ಮುಂಬೈ ಮಹಾನಗರದಲ್ಲಿ ನಡೆದ 'ಕರ್ನಾಟಕ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮಗಳು' ! (೨೦೧೩)
’ಮೈಸೂರ್ ಅಸೋಸಿಯೇಷನ್ ನಲ್ಲಿ’ :
ಮುಂಬೈನ ಹಿರಿಯ ಕನ್ನಡ ಸಂಸ್ಥೆ, ’ಮೈಸೂರ್ ಅಸೋಸಿಯೇಷನ್’, ಹಾಗೂ ’ಕರ್ನಾಟಕ ಜಾನಪದ ಅಕ್ಯಾಡೆಮಿ, ಬೆಂಗಳೂರು’, ಜಂಟಿಯಾಗಿ ೨೦೧೩ ರ ಮೇತಿಂಗಳ ೧೫ ರಂದು ’ಕರ್ನಾಟಕ ಜಾನಪದ ಕಲಾ ಸಂಭ್ರಮ’ವೆಂಬ ಸುಂದರ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೊದಲು ’ಪ್ರಾರ್ಥನಾ ಗೀತೆ’ಯನ್ನು ’ವಿದುಷಿ.ಶ್ಯಾಮಲಾ ರಾಧೇಶ್’ ಹಾಡಿದರು. ನಂತರ, ’ಶ್ರೀಮತಿ ರಾಧಾಬಾಯಿ ಮತ್ತು ಸಂಗಡಿಗರೂ’ ಪ್ರಾರ್ಥನಾಗೀತೆಯನ್ನು ಹಾಡಿದರು. ’ಡಾ ಬಾನಂದೂರು ಕೆಂಪಯ್ಯ’ (ಅಧ್ಯಕ್ಷರು, ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು)
ಬಿ. ಎನ್. ಪರಡ್ಡಿ, ಕರ್ನಾಟಕ ಜನಪದ ಅಕ್ಯಾಡೆಮಿ ಬೆಂಗಳೂರು, ವಿ. ರಾಮಭದ್ರ, ಅಧ್ಯಕ್ಷರು, ಮೈಸೂರು ಅಸೋಸಿಯೇಷನ್ ಮುಂಬೈ, ಸಿ. ರಾಜಗೋಪಾಲ್, ನಿವೃತ್ತ ಆಕಾಶವಾಣಿ ನಿರ್ದೇಶಕರು, ಮುಂಬೈ. ಕೆ. ಮಂಜುನಾಥಯ್ಯ, ಹಿರಿಯ ಕಾರ್ಯಕರ್ತರು, ಮೈಸೂರು ಅಸೋಸಿಯೇಷನ್ ಮುಂಬೈ, ’ದೀಪ ಪ್ರಜ್ವಲನ ಕಾರ್ಯ’ದಲ್ಲಿ ಭಾಗವಹಿಸಿದರು. ಮುಂಬೈನ ಕಲಾವಂತ ರಸಿಕರು, ಈ ಕಾರ್ಯಕ್ರಮ ಮತ್ತು ಹಿಂದಿನ ದಿನ ’ಮೈಸೂರು ಅಸೋಸಿಯೇಷನ್ ಲಲತಕಲಾ ತಂಡದ’ವರು ನಡೆಸಿಕೊಟ್ಟ ’ಬೆಳ್ಳಿಬೈಲು’ ಎಂಬ ನಾಟಕವನ್ನೂ ವೀಕ್ಷಿಸಿ ಆನಂದಿಸಿದರು. ಮೆರವಣಿಗೆ ೬ ರಿಂದ ೭ ಗಂಟೆ ಭಾಗವಹಿಸಿದ ತಂಡಗಳು :
* ಚೌಡಿಕೆ ಪದ ರಾಧಾಬಾಯಿ ಮತ್ತು ಸಂಗಡಿಗರು.
ಬೆಳಗಾಮ್ ಜಿಲ್ಲೆ
* ಪೂಜಾ ಕುಣಿತ, ಶ್ರೀ. ಬಿ. ಕೆ. ಸ್ವಾಮಿ ಸಂಗಡಿಗರು, ಮಂಡ್ಯ ಜಿಲ್ಲೆ.
* ಕಂಸಾಳೆ ಕುಣಿತ, ಶ್ರೀ. ಮಹದೇವಮೂರ್ತಿ ಹಾಗೂ ಸಂಗಡಿಗರು, ಬೆಂಗಳೂರು,
* ಜಡೆ ಕೋಲಾಟ, ಶ್ರೀ. ಹಾಲಪ್ಪ ಮತ್ತು ಸಂಗಡಿಗರು, ದಾವಣಗೆರೆ ಜಿಲ್ಲೆ.
* ಹಾಲಕ್ಕಿ ಸುಗ್ಗಿ ಕುಣಿತ, ಶ್ರೀ. ಗಣಪು ಬಡವ ಗೌಡ ಮತ್ತು ಸಂಗಡಿಗರು,
* ಗೌಳಿಗರ ರಣಮಾಲ್ ಕುಣಿತ, ಶ್ರೀಮತಿ ವಿಕ್ಟೋರಿಯ ಮತ್ತು ಸಂಗಡಿಗರು,
* ಗೀಗೀ ಪದ, ಶ್ರೀಮತಿ ಯಲ್ಲವ್ವ ಬಿ. ಮಾದರ, ಮತ್ತು ಸಂಗಡಿಗರು ಬೆಳಗಾವಿ ಜಿಲ್ಲೆ.
ಇದೇ ತಂಡದವರು, ಮೆರವಣಿಗೆಯ ದಣಿವಾರಿಸಿಕೊಂಡು, ಅಸೋಸಿಯೇಷನ್ ನ ಸುಸಜ್ಜಿತ, ಹವಾನಿಯಂತ್ರಿತ ರಂಗಮಂಚದಮೇಲೆ ತಮ್ಮ ಎಲ್ಲಾ ಚಟುವಟಿಕೆಗಳನ್ನೂ ಪ್ರದರ್ಶಿಸಿದರು. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರತಿತಂಡದವರಿಗೂ ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು. ಡಾ.ಬಾನಂದೂರು ಕೆಂಪಯ್ಯನವರು ಹಾಡಿದ ಗೀತೆಗಳು ಮುಂಬೈನ ರಸಿಕರಿಗೆ ಬಹಳ ಮುದನೀಡಿದವು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
-ವರದಿ ಮತ್ತು (ನಿರೂಪಣೆ,ಚಿತ್ರಗಳೊಂದಿಗೆ)
-ಹೊರಂಲವೆಂ
ಘಾಟ್ಕೋಪರ್, ಮುಂಬೈ (ಮ.ರೈ)
Comments
ಮುಂಬೈನ ವಾಶಿ ಕನ್ನಡ ಸಂಘದ
ನಮಸ್ಕಾರ ವೆಂಕಟೇಶ ಸಾರ್, ಜಾನಪದ
In reply to ನಮಸ್ಕಾರ ವೆಂಕಟೇಶ ಸಾರ್, ಜಾನಪದ by nageshamysore
ಹೌದು ಸಾರ್. ಮೇ. 24 ಮತ್ತು 25
In reply to ಹೌದು ಸಾರ್. ಮೇ. 24 ಮತ್ತು 25 by venkatesh
ನವೀ ಮುಂಬೈ ವಾಶಿಯಲ್ಲಿ ಜರುಗಿದ