ಇಂದಿನ ಕಥೆಯೇ ಅತಿ ಮುಖ್ಯ !

ಇಂದಿನ ಕಥೆಯೇ ಅತಿ ಮುಖ್ಯ !

ಚಿತ್ರ
ಸನ್. ೨೦೧೩ ರ, ೨೫, ಮೇ, ಶನಿವಾರ ೧೦ ವರ್ಷ ವಯಸ್ಸಿನ ಹುಡುಗ  'ವೆಲಿಮ್ಗ್ದನ್  ವ್ಯೂ' ಎಂಬ ಹೊಸದಾಗಿ ನಿರ್ಮಿಸಿದ ಬಹುಮಹಡಿ  ಕಟ್ಟಡದ  (ಮುಂಬೈ ಸೆಂಟ್ರೆಲ್ ರೈಲ್ವೆ ನಿಲ್ದಾಣಕ್ಕೆ ಸಮೀಪದ)  ೧೬ ನೆಯ ಮಹಡಿಯ ಫ್ಲಾಟ್ ನ  ಕಿಟಕಿಯಿಂದ (ಕಿಟಕಿಗೆ ಗ್ರಿಲ್ ಇರಲಿಲ್ಲ) ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹುಡುಗನ ತಂದೆ ತಾಯಿಗಳು, ವೈದ್ಯರು.  ಈ ಕಟ್ಟಡ ಮುಂಬೈ ನ 'ಪಾಶ್' ವಲಯದಲ್ಲಿರುವ 'ತಾರ್ದೇವ್ ಉಪನಗರ' ದಲ್ಲಿದೆ. ಅವನ ಬಟ್ಟೆ-ಬರೆ ಪದಾರ್ಥಗಳ ಜೊತೆಯಲ್ಲಿ ಒಂದು ಪುಟ್ಟ ಕೈಬರಹದ ಬರಹದ ತುಂಡಿನಲ್ಲಿ ’ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬ ವಾಕ್ಯ ಬರೆಯಲ್ಪಟ್ಟಿತ್ತು. 
 
ಅಪ್ಪ, ಅಮ್ಮ, ಸೋದರಿ, ಮನೆಯಿಂದ ಹೊರಗೆ ಎಲ್ಲೋ ಹೋದರು. ಹುಡುಗನನ್ನು ಅಜ್ಜಿಯ ಬಳಿ ಇರಲು ಹೇಳಿ ಹೊರಗೆ ಹೊದರು. ಕೂಡಲೇ ಹುಡುಗ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಚಿಲಕ ಹಾಕಿದನು. ಕಿಟಕಿಯಿಂದ ಹೊರಗೆ ಹಾರಿ ೧ ೬ ನೆ ಮಹಡಿಯಿಂದ ಕೆಳಗೆ ಬಿದ್ದು ತಲೆಯೊಡೆದು ಗಾಯಗೊಂಡು ಸ್ಥಳದಲ್ಲೇ ಮೃತನಾದನು. ವಿಶಾಲವಾದ ಹಾಲಿನಲ್ಲಿದ್ದ ಅಜ್ಜಿ ಮತ್ತು ಕೆಲಸದವರಿಗೆ ತಿಳಿದದ್ದು ವಾಚ್ಮನ್ ಮೇಲೆ ಬಂದು ವಿಷಯ ತಿಳಿಸಿದಾಗ ಮಾತ್ರ !ಆಗಿದ್ದೇನು ? 
 
ಮುಂಬೈನಗರದ  'ತಾರ್ದೇವ್ ಉಪನಗರ'ದ (ಬಾಂಬೆ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ  ಹತ್ತಿರದ) 'ವೆಲಿಂಗ್ಡನ್' ಎಂಬ ಬಹುಮಹಡಿ ಕಟ್ಟಡದಿಂದ ಕೆಳಗೆ ಬಿದ್ದ ವ್ಯಕ್ತಿ ರಕ್ತಕಾರಿ ನಿಧನನಾದನು :
ರಾತ್ರಿ ೮-೩೦ ರ ಹೊತ್ತಿನಲ್ಲಿ ಹುಡುಗನನ್ನು ಅಜ್ಜಿಯ ಜೊತೆ ಇರಲು ಹೇಳಿ, ಅಪ್ಪ ಅಮ್ಮ ಮತ್ತು ಸೋದರಿ ಒಟ್ಟಿಗೆ ಹೊರಗೆ ಹೋದಾಗ ತನ್ನನ್ನು ಕರೆದುಕೊಂಡು ಹೋಗಲಿಲ್ಲವಲ್ಲಾ ಎಂಬ ಕಾರಣಕ್ಕಾಗಿ ತನ್ನ ಬೆಡ್ ರೂಂ ಒಳಗೆ ಹೋದವನೆ, ಒಳಗೆ  ಚಿಲುಕಹಾಕಿಕೊಂಡು (ಬಹುಶಃ ಇದೇ ಕಾರಣವಿರಬಹುದು) ಕಿಟಕಿಯಿಂದ ಹಾರಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡ.   ಆ ಸಮಯದಲ್ಲಿ ಮನೆ ಕೆಲಸದವರು ಮತ್ತು ಅಜ್ಜಿ ವಿಶಾಲವಾದ ಕೊಠಡಿಯ ಒಂದು ಭಾಗದಲ್ಲಿದ್ದರು. ಏನಾಯಿತೆಂದು ಅವರಿಗೆ ಗೊತ್ತಿಲ್ಲ. 
 
ಡ್ಯೂಟಿಯಲ್ಲಿದ್ದ ವಾಚ್ಮನ್ ಗೆ ’ಧಪ್’ ಎಂಬ ಶಬ್ದ ಕೇಳಿಸಿತು. ವಾಚ್ಮನ್ ಕೂಡಲೇ ಓಡಿಬಂದು ನೋಡಿದಾಗ ಹುಡುಗ ಬಿದ್ದು ಮೈಯೆಲ್ಲಾ ರಕ್ತವಾಗಿತ್ತು. ಫ್ಲಾಟ್ ಒಳಗೆ ಓಡಿಹೋಗಿ ಅಜ್ಜಿ ಮತ್ತು ಕೆಲಸವರಿಗೆ ತಿಳಿಸಿದರು. ’ಭಾಟಿಯಾ ಆಸ್ಪತ್ರೆ’ಗೆ ಸೇರಿಸುವಮೊದಲೇ ಜೀವ ಹೋಗಿತ್ತು. ಹೊರಗೆ ಹೋಗಿದ್ದ ತಂದೆ-ತಾಯಿಗಳಿಗೆ ವಿಷಯ ತಿಳಿದ ಕೂಡಲೆ ಓಡಿಬಂದರು. ಈ ದಾರುಣ ದೃಷ್ಯನೋಡಿ ಮೂರ್ಛೆಹೋದರು ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಪೋಲೀಸರು ಡೂಪ್ಲಿಕೇಟ್ ಬೀಗದಕೈ ಬಳಸಿ ಕೊಠಡಿಯನ್ನು ತೆರೆದರು. 'ಪಂಚನಾಮ' ನಡೆಸಿದ ಅಧಿಕಾರಿ ಒಂದು ಕಾಗದದ ತುಂಡನ್ನು ಪತ್ತೆಹಚ್ಚಿದರು. ಹುಡುಗ ಒಳ್ಳೆಯ ವಾಚಾಳಿ ; ಕಟ್ಟಡದ ವಾಚ್ಮನ್ ಜೊತೆ ತಮಾಷೆಯಾಗಿ ಮಾತಾಡುತ್ತಿದ್ದನು. ಯಾವಾಗಲೂ ಹಸನ್ಮುಖಿ. 
 
ಹಿಂದಿನ ರೆಕಾರ್ಡ್ ಗಳನ್ನು ನೋಡಿದಾಗ ತಿಳಿದ ಅಂಶಗಳು :
 
ಸನ್. ೨೦೧೧ ರ ವರದಿ, ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ ೧೪ ವರ್ಷದ ವಯಸ್ಸಿನ ಹುಡುಗರು ಹಾಗೂ ಅದೇ ವಯಸ್ಸಿನ ಹುಡುಗಿಯರ ರೇಷ್ಯೂ ೫೨;೪೮ ಇದೆ. ಕಾಯಿಲೆ, ಮನೆಯ ಸಮಸ್ಯೆಗಳು, ಪರೀಕ್ಷೆ,  ಪ್ರೀತಿ, ವಿವಾಹಗಳಿಗೆ ಸಂಬಂಧಿಸಿದ ಪ್ರಮುಖ ಕಾರಣಗಳು.    
ಸುಮಾರು ೩೫% ೧೫-೨೯ ವರ್ಷದ ಯುವಕರು. ಇದರ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಸಂಪರ್ಕಿಸಬೇಕಾದ 
 
ಹೆಲ್ಪ್ ಲೈನ್ :  ೧-೮೬೦-೨೬೬-೨೩೪೫; ೦೨೨-೨೫೭೦-೬೦೦೦
 
ಈ ಘಟನೆ ನಮ್ಮ ಕಣ್ಣು ತೆರೆಸಲಿ !
 
* ಮಕ್ಕಳಿಗೆ ಕೊಟ್ಟ ಮೊಬೈಲ್, ವೀಡಿಯೋ ಆಟಿಕೆಗಳು, ಪಾಕೆಟ್ ಮನಿ ಇಷ್ಟೇ ಸಾಲದು. ಪ್ರತಿದಿನವೂ ಅವರ ಹತ್ತಿರದಲ್ಲಿ ಕುಳಿತು ಗಮನವಿಟ್ಟು ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳಬೇಕು. 
* ಮೇಲೆ ತಿಳಿಸಿದ ಸನ್ನಿವೇಶವನ್ನು ಅವರು ಸಮಾಧಾನವಾಗಿದ್ದಾಗ ಯಾವುದೋ ಉದಾಹರಣೆಯಂತೆ ವಿವರಿಸಬೇಕು. 
* ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಆಸಕ್ತಿಯಿಂದ ಅವರಿಗೆ ತಿಳಿಯದಂತೆ ಗಮನಿಸಬೇಕು. 
* ನಮ್ಮ ಹೇಳಿಕೆಗಳನ್ನು  ಕೊಡುವಾಗ ಬಹಳ ಯೋಚಿಸಿ ಕೊಡುವುದು ಅತ್ಯಾವಶ್ಯಕ. ಅದರಲ್ಲೂ ಇಬ್ಬರು ಮಕ್ಕಳ ಬಗ್ಗೆ ಕೊಡುವ ನಮ್ಮ  ಹೇಳಿಕೆಗಳು ಬಹಳ ಮಹತ್ವದವು !
* ಪ್ರತಿದಿನ ರಾಮಾಯಣ, ಮಹಾಭಾರತ, ಗೀತಾ, ಪಂಚತಂತ್ರ ಮೊದಲಾದ ಕಥೆಗಳನ್ನು ಸರಿಯಾಗಿ ತಿಳಿಯಹೇಳುವುದು ಆವಶ್ಯಕ. 
 
Rating
No votes yet

Comments