ಮಾಲು ಕವಿತೆಗಳು - ೯

Submitted by Maalu on Mon, 04/29/2013 - 11:19
ಬರಹ

ತಿಳಿದಿದೆಯ 

ಗೆಳೆಯಾ!
ಗಿಳಿ ಕೋಕಿಲ ದನಿಯ 
ತಿಳಿನೀರಿನ ಸೆಲೆಯ 
ಮಧು ಸುರಿಯುವ ನೆಲೆಯ 
ಮೃದು ವೀಣೆಯ ನುಡಿಯ 
ಮುದನೀಡಲು  ನಮಗೆ 
ಕದ ತಟ್ಟುವುದೆಂದು 
ಹದವಾಗಿಹ  ಹರೆಯ 
ಮದ ಮಿಡಿಯುವ ಮದನ 
ಹಿಡಿದಿಟ್ಟಿಹ ಪರಿಯ!
-ಮಾಲು