ನಮನ... ಜೀವನವೆಂಬ ನದಿಗೆ!!
ಕವನ
ಓ ಕೇಳೆ ಗಿಳಿ ಮರಿ ||
ನಿನ್ನಾಸೆಯಂತೆ ನಾನು ಬಾಳುವೆ
ನಿನ್ನ ಅಣತಿಯಂತೆ ನಾನು ಬದುಕುವೆ ||
ಆದರಿಂತೆನ್ನುವುದು ಮಧ್ಯವಾಸಿಗಳ ಬಲೆಗೆ ನಾ ಸಿಲುಕಿರುವೆನು
ಸ್ವಾಭಿಮಾನಿಕೆ ನನ್ನ ನಿನ್ನ ಅಸ್ತ್ರವಾಗಿರುವುದು, ನಾನೆನ್ನ ಮಾಡುವುದು
ಸ್ವಾರ್ಥ ನಿಸ್ವಾರ್ಥತೆಯ ಜಗದಲ್ಲಿ ನಾನು ಬಾಳುತ್ತಿರುವೆನು ||
ನಾನು ನನ್ನ ಕನಸಿನ ಲೋಕದಲ್ಲಿ,
ಆ ಕನಸನ್ನು ನನಸಾಗಿಸುವ ಪಥದಲ್ಲಿ ಸಾಗಿರುವೆನು
ಲೋಕದ ಬಾಯಿಗೆ ಸಿಕ್ಕಿರುವಂತೆ ಕಾಣುವ ಜೀವನ,
ಅದಕ್ಕಾಗಿ ನಾ ತೊಡಬೇಕು ಶಸ್ತ್ರವಿಲ್ಲದ ಯುದ್ಧ ಪಣ ||
ಓ ಕೇಳಮ್ಮ ಗಿಳಿ ಮರಿಯೇ
ನವ ಬೆಳಕಿನ ಹೊಸ ವರುಷಗಳನು ನಾ ಕಂಡೆ
ದಶ ವರುಷಕೆ ಸಿಲಿಕಾನ್ ವ್ಯಾಲಿಗೆ ನಾ ಬಂದೆ
ಸುಲಭ ಜೀವನವೆಂದು ತಿಳಿದ ನನಗೆ
ವ್ಯಾಲಿಯ ನೋಡಿದ ಮೇಲೆ ನಾನರಿತೆ ಲೋಕಸತ್ಯ ||
ಲೋಕ ಸತ್ಯದ ಅರಿವು ನನ್ನನ್ನು
ಒಳ್ಳೆಯ ದಾರಿಗೆ ಕೊಸರಿಸಿತು
ವ್ಯಾಲಿಯ ಸ್ಪರ್ಧಾತ್ಮಕತೆ ಎಚ್ಚರಿಸಿತು ನನ್ನ
ಎಲ್ಲಿದ್ದೆನೋ ಅಲ್ಲೇ ಬಿದ್ದಿದ್ದರೆ ನಾನಾಗುತಿದ್ದೆ- ಬಾಡಿದ ಹೂವು
ಎಲ್ಲಿಂದಾನೋ ಇಲ್ಲಿಗೆ ಬಂದಿರುವುದು
ನಾ ಅರಳುವ ಹೂವು ||
ಜಗಜೀವನ ಪಾಠ ಕಲಿಸಿದ ಪ್ರತಿಯೊಂದಕ್ಕೂ ನಮನ
ನಮನ ನಮನ ನಮನ ನಮನ
ನಮನ ಸಿಲಿಕಾನ್ ವ್ಯಾಲಿಗೆ
ನಮನ ವ್ಯಾಲಿಯ ಜೀವನಕ್ಕೆ
ನಮನ ನನ್ನ ಮುದ್ದಿನ ಗಿಳಿ ಮರಿಗೆ
ನಿನ್ನಾಸೆಯಂತೆ ನಾನು ಬಾಳುವೆ
ನಿನ್ನಾಸೆಯಂತೆ ನಾನು ಬಾಳುವೆ
ನಿನ್ನ ಅಣತಿಯಂತೆ ನಾನು ಬದುಕುವೆ ||