ಅಂಚೆ ಕಚೇರಿಯ ಟೆಲಿಗ್ರಾಂ ಸೇವೆ ಇನ್ನಿಲ್ಲ !

ಅಂಚೆ ಕಚೇರಿಯ ಟೆಲಿಗ್ರಾಂ ಸೇವೆ ಇನ್ನಿಲ್ಲ !

ಭಾರತದ ೧೬೦ ವರ್ಷಗಳ ಕಾಲ ಅಂಚೆಕಚೇರಿಗಳಲ್ಲಿ ಜನಜೀವನದ ಅತಿ ಮುಖ್ಯ ವೇಗವಾಗಿ  ಸುದ್ದಿ ಕಳಿಸುವ ಟೆಲಿಗ್ರಾಮ್  ವ್ಯವಸ್ಥೆ, ಸನ್.೨೦೧೩ ರ, ಜುಲೈ,೧೫ ರ ಬಳಿಕ ಯಾರೂ ಬಳಸುವುದಿಲ್ಲವೆನ್ನುವ ಸಂಗತಿ ನಮ್ಮಂತಹ ಹಳಬರಿಗೆ ವಿಶಾದದ ಸಂಗತಿಯಾಗಿದೆ.
 
"ಟೆಲಿಗ್ರಾಮ್ ವ್ಯಸ್ಥೆಯ ವಿದಾಯ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಸನ್.  ಜುಲೈ ೧೫  ಒಂದು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಶುರುವಾಯಿತು. ಸನ್. ೧೮೫೪, ಮೊಟ್ಟಮೊದಲ ಟೆಲಿಗ್ರಾಫ್ ಲೈನ್ ಕಲ್ಕತ್ತಾ ಮತ್ತು ಉಪನಗರ ಡೈಮಂಡ್ ಹಾರ್ಬರ್ ವರೆಗೆ. ಕಲ್ಕತ್ತಾ ಹಾಗೂ ಹಲವಾರು ನಗರಗಳ ಟೆಲಿಗ್ರಾಫ್ ಕಾರ್ಯವಿಧಾನಗಳು ಗಳು ಆಧುನೀಕತೆಗೆ ಒಳಪಟ್ಟವು. ಸನ್. ೨೦೧೧,ರಲ್ಲಿ ಸರಕಾರ,ಬೆಲೆ ಹೆಚ್ಚುಮಾಡಿದರು. ೬೦ ವರ್ಷಗಳಿಂದ ದರ ಹೆಚ್ಚಿಸೇ ಇರಲಿಲ್ಲ. ಈಗ ಗ್ರಾಹಕರು ೨೭ ರೂ. (೪೬ ಪ್ರತಿಶತ್)/ ೫೦ ಪದಗಳಿಗೆ ಕೊಡಬೇಕಾಗುತ್ತದೆ. ಈಗ ಟೆಲಿಗ್ರಾಮ್ ಪದ್ಧತಿಯನ್ನು ತಿಳಿಸುವ ಬಗ್ಗೆ ಒಂದು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದ್ದು ಅದು ಉದ್ಘಾಟನೆ ಹೊಂದಲಿದೆ. ಈ ಪೀಳಿಗೆಯ ಯುವಜನ ಹಿಂದಿನ ಒಂದುಕಾಲದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಬಳಕೆಯಲ್ಲಿದ್ದ ಅಂದಿನ ಅತಿದೊಡ್ಡ ಆವಿಷ್ಕಾರವೆಂದು ಭಾವಿಸಲಾಗಿದ್ದ ವ್ಯವಸ್ಥೆಯನ್ನು ನೋಡಿ ಆನಂದಿಸಬಹುದು.
 
ಸನ್. ೧೯೯೦ ರ ಮಧ್ಯಭಾಗದವರೆಗೆ,  ಪತ್ರಿಕಾಕಾರರು, ತಮ್ಮ ಸುದ್ದಿ ಸಂಗ್ರಹಗಳನ್ನು ಪತ್ರಿಕಾ ಕಾರ್ಯಾಲಯಕ್ಕೆ  ಕಳಿಸಲು ಟೆಲಿಗ್ರಾಮ್ ಪದ್ಧತಿಯನ್ನು ಬಳಸುತ್ತಿದ್ದರು. ಒಬ್ಬ ರಿಪೋರ್ಟರ್ ಕೊಟ್ಟಿರುವ ಹೇಳಿಕೆಯಂತೆ, ೨೦ ಪುಟಗಳ ವರದಿ ಕಳಿಸಿದ್ದರು. ೩ ಗಂಟೆ ಟೈಪ್ ಮಾಡಲು ಎಡಿಟೋರಿಯಲ್ ಡೆಸ್ಕ್ ನಲ್ಲಿ ಮರು ಟೈಪ್ ಈಗ ೫,೦೦೦ ಟೆಲಿಗ್ರಾಮ್ ಗಳನ್ನು ಕಳಿಸಲಾಗುತ್ತಿದೆ.  ಕೇವಲ ಗವರ್ನಮೆಂಟ್ ಇಲಾಖೆಗಳು ಮಾತ್ರ ತಮ್ಮ ಇಲಾಖೆಯ ಕಕ್ಷಗಳಿಗೆ ಆದೇಶಗಳನ್ನು ಕೊಡಲು ಬಳಕೆಮಾಡುತ್ತಿದ್ದರು. ಖಾಸಗಿಯಾಗಿ ಯಾರಾದರೂ ನಿಧನಹೊಂದಿದಾಗ ತಂತಿ ಕಳಿಸುವ ಪದ್ಧತಿ ಇನ್ನೂ ಕೆಲವೇ ಗ್ರಾಮಗಳಲ್ಲಿ ಇವೆ. ಎಲ್ಲರಬಳಿಯೂ ರಾಷ್ಟ್ರದ ಮೂಲೆ ಮೂಲೆಗಳಲ್ಲಿ  ಮೊಬೈಲ್ ಗಳಿವೆ. ಜನ ಅವನ್ನು ಬಳಸುವಸ್ಟು ಹಣವನ್ನು ಸಂಪಾದಿಸುತ್ತಿದಾರೆ. ಸಾಕ್ಷರತೆ ಹೆಚ್ಚಿದೆ. ಜನ ಹೆಚ್ಚು ಹೆಚ್ಚು ವಿದ್ಯಾವಂತರಾಗಿ ಹಲವಾರು ದೇಶವಿದೇಶಗಳ ಸಂಸ್ಥೆ ಗಳಲ್ಲಿ ಕೆಲಸಮಾಡುತ್ತಿದ್ದಾರೆ.  ಈಗ ೭೫ ರಾಜ್ಯ ಸರ್ಕಾರ ಇನ್ನೂ ಟೆಲಿಗ್ರಾಮ್ ಕಳಿಸುವ ಹಿಂದಿನಿಂದ ಬಂದಿರುವ ವ್ಯವಸ್ಥೆಯನ್ನು  ಹೊಂದಿದ್ದಾರೆ. ಸದ್ಯಕ್ಕೆ ಟೆಲಿಗ್ರಾಫ್ ತಂತ್ರಜ್ಞಾನದಲ್ಲಿ ತರಪೇತಾದ ಸುಮಾರು ೧,೦೦೦ ಜನ ಕೆಲಸದಲ್ಲಿದ್ದಾರೆ. ಅವರ ಸೇವೆಯನ್ನು ಬೇರೆ ಬೇರೆ ವಲಯಗಳಲ್ಲಿ ಬಳಸಿಕೊಳ್ಳಬಹುದು. 
 
 

Comments

Submitted by venkatesh Mon, 06/17/2013 - 18:09

http://www.bbc.co.u… ಬಿ.ಬಿ.ಸಿ. ಸೈಟ್ ನಲ್ಲಿ ಓದಿದ ವಿಚಾರ ತಮ್ಮ ಮುಂದೆ ಹಂಚಿಕೊಂಡಿದ್ದೇನೆ.
Submitted by venkatesh Wed, 06/26/2013 - 09:22

In reply to by venkatesh

ತಂತಿ ಬಂತಾ ಅಂತ ಪದೇ ಪದೇ ಕೇಳೋ ವಿಷಯ ನೆನೆಸಿಕೊಂಡರೆ, ಹೇಗೆ ಟೆಲಿಗ್ರ್ಯಾಮ್ ಸೇವೆ ನಿಲ್ಲಿಸಿದಾರಪ್ಪ ಅನ್ಸತ್ತೆ. ಅಮೆರಿಕಾದ ಮಿಸ್ಸುೂರಿಯಲ್ಲಿದ್ದ ನನ್ನ ತಮ್ಮನಿಗೆ ವಿಷಯ ಬರೆದು ಪೋಸ್ಟ್ ಮಾಡಿದರೆ ಸುಮಾರು 15 ದಿನಗ್ಗೆ ತಲುಪುತಿತ್ತು ಎಂದು ಹೇಳೋನು. ಇದು 1965 ರ ಮಾತು. ಅವನು ಬೊಂಬಾಯಿಗೆ ಬಂದಿಳಿದ ಕೂಡಲೇ, ನಾನು ಆರೇವ್ಡ್ ಸೇಫ್ಲಿ ಅಂತ ಮೆಸೇಜ್ ಬೆಂಗಳೂರಿಗೆ ಕಳಿಸ್ತಿದ್ದೆ. ಆಮೇಲೆ ಬೊಂಬಾಯಿನಗರವನ್ನು ಅವನ ವಿಮಾನ ಬಿಟ್ಟಾಗ ಮತ್ತೆ ಏರ್ಪೋರ್ಟ್ ನಲ್ಲೇ ಪೋಸ್ಟ್ ಆಫೀಸ್ ನಲ್ಲಿ ಬೆಂಗಳೂರಿಗೆ ಮತ್ತೆ ಸುದ್ದಿ ತಂತಿ ಕೊಡ್ತಿದ್ದೆ. ಈಗ ಆ ದಿನಗಳನ್ನು ನೆನೆಸಿಕೊಂಡರೆ ಒಂದ್ ತರಹ ಮೈ ಜುಂ ಅನ್ನುತ್ತೆ.