ಇಮ್ರೋಜ್ ಕವಿತೆಗಳು-2
ಕವಿತೆ
ಒಂದು ಸಲ
ಒಂದು ಕನಸು ಬದುಕನ್ನು ಕೇಳಿತು
‘ನೀನು ಎಲ್ಲಿಯವರೆಗೆ
ಕವಿತೆ ಬರಿಯುತ್ತೀಯಾ?’
ಬದುಕು ಹೇಳಿತು-
‘ಎಲ್ಲಿಯವರೆಗೆ
ಪ್ರತೀ ಬದುಕು ಕವಿತೆಯಾಗುವುದಿಲ್ಲವೋ
ಅಲ್ಲಿಯವರೆಗೆ.’
ಹರಿವ ನೀರು
ಒಂದು ದಿನ ನಿಂತ ನೀರು
ಹರಿವ ನೀರನ್ನು ಕೇಳಿತು
‘ನೀನೆಂದಾದರೂ ನಿಂತಿದ್ದೀಯಾ?’
ಹರಿವ ನೀರೆಂದಿತು
‘ನಾನು ಹರಿವ ನೀರು
ನಿಲ್ಲುವುದು ನನ್ನ ಗುಣವಲ್ಲ’