ಅಭಿಸಾರಿಕ... By Maalu on Thu, 05/09/2013 - 12:59 ಕವನ ಮಂದ ನೀಲ ಬಾನಿನಲ್ಲಿ ಅಂದವಾದ ಬೆಳ್ಳಿ ಕಾಸು; ಕಣ್ಣು ಹೊಡೆದು ಕೆಣಕುತಿರುವ ಬಣ್ಣ ತಳೆದ ಚಿಕ್ಕೆ ಹಾಸು; ಯಾರೋ ಹಚ್ಚಿಟ್ಟ ಧೂಪದಿಂದ ಬರುವ ಘಮ್ಮೆನ್ನುವ ಧೂಮ; ಸುತ್ತ ಸುಳಿಯುತಿರುವರಿಲ್ಲೇ ರತಿ ಮತ್ತು ಕಾಮ; ಜೊನ್ನ ಜೇನಿನಲ್ಲಿ ಹೊನ್ನಾಗಿದೆ ಧಾತ್ರಿ; ಪ್ರಿಯ, ನೀ ನನ್ನೊಡನಿರಬೇಕಿತ್ತು ಈ ರಾತ್ರಿ..! -ಮಾಲು Log in or register to post comments