ಆಮೀರ್ ಮೊದಲ ಖಯಾಮತ್

ಆಮೀರ್ ಮೊದಲ ಖಯಾಮತ್

ಆಮೀರ್ ಇನ್ನೂ ಬಾಲಿವುಡ್ ಗೆ ಪರಿಚಯವೂ ಆಗದೇ ಇರೋ ದಿನಗಳವು. ಅಮಿತಾಬ್ ಬಚ್ಚನ್ ಆಗ ಪೀಕ್ ನಲ್ಲಿದ್ದರು. ಮಿಥುನ್ ಚಕ್ರವರ್ತಿ ಡಿಸ್ಕೋ ಡ್ಯಾನ್ಸ್ ನಿಂದ ಎಲ್ಲರನ್ನೂ ಕುಣಿಸುತ್ತಿದ್ದರು. ಗೋವಿಂದಾ ಅತ್ತ ಕಾಮಿಡಿಯೆನ್. ಇತ್ತ ಹೀರೋ. ಎರಡೂ ಪ್ರತಿಭೆಯನ್ನ ತಮ್ಮಲ್ಲಿ ಮೈಗೂಡಿಸಿಕೊಂಡು ಮಿಂಚುತ್ತಿದ್ದರು. ಆಗ ಒಂದು ಸಿನಿಮಾ ಬಂತು. 1988 ರ ಸಮಯ ಅನಿಸುತ್ತದೆ. ಹೆಸರಲ್ಲಿಯೇ ನೆಗೆಟಿವ್ ಫೀಲ್ ಇಟ್ಟುಕೊಂಡು, ಬಂದ `ಖಯಾಮತ್ ಸೇ ಖಯಾಮತ್ ತಕ್' ಚಿತ್ರಕ್ಕೆ ಈಗ 25 ವರ್ಷ. ಕಳೆದ ಏಪ್ರಿಲ್ 29 ಕ್ಕೆ ಬರೊಬ್ಬರಿ 25 ವರ್ಷ ಕಂಪ್ಲೀಟ್ ಆಗಿದೆ.

ಆದ್ರೆ, ಈ ಚಿತ್ರದಿಂದ ಬಾಲಿವುಡ್ ಗೆ ಒಬ್ಬ ಪರ್ಫೆಕ್ಸ್ ನಿಸ್ಟ್ ಪ್ರವೇಶವಾಗಿರೋದು. ಸದಾ ನಗುವಿನಿಂದಲೇ ಪ್ರೇಕ್ಷಕರ ಮನದಲ್ಲಿ ಈಗಲೂ ಉಳಿದಿರೋ ಸುಂದರಿಯೊಬ್ಬಳ ಪರಿಚಯವಾಗಿದ್ದು. ಹೌದು..! ಅದು ಬೇರೆ ಯಾರೂ ಅಲ್ಲ. ಮಿಸ್ಟರ್ ಆಮೀರ್  ಖಾನ್. ಮೊದಲ ಚಿತ್ರ ಬಿಡುಗಡೆಯಾದಾಗ ಯಾರಿಗೂ ಆಮೀರ್  ಗೊತ್ತೇಯಿರಲಿಲ್ಲ. ರಿಲೀಜ್ ಗೂ ಪರದಾಡಿದ ಈ ಚಿತ್ರಕ್ಕೆ ನಾಸೀರ್ ಹುಸೇನ್ ನಿಮಾರ್ಪಕ್ರು. ಚಿತ್ರ ತೆರೆಗೆ ತರಬೇಕೆಂದು ತುಂಬಾ ಕಷ್ಟಪಟ್ಟರು. ಪ್ರಚಾರಕ್ಕೂ ದುಡ್ಡು ಇರದೇ ಇದ್ದಾಗ, ಸ್ವತ: ಆಮೀರ್ ಖಾನ್ ಪೋಸ್ಟರ್ ಅಂಟಿಸಿದರು. ಪರಿಣಾಮ ಏನೂ ಆಗಲಿಲ್ಲ. ಮೊದಲ ವಾರವೇ ಚಿತ್ರ ನೋಡಲು  ಯಾರೊಬ್ಬರೂ ಬರಲೇ ಇಲ್ಲ. ಎರಡನೇ ವಾರವೂ ಇದೇ ಕತೆ. ಮೂರನೇವಾರಕ್ಕೆ ಬಂದರು ನೋಡಿ ಜನ...ಆಗಲೇ ಶುರುವಾಗಿದ್ದು ಖಯಾಮತ್...

ಬಾಲಿವುಡ್ ನ ಬ್ಲಾಕ್ ಬಾಸ್ಟರ್ ಸಿನಿಮಾ ಅಂತಲೇ ಕರೆಸಿಕೊಳ್ಳೊ ಖಯಾಮತ್ ಸೇ ಖಯಾಮತ್ ತಕ್ ಕತೆಯಿದು. ಈಗಲೂ ಕೇಳೋ ಹಾಡಿನ ಕತೆನೂ ಇದೇ ಯಾತನಮಯವಾಗಿದೆ. ಸಂಗೀತ ನಿರ್ದೇಶಕರಾದ ಆನಂದ್-ಮಿಲಿಂದ್ ಒಳ್ಳೆ ಟ್ಯೂನ್ ಗಳನ್ನೇ ಕೊಟ್ಟಿದ್ದರು. ಆದರೆ, ಚಿತ್ರ ವಿತರಕರೂ, ಇವ್ರ ಎಲ್ಲ ಹಾಡುಗಳನ್ನೂ ರಿಜೆಕ್ಟ್ ಮಾಡಿದ್ದರು. ಆದರೂ ಹಾಡು ಭಯದಲ್ಲಿಯೇ ಸಿನಿಮಾದಲ್ಲಿ ಬಳಕೆ ಮಾಡಲಾಯಿತು.

ಮೂರನೇ ವಾರಕ್ಕೆ ಸಿನಿಮಾ ಹುಟ್ಟುಹಾಕಿದ ಕ್ರೇಜ್ ಗೆ ಪಾಪಾ ಕಹತೇ ಹೈ ಹಾಡು ಕ್ಲಿಕ್. ಕಾಲೇಜ್ ಗೆ ಹೋಗೋ ಪ್ರತಿ ಯುವಕರು ಈ ಗೀತೆಯನ್ನ ಗುನುಗಿದರು. ಎ ಮೇರೇ ಹಮ್ ಸಫರ್ ಗೀತೆಯ ಸಾಲುಗಳು ಯುವ ಪ್ರೇಮಿಗಳಿಗೆ ಸ್ಪೂರ್ತಿಯ ಸೆಲೆಯಾದವು. ಹೀಗೆ ಖಯಾಮ್ ಸೇ ಖಯಾಮತ್ ತಕ್ ಸಿನಿಮಾ ತನ್ನದೇ ವಿಶೇಷ ಪ್ರಯೋಗದಿಂದ ಬಾಲಿವುಡ್ ನಲ್ಲಿ ಶಾಶ್ವತ ಜಾಗ ಮಾಡಿಕೊಂಡಿತ್ತು. ನಿದೇರ್ಶಕ  ಮನ್ಸೂರ್ ಖಾನ್, ವಿಶೇಷ ಕತೆ ಮೂಲಕ ಬಾಲಿವುಡ್ ನಲ್ಲಿ ಹೆಸರಾದ್ರು. ಚಿತ್ರದ ನಿಮಾರ್ಪಕ ನಾಸೀರ್  ಹುಸೇನ್ ಅವರ ಚಿತ್ರಕತೆ ಬಾಲಿವುಡ್ ಸಿನಿಮಾ ಮಂದಿ ತಿರುಗಿ ನೋಡೋ ಹಾಗೆ ಮಾಡಿತು. ಬಾಲಿವುಡ್ ನಲ್ಲಿ ಹೊಸ ಖಯಾಮತ್ ಮಾಡಿರೋ ಖಯಾಮತ್ ಸೇ ಖಯಾಮತ್ ತಕ್ ಚಿತ್ರ ಆಮೀರ್ ಹಾಗೂ ಜ್ಯೂಹಿ ಚಾವ್ಲರಂತಹ ಮಹಾನ್ ಪ್ರತಿಭೆಗಳನ್ನ ಕೊಟ್ಟಿದೆ. ಇದುವೇ ಅಲ್ಲವೇ. ಹೊಸ ಅಲೆಯ..ಶಾಶ್ವತ ಸೃಷ್ಟಿ..

-ರೇವನ್

Comments

Submitted by lpitnal@gmail.com Sat, 05/04/2013 - 14:17

ರ. ಜೇವೂರರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಖಯಾಮತ್ ಸೆ ಖಯಾಮತ್ ತಕ್ ನ ಕಥೆಯ ಜನಾನುರಾಗ ಮೊಳಕೆಯೊಡೆದ ಪರಿ, ಅದರ ಹಿಂದೆ ದುಡಿದ ಕೈಗಳ ಕುರಿತು ಚನ್ನಾಗಿ ಬರೆದಿರುವಿರಿ. ಅಭಿನಂದನೆಗಳು.