ಮಲೆಗಳಲ್ಲಿ ಮದುಮಗಳು ...

ಮಲೆಗಳಲ್ಲಿ ಮದುಮಗಳು ...

ಚಿತ್ರ

ರಾಷ್ಟ್ರಕವಿ ಕುವೆಂಪು ಅವರ ಅತ್ಯುತ್ತಮ ರಚನೆಗಳಲ್ಲೊಂದು 'ಮಲೆಗಳಲ್ಲಿ ಮದುಮಗಳು'. ಇದನ್ನು ನಾಟಕ ರೂಪದಲ್ಲಿ 'ಕರ್ನಾಟಕ ಕಲಾಗ್ರಾಮ, ಬೆಂಗಳೂರು', ಇಲ್ಲಿ ೧ ತಿಂಗಳ ಕಾಲ ತೋರಿಸಲ್ಪಟ್ಟಿತು.ಮೊದಮೊದಲು ನಾಟಕಕ್ಕೆ ಜನ ಕಮ್ಮಿ, ದಿನ ಕಳೆದಂತೆ ನಾಟಕದಲ್ಲಿ ಜಾಗ ಕಮ್ಮಿ ಆಗ ತೊಡಗಿತು. ಇಂತಹ ಅಪೂರ್ವ ನಾಟಕ ನೋಡಿದ ನನ್ನ ಪುಟ್ಟ ಅನುಭವವಿದು.

೯ ತಾಸಿನ ನಾಟಕ ಇದು, ಹೇಗಪ್ಪ ಕೂರೊದು ಅಂತ ಅಂದುಕೊಂಡಿದ್ದೆ. ಆದರೆ ಅಲ್ಲಿ ಸಮಯ ಕಳೆದದ್ದೆ ಗೊತ್ತಾಗದು. ಅಲ್ಲಿಯ ರಂಗ ಸಜ್ಜಿಕೆ ಮನ ಮೋಹಕ. ಅಲ್ಲ ಸ್ವಾಮಿ ಒಂದೇ ಕಡೆ ಕೂತು ನಾಟಕ ನೋಡೋದುಂಟು, ಆದರೆ ಇಲ್ಲಿಯ ವೈಶಿಷ್ಟ್ಯ ಏನು ಗೊತ್ತ - ಪ್ರತಿ ೨ ಅಥವ ೨ ೧/೨ ಗಂಟೆಗೊಮ್ಮೆ ಸ್ಥಳ ಬದಲಾವಣೆ ಆಗ್ತಿತ್ತು.ಒಟ್ಟು ೯ ತಾಸಿನಲ್ಲಿ ೪ ವೇದಿಕೆಗಳನ್ನು ನೋಡಿದೆನು.

'ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ' ಎಂಬ ಸಾಲಿಂದ ನಾಟಕ ಪ್ರಾರಂಭ ಆಯ್ತು. ನೋಡುತ್ತ ನೋಡುತ್ತ ಎಲ್ಲವೂ ಮುಖ್ಯವೇ ಎಂದು ಮನವರಿಕೆಯಾಯಿತು.೧೯ನೇ ಶತಮಾನದ ಮಲೆನಾಡಿನ ವರ್ಣನೆ, ಆಧುನಿಕತೆಯ ಪ್ರಭಾವ, ವೈಚಾರಿಕತೆಯ ಬದಲಾವಣೆ, ಸ್ಥಾನ-ಮಾನ ಪಲ್ಲಟ, ಬ್ರಿಟಿಷರ ದಾಳಿಯ ಪರಿಣಾಮ ಎಲ್ಲವನ್ನು ಮನಮುಟ್ಟುವಂತೆ ತೋರಿಸಿದೆ.ಹೇಗೆ ನಮ್ಮ ನಂಬಿಕೆಗಳಿಗೆ ಹೊಡೆತ ಬಿತ್ತೆಂದು ಇಲ್ಲಿ ತೋರಿಸಲಾಗಿದೆ.ಮತಾಂತರವೆಂಬ ಪೆಡಂಭೂತ ಭಾರತದ ಬೆನ್ನೇರಿದ ಪರಿಯನ್ನು ಇಲ್ಲಿ ತಿಳಿಸಿದೆ.ಪರಕೀಯರ ಕಣ್ಣು ನಮ್ಮ ಪರಿಸರವನ್ನೂ ಬಿಡಲಿಲ್ಲ.ಅಂದಿನ ಜನರ ಪ್ರೀತಿ-ವಿಶ್ವಾಸ, ಮುಗ್ಧತೆಯನ್ನು ಎತ್ತಿ ಹಿಡಿಯಲಾಗಿದೆ.ಜನರ ನೋವು-ನಲಿವು ಹೀಗಿತ್ತು ಎಂದು ತೋರಿಸಿಕೊಟ್ಟರು.ಇದರ ಮಧ್ಯೆ ಆ ಪಾತ್ರಗಳ ವಿಚಿತ್ರ ವಿಭಿನ್ನ ಹೆಸರುಗಳನ್ನು ಮರೆಯುವಂತಿಲ್ಲ. ಐತ, ಪೀಚ್ಲು, ನಾಯಿ ಗುತ್ತಿ, ತಿಮ್ಮಿ, ಅಂತಕ್ಕ, ಕಣ್ಣಾ ಪಂಡಿತ, ಅನಂತ ಐಗಳು ಹೀಗೆ ಹಲವಾರು ಹೆಸರುಗಳು. ಇವು ನಮಗೆ ಅಪರಿಚಿತವಾದ ಹೆಸರುಗಳು.

ಈ ೯ ತಾಸಿನ ನಾಟಕಕ್ಕೆ ಎಷ್ಟು ಕಲಾವಿದರು ನಟಿಸಿದ್ದರು ಎಂದು ಕೇಳಿದರೆ ಆಶ್ಚರ್ಯಚಕಿತರಾಗುವಿರಿ. ಸುಮಾರು ೮೦ ಕಲಾವಿದರ ತಂಡ ಇದಕ್ಕೆ ದುಡಿಯುತ್ತಿತ್ತು. ಒಮ್ಮೆ ನಾನು ಲೆಕ್ಕ ಮಾಡಿದಾಗ, ವೇದಿಕೆಯಲ್ಲಿ ಒಟ್ಟು ೨೬ ಕಲಾವಿದರಿದ್ದರು. ಈ ಕಲಾವಿದರ ಪಾತ್ರಗಳಲ್ಲಿ ತಲ್ಲೀನವಾಗುತ್ತಿದ್ದ ರೀತಿ ಪ್ರಶಂಸನೀಯ.  ವೇದಿಕೆಯ ಮೇಲೆ ಅವರ ಚಾತುರ್ಯತೆ, ಪಾತ್ರದ ಮೇಲಿನ ಹಿಡಿತ ಗಮನಾರ್ಹ..ಅಂತು ನಾಟಕ ಮುಗಿಯುವ ಹೊತ್ತಿಗೆ ನಾನು ಏಕೆ ನಾಟಕಕ್ಕೆ ಸೇರ ಬಾರದು ಎಂದು ಬಯಕೆಯಾಗತೊಡಗಿತು. ಇದು ನಾಟಕ ನೋಡಿದ ಮೇಲೆ ನನಗಾದ ಅನುಭವಗಳು. ಈ ನಾಟಕ ನೋಡುವ ಅವಕಾಶ ಸಿಕ್ಕಲ್ಲಿ ದಯವಿಟ್ಟು ಕಳ್ಕೊಳ್ಬೇಡಿ. 

Rating
No votes yet

Comments

Submitted by venkatb83 Mon, 05/27/2013 - 16:24

ನಮ್ ದುರಾದ್ರುಸ್ತ ನೋಡಿ - ಒಂದು ವಾರದಿಂದ ಪ್ರಯತ್ನಿಸುತ್ತಿದ್ದರೂ ಟಿಕೆಟ್ ಸಿಗ್ತಿಲ್ಲ .. ;(( ಇನ್ನೇನು ನಾಟಕ ೩೦ ಕ್ಕೆ ಕೊನೆಯಾಗಲಿದೆ ಅಸ್ತ್ರಲ್ಲಿ ನೋಡುವೆನೇ? ಯಾರಿಗ್ಗೊತ್ತು ??
ನೋಡಿದ ಅನುಭವಿಸಿದ ನೀವೇ ಪುಣ್ಯವಂತರು ...!!
ಶ್ರೀಯುತ ಬಸವಲಿಂಗಯ್ಯ ಅವರು ಈ ನಾಟಕದ ಪ್ರದರ್ಶನ ದಿನಗಳನ್ನು ಮತ್ತಸ್ತು ವಿಸ್ತರಿಸಿದರೆ ಚೆನ್ನಿತ್ತು- ಇನ್ನಸ್ಟು ಜನ ನೋಡಬಹ್ದು ಅನ್ಸ್ತಿದೆ .. ನಮ್ಮ ಮೊರೆ ಅವ್ರಿಗೆ ತಿಳಿಸೋರು ಯಾರು ???

ನಿಮಂ ಚಿಕ್ ಚೊಕ್ಕ ಬರಹ ಓದಿ ಖುಷಿ ಆದರೂ ನಾಟಕ ನೋಡದೆ ಇದ್ದುದಕ್ಕೆ ಬೇಜಾರು ....
ಶುಭವಾಗಲಿ ....
\।/

Submitted by Sachin LS Mon, 05/27/2013 - 17:52

In reply to by venkatb83

ನಿಮ್ಮ ಹಾರೈಕೆಗೆ ಧನ್ಯವಾದಗಳು. ನಾಟಕವು ೩ ಜೂನ್ ವರೆಗು ತೋರಿಸಲಾಗುವುದು. ಒಂದು ಅಂತ್ರರ್ಜಾಲದ ಮುಖಾಂತರ ಟಿಕೆಟ್ ಪಡೆಯಬಹುದು ಅಥವ ಮುಂದಿನ ಆಟಕ್ಕೆ ಇಂದೇ ಬುಕ್ ಮಾಡಿದ್ರೆ ಸಿಗತ್ತೆ. ನಿಮಗೂ ಈ ನಾಟಕದ ಅನುಭವ ಆಗಲೆಂದು ಆಶಿಸುತ್ತೇನೆ!! ಕೆಲವೊಮ್ಮೆ ನಾಟಕ ಶುರುವಾದ ನಂತರ ಟಿಕೆಟ್ ಕೊಡುವುದು ಕೂಡ ಕಂಡುಬಂತು ಹಾಗಾಗಿ ಮತ್ತೆ ಪ್ರಯತ್ನಿಸಿ...