ಲಿ ಒಂದು ಹನಿ ನೀರಿಲ್ಲಾ ಏಕೆಂದರೇ ಅದರಲ್ಲಿರು ನೀರನ್ನು ಬಳಕೆ ಮಾಡಿಕೊಳ್ಳುವದೊಂದೆ ಎಲ್ಲರ ಕೆಲಸವಾಯಿತು.ಅದಕ್ಕೆ ಪುನಃ ಜೀವ ತುಂಬುವ ಕೆಲಸವಾಗಲಿಲ್ಲಾ ಆಗುತ್ತಿಲ್ಲಾ ಮರಗಳಂತು ಹೇಳ ಹೆಸರಿಲ್ಲದೇ ಹಾಳಾಗಿ ಹೋಗಿವೇ.ಅಂತರ ಜಲವು ಅಷ್ಟೆ ತುಂಬಾ ಕುಸಿದು ಆತಂಕ ಮೂಡಿಸಿದೆ ಕೇವಲ ವಿಶ್ವ ಭೂ ದಿನದಂದು ಅದರ ರಕ್ಷಣೆ ಮಾತಾನಾಡುವ ನಾವುಗಳು ಇಂದಿನಿಂದಲೇ ಕಟಿಬದ್ದರಾಗಿ ಭೂಮಿಯಿಂದ ಪಡೆಯವ ಸಂಪತ್ತಿಗೆ ನಮ್ಮಿಂದ ಅಲ್ಪ ಪ್ರಮಾಣದ ಕೊಡುಗೆ ನೀಡಬೇಕು ಎನ್ನುವ ಬದ್ದತೆ ಪ್ರತಿಯೋಬ್ಬರಿಗೂ ಅವಶ್ಯಕತೆ ಇದೇ ಬನ್ನಿ ಹಾಗೇ ನಮ್ಮ ಭೂಮಿಯನ್ನು ರಕ್ಷಿಸೋಣ.
ಬರೆದರೇ ಬಹಳಷ್ಟಿದೆ ಬರಹಕ್ಕೆ ತಮ್ಮ ಪ್ರತಿಕ್ರಿಯೇ ತಿಳಿಸಿದರೇ ಮುಂದೆ ಸರಿ ತಪ್ಪುಗಳ ಕುರಿತು ಯೋಚಿಸಿ ಬರೆಯಬಹುದಾಗಿದೆ,