ನಮ್ಮ ಚುನಾವಣೆಗಳು ಹೀಗಿದ್ದರೆ ಹೇಗೆ ?

ನಮ್ಮ ಚುನಾವಣೆಗಳು ಹೀಗಿದ್ದರೆ ಹೇಗೆ ?

1) ಚುನಾವಣೆಗಳು ನಿರ್ದಿಷ್ಠವಾಗಿ 5 ವರ್ಷಗಳಿಗೊಮ್ಮೆನೆ ಆಗಬೇಕು.

2) ವಿಧಾನಸಭೆ ವಿಸರ್ಜಿವುದನ್ನು ಬಿಡಬೇಕು.

3) ಹಾಗೊಮ್ಮೆ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೆ ಹೋದರೆ    ಉಳಿದ ಅವಧಿಗೆ    ವಿರೋಧ ಪಕ್ಷಕ್ಕೆ ಆಡಳಿತವನ್ನು ಬಿಟ್ಟು ಕೊಡಬೇಕು . ಆಡಳಿತ ಪಕ್ಷಕ್ಕೆ ತನ್ನ ಬಹುಮತವನ್ನ 20 ತಿಂಗಳಿಗೆ ಕಳಕೊಂಡ್ರೆ, ಉಳಿದ 40 ತಿಂಗಳು ವಿರೋಧ ಪಕ್ಷದವರು ಆಡಳಿತ ಮಾಡಬೇಕು.

4) ಒಬ್ಬ ವ್ಯಕ್ತಿ ಗರಿಷ್ಟ ಅಂದರೆ 5 ಬಾರಿ ಮಾತ್ರ MLA ಆಗಬೇಕು ಮತ್ತು ಗರಿಷ್ಟ ಅಂದರೆ 7 ಬಾರಿ ಮಾತ್ರ ವಿಧಾನಸಭೆಗೆ ಸ್ಪರ್ಧಿಸಬಹುದು. ಒಬ್ಬ ವ್ಯಕ್ತಿ 5 ಬಾರಿ MLA ಆಗಿ ಮತ್ತು 7 ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದೆಆದಲ್ಲಿ ಆತನಿಗೆ MLC ಆಗಲು ಗರಿಷ್ಟ ಅಂದರೆ 2 ಬಾರಿ ಮಾತ್ರ ಅವಕಾಶ. ಉಳಿದಂತೆ ಒಬ್ಬ ವೈಕ್ತಿ 3 ಬಾರಿ ಮಾತ್ರ MLC ಆಗಲು ಅವಕಾಶ.

6) ಒಬ್ಬ ವ್ಯಕ್ತಿ ಗರಿಷ್ಟ ಅಂದರೆ 3 ಬಾರಿ ಮಾತ್ರ CM ಆಗಬಹುದು. ಇಲ್ಲಿ ಅವಧಿಯ ಲೆಕ್ಕಾಚಾರ ಬರುವುದಿಲ್ಲ. CM ಆಗಲು ಕಡ್ಡಾಯವಾಗಿ ಚುನಾವಣೆಗೆ ಸ್ಪರ್ಧಿಸಿರಬೇಕು. ಯಾವುದೇ ಕಾರಣಕ್ಕೂ MLC, CM ಆಗಬಾರದು.

7) CM ಆಗಲು ಗರಿಷ್ಟ ವಯೋಮಿತಿ 65. ಸರ್ಕಾರದ ಅವಧಿಗೂ ಮುನ್ನ CM ರ ವಯಸ್ಸು 65 ಆದಲ್ಲಿ, ಆತ, ತನ್ನ ಸ್ಥಾನದಿಂದ ಇಳಿಯಬೇಕು.

8) MLA ಆಗಲು ಗರಿಷ್ಟ ಮಿತಿ 65 . MLA ಸ್ಥಾನಕ್ಕೆ ಸ್ಪರ್ಧಿಸಲು 60 ರಕ್ಕಿಂತ ಕಡಿಮೆ ಇರಬೇಕು. ಅವಧಿಗೂ ಮುನ್ನ 65 ವರ್ಷ ಮುಟ್ಟಿದ್ದಲ್ಲಿ, ಆತ ತನ್ನ ಸ್ಥಾನದಿಂದ ರಾಜೀನಾಮೆ ಕೊಡಬೇಕು ಮತ್ತು ಆ ಕ್ಷೇತ್ರದಲ್ಲಿ ಎರಡನೆಯ ಸ್ಥಾನದಲ್ಲಿದ್ದ ವ್ಯಕ್ತಿಗೆ MLA ಸ್ಥಾನ ಕೊಡಬೇಕು. ಆತನ ವಯಸ್ಸು 65 ದಾಟಿದ್ದಲ್ಲಿ, ಉಳಿದ ಅವಧಿಗೆ ಮರು ಚುನಾವಣೆ ನಡಿಯಬೇಕು.

9) CM ಅಭ್ಯರ್ಥಿಯನ್ನು ಎಲ್ಲಾ ಪಕ್ಷಗಳು ಮೊದಲೇ ತಿಲಿಯಪಡಿಸಬೇಕು. CM ಅಭ್ಯರ್ಥಿಯನ್ನು ಘೋಷಿಸಲು  ಒಂದು ಪಕ್ಷದಿಂದ ಕನಿಷ್ಟ ಅಂದರೆ ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿ 25% ಸ್ಥಾನಗಳಿಗೆ ಆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಬೇಕು.

10) CM ಅಭ್ಯರ್ಥಿ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು. ವೋಟಿಂಗ್ ಬೂತ್ನಲ್ಲಿ ಎರಡು ವೋಟಿಂಗ್ ಯಂತ್ರಗಳನ್ನು ಇಡಬೇಕು. ಒಂದು ಆ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ್ತು ಇನ್ನೊಂದು CM ಅಭ್ಯರ್ಥಿಗಳಿಗೆ. ಮತದಾರ ಎರಡಕ್ಕೂ ಮತ ಹಾಕಬೇಕು. ಹೀಗೆ ಸ್ಪರ್ಧಿಸಲು CM ಅಭ್ಯರ್ಥಿಗೆ ಕನಿಷ್ಟ 30 ಹಾಲಿ ಶಾಸಕರ ಒಪ್ಪಿಗೆ ಸಹಿ ಇರಬೇಕು ಮತ್ತು ಇದನ್ನು ಚುನಾವಣೆ ಅಧಿಕಾರಿಯು ನಾಮಿನೇಷನ್ ಸಮಯದಲ್ಲಿ ಪರಿಶೀಲಿಸಬೇಕು.

11) ಒಂದುವೇಳೆ ಪಕ್ಷಕ್ಕೆ ಬಹುಮತ ಬಂದು CM ಆಭ್ಯರ್ಥಿ ಸೋತರೆ , ಆ ವ್ಯಕ್ತಿಯನ್ನು CM ಮಾಡುವಹಾಗಿಲ್ಲ. ಈಗಿನಂತೆ ಆಡಳಿತ ಪಕ್ಷದ ನಾಯಕರನ್ನ ಆಯ್ಕೆ ಮಾಡಿ CM ಮಾಡಬಹುದು. ಸೋತ ವ್ಯಕ್ತಿಗೆ ವಿದಾನಸೌಧಕ್ಕೆ ಪ್ರವೇಶ ನಿಷಿದ್ದ. ಒಂದು ವೇಳೆ ಪಕ್ಷಕ್ಕೆ ಬಹುಮತ ಬರದೇ CM ಆಭ್ಯರ್ಥಿ ಗೆದ್ದು ಬಂದರೆ ಆತ CM ಕ್ಷೇತ್ರದ MLA ಆಗಿರುತ್ತಾನೆ.

12) ಒಂದು ಪಕ್ಷದಿಂದ ಆಯ್ಕೆಯಾದ MLA  ಮುಂದಿನ 5 ವರ್ಷಗಳ ಕಾಲ ಆ ಪಕ್ಷವನ್ನ ಬಿಡುವ ಹಾಗಿಲ್ಲ. ಹಾಗೆ ಬಿಟ್ಟಿದ್ದೇ ಆದಲ್ಲಿ ಆತನಿಗೆ ಮುಂದಿನ 3 ಚುನಾವಣೆಗಳಿಗೆ ನಿಷೇಧ ಹೇರಬೇಕು

13) ಒಬ್ಬ ರಾಜಕಾರಣಿ 5 ಬಾರಿ ಪಕ್ಷಾಂತರ ಮಾಡಿದರೆ ಅಂತಹ ವ್ಯಕ್ತಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ.

 14) ಒಬ್ಬ ಸಚಿವರಿಗೆ ಒಂದೇ ಖಾತೆ ನಿಯಮ. CM ಗೆ ಗರಿಷ್ಟ 6 ಖಾತೆಗಳು. ಹಣಕಾಸು CM ಹತ್ತಿರ ಇರಬಾರದು.

15) ಸಂಭಾವ್ಯ ಸಚಿವರ ಪಟ್ಟಿಯನ್ನು ಚುನಾವಣೆಯ ಮುಂಚಿತವಾಗಿ , CM ಅಭ್ಯರ್ಥಿಯ ಜೊತೆಗೆ ಬಿಡುಗಡೆ ಮಾಡಬೇಕು.

16 ) ಒಬ್ಬ MLA ಗರಿಷ್ಟ 3 ಬಾರಿ ಮಾತ್ರ ಸಚಿವರಾಗಲು ಅವಕಾಶ. MLC ಗೆ ಒಂದೇ ಬಾರಿ ಮಾತ್ರ ಅವಕಾಶ.