ಮ್ಯಾಂಗೋ ಮೇಳ
1980-85ರ ಸಮಯದಲ್ಲಿ ನೆಂಟರಿಷ್ಟರೊಡನೆ ಬೆಂಗಳೂರು ಸುತ್ತಾಟ ಅಂದರೆ- ಕಬ್ಬನ್ ಪಾರ್ಕ್, ವಿಧಾನ ಸೌಧ, ಲಾಲ್ ಬಾಗ್ ತೋರಿಸುವುದು. ಸ್ವಲ್ಪ ಹಿರಿಯರಾದರೆ- ಬಸವನಗುಡಿ, ಗವಿಗಂಗಾಧರೇಶ್ವರ ಟೆಂಪ್‌ಲ್; ವಿಜ್ಞಾನದಲ್ಲಿ ಆಸಕ್ತಿ ಉಳ್ಳವರಾದರೆ ಮ್ಯೂಸಿಯಂ ರೋಡಲ್ಲಿರುವ ಮ್ಯೂಸಿಯಂಗಳು ; ಕನ್ನಡ/ಹಿಂದಿ ಸಿನೆಮಾಸಕ್ತರಾದರೆ ಕೆಂಪೇಗೌಡ ರೋಡ್‌ನ ಥಿಯೇಟರ್‌ಗಳ ಮುಂದೆ ಕ್ಯೂ ನಿಲ್ಲುವುದು ;
ಇಂಗ್ಲೀಷ್ ಸಿನೆಮಾ ಬೇಕೆಂದರೆ ಎಮ್ ಜಿ ರೋಡ್‌ಗೇ ಹೋಗಬೇಕು- ಈ ಇಂಗ್ಲೀಷ್ ಸಿನೆಮಾಗಳು ಥಿಯೇಟರ್‌ನೊಳಗೆ ಹೊಕ್ಕು, ಸೀಟು ಹಿಡಿದು, ಒಂದೆರಡು ಸಲ ಆಕಳಿಸುವುದರೊಳಗೆ ಮುಗಿದು ಹೋಗುವುದು. ಅಷ್ಟು ದೂರ ಬಂದುದು ವೇಸ್ಟ್ ಆಗುವುದು ಬೇಡ ಎಂದು ಅಲ್ಲೇ ಬಳಿಯ ಬ್ರಿಗೇಡ್ ರೋಡ್ ಸುತ್ತಾಡಿ, ಆಗಿನ ಕಾಲದ ಎತ್ತರದ ಕಟ್ಟಡ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್ ತೋರಿಸಿ, ಎಮ್.ಜಿ ರೋಡ್‌ನ boulevard ನಲ್ಲಿ ವಾಕ್ ಮಾಡಿ, ಕಬ್ಬನ್ ಪಾರ್ಕ್ನಲ್ಲಿ ಐಸ್ ಕ್ರೀಂ ತಿಂದು ಹಿಂದೆ ಬರುತ್ತಿದ್ದೆವು. ಎಮ್ ಜಿ ರೋಡ್‌ನ ಬಲಬದಿ ಜನದಟ್ಟಣೆ, ವಾಹನಗಳಿಂದಾಗಿ ಗಜಿಬಿಜಿಯಾಗಿದ್ದರೆ, ಎಡಬದಿಯ boulevard ಗಾಂಧಿ ಹೆಸರಿಗೆ ತಕ್ಕಂತೆ ಶಾಂತವಾಗಿರುತ್ತಿತ್ತು. ಮೆಟ್ರೋ ರೈಲಿಗಾಗಿ ಈ boulevardನ್ನು ತೆಗೆದಾಗ ಬೇಸರವಾಯಿತು. ಆದರೆ ಈಗ ಪುನಃ ಅದನ್ನು ಎರಡು ಅಂತಸ್ತಿನಲ್ಲಿ ಚೆನ್ನಾಗಿ ಮಾಡಿದ್ದಾರೆ. ಇನ್ನೂ ಸುಮಾರು ಕೆಲಸ ಆಗಲು ಬಾಕಿ ಇದೆ.(ಚಿತ್ರಗಳನ್ನು ಗಮನಿಸಿ-ರಸ್ತೆಯಲ್ಲಾಗಲಿ, ಮೆಟ್ರೋ ಸ್ಟೇಶನ್‌ನಲ್ಲಾಗಲೀ ..ಜನನೇ ಇಲ್ಲ!) ಆದ್ದರಿಂದ ಸದ್ಯಕ್ಕೆ ಎಮ್ ಜಿ ರೋಡ್ ಭೇಟಿ ಮುಂದಕ್ಕೆ ಹಾಕಿ. ಅದರ ಬದಲು ಲಾಲ್ ಬಾಗ್‌ಗೆ ಹೋಗಿ-
ಅಲ್ಲೀಗ ಮಾವು ಮತ್ತು ಹಲಸಿನ ಎಕ್ಸಿಬಿಷನ್ ಮತ್ತು ಮೇಳ ನಡೆಯುತ್ತಿದೆ. ಬೆಳಗ್ಗೆ ಬೇಗ ಹೋಗಿ ಒಂದು ರೌಂಡ್ ವಾಕಿಂಗ್/ಜಾಗಿಂಗ್ ಮಾಡಿ, ಮೇಳ ನಡೆಯುವ ಸ್ಥಳಕ್ಕೆ ಹೋದರೆ (ದೊಡ್ಡ ಬಂಡೆಗಲ್ಲು ಮತ್ತು ಗಾಜಿನಮನೆಯ ನಡುವಿನ ಸ್ಥಳ) ಅಲ್ಲಿ ಉದ್ದಕ್ಕೂ ವಿವಿಧ ತರಹದ ಹಲಸು ಮತ್ತು ಮಾವು (+ಉಪ್ಪಿನಕಾಯಿ ಸಹ) ಮಾರಾಟಕ್ಕಿದೆ. ಅವರು ಕೊಟ್ಟ ಸ್ಯಾಂಪ್‌ಲ್ ಪೀಸ್ ತಿನ್ನುತ್ತಾ ಹೋಗಿ ಹೊರಬಂದರೂ ಆಗುತ್ತದೆ.:) ಚೀಲ ತರಲು ಮರೆತು ಹೋಗಿದ್ದರೆ ಅಲ್ಲೇ ಚೀಲವೂ ಸಿಗುವುದು.
ನೆನಪಿರಲಿ ಈ ಎಕ್ಸಿಬಿಷನ್ ಈ ತಿಂಗಳ ಕೊನೆಯವರೆಗೆ ಮತ್ತು ಮೇಳ ಜೂನ್ ೧೫ರವರೆಗೆ ಮಾತ್ರ. ವೆರೈಟಿ ಈ ಸಲ ಕಮ್ಮಿಯಿದೆ-ರುಚಿಯೇನೂ ಕಮ್ಮಿ ಇಲ್ಲ.
http://www.bangalorewaves.com/news/bangalorewaves-news.php?detailnewsid=9924
Comments
ಗಣೇಶ ಜಿ ನಮಸ್ಕಾರ, 80-85ರ ನೆಂಟರ
ಗಣೇಶ ಜಿ ನಮಸ್ಕಾರ, 80-85ರ ನೆಂಟರ ಕಥೆ ಓದುತ್ತಿದ್ದ ಹಾಗೆ ಆ ಸಮಯದಲ್ಲೆ ನಾವು ನೆಂಟರಾಗಿ ಬಂದು ನೀವು ಹೇಳಿದ ಜಾಗಗಳನ್ನೆಲ್ಲ ಸುತ್ತಿದ್ದು ನೆನಪಾಯ್ತು. ನಿಮ್ಮ ಲಿಸ್ಟಿಗೆ ತುಸು ಬೆಳೆದ ಮಕ್ಕಳನ್ನು ಸೇರಿಸಿದರೆ - ವಿಶ್ವೇಶ್ವರಯ್ಯ ಮ್ಯೂಸಿಯಂ, ಪ್ಲಾನೆಟೊರಿಯಂ ತರಹದ್ದು ಜತೆಗೆ ಸೇರಿರುತ್ತಿತ್ತು. ಅಂದಹಾಗೆ ನಿಮ್ಮ ಹಣ್ಣಿನ ಚಿತ್ರದಲ್ಲಿ , 'ಸಿಂಗಾಪುರದ ಹಲಸಿನ ಹಣ್ಣು' ಅಂಥ ನೋಡಿದೆ - ಆ ಹೆಸರಿನ ಊರೊಂದು ತುಮಕೂರಿನ ಕಡೆಯೊ ಏನೊ ಕೇಳಿದ ನೆನಪು...ಅಥವ ಇದು ವಿದೇಶಿ ಸಿಂಗಪುರದ ಹಣ್ಣಾ? (ಇಲ್ಲಿಯು ಹಲಸಿನ ಹಣ್ಣು ಸಿಗುತ್ತದೆ, ಬೋರ್ಡಿನಲ್ಲಿ ಬರೆದ ಹಾಗೆಯೆ ಇದೆ ಅದರ ವರ್ಣನೆ ಸಹ ).
ಅಂದಹಾಗೆ ಗಣೇಶ್ ಜಿ, ಬೆಂಗಳೂರಿನಲ್ಲಿ 'ರಂಬೂತಾನ್' ಅನ್ನೊ (ಮೈಯೆಲ್ಲ ಜುಟ್ಟಿರುವ ಸಿಂಗಪುರದ) ಹಣ್ಣೂ ಸಿಗುತ್ತಾ (ಲೊಂಗನ್ ಸಿಕ್ಕಿದ ಹಾಗೆ)? - ನಾಗೇಶ ಮೈಸೂರು, ಸಿಂಗಪುರದಿಂದ
In reply to ಗಣೇಶ ಜಿ ನಮಸ್ಕಾರ, 80-85ರ ನೆಂಟರ by nageshamysore
ನಾಗೇಶರೆ, >>>80-85ರ ನೆಂಟರ ಕಥೆ
ನಾಗೇಶರೆ, >>>80-85ರ ನೆಂಟರ ಕಥೆ ಓದುತ್ತಿದ್ದ ಹಾಗೆ ಆ ಸಮಯದಲ್ಲೆ ನಾವು ನೆಂಟರಾಗಿ ಬಂದು ನೀವು ಹೇಳಿದ ಜಾಗಗಳನ್ನೆಲ್ಲ ಸುತ್ತಿದ್ದು ನೆನಪಾಯ್ತು. -->ಈ ವಾಕ್ಯವನ್ನು ಎರಡೆರಡು ಬಾರಿ ಓದಿ ನೆನಪಿಡಿ.:) ಇನ್ನು ಸಿಂಗಾಪುರ ವಿಷಯ- ಬೆಂಗಳೂರು ನಾರ್ತ್‌ನಲ್ಲಿ ಯಲಹಂಕಕ್ಕೆ ಹೋಗೋ ದಾರಿಯಲ್ಲಿ ಎಮ್ ಎಸ್ ಪಾಳ್ಯದ ಎಡಕ್ಕೆ ಹೋದರೆ ಸಿಂಗಾಪುರ ಸಿಗುವುದು! ಸಿಂಗಾಪುರ ಹಲಸಿನ ಹಣ್ಣಿಗೂ ಸಿಂಗಾಪುರಕ್ಕೂ ಕನೆಕ್ಷನ್ ಗೊತ್ತಾಗಲಿಲ್ಲ- ಹೆಸರು ಸಿಂಗಾಪುರ ಹಲಸು, ಇಂಡಿಯಾಕ್ಕೆ ೧೯೪೯ ರಲ್ಲಿ ಸಿಲೋನ್‌ನಿಂದ ಬಂತಂತೆ- http://www.hort.purdue.edu/newcrop/morton/jackfruit_ars.html ; ರಂಬೂತಾನ್ ಹಣ್ಣಿನ ಬಗ್ಗೆ ಗೊತ್ತಿಲ್ಲ. ನೀವು ಹೇಳಿದ ಮೇಲೆ ನೋಡಿದೆ. ಅದರ ಬಗ್ಗೆ ನಿಮ್ಮ ವರ್ಣನೆ ಓದಿದ ಮೇಲೆ ಇಲ್ಲೆಲ್ಲಾದರೂ ಸಿಗುವುದಾ ಎಂದು ಹುಡುಕುವೆ.
In reply to ನಾಗೇಶರೆ, >>>80-85ರ ನೆಂಟರ ಕಥೆ by ಗಣೇಶ
ಗಣೇಶ್ ಜಿ, ಸಿಂಗಪುರ ಬರಿ
ಗಣೇಶ್ ಜಿ, ಸಿಂಗಪುರ ಬರಿ ಹೆಸರಷ್ಟೆ ಕನೆಕ್ಷನ್ನು, ಬೇರೇನೂ ಇಲ್ಲ..:-)
>>>ರಂಬೂತಾನ್ ಹಣ್ಣಿನ ಬಗ್ಗೆ ಗೊತ್ತಿಲ್ಲ. ನೀವು ಹೇಳಿದ ಮೇಲೆ ನೋಡಿದೆ. ಅದರ ಬಗ್ಗೆ ನಿಮ್ಮ ವರ್ಣನೆ ಓದಿದ ಮೇಲೆ ಇಲ್ಲೆಲ್ಲಾದರೂ ಸಿಗುವುದಾ ಎಂದು ಹುಡುಕುವೆ.>>> ರಂಬೂತ್ತಾನ್ ಬಗ್ಗೆನೂ ಒಂದು ಪರಿಚಯ ಲೇಖನ ಹಾಕ್ತೀನಿ, ಡೀಟೆಲ್ಸ್ ಕಲೆಕ್ಟ್ ಮಾಡ್ತಾ ಇದೀನಿ. ಅಷ್ಟರಲ್ಲಿ ಆ ಹಣ್ಣೇನಾದರು ನಿಮ್ಮ ಕಣ್ಣಿಗೆ ಬಿದ್ರೆ, ಹೇಳಿ..ಅದನ್ನು ಸೇರಿಸಿಯೆ ಬರೆದುಬಿಡೋಣ ! - ನಾಗೇಶ ಮೈಸೂರು, ಸಿಂಗಪುರದಿಂದ
ನೀವು ಫೋಟೋದಲ್ಲಿ ಕೊಟ್ಟಿರುವ
ನೀವು ಫೋಟೋದಲ್ಲಿ ಕೊಟ್ಟಿರುವ ಹಣ್ಣುಗಳಿಗಿಂತ ನಿಮ್ಮ ವರ್ಣನೆಯೇ ರಸಭರಿತವಾಗಿದೆ ಗಣೇಶ್..ಜಿ. ಅಂದಹಾಗೆ ನಾಲ್ಕನೆಯ ಫೋಟೋದಲ್ಲಿರುವುದು ’ರಸಪೂರಿ" ಜಾತಿಯ ಹಣ್ಣು ಎಂದುಕೊಳ್ಳುತ್ತೇನೆ. ಇದನ್ನು ಧಾರವಾಡ ಸೀಮೆಯಲ್ಲಿ ಕಲ್ಮಿ ಎಂದು ಕರೆಯುತ್ತಾರೆ. ಇನ್ನು ನೀವು ಕೊಟ್ಟಿರುವ ಲಾಲ್ ಮುನಿಯನ್ನೇ ಬಹುಶಃ ನಮ್ಮ ಕೂಡ್ಲಿಗಿ ತಾಲ್ಲೂಕಿನಲ್ಲಿ ಕುಂಕುಮ ಕೇಸರಿ ಎಂದು ಕರೆಯುತ್ತಾರೆ.
In reply to ನೀವು ಫೋಟೋದಲ್ಲಿ ಕೊಟ್ಟಿರುವ by makara
ಧನ್ಯವಾದಗಳು ಶ್ರೀಧರ್‌ಜಿ.
ಧನ್ಯವಾದಗಳು ಶ್ರೀಧರ್‌ಜಿ. ನಾಲ್ಕನೆಯ ಫೋಟೋದಲ್ಲಿರುವ ಹಣ್ಣು "ಆಮ್ರಪಾಲಿ"-ನೀಲಂ ಮತ್ತು ದಶೆಹರಿಯ ಹೈಬ್ರೀಡ್ ವೆರೈಟಿ- http://en.wikipedia.org/wiki/Amrapali_%28mango%29 ; ಲಾಲ್ ಮುನಿಯ ಮಾವಿನ ಬಗ್ಗೆ ನನಗೆ ವಿವರ ಗೊತ್ತಿಲ್ಲ.ಇನ್ನೊಮ್ಮೆ ಮೇಳಕ್ಕೆ ಹೋದಾಗ ವಿಚಾರಿಸುವೆ.ಈ ಮಾವಿನ ಬಗ್ಗೆ ಕೆಲ ವಿವರ- http://www.telegraphindia.com/1110304/jsp/bihar/story_13645288.jsp
In reply to ಧನ್ಯವಾದಗಳು ಶ್ರೀಧರ್‌ಜಿ. by ಗಣೇಶ
ಆಮ್ರಪಾಲಿ ಮತ್ತು ಲಾಲ್ ಮುನಿಯ
ಆಮ್ರಪಾಲಿ ಮತ್ತು ಲಾಲ್ ಮುನಿಯ (ಗುಲಾಬ್ ಖಾಸ್) ಬಗೆಗಿನ ಪೂರಕ ಮಾಹಿತಿಗೆ ಧನ್ಯವಾದಗಳು; ಗಣೇಶ್,..ಜಿ. ಆದರೆ ಒಂದು ಸಣ್ಣ ತಪ್ಪು ನಿಮ್ಮ ಪ್ರತಿಕ್ರಿಯೆಯಲ್ಲಿದೆ. ಅದೇನೆಂದರೆ, ಆಮ್ರಪಾಲಿಯು ದಶಹರಿ X ನೀಲಂ ಇವುಗಳ ಮಿಶ್ರ ತಳಿ; ನೀಲಂ X ದಶಹರಿ ಅಲ್ಲ. ಇದರಲ್ಲೇನು ವ್ಯತ್ಯಾಸ ಅಂದುಕೊಂಡಿರಾ? ಖಂಡಿತಾ ಇದೆ ಮೊದಲನೇ ಶಬ್ದವು ಮಾತೃ ಮೂಲವನ್ನು ತಿಳಿಸಿದರೆ ಎರಡನೇ ಶಬ್ದವು ಪಿತೃ ಮೂಲವನ್ನು ತಿಳಿಸುತ್ತದೆ :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಆಮ್ರಪಾಲಿ ಮತ್ತು ಲಾಲ್ ಮುನಿಯ by makara
ಲಕ್ಷ್ಮೀವೆಂಕಟೇಶ, ಉಮಾಮಹೇಶ್ವರ
ಲಕ್ಷ್ಮೀವೆಂಕಟೇಶ, ಉಮಾಮಹೇಶ್ವರ ಎಂದ ಹಾಗೇ... ತಪ್ಪು ತಿದ್ದಿ, ವಿಷಯ ತಿಳಿಸಿದ್ದಕ್ಕೆ ಶ್ರೀಧರ್‌ಜಿಗೆ ತುಂಬಾ ಧನ್ಯವಾದಗಳು.
In reply to ಲಕ್ಷ್ಮೀವೆಂಕಟೇಶ, ಉಮಾಮಹೇಶ್ವರ by ಗಣೇಶ
ಮೊದಲನೆಯದು ಮಾತೃ ಮೂಲವನ್ನು
ಮೊದಲನೆಯದು ಮಾತೃ ಮೂಲವನ್ನು ತಿಳಿಸುತ್ತದೆ ಎನ್ನುವುದನ್ನು ಉಮಾಮಹೇಶ್ವರ, ಲಕ್ಷ್ಮೀನಾರಾಯಣ ಎಂದು ಹೇಳುವುದರ ಮೂಲಕ ಇನ್ನಷ್ಟು ಸರಳಗೊಳಿಸಿದಿರಿ; ಧನ್ಯವಾದಗಳು ಗಣೇಶ್..ಜಿ.
ಮ್ಯಾಂಗೋ ಮೇಳ ಯಾಕೆ, ಮಾಂಕಾಯಿ ಮೇಳ
ಮ್ಯಾಂಗೋ ಮೇಳ ಯಾಕೆ, ಮಾಂಕಾಯಿ ಮೇಳ ಯಾಕಲ್ಲ?
In reply to ಮ್ಯಾಂಗೋ ಮೇಳ ಯಾಕೆ, ಮಾಂಕಾಯಿ ಮೇಳ by kpbolumbu
"ಮ್ಯಾಂಗೋ" ಎಂಬ ಅಚ್ಚಕನ್ನಡ
"ಮ್ಯಾಂಗೋ" ಎಂಬ ಅಚ್ಚಕನ್ನಡ ಹೆಸರಿರುವಾಗ, ಮಾಂಕಾಯಿ ಅನ್ನುತ್ತೀರಲ್ಲಾ! :) ಮಾಂಕಾಯಿ ಎಂದಾಗ ಮಾವಿನ ಹಣ್ಣಿನ "ಮಾಂಬಳ" http://www.ruchiruchiaduge.com/2013/04/mambala-sun-dried-mango-pulp.html ದ ನೆನಪಾಯಿತು. ಧನ್ಯವಾದಗಳು ಕೃಷ್ಣಪ್ರಕಾಶರೆ.
In reply to "ಮ್ಯಾಂಗೋ" ಎಂಬ ಅಚ್ಚಕನ್ನಡ by ಗಣೇಶ
ಗಣೇಶ್, ಪುಳಿಂಕೊಟ್ಟೆ, ಶಾಂತಾಣಿ,
ಗಣೇಶ್, ಪುಳಿಂಕೊಟ್ಟೆ, ಶಾಂತಾಣಿ, ಮಾಂಬಳಗಳ ಬಗ್ಗೆ ಬ್ಲಾಗ್ ಓದುವ ಅವಕಾಶ ಒದಗಿಸಿದ್ದಕ್ಕೆ ನನ್ದಿ.
ವೆರೈಟಿ ಕಮ್ಮಿಯಿದ್ದರೂ ರುಚಿಯೇನೂ ಕಮ್ಮಿ ಇಲ್ಲದ ಕಾರಣ ಈ ವಾರ ಮಾಂಬಳದ ಮೇಳಕ್ಕೆ ಹೋಗುವ ಇರಾದೆಯಿದೆ...
In reply to ಗಣೇಶ್, ಪುಳಿಂಕೊಟ್ಟೆ, ಶಾಂತಾಣಿ, by kpbolumbu
ಮಾಂಬಳ ಮೇಳಕ್ಕೆ ಹೋದಿರಾ? ದ
ಮಾಂಬಳ ಮೇಳಕ್ಕೆ ಹೋದಿರಾ? ದ.ಕನ್ನಡದಲ್ಲಿ ಮಾವು/ಹಲಸಿನ ಮೇಳ ಆಗಾಗ ನಡೆಯುತ್ತಿರುತ್ತದೆ.- http://www.udayavani.com/news/145573L15-.html .ಹಾಗೇ ಇನ್ನೊಂದು ವಿಚಿತ್ರ ಸುದ್ದಿ-ನೀವು ಓದಿರಲೂಬಹುದು-
ಹಲಸಿನ ಹಣ್ಣಲ್ಲಿ ಬಾಳೆ! (http://www.newskarnataka.com/news/content/state/Banana-inside-a-Jackfru…- )
ಆತ್ಮೀಯ ಗಣೇಶರವರೆ, ತಮ್ಮ ಮ್ಯಾಂಗೋ
ಆತ್ಮೀಯ ಗಣೇಶರವರೆ, ತಮ್ಮ ಮ್ಯಾಂಗೋ ಮೇಳದ ಕುರಿತು ವಿವರಣೆಯೊಂದಿಗೆ ಹಳೆಯ ಬೆಂಗಳೂರಿನ ಸಂಪ್ರದಾಯದ ಸ್ಥಳ ವೀಕ್ಷಣೆಗಳ ವಿವರ ಒಪ್ಪಬಹುದಾಗಿದೆ. ನಿರೂಪಣೆ ಸೊಗಸಾಗಿದೆ. ತಮ್ಮೆಲ್ಲ ಆತ್ಮೀಯ ಸಂಭಾಷಣೆಗಳೂ ಕೂಡ ಆಪ್ತವಾಗಿ ಮೂಡಿ ಬಂದಿವೆ. ಗೆಳೆಯರ ಕೂಟದ ಆತ್ಮೀಯ ಬಂಧುಗಳಿಗೆಲ್ಲ ಕೃತಜ್ಞತೆ ಹೇಳಬಯಸುತ್ತದೆ ಮನಸು. ಇದು ಹೀಗೆಯೇ ಇರಲೆಂದು ಆಶಿಸುತ್ತ.....
In reply to ಆತ್ಮೀಯ ಗಣೇಶರವರೆ, ತಮ್ಮ ಮ್ಯಾಂಗೋ by lpitnal@gmail.com
ಇಟ್ನಾಳರೆ, ತಮ್ಮ ಮೆಚ್ಚುಗೆಗೆ
ಇಟ್ನಾಳರೆ, ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ಮಾವಿನ ಮೇಳದ ಬಗ್ಗೆ ಬರೆಯುವ ಉತ್ಸಾಹದಲ್ಲಿ ಎಮ್.ಜಿ.ರೋಡ್‌ನ boulevardನ ಕೆಲ ವಿಶೇಷಗಳನ್ನು ಹೇಳಲು ಮರೆತಿದ್ದೆ. http://newindianexpress.com/cities/bangalore/A-boulevard-which-is-unlik…