ಇತ್ತೀಚಿನ ಓದು-ಜಲಪಾತ(ಎಸ್.ಎಲ್.ಭೈರಪ್ಪ)

ಇತ್ತೀಚಿನ ಓದು-ಜಲಪಾತ(ಎಸ್.ಎಲ್.ಭೈರಪ್ಪ)

ಬಹಳ ದಿನಗಳಿಂದ ಏನನ್ನು ಸರಿಯಾಗಿ ಓದಲಾಗುತ್ತಿರಲಿಲ್ಲಾ,ನಿನ್ನೆ ಹಟಕ್ಕೆ ಬಿದ್ದು ಎಸ್.ಎಲ್.ಭೈರಪ್ಪ ನವರ ಜಲಪಾತ ಕಾದಂಬರಿಯನ್ನು ಅರಗಿಸಿಕೊಂಡೆ.ಕಲೆಯ ಹುಟ್ಟು ಮತ್ತು ಉದ್ದೇಶ,ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿಯ ಪೂರಕತೆ,ನಗರ ಮತ್ತು ಹಳ್ಳಿ ಜೀವನದ ತಾಕಲಾಟ ಜಲಪಾತದಲ್ಲಿ ಚರ್ಚಿತವಾದ ವಿಷಯಗಳು.ಚಿತ್ರಕಲೆ ಮತ್ತು ಶಾಸ್ತ್ರೀಯ ಸಂಗೀತದಿಂದ ಸಮಾನ ಅಂತರ ಕಾಯ್ದುಕೊಂಡಿರು ನನಗೆ ಕಾದಂಬರಿಯಲ್ಲಿನ ಕಲೆಯ ಒಳ-ಹೊರವು,ಕಲೆಯ ಉದ್ದೇಶ ಅಷ್ಟೋಂದು ರುಚಿಸುವುದಿಲ್ಲವಾದರು ಚಿತ್ರಕಲೆಯನ್ನು ನೋಡುವ ಬಗೆಯನ್ನು ,ಸಂಗೀತಾಭ್ಯಸದ ಕಷ್ಟವನ್ನರಿಯಲು ಜಲಪಾತ ಸಹಕಾರಿಯಾಗುತ್ತದೆ.


 


  ಕಾದಂಬರಿಯಲ್ಲಿ ಪ್ರಮುಖವಾಗಿ ಚರ್ಚಿತವಾದದ್ದು ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿ ಒಂದಕ್ಕೊಂದು ಪೂರಕವೇ? ಅಥವಾ ಅವೆರಡನ್ನು ಬೇರೆ ಬೇರೇ ಪ್ರಕ್ರಿಯೆಗಳೆಂದು ವರ್ಗೀಕರಿಸಬಹುದೇ? ಪ್ರೋ.ನಾಡಗೌಡರು(ತಳಿ ಸಂಶೋಧನಾ ವಿಜ್ಞಾನಿ) ಕಥಾನಾಯಕನಾದ ಶ್ರೀಪತಿಗೆ ತಳಿ ಸಂಶೋಧನೆ ಬಗ್ಗೆ ವಿವರಿಸುತ್ತ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಸರಿಗೆ ಬೇಕೆಂದರು ಒಂದು ಹುಚ್ಚು ನಾಯಿ ಸಿಕ್ಕುವುದಿಲ್ಲಾ. ನಿಷ್ಪ್ರಯೋಜಕವಾದ,ಕೀಳು ತಳಿಯ ಒಂದು ದನವು ಇಲ್ಲಾ.ಇರುವುದೆಲ್ಲಾ ಉತ್ತಮವೇ. ಕೀಳು ತಳಿಯ ನಾಯಿ,ದನಗಳ್ಳನ್ನು ನಾಶನಾಡಿ,ಉಚ್ಚ ತಳಿಯನ್ನು ಮಾತ್ರ ಬೆಳಸುತ್ತಿದ್ದಾರೆ.ಮನುಷ್ಯರು ಪಶುಗಳ ತಳಿಯಲ್ಲಿ ನಿಸ್ಸಂದೇಯವಾಗಿ ಕ್ರಾಂತಿಮಾಡಿ ಉತ್ತಮಪಡಿಸಿದಹಾಗೆ ತಮ್ಮ ತಳಿಗಳನ್ನು ಯಾಕೆ ಹಾಗೆ ಮಾಡಿಕೊಳ್ಳಬಾರದು?ಶಕ್ತಿಯುತರೂ,ಮೇಧಾವಿಗಾಳೂ,ನಿರೋಗಿಗಳೂ,ಧಿರ್ಘಾಯುಗಳೂ ಆದ ಪ್ರಜೆಗಳಿಂದ ಕೂಡಿದರೆ ಪ್ರಪಂಚ ಏಷ್ಟು ಸುಂದರವಾಗಿರುತ್ತದೆ.! ಎಲ್ಲ ಗಂಡುಹೆಣ್ಣುಗಳೂ ಸಮರ್ಥ ತಂದೆತಾಯಿ ಆಗಲಾರರು.ಆನುವಂಶಿಕವಾಗಿ ನಿರೋಗಿಗಳಾದ,ಮೇಲ್ಮಟ್ಟಾದ ಬುದ್ದಿಶಕ್ತಿಯನ್ನು ಹೊಂದಿ,ಉತ್ತಮ ಶರೀರ ಹೊಂದಿರುವ ಗಂಡುಹೆಣ್ಣು ಮಾತ್ರ ಮಾತಾಪಿತೃಗಳಾಗಬೇಕು.ಉಳಿದವರು ಮದುವೆಯಾದರೂ ಅವರಿಗೆ ಮಕ್ಕಳಾಗಬಾರದು.ಎಂದರೆ ದುರ್ಬಲರು,ರೋಗಿಗಳ,ಬುದ್ದಿಹೀನರ ಸಂತಾನವು ಬೆಳೆಯುವುದಕ್ಕೆ ಬಿಡಬಾರದು.ಒಂದು ದಾಂಪತ್ಯದಲ್ಲಿ ಗಂಡುಹೆಣ್ಣು ಇಬ್ಬರು ಉಚ್ಚ ವರ್ಗದವರಾಗಿದ್ದರೆ ಮಾತ್ರ ಮಕ್ಕಳನ್ನು ಪಡೆಯಬೇಕು.ಇಬ್ಬರಲ್ಲಿ ಒಬ್ಬರಾದರು ಆನುವಂಶಿಕವಾಗಿ ನೀಚ ವರ್ಗಕ್ಕೆ ಸೇರಿದ್ದರೆ ಇಬ್ಬರು ಸುಖವಾಗಿ ಸಂಸಾರ ಮಾಡಿಕೊಂಡಿರಲಿ ಆದರೆ ಸಂತಾನ ಬೇಕೆಂದಾಗ ಕೃತಕ ಗರ್ಭಧಾರಣೆ ಮೂಲಕ ಆನುವಂಶಿಕವಾಗಿ ಉಚ್ಚ ತಳಿಯ ಮಕ್ಕಳನ್ನು ಪಡೆಯಬೇಕೆನ್ನುತ್ತರೆ.ಮಾನವ ತಳಿ ಅಭಿವೃದ್ಧಿಯ ಸಾದ್ಯತೆ ಮತ್ತು ಪ್ರಯೋಜನಗಳ ಬಗ್ಗೆ  ಪ್ರೋ.ನಾಡಗೌಡರು ವೈಜ್ಞಾನಿಕ ಹಿನ್ನಲೆಯಲ್ಲಿ ವಿವರಿಸಿದಾಗ ಅವರ ವಾದವನ್ನು ತಿರಸ್ಕರಿಸಲು ಆಗದೆ ಒಪ್ಪಿಕೊಳ್ಳಲು ಆಗದ ಮನಸ್ಥಿತಿಗೆ ಶ್ರೀಪತಿ ತಲುಪುತ್ತಾನೆ.ಬಹುಶ: ಓದುಗನ ಮನಸ್ಥಿಯು ಅದೇ ಆಗಿರುತ್ತದೆ. ಪ್ರೋ.ನಾಡಗೌಡರು ಮಾನವ ತಳ ಅಭಿವೃದ್ಧಿಯ ಪ್ರಯೋಗವನ್ನು ತಮ್ಮ ದಾಂಪತ್ಯ ಜೀವನದಲ್ಲಿ ಒತ್ತಾಯ ಪೂರ್ವಕವಾಗಿ ಹೇರುವ ವಿಫಲ ಪ್ರಯತ್ನ ಮಾಡುತ್ತಾರೆ.ಧಾರ್ಮಿಕ ಹಿನ್ನಲೆಯಿಂದ ಬಂದಂತಹ ಅವರ ಪತ್ನಿ ಆರೋಗ್ಯವಂತ ,ವಿದ್ಯಾವಂತ ಪರುಷನ ವೀರ್ಯದಿಂದ ಕೃತಕ ಗರ್ಭಧಾರಣೆ  ಹಾದರಕ್ಕೆ ಸಮವೆಂದು ಭಾವಿಸುತ್ತಾಳೆ.ನಮಗೆ ಹುಟ್ಟುವ  ಮಗು ಸ್ವಂತದಾಗಿರಬೇಕು ಅದರ ಭವಿಷ್ಯ ಅಲ್ಪಾವಧಿಯಾದರು ಪರವಾಗಿಲ್ಲ ಅದು ಭಗವಂತನ ಲೀಲೆಯಂದು ಕೃತಕ ಗರ್ಭಧಾರಣೆಯನ್ನು ತಳ್ಳಿಹಾಕುತ್ತಾಳೆ.ಗಂಡನ ಕಠಿಣ ನಿರ್ಧಾರವನ್ನು ಬದಲಿಸಲಾಗದೆ,ಮಕ್ಕಳು ಬೇಕೆಂಬ ಉತ್ಕಟ ಆಶೆಯನ್ನೂ ಹತ್ತಿಕ್ಕಲಾರದೆ ಆತ್ಮಹತ್ಯೆಗೆ ಶರಣಾಗುತ್ತಳೆ.ಹೆಂಡತಿಯ ಅಗಲಿಕೆಯಿಂದಾದ ಜೀವನ ದರ್ಶನದಿಂದ  ಪ್ರೋ.ನಾಡಗೌಡರು ತಮ್ಮ ಸಂಶೋಧನೆಯಲ್ಲಿ ವಿಶ್ವಾಸ ಕಳೆದುಕೊಂಡು ಜೀವನದಲ್ಲಾದ ನಿರಾಶೆಯಿಂದ ಮಸಸನದಹಾದಿಯನ್ನು ಆಯ್ದುಕೊಳ್ಳುತ್ತಾರೆ.ಹೀಗೆ ದುರಂತ ಅಂತ್ಯಕಾಣುವ ಕುಟುಂಬದೊಂದಿಗ ಭೈರಪ್ಪ ನವರು ಸಾವನ್ನು ಗೆಲ್ಲಲಾಗದ ಮಾನವನಿಂದ ಪ್ರಕೃತಿ ಸಹಜವಾದ ಜೀವನ ಸೃಷ್ಟಿಯಲ್ಲಿ ಮಾನವನ ಹಸ್ತಕ್ಷೇಪವನ್ನು ಚಿಗುಟಿಹಾಕಿದ್ದಾರೆ.


ಕಾದಂಬರಿಯ ಕೊನೆಯ ಭಾಗದಲ್ಲಿ ಹಳ್ಳಿ ಮತ್ತು ನಗರ ಜೀವನ ಶೈಲಿಯ ತಾಕಲಾಟವನ್ನು ಭೈರಪ್ಪನವರು ಕಟ್ಟಿಕೊಟ್ಟಿದ್ದಾರೆ.ಮುಂಬೈನಲ್ಲಿ ಕಲೆಯ ಬೆಳವಣಿಗೆಗೆ ಪೂರಕವಾದ ವಾತಾವರನವಿಲ್ಲವೆಂದು ಶ್ರಿಪತಿಯ ಕುಟುಂಬ ವ್ಯವಸಾಯ ನಂಬಿಕೊಂಡು ತಮ್ಮ ಹಳ್ಳಿ ಅಗ್ರಹಾರಕ್ಕೆ ಮರಳುತ್ತದೆ.ಆದರೆ ಅಗ್ರಹಾರವು ಶ್ರಿಪತಿಯ ಊಹೆಯನ್ನು ಮೀರಿ ಬೆಳೆದಿರುತ್ತದೆ.ಹಳ್ಳಿ ಜನರ ಪ್ರಾಮಾಣಿಕತೆ,ಔದಾರ್ಯತೆ,ನೆಮ್ಮದಿ ಕಾಲದಡಿಯಲ್ಲಿ ಮಾಯವಾಗಿರುವುದು ಬಹಳ ಬೇಗ ಶ್ರಿಪತಿಯ ಅನುಭವಕ್ಕೆ ಬರುತ್ತದೆ.ಬದಲಾದ ಹಳ್ಳಿ ಜೀವನಕ್ಕೆ ಹೊಂದಿಕೊಳ್ಳಲಾರದೆ ಶ್ರೀಪತಿಯ ಕುಟುಂಬ ನಲುಗಿಹೋಗುತ್ತದೆ.ಬದಲಾದ ಅಗ್ರಹಾರವು ಶ್ರೀಪತಿಗೆ ಹಳೇ ಮುಂಬೈಯಂತೆ ಭಾಸವಾಗುತ್ತದ್ದೆ.ವ್ಯವಸಾಯ ಮೂಲದಿಂದ ಜೀವನ ಸಾಗಿಸುವುದು ದುಸ್ತರವಾಗುತ್ತದೆ.ಮುಂಬೈನಲ್ಲಿ ಕಲೆಯು ಹುಟ್ಟುತ್ತದೆ ಆದರೆ ಬೆಳೆಯುವುದಿಲ್ಲಾ.ಆದರೆ ತನ್ನ ಬದಲಾದ ಅಗ್ರಹಾರದಲ್ಲಿ ಕಲೆಯ ಹುಟ್ಟುಕೂಡ ಅಸಾದ್ಯವೆನಿಸಿ ಜೀವನಾಧರಕ್ಕೆ ಶ್ರೀಪತಿ ಮತ್ತೆ ಮುಂಬೈಯಡೆಗೆ ಮುಖಮಾಡುತ್ತಾನೆ.ಬೆಂಗಳೂರು ನಿವಾಸಿಗಳಾದ ನಾವು ಹಲವು ಭಾರೀ ಕೆಲವು ವರ್ಷದ ದುಡಿಮೆಯ ನಂತರ ನಮ್ಮ ಹಳ್ಳಿಗಳೆಡೆಗೆ ಹೋಗುವ ಲೆಕ್ಕಾಚಾರದಲ್ಲಿರುತ್ತೇವೆ.ಆಗೆಲ್ಲಾ ನನಗೆ ನೆನಪಾಗುವುದು ಶ್ರೀಪತಿಯ ದುಸ್ಥಿತಿ.

Comments