ಹರಟೆ ಸಹಜ ಆಟಕ್ಕಾಗಿ ಫಿಕ್ಸಿಂಗ್.!!!

ಹರಟೆ ಸಹಜ ಆಟಕ್ಕಾಗಿ ಫಿಕ್ಸಿಂಗ್.!!!

 

ಐಪಿಲ್ ಪಂದ್ಯ ಪ್ರಾರಂಬವಾಗಿತ್ತು. ಜಗಮಗಿಸುವ ಬೆಳಕು ರಾತ್ರಿಯ ಕತ್ತಲೆಯನ್ನು ದೂರ ಓಡಿಸಿತ್ತು. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿದ ಕಾರಣ ಎಲ್ಲರು ವಿದ್ಯುತ್ ಉಳಿಸಿ ಎಂದು ಹೇಳುವ ಸರ್ಕಾರ,  ಬೃಹತ್ ಉದ್ಯಮವಾದ ಕ್ರಿಕೇಟ್ ಗೆ ಕ್ರೀಡೆಯ ಹೆಸರಿನಲ್ಲಿ ಪ್ರೋತ್ಸಾಹ ಕೊಡುತ್ತಿತ್ತು, ಅದಿರಲಿ, ಇಲ್ಲಿ ಬನ್ನಿ ಪಂದ್ಯ ನೋಡೋಣ. 
 
ಮುಂಬಯಿ ಹಾಗು ರಾಜಾಸ್ಥಾನ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪಂದ್ಯ ಅದು, ಆಟಗಾರರನ್ನು ಪ್ರೋತ್ಸಾಹಿಸಲು ಸಾಕಷ್ಟು ಜನರು ನೆರದಿರುವ ಜೊತೆಗೆ, ಬುಕ್ಕಿಗಳು , ಬೆಟ್ಟಿಂಗ್ ದಂದೆಯವರು ಸಾಕಷ್ಟು ಸೇರಿ ಆಟಗಾರರಲ್ಲಿ ಉತ್ಸಾಹ ಜಾಸ್ತಿ ಆಗಿತ್ತು. ರಾಜಾಸ್ಥಾನ  ತನ್ನ ಮೊದಲ ಸರದಿಯಲ್ಲಿ  ೧೮೦ ರನ್ನು ಸೇರಿಸಿ, ಗೆಲ್ಲಲ್ಲು ಮುಂಬಯಿಗೆ ೧೮೧ ರನ್ ಗಳ ಅಮೋಘ್ಹ ಗುರಿಯನ್ನು ನೀಡಿತ್ತು, ಜನರೆಲ್ಲ ಸನ್ನಿ ಹಿಡಿದವರಂತೆ ಕೂಗುತ್ತಿರಲು, ಪ್ರಾಂಚೈಸಿ ಮಾಲಿಕರು ಸಹ ತಮ್ಮ ಸಂಪೂರ್ಣ ಅಲಂಕಾರದೊಡೆನೆ ಕ್ಯಾಮರಗಳಿಗೆ ಮುಖತೋರಿಸಲು ಕಾದು ನಿಂತಿದ್ದರು, ವಿದೇಶಗಳಿಂದ ಬಂದಿದ್ದ ,ಆಟದ ನಡುವೆ ಕುಣಿಯಲು ಸಿದ್ದವಿದ್ದ ಚಲುವೆಯರಿಗೆ ಅಚ್ಚರಿ, ಇದೇನು ಈ ದೇಶದ ವಿಚಿತ್ರ ಪದ್ದತಿಗಳು ಅರ್ಥವೆ ಆಗದು ಎಂದು ಚಿಂತಿಸುತ್ತ, ಮುಖದಲ್ಲಿ ಮಾತ್ರ ನಗೆಯನ್ನು ತೋರಿಸುತ್ತ ಸೂಚನೆ ಬಂದಾಗ ಕುಣಿಯಲು ಸಿದ್ದರಾಗಿ ನಿಂತಿದ್ದರು, ಅದರಲ್ಲಿ ಕೆಲ ಹುಡುಗಿಯರಿಗೆ ಕ್ರಿಕೇಟ್ ಆಟದ ಗಂದ ಗಾಳಿಯು ತಿಳಿಯದು, ಆದರೆ ನರ್ತಿಸಿದರೆ ಕಡೆಯಲು ಪ್ರಾಂಚೈಸಿನವರು ಹಣ ಕೊಡುವರು ಅನ್ನುವುದು ಮಾತ್ರ ತಿಳಿದಿತ್ತು. 
 
ಮೊದಲ ಓವರ್ , ರಾಜಸ್ಥಾನದ ಚವಾಣನಂತೆ ತನ್ನ ಆರು ರನ್ನಗಳನ್ನು ಪೂರೈಸಿದ, ಎರಡನೆ ಓವರ್ ಯಾರೊ ನಿಶಾಂತನಂತೆ ಬಂದು ಚೆಂಡು ತೆಗೆದುಕೊಂಡ.  ಕೆಲ ಮಕ್ಕಳಿಎ ಅರ್ಥವಾಗದ ವಿಷಯವೆಂದರೆ, ನಿಶಾಂತ ಕೇರಳಕ್ಕೆ ಸೇರಿದರು ಸಹ ರಾಜಸ್ಥಾನಕ್ಕೆ ಏಕೆ ಆಡುತ್ತಿರುವ ಎಂಬುದು. 
 
ಚೆಂಡು ಪಡೆದ ನಿಶಾಂತ್ ಚೆಂಡನ್ನು ತಿರುಗಿಸಿ ತಿರುಗಿಸಿ ನೋಡಿದ, ಎದುರಿಗಿದ್ದ ಅಂಪೈರ್ ಕಡೆ ನೋಡಿದ. ಅಂಪೈರ್ ಏನು ಎನ್ನುವಂತೆ ನಡೆದು ಬಂದ. ಚೆಂಡನ್ನು ತಿರುಗಿಸಿ ಅದರಲ್ಲಿದ ಸಣ್ಣ ದಾರವನ್ನು ತೋರಿಸುತ್ತ, ನಿಶಾಂತ್ ಹೇಳಿದ
"ಈ ಓವರ್ ಫಿಕ್ಸ್ ಆಗಿದೆ ಗೊತ್ತು ತಾನೆ, ಕನಿಷ್ಯ ೧೫ ರನ್ನು ಕೊಡಬೇಕು ನಾನು" 
ಆತ ಅದ್ಯಾರೊ ಪಾಕಿಸ್ತಾನದ ಅಂಪೈರ್, ಹೆಸರು ವಾಜಿದ್ ಎಂದು 
"ನೆನಪಿದೆ ನೆನಪಿದೆ , ನೀನು ನಿನ್ನ ಕೆಲಸ ಮಾಡು" 
ಅಷ್ಟರಲ್ಲಿ ಒಂದು ಹೆಚ್ಚು ಕಡಿಮೆ ಆಗಿತ್ತು, ಮುಂಬಯಿ ತಂಡದ ಪರ ಬ್ಯಾಟ್ ಮಾಡಬೇಕಿದ್ದ , ಚವಾಣ್ ಹೊಸ ಆಟಗಾರ. ಅವನು ಕ್ರಿಕೇಟ್ ಆಟಕ್ಕೆ ಬಂದಿದ್ದೆ ಒಂದು ವಿಚಿತ್ರ ಹಂಬಲದಿಂದ ಹೇಗಾದರು ಸರಿ ಹೆಸರು ಮಾಡಿ, ನಂತರ ಅದೇನೊ ಸ್ಪಾಟ್ ಫಿಕ್ಸಿಂಗ್ ಅನ್ನುತ್ತಾರಾಲ್ಲ ಅದರಲ್ಲಿ ಬಾಗಿಯಾಗಿ ಸಾಕಷ್ಟು ಹಣ ಮಾಡಿ ಎಲ್ಲರಿಗು ಅನುಮಾನ ಬರುವ ಮೊದಲೆ ಕ್ರಿಕೇಟ್ ಗೆ ಬೈ ಹೇಳಿಬಿಡಬೇಕು ಅನ್ನುವ ಮನಸಿನಾತ, ಆದರೆ ಅವನಿಗೆ ಒಂದು ನಿರಾಸೆ ಕಾದಿತ್ತು, ಅವನು ಐಪಿ ಎಲ್ ನ ಎರಡು ಸೀಸನ್ ನಲ್ಲಿ ಆಡಿದರು ಸಹ ಅವನನ್ನು ಯಾವುದೆ ಬುಕ್ಕಿ ಅಥವ ಹೊರಗಿನ ಏಜೆಂಟ್ ಗಳು ಸಂಪರ್ಕಿಸಿ ಇರಲಿಲ್ಲ. ಅವನಿಗೆ ತಾನಾಗೆ ಯಾರನ್ನು ಹೋಗಿ ಬೇಟಿ ಮಾಡಬೇಕು ಅಥವ ಯಾವ ಆಟಗಾರ ಸಹಾಯ ಮಾಡಬಲ್ಲ ಎಂದು ತಿಳಿಯಲಿಲ್ಲ ಹಾಗಂತ ಯಾರನ್ನು ನೇರವಾಗಿ ಕೇಳಲು ಆಗದು ಎನ್ನುವ ಸಂಕಟ ಅನುಭವಿಸುತ್ತಿದ್ದ. 
ಅಂತ ಚವಾಣ್ ನಿಶಾಂತ್ ಹಾಗು ಅಂಪೈರ್ ಮಾತನಾಡುತ್ತ ಇದ್ದಲ್ಲಿಗೆ ನಿದಾನವಾಗಿ ಬಂದ ಕಡೆಯ ಮಾತು ಅವನಿಗೆ ಕೇಳಿಸಿಬಿಟ್ಟಿತು, ನಾನು ಹದಿನೈದು ರನ್ ಕೊಡಬೇಕು ಎಂದು ನಿಶಾಂತ್ ಹೇಳುತ್ತ ಇದ್ದಿದ್ದು.  ಆಸೆಯಿಂದ ಕೇಳಿದ
"ಏನು ಸ್ಪಾಟ್ ಫಿಕ್ಸಿಂಗಾ" 
ನಿಶಾಂತನಿಗೆ ರೇಗಿ ಹೋಯಿತು. 
"ನಿನಗೆ ಅದೆಲ್ಲ ತಿಳಿದು ಏನು ಮಾಡಬೇಕು, ನಿನ್ನ ಆಟ ನೀನು ಆಡು ಹೋಗು" ಎಂದು ಕಣ್ಣು ಕೆಂಪು ಮಾಡಿ ರೇಗಿದ. 
ಇತ್ತ ಕಾಮೆಂಟರಿ ಬಾಕ್ಸ್ ನಲ್ಲಿ ಹೇಳುತ್ತಿದ್ದರು, ನಿಶಾಂತ್ ಬಾಲಿನ ಬಗ್ಗೆ ತಕರಾರು ಮಾಡುತ್ತ ಅಂಪೈರ್ ಕರೆದನೆಂದು, ಆಕ್ಷಣಕ್ಕೆ ಅಂಪೈರ್ ಜೊತೆ ಬ್ಯಾಟ್ ಮಾನ್ ಚವಾಣ್ ಸಹ ಅಲ್ಲಿ ಹೋದರು, ಅವರಿಬ್ಬರ ನಡುವೆ ಕಿಡಿಮಾತುಗಳ ವಿನಿಮಯವಾಯಿತು , ಅಂಪೈರ್ ಅವರಿಬ್ಬರನ್ನು ಸಮಾದಾನ ಪಡಿಸಿ ಕಳಿಸಿದರು. ಎಂದು
ಚವಾಣ್ ಮನಸಿನಲ್ಲಿಯೆ ಅಂದುಕೊಂಡ ಮಾಡುತ್ತೇನೆ ತಾಳು ಎಂದು.
ಬಾಲನ್ನು ಪ್ಯಾಂಟಿಗೆ ಉಜ್ಜಿ ಕರ್ಚಿಪು ಜೋಬಿಗೆ ಸಿಕ್ಕಿಸಿ (ಅದು ಬುಕ್ಕಿಗಳಿಗೆ ಸೂಚನೆ ಆಗಿತ್ತು) ವೇಗವಾಗಿ ಬಂದು ಮೊದಲ ಬಾಲು ಎಸೆದ. ಬಾಲ್ ಸುಲುಭವಾಗಿ ಸಿಕ್ಸರ್ ಎತ್ತುವಂತೆ ಪಿಚ್ ನ ಬದಿಯಲ್ಲಿ ಬಿದ್ದು ಮೇಲೆ ಎದ್ದಿತ್ತು. ಆದರೆ ಬಾಲನ್ನು ಸಿಕ್ಸರ್ ಗೆ ಕಳಿಸುವ ಬದಲಿಗೆ ಚವಾಣ್ ಅದನ್ನು ಡಿಫೆನ್ಸ್ ಆಡಿ, ಅಲ್ಲೆ ಕುಟ್ಟಿ. ನಿಶಾಂತ್ ನನ್ನು ನೋಡಿ ನಗುತ್ತ ನಿಂತ. 
ಕಾಮೆಂಟರಿ ಹೇಳುವರಿಗೆ ಸುಲುಭ ಬಾಲನ್ನು ಆತ ಏಕೆ ಸೊನ್ನೆ ಸುತ್ತಿದ ಎಂದು ಅರ್ಥವಾಗದೆ ತಮ್ಮದೆ ವಿಮರ್ಷೆ ನಡಿಸಿದ್ದರು. 
ನಿಶಾಂತ ಬಾಲನ್ನು ಪಡೆಯಲು ಹತ್ತಿರ ಬಂದು ಬ್ಯಾಟ್ ಮನ್ ಚವಾಣ್ ನ ಕಣ್ಣಲ್ಲಿ ಕಣ್ಣಿ ಇಟ್ಟು ಗುರುಗುಟ್ಟಿದ
ಆಗ ಚವಾಣ್ ಅವನೊಬ್ಬನಿಗೆ ಕೇಳುವಂತೆ" ಹದಿನೈದಲ್ಲ ಸೊನ್ನೆ ರನ್ನು ಈ ಓವರಿನಲ್ಲಿ, ಎದುರಿಗಿರುವ ಬ್ಯಾಟ್ ಮನ್ ಶ್ರೀಕರ್ ಇಲ್ಲಿ ಸ್ಟ್ರೈಕರ್ ಎಂಡ್ ಗೆ ಬರಲು ಬಿಡುವದಿಲ್ಲ ನೋಡು "
ಎಂದ 
ನಿಶಾಂತನಿಗೆ ಗಾಭರಿಯಾಗಿತ್ತು, ಅಯ್ಯಯ್ಯೊ ಈ ಓವರಿನಲ್ಲಿ ಹದಿನೈದು ರನ್ ಕೊಡದಿದ್ದರೆ ನನ್ನ  ಅರವತ್ತು ಲಕ್ಷ ರೂಪಾಯಿ ಗತಿ ಅಷ್ಟೆ ಅಲ್ಲಪ್ಪ ಏನು ಮಾಡುವುದು ಬೇಗ ಚಿಂತಿಸಿದ ತಕ್ಷಣ ಹೇಳಿದ 
"ಆಯಿತು, ಹದಿನೈದು ರನ್ ಹೊಡಿ, ಹೊರಗೆ ಡೀಲ್ ಮಾತಾಡೋಣ" ಎಂದು ಬಾಲ್ ಎತ್ತಿ ಕೊಂಡು ನಡೆದ.
ಈಗ ಮತ್ತೊಂದು ಬಾಲ್ ಗಾಗಿ ಓಡಿಬಂದ, ಪುನಃ ಅದೇ ರೀಲಿ ನಾಲಕ್ಕು ರನ್ ಹೊಡೆಯಲು ಅನುಕೂಲವೆನಿಸುವ ರೀತಿ ಬಾಲ್ ಹಾಕಿದ 
ಕಾಮೆಂಟರಿಯಾತ ಹೇಳುತ್ತಿದ್ದ , ಅದೇಕೊ ನಿಶಾಂತ್ ಈಚೆಗೆ ತನ್ನ ಫಾರ್ಮ್ ಕಳೆದುಕೊಳ್ಳುತ್ತಿರುವ, ಮತ್ತೊಬ ಕಾಮೆಂಟರಿ ಹೇಳಿದ, ಹಾಗಿರಲಾರದು ಈ ಪಿಚ್ ಸದಾ ಬ್ಯಾಟಿಂಗೆಗೆ ಸಹಾಯಕ, ಅಷ್ಟರಲ್ಲಿ ಚವಾಣ್ ಆರು ರನ್ ಗೆ ಬಾಲನ್ನು ಎತ್ತಿದ್ದ
ಕಾಮೆಂಟರಿಯಾತ ಈಗ ಚವಾಣ್ ಬ್ಯಾಟಿಂಗ್ ಶೈಲಿ ಹೊಗಳುತ್ತ, ಮುಂದೆ ಇವನು ತೆಂಡೂಲ್ಕರನಂತೆ ಪ್ರಸಿದ್ದಿಗೆ ಬರುವನು ಎಂದು ಹೇಳುತ್ತಿದ್ದ
 
ತನ್ನ ಬಾಲ್ ಸಿಕ್ಸರ್ ಹೋಗಿದ್ದನ್ನು ಕಂಡು ಒಳಗೆ ಖೂಷಿಯಾದರು, ನಿಶಾಂತ್ ಎದುರಿನ ಚವಾಣ್ ಬಳಿ ಹೋಗಿ ನೆಲಗುದ್ದಿದ, ಚವಾಣ್ ಅರ್ಥವಾದವನಂತೆ 
"ಸರಿ ಇಪ್ಪತ್ತಾದರೆ ಸರಿ" ಎಂದ , ನಿಶಾಂತ್ ಗಾಭರಿಯಿಂದ ಮತ್ತೆ ನೆಲಗುದ್ದದೆ ಅಲ್ಲಿಂದ ಹೊರಟ.
ಮರು ಬಾಲು ಮತ್ತೆ ಸಿಕ್ಸರ್ ಗೆ ಎತ್ತಿದ , ಚವಾಣ್ , ಆದರೆ ಅದು ನೆಲಕ್ಕೆ ಬೀಳುವದರೊಳಗೆ, ಬೌಂಡರಿಯಲ್ಲಿದ್ದ ಅಟಗಾರ ಕ್ಯಾಚ್ ಹಿಡಿದುಬಿಟ್ಟ, ಆದರೆ ಅವನ ಕಾಲು ಒಳಗಿತ್ತೊ , ಹೊರಗೊ ಎನ್ನುವ ಅನುಮಾನ ಕಾಡಿತ್ತು ಅವನಿಗೆ, ಅಂಪೈರ್ ಅವನತ್ತ ನೋಡಿ, ಕೇಳಿದ, ಸಿಕ್ಸರ್ ಅಥವ ಔಟ್ ಎಂದು, ಆದರೆ ಆ ಅಟಗಾರ ಸಹ ಫಿಕ್ಸ್ ಆಗಿದ್ದು ಅವನಿಗೆ ಆಗ ಔಟ್ ಮಾಡಬೇಕೊ ಇಲ್ಲವೊ ಎಂದು ಸರಿಯಾಗಿ ಗೊತ್ತಿರಲಿಲ್ಲ, ಹಾಗಾಗಿ ತಾನು ನೋಡಲಿಲ್ಲ ಎನ್ನುವಂತೆ ಕೈ ಆಡಿಸಿದ.  ಅಂಪೈರ್ ಸಿದಾ ಹೊರಗೆ ನೋಡಿದ. ಅವನನ್ನು ಬುಕ್ ಮಾಡಿದ ಬುಕ್ಕಿ ಮೆಂದು ವೆಂದು ಹೆಸರಿನವನು ಮುಂದೆ ಕುಳಿತಿದ್ದವನು, ಅಂಪೈರ್ ಕಡೆ ನೋಡುತ್ತ ಸಿಕ್ಸರ್ ಎಂಬಂತ ಎರಡು ಕೈ ಎತ್ತಿದ್ದ, ಸುತ್ತಲಿದ್ದ ಪ್ರೇಕ್ಷಕರು ಸಹ ಸಿಕ್ಸರ್ ಎಂದು ಕೂಗುತ್ತಿರುವಂತೆ, ಅಂಪೈರ ಅದನ್ನು ಸಿಕ್ಸರ್ ಎಂದು ಘೋಷಿಸಿದ.
ಮತ್ತೆ ಕಾಮೆಂತರಿಯವರು ಎಲ್ಲರು ಮಾತನಾಡುತ್ತಿದ್ದರು, ಅಂಪೈರ್ ಏಕೆ ಥರ್ಡ್ ಅಂಪೈರ್ ಸಹಾಯ ಪಡೆಯಲಿಲ್ಲ ಎಂದು, ಅಲ್ಲದೆ ಬೌಲರ್ ಆಗಲಿ ನಾಯಕ ಆಗಲಿ ಯಾವುದೆ ತಕರಾರು ಎತ್ತಲಿಲ್ಲ ಏಕೆಂದರು ಕ್ರಿಕೇಟ್ ಒಂದು ಜಂಟಲ್ ಮನ್ ಗೇಮ್ ಆಗಿತ್ತು
 
ಮೂರನೆಯ ಬಾಲ್ ಅದೆ ರೀತಿ ಬೌಂಡರಿಗೆ ಅಟ್ಟಿದ ಚವಾಣ್ ಖುಷಿಯಿಂದ ಬೀಗುತ್ತಿದ್ದ. ಅದೆ ಸಮಯಕ್ಕೆ ನಿಶಾಂತ್ ನೋಡಿದ, ಹೊರಗೆ ಬುಕ್ಕಿಯಿಂದ ಅವನಿಗೆ ಚವಾಣ್ ನನ್ನು ಔಟ್ ಮಾಡು ಎನ್ನುವ ಸನ್ನೆ ಬಂದಿತು. ಬಾಲ್  ಎತ್ತಿಕೊಳ್ಳಲು ಬಂದ ನಿಶಾಂತ್ ಚವಾಣ್ ಗೆ ಈ ಬಾಲ್ಗೆ ಔಟ್ ಆಗಬೇಕು, ಎಂದು ಸೂಚನೆ ನೀಡಿ , ಬೌಲ್ ಮಾಡಲು ಹೋದ, ಚವಾಣ್ ನ ಖುಷಿ ಎಲ್ಲ ಇಳಿದು ಹೋಗಿತ್ತು. ಅವನು ಔಟ್ ಆಗಲು ಸಿದ್ದನಾಗಿದ್ದ. ನಿಶಾಂತ್ ಆ ಐದನೆ ಬಾಲನ್ನು ನೇರ ವಿಕೇಟ್ ಮೇಲೆ ಹಾಕಿದ, ಚವಾಣ್ ನೋಡಿದ, ಬೇಕಿದ್ದರೆ ಅದನ್ನು ಸಿಕ್ಸರ್ ಎತ್ತ ಬಹುದು ಅನಿಸಿತು, ಆದರೆ ಸೂಚನೆ ಬಂದಾಗಿದೆ, ಅವನಿಗೆ ಮತ್ತೊಂದು ಖುಷಿ ಅದು ಅವನ ಪ್ರಥಮ ಫಿಕ್ಸಿಂಗ್ ಮ್ಯಾಚ್ ಆಗಿತ್ತು, ಅವನು ಔಟ್ ಆಗಿ, ತಲೆ ತಗ್ಗಿಸಿ ಹೊರನಡೆದ.
..........
 
ಆಟವೆಲ್ಲ ಮುಗಿದು ಜನರೆಲ್ಲ ಮನೆಗೆ ತೆರಳಿದರು, ನಿಶಾಂತ್ ಹಾಗು ಬುಕ್ಕಿ ಹಾಗು ಚವಾಣ್ ನಡುವೆ ಮಾತು ನಡೆದಿತ್ತು. ಬುಕ್ಕಿ ನಿರ್ದಾರವಾಗಿ ಹೇಳಿದ
"ನಾನು ಬುಕ್ ಮಾಡಿದ್ದು ನಿನ್ನ ಮಾತ್ರ, ಈಗ ಚವಾಣ್ ಗೆ ಹಣ ಕೊಡಲು ಸಾದ್ಯವಿಲ್ಲ, ನೀನೆ ಬೇಕಿದ್ದರೆ ನಿನ್ನ ಬಾಗದಲ್ಲಿ ಕೊಡು ಏಕೆಂದರೆ ನೀನೆ ಅವನನ್ನು ಡೀಲ್ ಗೆ ಕುದುರಿಸಿವುವುದು.
 
ನಿಶಾಂತ್ ಕಡೆಗೆ ತನ್ನ ಪಾಲಿನ ಅರವನ್ನು ಲಕ್ಷದಲ್ಲಿ , ಇಪ್ಪತ್ತು ಲಕ್ಷ ಹಣವನ್ನು ಚವಾಣ್ ಗೆ ಕೋಡಲು ಒಪ್ಪಿದ. ಆಗ ಚವಾಣ್ ಬುಕ್ಕಿಯತ್ತ ತನ್ನನ್ನು ಸ್ಪಾಟ್ ಫಿಕ್ಸಿಂಗ್ ಜಾಲಕ್ಕೆ ಸೇರಿಸ್ಕೊಳ್ಳಲು ಕೇಳಿದ
ಅದಕ್ಕೆ ಬುಕ್ಕಿ " ಅದೆಲ್ಲ ಆಗಲ್ಲ, ಎಲ್ಲರು ಫಿಕ್ಸ್ ಆಗಿಬಿಟ್ಟರೆ , ಅನುಮಾನ ಬರುತ್ತೆ, ಆಲ್ಲದೆ ಕ್ರಿಕೇಟ್ ಜಂಟಲ್ ಮನ್ ಗೇಮ್ ಹಾಗೆ ಆಡಬಾರದು, ಎಲ್ಲರನ್ನು ಸೇರಿಸಲು ಸಾದ್ಯವಿಲ್ಲ, ನೀನು ನಿನ್ನ ಸಹಜ ಆಟವಾಡಿಕೊಂಡಿರು ಸಾಕು,
ಚವಾಣ್ ಮತ್ತೆ ಹೇಳಿದ" ಸರಿ ನಾನು ನನ್ನ ಸಹಜ ಆಟವಾಡಲು ಎಷ್ಟು ಹಣ ಕೊಡುವಿರಿ" 
ಈಗ ಬುಕ್ಕಿಗೆ ಕನ್ ಫ್ಯೂಸ್ ಪ್ರಾರಂಬ ಮತ್ತೆ ಕೇಳಿದ" ಎನಂದೆ ಹೇಳು" 
ಚವಾಣ್" ಅದೆ ನಾನು ಸಹಜ ಆಟ ಆಡಲು ಎಷ್ಟು ಹಣ ಕೊಡುವೆ, ಇಲ್ಲದಿದ್ದರೆ ಒಂದು ನಿಶಾಂತ್ ಮಾಡಿದಂತೆ ಮಾಡಿ ನಿಮ್ಮಪ್ಲಾನ್ ಕೆಡಿಸುವೆ" 
ಬುಕ್ಕಿ ಈಗ ಬೆರಗಾಗಿ ನಿಂತ. ಸಹಜ ಆಟವಾಡಲು ಸಹ ಫಿಕ್ಸ್ ಮಾಡಬೇಕಾದ ಪರಿಸ್ಥಿಥಿ ಬಂತ. !!
 
ಅಯ್ಯಯ್ಯೊ ಸಹಜ ಆಟಕ್ಕಾಗಿ ಫಿಕ್ಸಿಂಗ್... ಇದೆಂತ ವಿಚಿತ್ರ
Rating
No votes yet

Comments

Submitted by nageshamysore Sat, 05/25/2013 - 12:59

ಹಹಹಹ...ಪಾರ್ಥ ಸಾರ್, ಸ್ಟೇಡಿಯಂನಲ್ಲೆ ಕೂತು ನೇರ ಮ್ಯಾಚು ನೋಡುತ್ತಿದ್ದ ಅನುಭವ! ಎಲ್ಲಾ ಹೀಗೇ ನಡೆದ ಹಾಗೆ, ನಿಜವೆ ಅನಿಸುವ ಮಟ್ಟಿಗೆದೆ. ಅದರಲ್ಲು ಕ್ಲೈಮಾಕ್ಸು - ಸಹಜ ಆಟಕ್ಕೂ ಕಾಸು ಕೊಡಬೇಕೆನ್ನುವುದು, ಸೂಪರ್..! ಒಟ್ಟಿನಲ್ಲಿ " ತುಂಬಿಸಬೇಕಿದ್ದರೆ ಪಾಕೆಟ್ಟು, ಆಡಿಬಿಡು ಹೇಗಾದರೂ ಕ್ರಿಕೆಟ್ಟು; ಹುಡುಕಿಬಿಟ್ಟರೆ ಸಾಕು ಬುಕ್ಕಿ, ಫಿಕ್ಸಿಂಗಿನ ಕಾಸಲಿ ಗರಿ ಬಿಚ್ಚಿದ ಹಕ್ಕಿ" ಅನ್ನಬಹುದೇನೊ! - ನಾಗೇಶ ಮೈಸೂರು, ಸಿಂಗಾಪುರದಿಂದ

Submitted by partha1059 Sun, 05/26/2013 - 15:25

In reply to by nageshamysore

ನಾಗೇಶ ಮೈಸೂರು ರವರಿಗೆ ಒಂದು ಪದ್ಯವನ್ನು ಬರೆದುಬಿಟ್ಟಿದ್ದೀರಿ , ಅದನ್ನು ಐಪಿಎಲ್ ನ ಗೀತೆಯನ್ನಾಗಿ ಮಾಡಬಹುದು :-)
ಏನು ಮಾಡುವುದು, ಇಂತಹ ಆಟಗಳಿಂದ ನಿಜವಾದ ಆಟಗಾರರು ತಮ್ಮ ಮೌಲ್ಯವನ್ನು ಕಳೆದುಕೊಳ್ಳುವರು. ಹಿಂದೆ ರಣಜಿ ಟ್ರೋಪಿಯೊ ಯಾವುದೊ ಒಂದು ಪಂದ್ಯ ತುಮಕೂರಿನಲ್ಲಿ ನಡೆದಿತ್ತು , ಆಗ ಅಲ್ಲಿ ಆಟಗಾರರೆಲ್ಲ ಒಂದು ಸಾದಾರಣ ಹೋಟೆಲಿನಲ್ಲಿ ಒಟ್ಟಿಗೆ ಇಳಿದುಕೊಂಡಿದ್ದರು ಅದರಲ್ಲಿ ಜಿ ಅರ್ ವಿಶ್ವನಾಥರಂತ ಘಾಟಾನುಘಟಿಗಳಿದ್ದರು, ಹಾಲಿನಲ್ಲಿ ಹಾಸಿದ್ದ ದೊಡ್ಡ ಜಮಖಾನದ ಮೇಲೆ ಎಲ್ಲ ಆಟಗಾರರು ಒಂದೆ ಹಾಲಿನಲ್ಲಿದ್ದರು ! ಈಗ ಅಂತ ಸರಳತೆಯನ್ನು ನಿರೀಕ್ಷಿಸಲು ಸಾದ್ಯವೆ, ಸ್ಟಾರ್ ಹೋಟಲಿನಲ್ಲಿರುವ ಅವರುಗಳು ದೇಶದ ದೊಡ್ಡ ಸ್ಟಾರ್ ಗಳು !!

Submitted by ಗಣೇಶ Sun, 05/26/2013 - 00:14

:) ಹಣ ಮಾಡುವ ಇನ್ನೊಂದು ಐಡಿಯಾ ಹೇಳಿಕೊಡುತ್ತಿದ್ದೀರಲ್ಲಾ ಪಾರ್ಥರೆ :) ಕೊನೆಯ ಓವರ್‌ನಲ್ಲಿ ಸಿಕ್ಸರ್ ಹೊಡೆದು ರಿಸಲ್ಟೇ ಬದಲಾಯಿಸಿದಿರಿ! ಅಂದಹಾಗೇ ಬೇಸಿಗೆ ರಜಾದಲ್ಲಿ ಕ್ರಿಕೆಟ್ ಕೋಚಿಂಗ್‌ಗೆ ಹೋಗುತ್ತಿದ್ದ ಮಕ್ಕಳ ಕೋಚಿಂಗ್ ಕ್ಲಾಸ್ ಮುಗಿದ ಮೇಲೆ ನನ್ನ ಕ್ಲಾಸ್ ಪ್ರಾರಂಭಿಸಬೇಕೆಂದಿದ್ದೇನೆ.BCCI ನ ಪ್ರೆಸಿಡೆಂಟ್ ನಾನೇ. (BCCI=ಬೆಟ್ಟಿಂಗ್ ಕೋಚಿಂಗ್ ಕ್ಲಾಸ್ ಇಂಟರ್ನ್ಯಾಷನಲ್ ) ನಿಮ್ಮ ಬಳಿ ಹೊಸ ಹೊಸ ಐಡಿಯಾ ಇರುವುದರಿಂದ ನಿಮ್ಮನ್ನೇ ಪ್ರಿನ್ಸಿಪಾಲ್ ಮಾಡಬೇಕೆಂದಿದ್ದೇವೆ. ಒಪ್ಪಿಗೆನಾ?:)

Submitted by partha1059 Sun, 05/26/2013 - 15:30

In reply to by ಗಣೇಶ

ಗಣೇಶರೆ ನಿಮ್ಮ ಐಡಿಯಾ ಚೆನ್ನಾಗಿದೆ ! ಆದರೆ ನನಗೆ ಎಲ್ಲ ಕಡೆಯಿಂದಲು ಇದೆ ಅಫರ್ ಬರುತ್ತಿದೆ ಹಾಗಾಗಿ ಫುಲ್ ಟೈಮ್ ಪ್ರಿನ್ಸಿಪಾಲ್ ಆಗಿರಲು ಸಾದ್ಯವಿಲ್ಲ ! ಆದರೆ sfec (spot fixing expertency consultant ) ಆಗಿ ಬರಲು ಸಿದ್ದನಿದ್ದೇನೆ, ಒಂದು ಬ್ಯಾಚಿಗೆ ಕಡೆಯಲ್ಲಿ ಒಂದು ಕ್ಲಾಸ್ ತೆಗೆದುಕೊಳ್ಳಲು ಸಾದ್ಯ . ನಿಮ್ಮಗೆ ಒಪ್ಪಿಗೆ ಇದ್ದರೆ ಈ ತಿಂಗಳ ಕಡೆಯ ಒಳಗೆ ನಮ್ಮ ಪ್ರವೇಟ್ ಸೆಕ್ರೆಟರಿಯನ್ನು ಬೇಟಿಯಾಗಿ ಕನ್ ಫರ್ಮ್ ಮಾಡಿಕೊಳ್ಳಿ. :-)))

Submitted by ಗಣೇಶ Sun, 05/26/2013 - 23:01

In reply to by partha1059

>>ಈ ತಿಂಗಳ ಕಡೆಯ ಒಳಗೆ ನಮ್ಮ ಪ್ರವೇಟ್ ಸೆಕ್ರೆಟರಿಯನ್ನು ಬೇಟಿಯಾಗಿ...--> ತಿಂಗಳು ಕೊನೆಯಾಗುತ್ತಾ ಬಂದುದರಿಂದ ನಿಮ್ಮ ಸೆಕ್ರೆಟರಿಯನ್ನು ಭೇಟಿಯಾಗಲು ಹೋದೆ. ಮುಂಬೈ ಸ್ಕೋರ್ ೧೫೦ರೊಳಗೆ ಇರಬೇಕೆಂದು ಯಾರಿಗೋ ಫೋನಲ್ಲಿ ಸೂಚಿಸುತ್ತಿದ್ದರು! ನಿಮ್ಮ ಬಳಿ ದೂರು ಕೊಡಬೇಕೆಂದು ಹೊರ ಬರುವಷ್ಟರಲ್ಲಿ..."ಗಣೇಶರೆ, ನೀವು ಕೊಟ್ಟ ಅಡ್ವಾನ್ಸ್‌ನಲ್ಲಿ ಚೆನ್ನೈ ಒಂದು ಓವರಲ್ಲೇ ಒಂದು ವಿಕೆಟ್ ಬೀಳುವುದು ಎಂದು ಬೆಟ್ ಕಟ್ಟು ಅಂದು ’ಬಾಸ್’ ಸೂಚಿಸಿದ್ದಾರೆ. ದುಡ್ಡು ಮಡಗಿ ಹೋಗ್" ಅಂತ ಧಮಕಿ ಹಾಕಿದಳು ! ಗಾಳಿಪಟದಂತೆ ತರಗುಟ್ಟುತ್ತಾ ಅಡ್ವಾನ್ಸ್ ದುಡ್ಡು ಕೊಟ್ಟು ಓಡಿ ಬಂದೆ. ’ಆಡಿಸೋ ಸೂತ್ರಧಾರಿ "ನೀನಯ್ಯ"’ ಅಂತ ಭಲ್ಲೇಜಿ ಅಂದದ್ದು ಯಾರಿಗೆ?

Submitted by partha1059 Sun, 05/26/2013 - 15:33

In reply to by kavinagaraj

ಹೆಚ್ಚು ಗಾಭರಿ ಎನು ಬೇಡ, ಇಡಿ ದೇಶದ ಪರಿಸ್ಥಿಥಿಯೆ ಕ್ರಿಕೇಟಿನಲ್ಲು ಇದೆ . ಯಥಾ ರಾಜ ತಥಾ ಪ್ರಜಾ ಎಲ್ಲಡೆಯು ಅದೆ ಭ್ರಷ್ಟಾಚಾರದ ಕದಂಬ ಬಾಹು , ಹಣದ ನಗ್ನ ನರ್ತನ . ಆದರು ಕ್ರಿಕೇಟ ಭೋರ್ಡನ್ನಾಗಲಿ ಯಾರನ್ನೆ ಆಗಲಿ ಏನು ಮಾಡಲಾಗದು

Submitted by bhalle Sun, 05/26/2013 - 21:39

"ಗಾಳಿಯಪಟದಂತೆ ನಾವಯ್ಯ (ಆಟಗಾರ) ... ಆಡಿಸೋ ಸೂತ್ರಧಾರ (ಬುಕ್ಕಿ) ನೀನಯ್ಯ"
"ಈ ಮೈದಾನವೇ ಒಂದು ನಾಟಕರಂಗ ... ನಾವು ನೀವೆಲ್ಲ ಪಗಡೆಗಳು ... ಆಡಿಸುವಾತ ಅಲ್ಲೆಲ್ಲೋ ಇರುವ ... "