On The Spot ಅವಾರ್ಡು
ಆಫೀಸಿನಲಿ ಪ್ರತಿದಿನ ಚೆನ್ನಾಗಿ ಕೆಲಸ ಮಾಡು, ವರ್ಕ್ ಹಾರ್ಡು
ಸಮಯದ ಅರಿವಿಲ್ಲದೆ ರಾತ್ರಿ ಹತ್ತು-ಹನ್ನೊಂದಾದ ಮೇಲೆ ಹೊರ್ಡು
ಹೊರಟಾಗ ಮರೆಯದೆ ಸ್ವೈಪ್ ಮಾಡು ID ಕಾರ್ಡು
ಜೊತೆಯಲೇ ಬರುವನು ಸೆಕ್ಯೂರಿಟಿ ಗಾರ್ಡು
(ರಾತ್ರಿ ಮನೆ ಸೇರಿದ ಮೇಲೆ )
ಯಾರೊಂದಿಗೂ ಆಡಬೇಡ ಒಂದು ವರ್ಡು
ರಾತ್ರಿ ಹೊತ್ತಲಿ ತಿನ್ನಬೇಡ ಕರ್ಡು
ಬೆಳಗ್ಗೆ ಎದ್ದು ನೆನೆಯಲೂ ಬೇಡ ಲಾರ್ಡು
ಪುನಃ ಆಫೀಸಿನಲಿ ಮಾಡು ವರ್ಕ್ ಹಾರ್ಡು
ಎಲ್ಲರಿಂದಲೂ ಅನಿಸಿಕೊ ಅವನು ಕಾವರ್ಡು
ಬಾಸ್ ಮಾತ್ರ ಅನ್ನುವರು, ಇದೆ ತರ ಕೆಲಸ ಮಾಡು ಆನ್ವರ್ಡು
(ಹೀಗೆ ಮಾಡುತ್ತಿದ್ದರೆ)
ಕೊನೆಗೊಮ್ಮೆ ಸಿಗುವುದು On The Spot ಅವಾರ್ಡು
*************************************
Rating
Comments
ಆಲೋಚಿಸಬೇಕಾದ್ದೇ ನಿಮ್ಮ ಪ್ರತೀ
ಆಲೋಚಿಸಬೇಕಾದ್ದೇ ನಿಮ್ಮ ಪ್ರತೀ ವರ್ಡು,
ಅಭಿನಂದನೆಗಳು ಸಿಕ್ಕಿದ್ದಕ್ಕೆ ನಿಮಗೆ ಅವಾರ್ಡು.
ಹಾಗೆಂದು ಬರಿ ಹಾಕಿಸಿ
ಹಾಗೆಂದು ಬರಿ ಹಾಕಿಸಿ ಬಿಟ್ಟಾರಾಯ್ತೆ ಬೋರ್ಡು?
ಕೊಡಿಸಬೇಕಿದೆ ನಮಗೆಲ್ಲರಿಗೆ ಪಾರ್ಟಿಗೆ ಹೊರಡು
'ಅಭಿನಂದನೆಗಳು' ಅನ್ನುವುದಿದೆ ಹೇಗು ಸಿದ್ದ ಕರಡು
ಉಣಿಸಿ ತಿನಿಸಿ ಕುಡಿಸಾದ ಮೇಲೆ ಕೈ ಕೊಟ್ಟು ಹೊರಡು!
ಹಹಹ...ಪ್ರಶಸ್ತಿಗೆ ಅಭಿನಂದನೆಗಳು, ಸುಧೀಂದ್ರರೆ! ನಾಗೇಶ ಮೈಸೂರು, ಸಿಂಗಪುರದಿಂದ
;(000
;(000
ಕಂಗ್ಲಿಶು ಕವನ ಎಂದು ಬೇಜಾರದರೂ ..... ಪ್ರಾಸಬದ್ಧವಾಗಿದೆ ಅನ್ನಿಸಿ ಮತ್ತು ಸಾಮಾನ್ಯವಾಗಿ ಎಲ್ಲ ಆಫೀಸಲು ಹೀಗೆ ಆಗಬಹುದಾದರೂ ನೀವ್ ಹೇಳಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹುದ್ದೆಯಲ್ಲಿ ಹೆಚ್ಚು ಆಗೋದು ..!!
ಹೆಚ್ಚು ಸಂಬಳ ಜೊತೆ ಜೊತೆಗೆ ಬೇಜಾನ್ ಕೆಲಸ ..... !! ಸುಸ್ತೋ ಸುಸ್ತು ...!
ಚೆನ್ನಾಗಿದೆ
ಅವಾರ್ಡು ಬಂದಿದ್ದಕ್ಕೆ ..... ಕಂಗ್ರಾಟ್ಸ್ ...
ಶುಭವಾಗಲಿ ...
\\\॥। ///