ಅಪ್ಪಾಮ್ಮನ್ನ್ನ ನೋಡ್ಕೊಳ್ಳೂದು ಸುಲ್ಭಾ ಅಲ್ರ್ರಿ, ಅನ್ನೋ ಮಕ್ಳು; ಏನಾಯ್ತಪ್ಪ ನಮ್ಮವಸ್ತೆ ಅನ್ನೊ ಹಿರಿಯ್ರ್ರು !

ಅಪ್ಪಾಮ್ಮನ್ನ್ನ ನೋಡ್ಕೊಳ್ಳೂದು ಸುಲ್ಭಾ ಅಲ್ರ್ರಿ, ಅನ್ನೋ ಮಕ್ಳು; ಏನಾಯ್ತಪ್ಪ ನಮ್ಮವಸ್ತೆ ಅನ್ನೊ ಹಿರಿಯ್ರ್ರು !

(MUMBAI HEROES-A Mumbai Mirror Initiative :)
ಒಬ್ಬ ನಿಜವಾದ ವೈದ್ಯನೊಬ್ಬನ 'ಸಮಾಜ ಮುಖಿ ಜೀವನ'ದ ಅತ್ಯುತ್ತಮ ಉದಾಹರಣೆ :
 
ಮುಂಬೈನ ಉಪನಗರ (ಪ) ಮೀರಾ-ಬೈಂದರ್ ನಲ್ಲಿ 'ಆಯುರ್ವೇದ ಡಾ. ಉದಯ್ ಮೋದಿ', (೪೩) ಮಡದಿ 'ಕಲ್ಪನ', ಇಬ್ಬರು ಮಕ್ಕಳು ೧೩ ವರ್ಷದ 'ಆಯುಷಿ', ಮತ್ತು ೧೧ ವರ್ಷದ 'ವರುಣ್', ಮೀರಾ ರೋಡ್ ಬೈಂದರ್ ನಲ್ಲಿ ’ಉಚಿತ ಶ್ರವಣ್ ಟಿಫಿನ್ ಸೇವಾ’ ಎಂಬ ಚಿಕ್ಕ ಸೇವಾಸಂಸ್ಥೆಯೊಂದನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಾರಂಭಿಸಿದ್ದಾರೆ. ಇದು ಅಸಹಾಯಕ ಹಿರಿಯ ನಾಗರಿಕ ದಂಪತಿಗಳಿಗೆ ನೆರವುನೀಡುವ ದಿಶೆಯಲ್ಲಿ  ಮಾಡಲ್ಪಟ್ಟ ಒಂದು ಮೊದಲ ಹೆಜ್ಜೆಯಾಗಿದೆ. ಹಿರಿಯನಾಗರಿಕರ ವಸತಿಗೃಹಗಳು ಈಗಾಗಲೇ ಸಾಕಷ್ಟಿವೆ. ಆದರೆ ಇವು ಹೆಚ್ಚು ಹೆಚ್ಚು ಸಂಖ್ಯೆ ಹೆಚ್ಚುತ್ತಲೇ ಇರುವುದು ಕಳವಳಕ್ಕೆ ಕಾರಣವಾಗಿದೆ.
ಶುರುವಾದ ಬಗೆ : 
೭೮ ವರ್ಷ ವಯಸ್ಸಿನ ಹಿರಿಯ ನಾಗರಿಕರೊಬ್ಬರು 'ಮಂಡಿನೋವಿನ ಬೇನೆ'ಯಿಂದ ನರಳುತ್ತಿದ್ದರು. ಹೆಂಡತಿಗೆ 'ಲಕ್ವಾ' ಹೊಡೆದಿತ್ತು ಹಣವಿಲ್ಲ ಊಟಕ್ಕೆ ಅನುಕೂಲವಿರಲಿಲ್ಲ. ಅಂತಹ ದಂಪತಿಗಳಿಗೆ ಎರಡುಹೊತ್ತೂ ಊಟದ ವ್ಯವಸ್ಥೆ ಮಾಡಿ ಅವರಿಗೆ ಉಚಿತ ವೈದ್ಯೋಪಚಾರನಡೆಸಿದ ಮೋದಿ ಪರಿವಾರದವರು ವಂದನಾರ್ಹರು. ಆ ಹಿರಿಯ ನಾಗರಿಕ  ದಂಪತಿಗಳಿಗೆ ೩ ಜನ ಮಕ್ಕಳಿದ್ದಾಗ್ಯೂ ತಂದೆತಾಯಿಯರ ಸೇವೆಮಾಡಲು ಅವರಿಗೆ ಆಸಕ್ತಿಯಿರಲಿಲ್ಲ.
ಹೀಗೆ ಬೆಳೆದ ಸೇವಾ ಸಂಸ್ಥೆ :
ಡಾ.ಉದಯ್ ಮೋದಿ, ತಮ್ಮ ಹೆಂಡತಿ ಕಲ್ಪನಾ ಹಾಗೂ ಮಕ್ಕಳ ನೆರವಿನಿಂದ ೧೧ ಜೋಡಿ ಯಿಂದ ಈಗ ೮೦ ಜನ ಹಿರಿಯ ನಾಗರಿಕರ ಯೋಗಕ್ಷೇಮವನ್ನು ನೋಡಿಕೊಳ್ಳಲು ಕಂಕಣ ಬದ್ಧರಾಗಿದ್ದಾರೆ. ಮೋದಿಯವರ ಮಕ್ಕಳು ಈಗಾಗಲೇ ಈ ಅಭಿಯಾನದಲ್ಲಿ ಪಾಲ್ಗೊಲ್ಲುವುದರಲ್ಲಿ ಬಹಳ ಗೌರವವನ್ನು ಮನಗಾಣುತ್ತಿದ್ದಾರೆ. ತಂದೆಯವರನ್ನು 'ಪಾಕೆಟ್ ಮನಿ' ಕೊಡಿ ಎಂದು ಕಾಡಿ-ಬೇಡುವುದಿಲ್ಲ. ಚಿಕ್ಕ ವಯಸ್ಸಿನಲ್ಲೇ ಸೇವಾ ಮನೋಭಾವವನ್ನು ಅರಿತು,  ಹಾಗೆಯೇ ನಡೆಯುತ್ತಿದ್ದಾರೆ. 
'ಶ್ರವಣ್ ಥಾಲಿಯಲ್ಲಿ :
'ಶ್ರವಣ್  ಟಿಫಿನ್ ಉಚಿತ ಸೇವಾಸಂಸ್ಥೆ'ಯಲ್ಲಿ ಒದಗಿಸುವ ಟಿಪ್ಫಿನ್ ಬಾಕ್ಸ್ ಒಂದಕ್ಕೆ, ತಿಂಗಳಿಗೆ ೧,೫೦೦ ರೂ ಖರ್ಚುಬರುತ್ತದೆ.  ೨ ಜನ ಅಡುಗೆಯವರು, ಮತ್ತು ೨೦ ಹುಡುಗರು ಡಬ್ಬಗಳನ್ನು ಮನೆ-ಮನೆಗೆ ತಲುಪಿಸುತ್ತಾರೆ.
೮ ಚಪಾತಿಗಳು ಸಬ್ಜಿ,ಅನ್ನ, ದಾಲ್, ಊಟದ ಬಾಕ್ಸ್ ನಲ್ಲಿ ದೊರೆಯುತ್ತವೆ.  ಡಯಬೆಟಿಸ್ ರೋಗಿಗಳಿಗೆ ಕಡಿಮೆ ಸಕ್ಕರೆಯನ್ನು ಬಳಸಿ ಊಟ ಕೊಡುತ್ತಾರೆ. 
 
ಅಕ್ಕ-ಪಕ್ಕದ ನೆರೆಯಲ್ಲಿ ಹೀಗೆ ಒಂಟಿಯಾಗಿ ಜೀವಿಸುವರ ಮಕ್ಕಳು ಹತ್ತಿರದಲ್ಲೇ ಇದ್ದರೂ. ಮಕ್ಕಳು ಒಮ್ಮೆಯಾದರು ಬಂದು ನೋಡಿಕೊಳ್ಳುವ ಜವಾಬ್ದಾರಿಯನ್ನು ತೊರಿಸುತ್ತಿಲ್ಲ. 
 
ಡೋನರ್ಸ್ ಗಳನ್ನು ಸಹಾಯಕ್ಕೆ ಕೇಳಿದಾಗ :
 
ಡೋನರ್ಸ್ ಗಳ ಸಹಾಯ ಪಡೆಯಲು ಮೋದಿಪರಿವಾರ ವಿಚಾರಿಸಿದಾಗ, ತಮ್ಮಹೆಸರನ್ನು ಪ್ರಚಾರಮಾಡಿದರೆ ಮಾತ್ರ ಮುಂದೆ ಬರಲು ಅಸಕ್ತಿವಹಿಸುವುದಾಗಿ ತಿಳಿಯಿತು. ಹಾಗಾಗಿ ಅವರು ಯಾವುದಾದರೂ ಪುರಾಣದ ದೇವರ ಹೆಸರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.  ದಿನಪೂರ್ತಿಯಾಗಿ (24x7) ಈ ಸೇವೆಯನ್ನು ನೀಡಿ ಹಿರಿಯ ನಾಗರಿಕರ ಸೇವೆಮಾಡಲು ಕಂಕಣತೊಟ್ಟಿರುವುದಾಗಿ ತಿಳಿಸುತ್ತಾರೆ. ಅವರ ಪರಿವಾರದ ಮಕ್ಕಳು, ಮತ್ತು ಹೆಂಡತಿ ಇದೇ ಮಾತಿನಲ್ಲಿ ನಂಬಿಕೆಇಟ್ಟಿದ್ದಾರೆ.
ಸಾರ್ವಜನಿಕ ರಲ್ಲಿ ವಿನಂತಿ :
ತಮಗೆ ಯಾರಾದರೂ ಹೀಗೆ ತೊಂದರೆಯಲ್ಲಿದ್ದ ಹಿರಿಯ ನಾಗರಿಕರು ಗಮನಕ್ಕೆ ಬಂದಲ್ಲಿ , ನೇರವಾಗಿ ಸಂಪರ್ಕಿಸಿ. ನೆರವುಕೊಡಿಸಿ ಪುಣ್ಯಕಟ್ಟಿಕೊಳ್ಳಿ !
 
ನಿಮಗೆ ಈ ತರಹದ ಅಸಹಾಯಕ  ವ್ಯಕ್ತಿಗಳು ಕಣ್ಣಿಗೆ ಬಿದ್ದಾಗ :
 
'ಟೈಮ್ಸ್ ಆಫ್ ಇಂಡಿಯ ಸಹ ಪತ್ರಿಕೆ'ಯಾಗಿ, ಸುಮಾರು ೮ ವರ್ಷ ಅತ್ಯಂತ ಸಮಾಜಮುಖಿ ಪತ್ರಿಕೆಯಾಗಿ ಹಲವಾರು ಮೋಸ, ಸುಲಿಗೆ,ಮತ್ತು ಅವ್ಯವಹಾರ ಪ್ರಕರಣಗಳನ್ನು ಪತ್ತಿಹಚ್ಚಿ, ನಮ್ಮ ಮುಂದೆ ತಂದು ತೋರಿಸಿ, ಅವುಗಳ ನಿರ್ಮೂಲಿಕರಣದಲ್ಲಿ ಆಸಕ್ತಿವಹಿಸಿ  ಅನುಪಮ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಟಿತ ಪತ್ರಿಕೆಯಾಗಿ 'ಮುಂಬೈ ಮಿರರ್' ರೂಪುಗೊಂಡಿದೆ : ಮುಂಬೈ ಆತಂಕವಾದಿಗಳಲ್ಲಿ ಪ್ರಮುಖನಾಗಿದ್ದ 'ಕಸಬ್' ಎಂಬ ನರಹಂತಕನ  ಕೈಲಿಸಿಕ್ಕಿ ನಲುಗಿ-ಸೊರಗಿದಾಗ, 'ಮುಂಬೈ ಮಿರರ್' ನ  ದಳದಲ್ಲಿ ಸೇವೆಸಲ್ಲಿಸುತ್ತಿರುವ, ’ಸುಪ್ರಸಿದ್ಧ ಛಾಯಾಗ್ರಾಹಕ, ಡಿಸೂಝ’ ಅತ್ಯಂತ ಧರ್ಯದಿಂದ ಹತ್ತಿರದಲ್ಲೇ ನಿಂತು ತೆಗೆದುಕೊಂಡ ಛಾಯಾಚಿತ್ರ ಆತಂಕವಾದಿಯ ಮೇಲೆ ಕೇಸ್ ದಾಖಲಿಸಿ ಹೋರಾಡಲು ಬಹಳ ಸಹಕಾರಿಯಾಯಿತು. 
@mumbaimirror.com/com/form.cms
 
ಈ ಒಂದು ಇಂದಿನ ಹಿರಿಯರ ಜೀವಕ್ಕೆ ಬೆಂಬಲವಾಗುವ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗಿಯಾಗಲು,  ಮುಮ್ಬೈಮಿರ್ರೊ.ಚೊಮ್/ಫ಼ೊರ್ಮ್.ಚ್ಮ್ಸ್
 
'Mumbai Mirror' Fri, 31, 2013, P.6
ನಿರೂಪಣೆ :
-ಹೊರಂಲವೆಂ