ಸರ್ಕಾರದ ಕೆಲಸ ದೇವರ ಕೆಲಸ ...

ಸರ್ಕಾರದ ಕೆಲಸ ದೇವರ ಕೆಲಸ ...

ಚಿತ್ರ
 
ಮೊನ್ನೆ ಸರ್ಕಾರಿ ಕಛೇರಿಯಲ್ಲಿ  "ಸರ್ಕಾರದ ಕೆಲಸ ದೇವರ ಕೆಲಸ"  ಎಂಬ ಫಲಕ ನೋಡಿದಾಗೆಯೇ ನಸುನಗು  ಶುರುವಾಯಿತು.  ಆ ದೊಡ್ಡ ಸರತಿಸಾಲಿನಲ್ಲಿ ಪುಣ್ಯಕ್ಕೆ ನನ್ನ ನಗುವನ್ನು ಯಾರು ಗಮನಿಸಲ್ಲಿಲ್ಲ.ನಗುವಿಗೆ ಕಾರಣ ನೆನಪಾದ ಗಾದೆ  "ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ". ಇಲ್ಲಿ ಪೂಜಾರಿಗೆ ದಕ್ಷಿಣೆ ಕೊಟ್ಟ ಮೇಲೆ ದೇವರ ದರ್ಶನ ಆಗೋ ಹಾಗೆ, ಸರ್ಕಾರಿ  ನೌಕರರಿಗೆ ದಕ್ಷಿಣೆ ಕೊಟ್ಟ ಮೇಲೆನೇ  ಸರ್ಕಾರದ ಕೆಲಸ ಆಗೋದು. 
 
ಆದರೆ ಸರಿಯಾದ ಹೇಳಿಕೆ ಹೀಗಿದೆ - ಸೇವಕನಿರುವುದು ಜನರಿಗೆ ಕೊಡುವುದಕ್ಕೆ, ಅವರಿಂದ ತೆಗೆದುಕೊಳ್ಳುವುದಕ್ಕಲ್ಲ. ಯಾವ ಭೇದವೂ ನಿಷ್ಠೆಯಿಂದ ದುಡಿಯುವುದಷ್ಟೇ ಸೇವಕನ ಕೆಲಸ. ಹಾಗೆ ಅರ್ಹರಿಗೆ ನೊಂದವರಿಗೆ ಸೇವೆ ಮಾಡಿದ್ದೆ ಆದರೆ ಸರ್ಕಾರಿ ನೌಕರನಾಗಿದ್ದಕ್ಕೂ, ಸೇವಕನಾಗಿದ್ದಕ್ಕೂ ಸಾರ್ಥಕತೆ ದೊರೆಯುತ್ತದೆ. ಇಲ್ಲಿ ಮುಖ್ಯವಾಗಿರಬೇಕಾದದ್ದು ನಿಸ್ವಾರ್ಥ ಸೇವೆ. ಗಾಂಧೀಜಿ, 'ನಿನ್ನನ್ನು ಅರಸಿ ಬಂದವನು ನಿನ್ನಲ್ಲಿಗೆ ಬಂದ ದೇವರು ಎಂದು ಪರಿಗಣಿಸಿ, ನಿನಗೆ ಮಾಡುತ್ತಿರುವ ಉಪಕಾರವೆಂದು ಬಗೆ' ಎನ್ನುತ್ತಾರೆ. ನಾವು ಕೊಡುವುದಕ್ಕಿಂತ ಮಿಗಿಲಾಗಿ, ಆತ ನಮ್ಮಿಂದ ಪಡೆಯಲು ಬಂದಿರುವುದು ದೇವಸದೃಷವೆಂದು ಭಾವಿಸಬೇಕು ಎಂದು ಸೇವಕನಾದವನು ಎಂದೂ ಮರೆಯಬಾರದು.
 
ಚಿತ್ರ ಕೃಪೆ : ಅಂತರ್ಜಾಲ
Rating
No votes yet

Comments

Submitted by makara Tue, 05/28/2013 - 22:36

"ಸರ್ಕಾರದ ಕೆಲಸ ದೇವರ ಕೆಲಸ" ಈ ಹೇಳಿಕೆಯನ್ನು ಕೊಟ್ಟವರು ದಿವಂಗತ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು. ಅವರು ಸರ್ಕಾರ ಅಂದರೆ ಸಾರ್ವಜನಿಕರ ಕೆಲಸವನ್ನು ದೇವರ ಕಾರ್ಯದಂತೆ ಶ್ರದ್ಧೆಯಿಂದ ಮಾಡಿ ಎನ್ನುವ ಉದ್ದೇಶದಿಂದ ಹಾಗೆ ಹೇಳಿದ್ದರು. ಈಗ ದೇವತಾ ಕಾರ್ಯಗಳಲ್ಲೂ ಶ್ರದ್ಧೆ ಕಡಿಮೆಯಾಗಿ ಅಶ್ರದ್ಧೆಯೇ ಹೆಚ್ಚಾಗಿದೆ ಹಾಗಾಗಿ ಆ ಹೇಳಿಕೆಗೆ ಅನುಗುಣವಾಗಿ ಇಂದಿನ ನೌಕರರೂ ಸರ್ಕಾರದ ಕೆಲಸವನ್ನು ಮಾಡುತ್ತಿದ್ದಾರೆ, ಅದು ಬೇರೆ ವಿಷಯ. ಹನುಮಂತಯ್ಯನವರು ಸ್ವರ್ಗಸ್ಥರಾದಾಗ ಅವರು ಕಟ್ಟಿಸಿದ ವಿಧಾನಸೌಧದ ಮೇಲೆ ಅವರ ನಾಣ್ಣುಡಿಯನ್ನು ಕೆತ್ತಿಸಿದವರು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಗುಂಡೂರಾವ್ ಅವರು. ನಿಮ್ಮ ಲೇಖನದಿಂದಾಗಿ ಮಾಜಿ ಮುಖ್ಯಮಂತ್ರಿಗಳಿಬ್ಬರನ್ನು ನೆನೆಸಿಕೊಳ್ಳುವಂತಾಯಿತು.